ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಬೈಂದೂರು: ಪಿರ್ಯಾದಿದಾರರಾಧ ಅರವಿಂದ (30) ತಂದೆ: ಮಂಜುನಾಥ ವಾಸ: ಹೊಸಮನೆ, ಕಿರಿಮಂಜೇಶ್ವರ ಗ್ರಾಮ ಬೈಂದೂರು ಇವರು ದಿನಾಂಕ 18/04/2021 ರಂದು ಕಿರಿಮಂಜೇಶ್ವರ ಗ್ರಾಮದ ಕಾನವೀರ ಮಾಸ್ತಿಯಮ್ಮ ದೇವಸ್ಥಾನದ ಗೇಟಿನ ಹತ್ತಿರ ನಿಂತುಕೊಂಡಿದ್ದಾಗ ಬೆಳಿಗ್ಗೆ 09:30 ಗಂಟೆ ಸುಮಾರಿಗೆ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಆಪಾದಿತ ಕೆಎ-20-ಎಮ್ ಸಿ-1839 ನೇದರ ಕಾರು ಚಾಲಕ  ತನ್ನ ಕಾರನ್ನು ಅತಿವೇಗವಾಗಿ ಚಲಾಯಿಸಿಕೊಂಡು ಬಂದು ರಸ್ತೆಯ ಬಲಬದಿಯ ಡಿವೈಡರ್ ಗೆ ಡಿಕ್ಕಿ ಹೊಡೆದು ಐ ಆರ್ ಬಿ ಕಂಪನಿಯವರು ಅಳವಡಿಸಿದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ  ಹೆಂಗಸಿಗೆ ಹಣೆಗೆ, ಬಲಕೈ ಗಂಟು, ಬಲಭುಜಕ್ಕೆ ರಕ್ತಗಾಯವಾಗಿರುತ್ತದೆ. ಗಾಯಗೊಂಡವರನ್ನು ಅರವಿಂದ ರವರು 108  ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿದೆ, ಘಟನೆ ಬಗ್ಗೆ ಈವರೆಗೆ ಯಾರು ದೂರು ನೀಡದೇ ಇರುವುದನ್ನು ತಿಳಿದು ಈ ದಿನ ದೂರು ನೀಡಲು ವಿಳಂಬವಾಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 77/2021 ಕಲಂ:.279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 19/04/2021 ರಂದು ಸಂಜೆ 5:15 ಗಂಟೆಗೆ ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಸಂಕಲಕರಿಯ ಎಂಬಲ್ಲಿ, ಪಿರ್ಯಾದಿದಾರರಾದ ಶಬ್ಬೀರ್ ಅಹಮ್ಮದ್ (40) ತಂದೆ:  ಅಬ್ದುಲ್ ವಾಸ: ತೆಳ್ಳಾರು ಮಸೀದಿ ಬಳಿ ದುರ್ಗಾ ಗ್ರಾಮ ಕಾರ್ಕಳ  ತಾಲೂಕು ಉಡುಪಿ ಜಿಲ್ಲೆ ಇವರು ತನ್ನ KA-19-7316 ನೇ 407 ಟೆಂಪೋವನ್ನು ಚಲಾಯಿಸಿಕೊಂಡು ಕಿನ್ನಿಗೋಳಿ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದಾಗ ಕಾರ್ಕಳ ಕಡೆಯಿಂದ ಕಿನ್ನಿಗೋಳಿ ಕಡೆಗೆ KA-19-MB-0724 ನೇ ನಂಬ್ರದ ಶಿಫ್ಟ್ ಕಾರಿನ ಚಾಲಕನು ಆತನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಟೆಂಪೋದ ಬಲಬದಿಯ ಟಯರಿಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಟೆಂಪೋದ ಬಲಬದಿ ಹಾಗೂ ಕಾರು ಸಂಪೂರ್ಣ ಜಖಂ ಗೊಂಡಿದ್ದು, ಟೆಂಪೋದಲ್ಲಿ ಇದ್ದ ಆಲ್ಬರ್ಟ್ ಮೆಂಡೋನ್ಸಾರವರ ಹಣೆಗೆ ಹಾಗೂ ಆರೋಪಿ ಕಾರಿನಲ್ಲಿದ್ದ ಹೆಂಗಸಿಗೂ ರಕ್ತಗಾಯವಾಗಿರುತ್ತದೆ. ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಹೋಗಿರುವುದಾಗಿದೆ, ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 44/2021 ಕಲಂ:.279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 18/04/2021 ರಂದು ಬೆಳಿಗ್ಗೆ 11:00 ಗಂಟೆಗೆ ಪಿರ್ಯಾದಿದಾರರಾದ ಅಶೋಕ ಭೋಜ ಪುತ್ರನ್‌ (49) ತಂದೆ:ಭೋಜ ಅಂತಪ್ಪ ಪುತ್ರನ್‌ವಾಸ:ಚಿಕ್ಕಿ ನಿವಾಸ, ಪೇಲತ್ತಾಡಿ, ಬೋಳ ಕೋಡಿ ಅಂಚೆ, ಬೋಳ ಗ್ರಾಮ, ಕಾರ್ಕಳ ಇವರು ಕಾರ್ಕಳ ತಾಲೂಕು ಕಸಬ ಗ್ರಾಮದ ಕಾರ್ಕಳ ಸೂಪರ್‌ ಬಜಾರ್‌ನ ಹತ್ತಿರ ಹಾದು ಹೋಗಿರುವ ಸಾರ್ವಜನಿಕ ಡಾಮಾರು ರಸ್ತೆಯ ಅಂಚಿನ ಮಣ್ಣಿನ ರಸ್ತೆಯಲ್ಲಿ ಆನೆಕೆರೆ ಕಡೆಯಿಂದ ಕಾರ್ಕಳ ಸೂಪರ್‌ಬಜಾರ್‌ನ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಕಾರ್ಕಳ ಪುಲ್ಕೇರಿ ಕಡೆಯಿಂದ ಆನೆಕೆರೆ ಕಡೆಗೆ KA-20-EM-1958 ನೇ ನಂಬ್ರದ ಸ್ಕೂಟರ್‌ ಸವಾರನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅಶೋಕ ಭೋಜ ಪುತ್ರನ್‌ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಇವರಿಗೆ ಎಡಕಾಲಿನ ಮೊಣಗಂಟಿನ ಬಳಿ ಗುದ್ದಿದ ರೀತಿಯ ಒಳ ನೋವು ಆಗಿರುವುದಾಗಿದೆ.  ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 47/2021 ಕಲಂ:.279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ವರದಕ್ಷಿಣೆ ಕಿರುಕುಳ ಪ್ರಕರಣಗಳು

  • ಬೈಂದೂರು: ದಿನಾಂಕ 29/06/2020 ರಂದು ಪಿರ್ಯಾದಿದಾರರಾದ ಶ್ರೀಮತಿ ವನಿತಾ ಹೆಚ್ ಜಿ  (30) ಗಂಡ; ಲಕ್ಷ್ಮೀಕಾಂತ ವಾಸ; ಮಂಜುನಾಥ ನಿಲಯ, ತಗ್ಗರ್ಸೆ  ಗ್ರಾಮ, ಬೈಂದೂರು ಇವರಿಗೆ ಆರೋಪಿ ಲಕ್ಷ್ಮೀಕಾಂತ ಇವರ ಜೊತೆಯಲ್ಲಿ ಯಡ್ತರೆ ಗ್ರಾಮದ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಜಾತಿ ಸಂಪ್ರದಾಯದಂತೆ  ಮದುವೆಯಾಗಿದ್ದು. ಮದುವೆ ಸಮಯ ಹುಡುಗನ ಕಡೆಯವರು ಯಾವುದೇ ವರದಕ್ಷಿಣೆ ಹಣ ಕೇಳಿರುವುದಿಲ್ಲ. ಶ್ರೀಮತಿ ವನಿತಾ ಹೆಚ್ ಜಿ  ರವರಿಗೆ ಮದುವೆ ಸಮಯ ಸುಮಾರು 10 ಪವನ್ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದು. ಅಲ್ಲದೆ ಆಪಾದಿತ 1ನೇ ಯವರಿಗೆ ಉಡುಗೊರೆಯಾಗಿ ಒಂದು ಚೈನ್ ಹಾಗೂ ಉಂಗುರವನ್ನು ನೀಡಿರುತ್ತಾರೆ. ನಂತರ ಶ್ರೀಮತಿ ವನಿತಾ ಹೆಚ್ ಜಿ  ರವರು ಮದುವೆಯಾಗಿ ಗಂಡನ ಮನೆಯಾದ ತಗ್ಗರ್ಸೆಯಲ್ಲಿ ಇದ್ದು ಅ ಸಮಯ ಆಪಾದಿತ 1ನೇಯವರು ವಿಪರೀತ ಮಧ್ಯಪಾನ ಸೇವಿಸಿ ರಾತ್ರಿ ತಡವಾಗಿ ಮನೆಗೆ ಬರುತ್ತಿದ್ದು ಆ ಬಗ್ಗೆ ಶ್ರೀಮತಿ ವನಿತಾ ಹೆಚ್ ಜಿ  ರವರು ವಿಚಾರಿಸಿದ್ದಕ್ಕೆ ನೀನು ಕೇಳಲಿಕ್ಕೆ ಯಾರು ಎಂದು ಬೈಯುತ್ತಿದ್ದು ಸದ್ರಿ ವಿಷಯವನ್ನು ಇವರ ಅತ್ತೆಯವರಲ್ಲಿ ಹೇಳಿದಾಗ ಆತ ಗಂಡಸು ನೀನು ತೆಪ್ಪಗೆ ಇದ್ದು ಬಿಡು ಎಂದು ಅತ್ತೆ ಹೇಳಿರುತ್ತಾರೆ. ನಂತರದ ದಿನಗಳಲ್ಲಿ ಆಪಾದಿತ 1ನೇ ಯವರು ಶ್ರೀಮತಿ ವನಿತಾ ಹೆಚ್ ಜಿ  ರವರೊಂದಿಗೆ ಸರಿಯಾಗಿ ಮಾತನಾಡದೇ ಇದ್ದು ಸಣ್ಣ ಪುಟ್ಟ ವಿಷಯಕ್ಕೆ ಕೈಯಿಂದ ಹೊಡೆದು ಅವಾಚ್ಯವಾಗಿ ಬೈದು ಮಾನಸಿಕ ಹಿಂಸೆ ನೀಡುತ್ತಿದ್ದು ಅಲ್ಲದೆ ಶ್ರೀಮತಿ ವನಿತಾ ಹೆಚ್ ಜಿ  ರವರ ಗಂಡ ಹಾಗೂ ಗಂಡನ ಅಣ್ಣಂದಿರಾದ ಸುರೇಶ್, ಭಾಸ್ಕರ ರವರು ಸೇರಿ ಮದುವೆ ಸಮಯ ನಾವು ವರದಕ್ಷಿಣೆ ಹಣ ಕೇಳಲಿಲ್ಲ ನೀನು ಈಗ ತಾಯಿ ಮನೆಯಿಂದ 2 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಎಂದು ಪದೇ ಪದೇ ಹೇಳುತ್ತಿದ್ದು ಇವರು ಹಣ ತರಲು ಒಪ್ಪದೆ ಇದ್ದಾಗ ಆಪಾದಿತರೆಲ್ಲರೂ ಬೈದಿರುತ್ತಾರೆ. ದಿನಾಂಕ 18/04/2021 ರಂದು ಆಪಾದಿತ , 1. ಲಕ್ಷ್ಮೀಕಾಂತ, 2, ಸಂಜೀವಿ 3, ಸುರೇಶ, 4, ಭಾಸ್ಕರ 5, ಸುಲೋಚನಾ ಇವರುಗಳು ಸೇರಿ ನೀನು ತವರು ಮನೆಯಿಂದ 20 ಲಕ್ಷ ರೂಪಾಯಿ ವರದಕ್ಷಿಣೆ ಹಣ ತರಬೇಕು ತಾರದೇ ಇದ್ದರೆ ನಿನ್ನನ್ನು ಸೀಮೆಎಣ್ಣೆ ಸುರಿದು ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದು, ಅದೇ ದಿನ ರಾತ್ರಿ 10:30 ಗಂಟೆಗೆ ಆಪಾದಿತರೆಲ್ಲರು ಸೇರಿ ಶ್ರೀಮತಿ ವನಿತಾ ಹೆಚ್ ಜಿ ರವರಿಗೆ ಬೆನ್ನಿಗೆ, ಕೆನ್ನಗೆ ಹೊಡೆದಿದ್ದು ಪರಿಣಾಮ ಇವರ ಬಲಕೈಗೆ ರಕ್ತಗಾಯವಾಗಿರುತ್ತದೆ. ಮುಖಕ್ಕೆ. ಬೆನ್ನಿಗೆ ಒಳನನೋವುಂಟಾಗಿರುತ್ತದೆ. ನಂತರ ಶ್ರೀಮತಿ ವನಿತಾ ಹೆಚ್ ಜಿ  ರವರು ಅವರ ತಂದೆ ಮತ್ತು ಅಕ್ಕನವರಲ್ಲಿ ವಿಷಯ ತಿಳಿಸಿ ಅವರೊಂದಿಗೆ ಬಂದು ದೂರು ನೀಡುವಾಗ ವಿಳಂಬವಾಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 78/2021 ಕಲಂ: 498(ಎ), 323. 504. 506. ಜೊತೆಗೆ 149 ಐಪಿಸಿ ಮತ್ತು ಕಲಂ 3 ವರದಕ್ಷಿಣೆ ನಿಷೇಧ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ ನಮಿತ ಎಸ್ ಪೈ ಗಂಡ:ಮಹೇಂದ್ರ ಬಿ ವಾಸ: ಮನೆ ನಂ:3-15, ಮಹಾಲಸ, ಬಡನಿಯೂರು, ಉಡುಪಿ  ಇವರು ಹಾಗೂ ಆಪಾದಿತರಾದ ಮಹೇಂದ್ರ ಬಿ ಇವರು ಪ್ರೀತಿಸಿ ದಿನಾಂಕ 17/05/2010 ರಂದು  ಮಂಡ್ಯದ ಅರಕೇಶ್ವರ ದೇವಸ್ಥಾನದಲ್ಲಿ  ವಿವಾಹವಾಗಿದ್ದು ಇವರಿಗೆ ದಿನಾಂಕ 06/01/2016 ರಂದು ಹೆಣ್ಣು ಮಗು ಜನಿಸಿರುತ್ತದೆ. ಶ್ರೀಮತಿ ನಮಿತ ಎಸ್ ಪೈ ರವರು ಮಗುವಾದ ನಂತರ  ತವರು ಮನೆಯಲ್ಲಿ 5 ತಿಂಗಳ ಬಾಣಂತನ ಮುಗಿಸಿ ಆಪಾದಿತನೊಂದಿಗೆ ಮನೆ ನಂಬ್ರ 4621/1 5 ನೇ  ಕ್ರಾಸ್ ಲಿಂಕ್ ರೋಡ್ ಎನ್ ಆರ್ ಮೊಹಲ್ ಮೈಸೂರಿನಲ್ಲಿ ವಾಸ ಮಾಡಿಕೊಂಡಿದ್ದು, ಆಪಾದಿತನು ಶ್ರೀಮತಿ ನಮಿತ ಎಸ್ ಪೈ ರವರೊಂದಿಗೆ  ಪ್ರೀತಿ ವಿಶ್ವಾಸದಿಂದ  ಮಾತನಾಡದೆ  ದೂರ  ಮಾಡಲು ಪ್ರಯತ್ನಿಸುತ್ತಿದ್ದು ಅಲ್ಲದೆ  ವಿನಾ ಕಾರಣ  ಮಾಡಿದ  ಕೆಲಸದಲ್ಲಿ ತಪ್ಪು ಗಳನ್ನು ಹುಡುಕಿ ಕೈಯಿಂದ ಹೊಡೆಯುವುದು , ದುಡಿದು  ತಂದ   ಹಣವನ್ನು ಪೂರ್ತಿ ನೀಡಬೇಕಾಗಿ ಸ್ವಲ್ವ ಹಣವನ್ನು ಖರ್ಚಿಗೆ ಇಟ್ಟುಕೊಂಡಲ್ಲಿ ಸಿಟ್ಟುಗೊಂಡು ಅವಾಚ್ಯ ಶಬ್ಬಗಳಿಂದ ಬೈಯ್ಯುವುದು, ಆಪಾದಿತ ರೇಣುಕಾ  ಗೌಡ ಇವರು ಶ್ರೀಮತಿ ನಮಿತ ಎಸ್ ಪೈ ರವರನ್ನು  ಉದ್ದೇಶಿಸಿ  ನನ್ನ ಮಗ ನಿನ್ನನ್ನು  ಲವ್ ಮಾಡಿ ತಪ್ಪು ಮಾಡಿದ್ದಾನೆ, ನೀನು ನನ್ನ ಮಗನೊಂದಿಗೆ  ಸಂಸಾರ ನಡೆಸಲು ಲಾಯಕ್ಕಿಲ್ಲ ಎಂದು ಹೇಳಿ  ಅವಾಚ್ಯ  ಶಬ್ದಗಳಿಂದ ಬೈದು ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡಿರುತ್ತಾರೆ. ಆಪಾದಿತರಾದ 1 ಮತ್ತು 2 ನೇಯವರು ಸೇರಿ ದಿನಾಂಕ 03/04/2021 ರಂದು ಶ್ರೀಮತಿ ನಮಿತ ಎಸ್ ಪೈ ರವರ ಮನೆಯಾದ ಮನೆ ನಂಬ್ರ:3-15, ಮಹಾಲಸ, ಬಡನಿಡಿಯೂರು ಎಂಬಲ್ಲಿನ ಮನೆಗೆ ಬಂದು ಮಗು ನಿಯತಿಯನ್ನು ತಮ್ಮ  ಜೊತೆ ಕರೆದುಕೊಂಡು ಹೋಗುತ್ತೇವೆ ನೀವು ಮಧ್ಯ ಬಂದರೆ ಸುಮ್ಮನೆ ಬಿಡುವುದಿಲ್ಲವಾಗಿ ಅವಾಚ್ಯ ಶಬ್ಧಗಳಿಂದ ಬೈಯ್ದು ಬೆದರಿಸಿರುವುದಾಗಿದೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 18/2021 ಕಲಂ:498(A), 323, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾಧ ರುಕ್ಮಿಣಿ ನಾಯ್ಕ (37) ಗಂಡ ದೇವೇಂದ್ರ ನಾಯ್ಕ್‌‌ ವಾಸ, ಕಲ್ಮರ್ಗಿ ಅಲ್ಬಾಡಿ ಗ್ರಾಮ ಆರ್ಡಿ ಅಂಚೆ ಕುಂದಾಪುರ  ಇವರ  ಗಂಡ ದೆವೇಂದ್ರ ನಾಯ್ಕ (42) ರವರು ಕಳೆದ 10 ವರ್ಷದಿಂದ ವಿಪರೀತ ಮದ್ಯಪಾನ ಮಾಡುತ್ತಿದ್ದು ಕಳೆದ 2 ವರ್ಷದ ಹಿಂದೆ ಮನೆಯಲ್ಲಿ ಕುಸಿದು ಬಿದ್ದು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಅಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಮದ್ಯಪಾನ ಮಾಡಭಾರದಾಗಿ ತಿಳಿಸಿ ಅಲ್ಲದೇ ಇವರಿಗೆ ಬಿ.ಪಿ ಕಾಯಿಲೆ ಇರುದಾಗಿ ತಿಳಿಸಿದ್ದರೂ ಕೂಡ ವಿಪರೀತ ಮದ್ಯಪಾನ ಮಾಡಿ ದಿನಾಂಕ 19/04/2021 ರಂದು ಮದ್ಯಾಹ್ನ 02:30 ಗಂಟೆಗೆ ಹೆಬ್ರಿ ತಾಲೂಕು ಬೆಳ್ವೆ ಗ್ರಾಮದ ಯಳಂತೂರು ಎಂಬಲ್ಲಿ ರಸ್ತೆ ಬದಿ ಕುಸಿದು ಬಿದ್ದವರನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷೀಸಿದ ವೈದ್ಯರು ದೆವೇಂದ್ರ ನಾಯ್ಕನು ಮದ್ಯಾಹ್ನ 03:30 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 16/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 20-04-2021 09:42 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080