ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ : ದಿನಾಂಕ: 19.04.2021 ರಂದು ಪಿರ್ಯಾದಿದಾರರಾದ ಚಂದ್ರಶೇಖರ ಹೆಗ್ಡೆ (53 ವರ್ಷ)  ರವರು ತನ್ನ ಬಾಬ್ತು KA20EJ7920 ನೇ ನಂಬ್ರದ Hero Passion Pro ಮೋಟಾರ್ ಸೈಕಲ್‌ನಲ್ಲಿ  ಬ್ರಹ್ಮಾವರ ಕಡೆಯಿಂದ ಹೆಬ್ರಿ ಕಡೆಗೆ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಸಂಜೆ 7:30 ಗಂಟೆ ಸುಮಾರಿಗೆ ಬ್ರಹ್ಮಾವರ ತಾಲೂಕು, ಚೇರ್ಕಾಡಿ ಗ್ರಾಮದ ವಿಷ್ಣುಮೂರ್ತಿ ಪೆಟ್ರೋಲ್‌‌ ಬಂಕ್‌ನ‌ ಎದುರು ತನ್ನ ಮೋಟಾರ್‌ ಸೈಕಲ್‌ನ್ನು ನಿಲ್ಲಿಸಿಕೊಂಡು ರಸ್ತೆಯ ಬಲಬದಿಯಲ್ಲಿರುವ ಪೆಟ್ರೋಲ್‌ ಬಂಕ್‌ಗೆ ಹೋಗಲು ಹಿಂದಿನಿಂದ ಹಾಗೂ ಎದುರಿನಿಂದ ಬರುವ ವಾಹನಗಳನ್ನು ನೋಡುತ್ತಿರುವಾಗ ಅವರ ಹಿಂದಿನಿಂದ ಅಂದರೆ ಬ್ರಹ್ಮಾವರ ಕಡೆಯಿಂದ ಆರೋಪಿ ಗಿರೀಶ ಎಂಬವರು ಅವರ ಬಾಬ್ತು KA20D7980 ನೇ ನಂಬ್ರದ ಆಟೋರಿಕ್ಷಾವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್‌ ಸೈಕಲ್‌ನ ಬಲಭಾಗಕ್ಕೆ ಡಿಕ್ಕಿ ಹೊಡೆದಿದ್ದು, ಈ ಅಪಘಾತದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಅವರ ಬಲಕಾಲಿನ ಮಣಿಗಂಟಿನ ಮೂಳೆ ಮುರಿತವಾಗಿರುತ್ತದೆ.  ಗಾಯಗೊಂಡ ಪಿರ್ಯಾದಿದಾರರನ್ನು ಚಿಕಿತ್ಸೆಯ ಬಗ್ಗೆ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 59/2021 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಬ್ರಹ್ಮಾವರ : ಬ್ರಹ್ಮಾವರ ತಾಲೂಕು ಹಾರಾಡಿ ಗ್ರಾಮದ ಗಾಂಧಿನಗರ ಹೊಳೆಬದಿ ರಸ್ತೆಯ ಹತ್ತಿರ ಇರುವ ಹರಿ ಪ್ರಸಾದ್ ಶೆಟ್ಟಿಯವರ ಜಾಗದಲ್ಲಿ ಪಿರ್ಯಾದಿ ಖತೀಬ್ ಮೊಹಮ್ಮದ್ ಆಸೀಂ ಇವರು ಇತರ ಮೂರು ಜನರೊಂದಿಗೆ ಸೇರಿ ತಾತ್ಕಾಲಿಕ ಮೀನು ಕಟ್ಟಿಂಗ್ ಶೆಡ್‌(ಪ್ಯಾಕ್ಟರಿ) ನಿರ್ಮಿಸಿ, ಅದರೊಳಗೆ ಮೀನು ಕಟ್ಟಿಂಗ್ ಮಾಡಲು ಜನರಿಗೆ ಕುಳಿತುಕೊಳ್ಳುವ ಹಾಗೆ ಸೀಮೆಂಟ್‌ನಿಂದ ಸುತ್ತಲೂ ಅರ್ಧ ಗೋಡೆ ಕಟ್ಟಿಸಿ ನಿರ್ಮಿಸಿರುವುದಾಗಿದೆ. ಸದ್ರಿ ಶೆಡ್‌(ಪ್ಯಾಕ್ಟರಿ)ಯಲ್ಲಿ ಸುಮಾರು 150 ಜನ ಹೆಂಗಸರು ಬಂದು ಕೆಲಸ ಮಾಡುತ್ತಿದ್ದು, ಕಳೆದ ಎರಡು ತಿಂಗಳಿಂದ ಸರಿಯಾಗಿ ಮೀನು ಸಿಗದೇ ಕೆಲಸ ಇಲ್ಲದ ಕಾರಣ ಶೆಡ್‌(ಪ್ಯಾಕ್ಟರಿ)ನಲ್ಲಿ ಉಪಯೋಗಿಸುತ್ತಿದ್ದ ಸಾಮಾಗ್ರಿಗಳನ್ನು  ಒಳಗೆ ಇಟ್ಟು  ತಾತ್ಕಾಲಿಕವಾಗಿ ಶೆಡ್‌ನ್ನು ಮುಚ್ಚಿ ಮುಖ್ಯ ದ್ವಾರಕ್ಕೆ ಬೀಗ ಹಾಕಿ ಬಾಗಿಲು ಹಾಕಿರುವುದಾಗಿದೆ. ಫ್ಯಾಕ್ಟರಿಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿರುವ ಮೈಮುನಾ ಬಿ ಎಂಬವರು ಅಲ್ಲಿಯೇ ಸಮೀಪ ವಾಸವಾಗಿದ್ದು, ಅವರು ಎರಡು ದಿನಗಳಿಗೊಮ್ಮೆ ಬಂದು ಸದ್ರಿ ಫ್ಯಾಕ್ಟರಿಯನ್ನು ನೋಡಿಕೊಂಡು ಹೋಗುತ್ತಿದ್ದು  ಹಾಗೂ ಪಿರ್ಯಾದಿದಾರರು ವಾರಕ್ಕೊಮ್ಮೆ ಬಂದು ನೋಡಿ ಕೊಂಡು ಹೋಗುತ್ತಿರುವುದಾಗಿದೆ. ದಿನಾಂಕ:12.04.2021ರಂದು ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ: 18.04.2021 ರ ಸಂಜೆ 5:30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಮೀನು ಕಟ್ಟಿಂಗ್‌  ಶೆಡ್‌ನ ಮುಂಭಾಗದ ಬಾಗಿಲನ್ನು ಒಡೆದು ಒಳಗೆ ಹೊಕ್ಕಿ ಶೆಡ್‌ನ ಒಳಗಿರುವ (1) 20 KV Ashok Leyland Generator, Rs. 80,000/- (2) Fish Cutting Table -4, Value Rs. 30,000/-, (3) Aluminium Vessel – 4 Piece, Value Rs. 8000/- , (4) Steel Dinner Plate – 150, Valur Rs. 3,750/- (5) HP Gas Cylinder -3, Value Rs. 6000/-, (6) Gas Stove -1 , Value Rs. 1500/-. (7) Grinder – 1, Value Rs. 2000/- ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ, ಕಳವಾದ ಒಟ್ಟು ಸ್ವತ್ತುಗಳ ಬೆಲೆ. ರೂ. 1,31, 250/- ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 58/2021 ಕಲಂ 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಪುರ: ದಿನಾಂಕ 19/04/2021 ರಂದು ರಾತ್ರಿ 10:20 ಸಮಯದಲ್ಲಿ ಪಿರ್ಯಾದಿ ರಘು ಇವರು ಕುಂದಾಪುರ ತಾಲೂಕು ವಡೇರಹೊಬಳಿ ಗ್ರಾಮದ ಟಿ.ಟಿ ರಸ್ತೆ ಆಶ್ರಯ ಕಾಲೋನಿಯಲ್ಲಿರುವ ತನ್ನ ಮನೆಯ ಅಂಗಳದಲ್ಲಿ ನಿಂತಿದ್ದ ಸಮಯ ಬೀದಿ ನಾಯಿಗೆ ಯಾರೋ ಬಿಸಾಡಿದ ಕಬ್ಬಿಣದ ರಾಡ್‌ ಪಿರ್ಯಾದಿದಾರರ ಅಂಗಳಕ್ಕೆ ಬಂದು ಬಿದ್ದಿದ್ದು ಪಿರ್ಯಾದಿದಾರರು ಯಾರು ಬಿಸಾಡಿದ್ದು ಎಂದು ಕೇಳಿದ್ದಕ್ಕೆ ಆರೋಪಿ ಶ್ರೀಧರ ಪಿರ್ಯಾದಿದಾರರ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಪಿರ್ಯಾದಿದಾರರ ಮೂಗಿಗೆ ಗುದ್ದಿ ಹಲ್ಲೆ ಮಾಡಿದ್ದು ನಂತರ ಪಿರ್ಯಾದಿದಾರರ ಮನೆಯವರು ಮನೆಯ ಒಳಗಿನಿಂದ ಬರುವುದನ್ನು ನೋಡಿ ಆರೋಪಿಯು ಅಲ್ಲಿಂದ ಹೋಗಿದ್ದು ಹೋಗುವಾಗ ಇವತ್ತು ಬದುಕಿದ್ದಿಯಾ ಮುಂದಕ್ಕೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲವೆಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾನೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 45/2021  ಕಲಂ: 447, 504, 323, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 20-04-2021 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080