ಅಭಿಪ್ರಾಯ / ಸಲಹೆಗಳು

 ಅಫಘಾತ ಪ್ರಕರಣ

 • ಬ್ರಹ್ಮಾವರ :  ದಿನಾಂಕ 19.03.2022 ರಂದು ಪಿರ್ಯಾದಿ ಚೆನ್ನಯ್ಯ ಪೂಜಾರಿ ಇವರು ತನ್ನ ಬಾಬ್ತು KA.20.ER.5404 ನೇ ನಂಬ್ರದ ಹೊಂಡ ಸಿಬಿ ಯೂನಿಕಾರ್ನ್‌ ಮೋಟಾರ್‌ ಸೈಕಲ್‌ನಲ್ಲಿ ಹೆಬ್ರಿ ಕಡೆಯಿಂದ ಬ್ರಹ್ಮಾವರ ಕಡೆಗೆ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಬರುತ್ತಾ ಮಧ್ಯಾಹ್ನ 3:15 ಗಂಟೆ ಸುಮಾರಿಗೆ ಚಾಂತಾರು ಗ್ರಾಮದ ಕುಂಜಾಲ್ ರೋಶನ್ ಬಾರ್ ಎದುರು ತಲುಪುವಾಗ ಅವರ ಹಿಂದಿನಿಂದ ಅಂದರೆ ಪೇತ್ರಿ ಕಡೆಯಿಂದ ಆರೋಪಿಯು ಅವರ ಬಾಬ್ತು KA.20.MD.3486  ನೇ ನಂಬ್ರದ ಮಾರುತಿ ಆಲ್ಟೋ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ತಾರು ರಸ್ತೆಯ ಮೇಲೆ ಬಿದ್ದಿರುತ್ತಾರೆ. ಈ  ಅಪಘಾತದಿಂದ ಪಿರ್ಯಾದಿದಾರರ ಎಡಕೈ ಮೊಣಗಂಟಿಗೆ ಮೂಳೆ ಮುರಿತದ ಜಖಂ, ಎರಡೂ ಕಾಲುಗಳ ಮೊಣಗಂಟಿಗೆ ತರಚಿದ ಗಾಯ, ಎಡಕಾಲಿನ ಹಿಮ್ಮಡಿಗೆ ಒಳ ಜಖಂ ಗಾಯ, ಬಲ ಭುಜ, ಬಲ ಕೈ ಯ ಬೆರಳು, ಬಲಕಾಲಿಗೆ ತರಚಿದ ಗಾಯವಾಗಿರುತ್ತದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 43/2022 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ : ದಿನಾಂಕ: 18.03.2022 ರಂದು ಪಿರ್ಯಾದಿದಾರರಾದ ಸುಲತಾ ಶೆಟ್ಟಿ ರವರು ತನ್ನ  ಗಂಡ ಪ್ರಕಾಶ್ ಶೆಟ್ಟಿ ರವರು ಸವಾರಿ ಮಾಡುತ್ತಿದ್ದ KA.20.EW.7568  ನೇ ನಂಬ್ರದ TVS RADEON ಮೋಟಾರ್‌ ಸೈಕಲ್‌ನಲ್ಲಿ ಸಹಸವಾರಿಣಿಯಾಗಿ ಕುಳಿತು ಬಾರ್ಕೂರು –ಸಾಯಿಬ್ರಕಟ್ಟೆ ರಸ್ತೆಯಲ್ಲಿ ಬಾರ್ಕೂರಿನಿಂದ ಸಾಯಿಬ್ರಕಟ್ಟೆ ಕಡೆಗೆ ಹೋಗುತ್ತಾ ರಾತ್ರಿ 7:50 ಗಂಟೆ ಸುಮಾರಿಗೆ ಹೇರಾಡಿ ಗ್ರಾಮದ, ಹೇರಾಡಿ ರೈಲ್ವೇ ಅಂಡರ್‌ ಪಾಸ್‌ ನಿಂದ ಸ್ವಲ್ಪ ಮುಂದೆ  ತಲುಪುವಾಗ ಅವರ ಎದುರಿನಿಂದ ಅಂದರೆ ಸಾಯಿಬ್ರಕಟ್ಟೆ ಕಡೆಯಿಂದ ಆರೋಪಿ ಸುರೇಶ್ ಕುಲಾಲ್ ಎಂಬವರು ಅವರ ಬಾಬ್ತು KA.20.EG.8267  ನೇ HONDA ACTIVA ಸ್ಕೂಟರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಆತನ ತೀರಾ ಬಲಭಾಗಕ್ಕೆ ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್‌ಗೆ ಎದುರಿನಿಂದ ಡಿಕ್ಕಿ ಹೊಡೆದಿದ್ದು, ಸದ್ರಿ ಅಪಘಾತದ ಪರಿಣಾಮ ಪಿರ್ಯಾದಿದಾರರು ಹಾಗೂ ಪ್ರಕಾಶ್ ಶೆಟ್ಟಿ ರವರು ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು, ಪಿರ್ಯಾದಿದಾರರ ಎಡಕೈ ಮತ್ತು ಎಡಕಾಲು ಮೋಣಗಂಟಿಗೆ ಸಣ್ಣ ತರಚಿದ ರಕ್ತಗಾಯವಾಗಿರುತ್ತದೆ. ಪ್ರಕಾಶ್ ಶೆಟ್ಟಿ ಯವರಿಗೆ ಬಲಕಾಲು ಮೊಣಗಂಟಿನ ಕೆಳಗೆ ತೀವ್ರ ಮೂಳೆ ಮುರಿತದ ಗಾಯ, ಬಲಗೈ ಮೊಣಗಂಟಿಗೆ ತೀವ್ರ ಮೂಳೆ ಮುರಿತದ ಗಾಯ, ಮುಖ, ಕೆನ್ನೆ, ಮೂಗು, ಗಲ್ಲ, ತುಟಿಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 42/2022 ಕಲಂ 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ:           ಪಿರ್ಯಾದಿ ಆದರ್ಶ ಶೆಟ್ಟಿ ಕೆ ಆರ್ ಇವರು ದಿನಾಂಕ: 18.03.2022 ರಂದು ಸಂಜೆ 06:30 ಗಂಟೆಗೆ ಮಣಿಪಾಲ-ಅಲೆವೂರು ಮುಖ್ಯ ರಸ್ತೆಯಲ್ಲಿ ತನ್ನ ಬಾಬ್ತು KA 20 EQ 3795 ನೇ ಮೋಟಾರ್ ಸೈಕಲ್ ನಲ್ಲಿ ರಾಜೀವನಗರದ Indian Oil ಪೆಟ್ರೋಲ್ ಪಂಪ್ ಬಳಿ ತಲುಪುತ್ತಿದ್ದಂತೆ, ಅಲೆವೂರು ಕಡೆಯಿಂದ ಮಣಿಪಾಲ ಕಡೆಗೆ ಬರುತ್ತಿದ್ದ KA 20 EX 5887 ನೇ ಮೋಟಾರ್ ಸೈಕಲ್ ನ  ಸವಾರ ಆರೋಪಿ ಕೃಷ್ಣಪ್ರಸಾದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ತನ್ನ ಪಥವನ್ನು ಬಿಟ್ಟು ರಸ್ತೆಯ ತೀರ ಬಲಭಾಗಕ್ಕೆ ಬಂದು  ಪಿರ್ಯಾದಿದಾರರ ಮೋಟಾರ್ ಸೈಕಲ್ ನ ಮುಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎರಡು ಮೋಟಾರ್ ಸೈಕಲ್ ಸವಾರರು ಮೋಟಾರ್ ಸೈಕಲ್ ಸಮೇತ  ರಸ್ತೆಗೆ ಬಿದ್ದು  ಪಿರ್ಯಾದಿದಾರರ ಎಡಕೈಮೂಳೆಮುರಿತ, ಎಡಗಾಲಿಗೆ ಮತ್ತು ಎಡಭುಜಕ್ಕೆ ತರಚಿದ ಗಾಯ, ಆರೋಪಿ ಕೃಷ್ಣಪ್ರಸಾದ್ ನ ತಲೆ ಮತ್ತು ಮುಖಕ್ಕೆ ಸಾದಾ ರಕ್ತಗಾಯ ಉಂಟಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 42/2022, ಕಲಂ; 279,337, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಗಂಗೊಳ್ಳಿ: ಕಿಶನ್ ಕುಮಾರ್ ರವರು ದಿನಾಂಕ: 19-03-2022 ರಂದು ಸಂಜೆ ಬೈಂದೂರು ತಾಲೂಕು ಮರವಂತೆ ಗ್ರಾಮದ ವರಾಹ ಮಹರಾಜ ಸ್ವಾಮಿ ದೇವಸ್ಥಾನದ ಎದುರು ಬೀಚ್ ಬಳಿಯಿರುವ  ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಹೋಗುವ ರಾ.ಹೆ 66 ರ ಮಣ್ಣು ರಸ್ತೆಯಲ್ಲಿ ನಿಂತಿದ್ದಾಗ ಪರಿಚಯದ ಶೇಖರ ಮೊಗವೀರ ಎಂಬವರು ಫಿರ್ಯಾದಿದಾರರ  ಹತ್ತಿರ ನಿಂತುಕೊಂಡಿರುತ್ತಾರೆ. ಸಮಯ ಸುಮಾರು ಸಂಜೆ 5:00 ಗಂಟೆಗೆ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಶ್ರೀ ಸೈಲ್ ಎಂಬವರು KA-22 D-2324 ನೇ ಲಾರಿಯನ್ನು  ಅತೀವೇಗ  ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಎಡಬದಿಗೆ ಬಂದು  ಮಣ್ಣು ರಸ್ತೆಯಲ್ಲಿ ನಿಂತುಕೊಂಡಿದ್ದ  ಶೇಖರ ಮೊಗವೀರರವರಿಗೆ ಡಿಕ್ಕಿ ಹೊಡೆದ ಪರಿಣಾಮ  ಅವರ ಎಡಕಾಲಿಗೆ ತೀವ್ರ ಸ್ವರೂಪದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ  ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದಂತೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ  ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 26/2022, ಕಲಂ; 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

 

ಇತರ ಪ್ರಕರಣ

 • ಕುಂದಾಪುರ: ಪಿರ್ಯಾದಿ ಶ್ರೀಮತಿ ಸುಜಾತ  ಇವರ ತಮ್ಮನಾದ ರಾಘವೇಂದ್ರ ತೋಳಾರ್ ಈತನು ಪಿರ್ಯಾದಿದಾರರ ಮನೆಯ  ಒಂದು ಭಾಗದಲ್ಲಿ ಪ್ರತ್ಯೇಕವಾಗಿ  ವಾಸವಿದ್ದು  ಪಿರ್ಯಾದಿದಾರರ ತಂದೆ ನರಸಿಂಹ ಮರಕಾಲ  ಇವರೊಂದಿಗೆ  ಜಾಗದ  ವಿಚಾರದಲ್ಲಿ ಸುಮಾರು 9ವರ್ಷಗಳಿಂದ ತಕರಾರು ಮಾಡಿಕೊಂಡು    ದ್ವೇಷದಿಂದ ಆಗಾಗ  ಜಗಳ ಮಾಡಿ  ಕೊಲೆ ಮಾಡುವುದಾಗಿ ಬೆದರಿಕೆ  ಹಾಕುತ್ತಿದ್ದನು.  ಹೀಗಿರುತ್ತಾ ಈ ದಿನ ದಿನಾಂಕ 19/03/2022 ರಂದು  ರಾತ್ರಿ  ಸುಮಾರು 20.45  ಗಂಟೆಗೆ ಆಪಾದಿತನು  ಮನೆಯ  ಅಂಗಳದಲ್ಲಿ  ಕಸಕಡ್ಡಿಗೆ ಬೆಂಕಿ ಹಾಕಿದಾಗ ಅದರ ಪಕ್ಕದಲ್ಲಿಯೇ  ದನದ  ಕೊಟ್ಟಿಗೆ, ಹುಲ್ಲು ರಾಶಿ ಇದ್ದ ಕಾರಣ  ಪಿರ್ಯಾದಿದಾರರ  ತಂದೆ   ನರಸಿಂಹ ಮರಕಾಲ ರವರು  ಬೆಂಕಿಗೆ ನೀರು ಹಾಕಿ  ಆರಿಸಲು ಹೋದಾಗ  ಆಪಾದಿತನು ಪಿರ್ಯಾದಿದಾರರ ತಂದೆಯವರನ್ನು  ಉದ್ದೇಶಿಸಿ ಅವಾಚ್ಯವಾಗಿ ಬೈದು   ಕೊಲೆ ಮಾಡದೇ ಬಿಡುವುದಿಲ್ಲ ಎಂದು ಹೇಳಿ ಆತನ  ಮನೆಯ ಒಳಗಡೆ ಇರುವ  ಕಬ್ಬಿಣದ ಕೊಡಲಿಯನ್ನು  ತಂದು ನರಸಿಂಹ  ಮರಕಾಲ  ಇವರನ್ನು ಕೊಲೆ  ಮಾಡುವ ಉದ್ದೇಶದಿಂದಲೇ ತಲೆಗೆ ಮುಖಕ್ಕೆ ಬಲವಾಗಿ  ಕಡಿದಾಗ  ಅಲ್ಲಿಯೇ  ಇದ್ದ ಪಿರ್ಯಾದಿದಾರರು  ತಪ್ಪಿಸಲು  ಹೋದಾಗ ಪಿರ್ಯಾದಿದಾರರಿಗೂ  ಆತನು  ಕೊಡಲಿಯನ್ನು  ಬೀಸಿದಾಗ ಅವರ ಹೊಟ್ಟೆಗೆ ತಾಗಿ  ರಕ್ತಗಾಯವಾಗಿದ್ದು ಆ ಸಮಯ ಪಿರ್ಯಾದಿ ದಾರರ ಗಂಡ ಬಿಡಿಸಲು ಪ್ರಯತ್ನಿಸಿದಾಗ  ಅವರಿಗೂ  ಕೊಲೆ ಮಾಡುವ  ಉದ್ದೇಶದಿಂದ ಕೊಡಲಿಯನ್ನು  ಜೋರಾಗಿ  ಬೀಸಿದ್ದು ಆಗ  ಪಿರ್ಯಾದಿದಾರರು ಕೊಡಲಿಯನ್ನು ಬಿಗಿಯಾಗಿ ಹಿಡಿದಾಗ  ಆಪಾದಿತನು  ಕೊಡಲಿಯನ್ನು ಜೋರಾಗಿ  ಎಳೆದ  ಪರಿಣಾಮ ಪಿರ್ಯಾದಿದಾರರ  ಎಡಕೈಗೆ     ಜಳನೋವು  ಆಗಿರುತ್ತದೆ.  ಈ  ಹಲ್ಲೆಯಿಂದ  ನರಸಿಂಹ  ಮರಕಾಲ ಇವರಿಗೆ ತಲೆಗೆ ತೀವೃ ಸ್ವರೂಪದ ರಕ್ತಗಾಯವಾಗಿ ಕೋಟೇಶ್ವರದ ಎನ್‌ಆರ್ ಆಚಾರ್ಯ ಆಸ್ಪತ್ರೆಯಲ್ಲಿ  ಪ್ರಥಮ  ಚಿಕಿತ್ಸೆ  ಪಡೆದು ಅಲ್ಲಿಂದ  ಹೆಚ್ಚಿನ  ಚಿಕಿತ್ಸೆಯ ಬಗ್ಗೆ  ಮಣಿಪಾಲ  ಕೆಎಮ್‌ಸಿ  ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಪಿರ್ಯಾದಿದಾರರು ಕೋಟೇಶ್ವರದ  ಎನ್.ಆರ್ ಆಚಾರ್ಯ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 34/2022 ಕಲಂ: 504, 307, ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 20-03-2022 10:36 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080