ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಕಾರ್ಕಳ:ದಿನಾಂಕ:19/03/2022 ರಂದು ಸಂಜೆ 6:45 ಗಂಟೆಗೆ ಪಿರ್ಯಾದಿದಾರರಾದ ಸುರೇಶ, ಪ್ರಾಯ: 54 ವರ್ಷ, ತಂದೆ: ಸಂಜೀವ ನಾಯ್ಕ, ವಾಸ: ಭುವನೇಂದ್ರ ರೆಸಿಡೆನ್ಸಿ ಸ್ಕೂಲ್ ಕ್ವಾಟ್ರಸ್, ಕೋಟಿ ಚೆನ್ನಯ್ಯ ಥೀಂ ಪಾರ್ಕ್ ಬಳಿ, ಕಸಬಾ ಗ್ರಾಮ ಕಾರ್ಕಳ ತಾಲೂಕು ಇವರು ತಂದೆ ಸಂಜೀವ ನಾಯ್ಕ, ಪ್ರಾಯ:85 ವರ್ಷ ರವರೊಂದಿಗೆ ಕೋಟಿ ಚೆನ್ನಯ್ಯ ಥೀಂ ಪಾರ್ಕ್ ನಿಂದ ಭುವನೇಂದ್ರ ರೆಸಿಡೆನ್ಸಿ ಸ್ಕೂಲ್ ನ ಕಡೆಗೆ ವಾಕಿಂಗ್ ಹೋಗಿ ಭುವನೇಂದ್ರ ರೆಸಿಡೆನ್ಸಿ ಸ್ಕೂಲ್ ನ ಹತ್ತಿರ ರಸ್ತೆಯ ಎಡಬದಿಯಲ್ಲಿ ವಾಪಾಸು ನಡೆದುಕೊಂಡು ಬರುತ್ತಿರುವಾಗ ಕೋಟಿ ಚೆನ್ನಯ್ಯ ಥೀಂ ಪಾರ್ಕ್ ಕಡೆಯಿಂದ KA-20-EL-5617 ನೇ ನೋಂದಣಿ ಸಂಖ್ಯೆಯ ಮೋಟಾರ್ ಸೈಕಲ್ ಸವಾರ ಲತೀಶ್ ನಾಯಕ್ ತನ್ನ ಮೋಟಾರ್ ಸೈಕಲ್ ನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಂದೆಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ತಂದೆ ರಸ್ತೆಗೆ ಬಿದ್ದಿದ್ದು ಕೂಡಲೇ ಪಿರ್ಯಾದಿದಾರರು ತನ್ನ ತಂದೆಯವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಬೇರೆ ಆಸ್ಪತ್ರೆಗೆ ಕರೆದುಕೊಡು ಹೋಗುವಂತೆ ತಿಳಿಸಿದ ಮೇರೆಗೆ ಪಿರ್ಯಾದಿದಾರರು ತನ್ನ ತಂದೆಯವರನ್ನು ಕಾರ್ಕಳದ ನಿಟ್ಟೆ ಗಾಜ್ರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪಿರ್ಯಾದಿದಾರರು ತಂದೆಯವರನ್ನು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಅಪಘಾತದಿಂದ ಪಿರ್ಯಾದಿದಾರರ ತಂದೆಯವರಿಗೆ ಎಡಕಾಲಿಗೆ ತೀವ್ರ ಗಾಯವಾಗಿದ್ದು, ಬೆನ್ನಿಗೂ ಕೂಡ ಗಾಯವಾಗಿರುತ್ತದೆ ಹಾಗೂ ತಲೆಗೂ ಕೂಡ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 37/2022 ಕಲಂ 279,337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು:ದಿನಾಂಕ 19/03/2022 ರಂದು 22:15 ಗಂಟೆಗೆ ಪಿರ್ಯಾದಿದಾರರಾದ ರಘುರಾಮ ಗಾಣಿಗ(37),ತಂದೆ: ಚಂದ್ರ ಗಾಣಿಗ ,ವಾಸ: ಶ್ರೀ ಕೃಷ್ಣ ನಿಲಯ ಮಲಾರಿ ಕೆಂಚನೂರು ಗ್ರಾಮ ಕುಂದಾಪುರ ತಾಲೂಕು ಇವರ ನೆರೆಕರೆಯ ನಿವಾಸಿ ಆಶಾ ಎಂಬುವವರ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ಅವರನ್ನು ವಂಡ್ಸೆ ಗ್ರಾಮದ ಐತಾಳ್ ಕ್ಲಿನಿಕ್ ಗೆ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದು ಅವರನ್ನು ವೈದ್ಯರ ಬಳಿ ಕಳುಹಿಸಿ ಪಿರ್ಯಾದಿದಾರರು ಆಸ್ಪತ್ರೆ ಎದುರಿನ ರಾಜ್ಯ ಹೆದ್ದಾರಿಯ ಮಣ್ಣುರಸ್ತೆಯಲ್ಲಿ ನಿಂತುಕೊಂಡಿದ್ದಾಗ ಚಿತ್ತೂರು ಕಡೆಯಿಂದ ವಂಡ್ಸೆ ಕಡೆಗೆ ಆರೋಪಿ KA-20-EV-0938 ನೇ ಮೋಟಾರ್ ಸೈಕಲ್ ಸವಾರನ್ನು ಅತೀ ವೇಗ ಹಾಗೂ ಅಜಗಾರೂಕತೆಯಿಂದ ರಸ್ತೆಯ ತೀರ ಎಡ ಬದಿಗೆ ಚಲಾಯಿಸಿ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಎಡ ಕಾಲಿಗೆ ಒಳಜಖಂ ನೋವು ಮತ್ತು ಸೊಂಟಕ್ಕೆ ಗುದ್ದಿದ ಒಳನೋವು ಉಂಟಾಗಿ ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 13/2022 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ಪಿರ್ಯಾದಿದಾರರಾದ ಪಿ. ಎನ್ ಸದಾಶಿವನ್ (53), ತಂದೆ: ದಿ: ನಾರಾಯಣ ನಾಯರ್ ,ವಾಸ: ಪುತ್ತನ್ ಪುರಕ್ಕಲ್ ಮನೆ ಉದಯ ನಗರ ಮುದೂರು ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ: 18/03/2022 ರಂದು ರಾತ್ರಿ 9:30 ಗಂಟೆಗೆ ಮಗ ಸುಜಿತ್‌ನ KA -20-ET-8222 ನೇ ಮೋಟಾರ್ ಸೈಕಲ್‌ನಲ್ಲಿ ಹಿಂಬದಿ ಸಹ ಸವಾರನಾಗಿ ಕುಳಿತು ಪಿರ್ಯಾದಿದಾರರ ಮನೆಯ ಸಮೀಪದಲ್ಲಿರುವ ಜಮೀನಿಗೆ ಕೃಷಿ ಕೆಲಸಕ್ಕೆ ಅಳವಡಿಸಿದ ನೀರಿನ ಪೈಪ್‌ನ್ನು ಸರಿ ಮಾಡಲು ಹೋಗುತ್ತಿರುವಾಗ ಸುಜಿತ್‌ ಮೋಟಾರ್ ಸೈಕಲ್‌ನ್ನು ಅತೀ ವೇಗವಾಗಿ ಅಜಾಗರೂಕತೆಯಿಂದ ಉದಯನಗರ ಕಡೆಯಿಂದ - ಉದಯಪುರ ಕಡೆಗೆ ಚಲಾಯಿಸಿ ಮುದೂರು ಗ್ರಾಮದ ನಲವತ್ತುಕುನ್ನು ಎಂಬಲ್ಲಿ ರಸ್ತೆಯಲ್ಲಿ ಅಚ್‌ನಕ್ಕಾಗಿ ಕಾಡು ಹಂದಿ ಅಡ್ಡ ಬಂದದ್ದನ್ನು ನೋಡಿ ಗಲಿಬಿಲಿಗೊಂಡು ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಸ್ಕೂಟರ್‌ನಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಪಿರ್ಯಾದಿ ದಾರರು ರಸ್ತೆಗೆ ಎಸೆಯಲ್ಪಟ್ಟು ತಲೆಗೆ ರಕ್ತಗಾಯ ಎದೆಗೆ ತರಚಿದ ಗಾಯ ಮತ್ತು ಎಡ ಭುಜಕ್ಕೆ ಹಾಗೂ ಎಡಕಾಲು ತೊಡೆಗೆ ರಕ್ತಗಾಯ ಉಂಟಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 14/2022 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ 

  • ಉಡುಪಿ: ಪಿರ್ಯಾದಿದಾರರಾದ ಆನೆಟ್ ಡಿಸೋಜ, ಪ್ರಾಯ: 31 ವರ್ಷ, ತಂದೆ: ರೋಬರ್ಟ್ ಮೆಕ್ಸಿಮ್ ಡಿಸೋಜ,ವಾಸ: 6-1-8--ಡಿ1, ಮೆಲ್ ರಾಯ್ ಮ್ಯಾನ್ ಶನ್, ವ್ಯಾಸ, ಮುದ್ರಣ ಲೇನ್, ಚಿಟ್ಪಾಡಿ, ಉಡುಪಿ ಇವರು ಉಡುಪಿಯ ಅಜ್ಜರಕಾರ್ಡು ಬಳಿ ಇರುವ ಎಸ್.ಬಿ.ಐ. ಬ್ಯಾಂಕಿನ ಟ್ರಜರಿ ಶಾಖೆಯಲ್ಲಿ ಎಸ್.ಬಿ. ಖಾತೆ ಹೊಂದಿದ್ದು,ಇಂಟರ್ ನೆಟ್ ಬ್ಯಾಂಕಿಂಗ್ ಹೊಂದಿರುತ್ತಾರೆ. ದಿನಾಂಕ 04/03/2022 ರಂದು ಮಧ್ಯಾಹ್ನ 3:48 ಗಂಟೆಗೆ ಮೊಬೈಲ್ ಗೆ ಬ್ಯಾಂಕ್ ಅಧಿಕಾರಿಗಳಂತೆ ಸಂದೇಶವನ್ನು ಕಳುಹಿಸಿ ಪಾನ್ ಕಾರ್ಡ್‌ ಅಪ್ಡೇಟ್ ಮಾಡುವ ಲಿಂಕ್ ಇರುವ ಸಂದೇಶ ಬಂದಿದ್ದು,ಪಿರ್ಯಾದಿದಾರರು ಕೂಡಲೇ ಲಿಂಕ್ ನ್ನು ಓಪನ್ ಮಾಡಿ ಪಾನ್ ಕಾರ್ಡ್ ಅಪ್ಡೇಟ್ ಮಾಡಿದ್ದು, ಅಲ್ಲದೇ ಪಿರ್ಯಾದಿದಾರರ ಮೊಬೈಲ್ ಗೆ ಬಂದ OTP ಯನ್ನು ಲಿಂಕ್ ನಲ್ಲಿ ಅಪ್ಡೇಡ್ ಮಾಡಿದ್ದು,ಆ ಕೂಡಲೇ ಪಿರ್ಯಾದಿದಾರರ ಖಾತೆಯಿಂದ ಕ್ರಮವಾಗಿ ರೂಪಾಯಿ. 8,000/-, 9,000/-, 81,000/-, 25,000/- ಒಟ್ಟು ರೂಪಾಯಿ 1,23,000/- ಹಣ ಕಡಿತಗೊಂಡಿರುತ್ತದೆ. ನಂತರ ಪಿರ್ಯಾದಿದಾರರು ಕೂಡಲೇ ನ್ಯಾಷನಲ್ ಸೈಬರ್ ಕ್ರೈಂ ಪೋರ್ಟಲ್ ಗೆ ಮಾಹಿತಿ ನೀಡಿದ್ದು, ಅದರಂತೆ ರೂಪಾಯಿ. 81,000/- ಹಣ ಖಾತೆಗೆ ದಿನಾಂಕ: 08/03/2022 ರಂದು ಮರುಪಾವತಿ ಯಾಗಿದ್ದು, ಹಾಗೂ ದಿನಾಂಕ: 05/03/2022ರಂದು ರೂಪಾಯಿ. 25,000/- ಹಣ ವರ್ಗಾವಣೆಗೊಂಡ ಖಾತೆಯಲ್ಲಿ ಸ್ಥಗಿತ ಗೊಂಡ ಬಗ್ಗೆ ಸಂದೇಶ ಬಂದಿರುತ್ತದೆ. ಹಾಗೂ ರೂಪಾಯಿ.17,000/- ಹಣ ಬಾಕಿ ಇರುವುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 13/2022 ಕಲಂ: 66(c), 66(d) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 20-03-2022 06:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080