ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಶಂಕರನಾರಾಯಣ: ದಿನಾಂಕ  19/03/2021  ರಂದು  09:15  ಗಂಟೆಗೆ ಫಿರ್ಯಾದಿದಾರರಾಧ ಪರಮೇಶ್ವರ  ನಾಯ್ಕ (56) ತಂದೆ, ರಾಮ ನಾಯ್ಕ ವಾಸ, ಅಮೃತ ನಿಲಯ ವರಾಹಿ ರಸ್ತೆ ಸಿದ್ದಾಪುರ ಗ್ರಾಮ ಕುಂದಾಪುರ  ಇವರು ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಸಿದ್ದಾಪುರ ಕುಂದಾಪುರ ರಸ್ತೆಯ ದುರ್ಗಾ ಸ್ಟೋರ  ಬಳಿ ಕೆಎ-15-ಕ್ಯೂ-9971  ನೇ ನಂಬ್ರದ ಮೋಟಾರ್ ಸೈಕಲ್‌ನಲ್ಲಿ ಹೋಗುತ್ತಿರುವಾಗ ಆರೋಪಿಯು ಕೆಎ-66-ಜೆ-2986  ನೇ ನಂಬ್ರದ ಮೋಟಾರ್ ಸೈಕಲ್‌‌ನ್ನು ಕುಂದಾಪುರ ಕಡೆಯಿಂದ ಹೊಸಂಗಡಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ, ಹಾಗೂ ಅಪಘಾತ  ಸಮಯ ಆರೋಪಿಯು ಮೋಟಾರ್ ಸೈಕಲ್ ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 31/2021 ಕಲಂ: 279,338 ಐ.ಪಿ.ಸಿ 134 (ಎ) (ಬಿ) ಜೊತೆಗೆ  187 ಮೊ.ವಾ. ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ಪ್ರಕಾಶ್ ಅಮೀನ್ (48) ತಂದೆ: ದೇಜು ಪೂಜಾರಿ ವಾಸ: ಕಲಾಯಿಬೈಲು ಉದ್ಯಾವರ, ಉದ್ಯಾವರ ಇವರು ತೆಂಗಿನ ಕಾಯಿ ಕೊಯ್ಯುವ ಕೆಲಸ ಮಾಡಿಕೊಂಡಿದ್ದು ದಿನಾಂಕ 17/03/2021 ರಂದು  ಕಿದಿಯೂರಿನಲ್ಲಿ  ಕೆಲಸ ಮುಗಿಸಿ  ತನ್ನ ಆಕ್ಟೀವಾ ಹೋಂಡಾ  ಕೆಎ-20-ಇಕೆ-5707  ನೇ ದರಲ್ಲಿ ಸಹಸವಾರನಾದ ಶೇಖರ ಎಂಬವರನ್ನು ಕರೆದುಕೊಂಡು ಸುಮಾರು ಮದ್ಯಾಹ್ನ 12:15 ಗಂಟೆಗೆ  ತಮ್ಮ ಮನೆಯಾದ ಉದ್ಯಾವರದ ಕಡೆಗೆ ವಾಪಾಸು ಹೋಗುವಾಗ ಕಿದಿಯೂರಿನ ಅಂಬಾ ಕ್ರಾಸ್ ಬಳಿ  ತಲುಪುವಾಗ ಕೆಎ-20-ಎನ್-2275 ನೇ ಕಾರಿನ ಚಾಲಕನು ತನ್ನ ಕಾರನ್ನು ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿದ್ದು ಅದರ ಚಾಲಕನು ಯಾವುದೇ ಮುನ್ಸೂಚನೆಯನ್ನು ನೀಡದೆ ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ   ಬಲಬದಿಯ ಮುಂಭಾಗದ ಕಾರಿನ ಬಾಗಿಲನ್ನು ತೆಗೆದಾಗ ಕಾರಿನ ಬಾಗಿಲು ಪ್ರಕಾಶ ಇವರ ಸ್ಕೂಟರಿಗೆ ತಾಗಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ತೀವೃ ಗಾಯಗೊಂಡಿದ್ದು ಅಲ್ಲಿ ಸೇರಿದವರು ಹಾಗೂ ಕಾರಿನ ಚಾಲಕ ಸೇರಿ  ಹೈಟೆಕ್ ಆಸ್ವತ್ರೆಗೆ ಒಳ ರೋಗಿಯಾಗಿ ದಾಖಲಿಸಿರುತ್ತಾರೆ. ಅಪಘಾತ ನಡೆಸಿದ ಚಾಲಕನು ಗೋಪಾಲಕೃಷ್ಣ ಎಂಬುದಾಗಿ ಆತನು ವೈಧ್ಯಕೀಯ ವೆಚ್ಚ ನೀಡುವುದಾಗಿ ಭರವಸೆ ನೀಡಿ ನಂತರ ಹಣವನ್ನು ನೀಡದೆ ಇದ್ದುದರಿಂದ ದೂರುನೀಡುವರೇ ವಿಳಂಬವಾಗಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 28/2021 ಕಲಂ: 279,337,378 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ವರದಕ್ಷಿಣೆ ಕಿರುಕುಳ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಶ್ರೀಮತಿ ಜ್ಯೋತಿ ಶೆಟ್ಟಿ (28) ಹಂಡ: ಪ್ರಕಾಶ ಶೆಟ್ಟಿ ವಾಸ: ಹಳ್ನಾಡು  ಮೇಲ್ ಮನೆ ಹಳ್ನಾಡು ಗ್ರಾಮ ಕುಂದಾಪುರ ಇವರು ದಿನಾಂಕ 25/04/2012 ರಂದು  ಹಿಂದೂ ಸಂಪ್ರದಾಯ ದಂತೆ 1ನೇ ಆರೋಪಿ  ಪ್ರಕಾಶ ಶೆಟ್ಟಿ ಯವರನ್ನು ವಿವಾಹವಾಗಿದ್ದು ಮದುವೆಯ ಸಮಯದಲ್ಲಿ 3.75,000/- ರೂಪಾಯಿ ಹಣ ಹಾಗೂ 15 ಪವನ್ ಚಿನ್ನಾಭರಣಗಳನ್ನು ಆರೋಪಿತರು ಪಡೆದುಕೊಂಡಿದ್ದು  ಮದುವೆ ನಂತರ  ಕೆಲವು ಸಮಯದವರೆಗೆ ಗಂಡನ ಮನೆಯಲ್ಲಿ ಚೆನ್ನಾಗಿ ನೋಡಿಕೊಂಡಿದ್ದು ನಂತರದ ದಿನದಲ್ಲಿ ಪ್ರಕಾಶ ಶೆಟ್ಟಿ  ಮನೆಯಲ್ಲಿ ವಿನಾ ಕಾರಣ ಜಗಳ  ಮಾಡಿ ವರದಕ್ಷಿಣೆ ರೂಪದಲ್ಲಿ ಹೆಚ್ಚಿನ ಹಣ ತರುವಂತೆ  ಹೇಳುತ್ತಿದ್ದು ಇದಕ್ಕೆ ಒಪ್ಪದೆ ಇದ್ದಾಗ ಶ್ರೀಮತಿ ಜ್ಯೋತಿ ಶೆಟ್ಟಿ ಇವರಿಗೆ ಅಶ್ಲೀಲವಾಗಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದು  ರಾತ್ರಿ  ಸಮಯದಲ್ಲಿ ಮದ್ಯಪಾನ ಸೇವಿಸಿಕೊಂಡು ಮನೆಗೆ ಬಂದು ಹೊಡೆಯುತ್ತಿದ್ದು ಉಳಿದ ಆರೋಪಿತರುಗಳಾದ ಸಂಜೀವ ಶೆಟ್ಟಿ, ಜಲಾಜಾಕ್ಷಿ ಶೆಡ್ತಿ, ಶ್ರೀಮತಿ ನಾಗರತ್ನ ಇವರುಗಳು ಸೇರಿ ವರದಕ್ಷಿಣೆ ತರುವಂತೆ ಒತ್ತಾಯಿಸುತ್ತಿದ್ದು ತರದೆ ಇದ್ದಲ್ಲಿ ಕೊಲ್ಲುವುದಾಗಿ ಬೆದರಿಸುತ್ತಿದ್ದರು ಶ್ರೀಮತಿ ಜ್ಯೋತಿ ಶೆಟ್ಟಿ ಇವರ ಗಂಡ ಪ್ರಕಾಶ ಶೆಟ್ಟಿಗೆ ಉಳಿದ ಆರೋಪಿತರೆಲ್ಲ ಹೊಡೆಯುವಂತೆ ಬೈಯುವಂತೆ ಪ್ರಚೋದನೆ ನೀಡುತ್ತಿದ್ದರು, ದಿನಾಂಕ 01/06/2013 ರಂದು ಶ್ರೀಮತಿ ಜ್ಯೋತಿ ಶೆಟ್ಟಿ ರವರಿಗೆ ಗಂಡು ಮಗುವಾಗಿದ್ದು  ನೋಡಲು ಬಾರದೆ ಇದ್ದಾಗ ಶ್ರೀಮತಿ ಜ್ಯೋತಿ ಶೆಟ್ಟಿ ರವರ ಗಂಡನ ಮನೆಗೆ ಬಂದು ಇದ್ದಾಗ ಆರೋಪಿತರೆಲ್ಲರೂ ಪುನಹ ಹೆಚ್ಚಿನ ವರದಕ್ಷಿಣೆ ತರುವಂತೆ ಗಂಡನ ಮನೆಯಿಂದ ಹೊರಗೆ ಹಾಕಿದ್ದು ಶ್ರೀಮತಿ ಜ್ಯೋತಿ ಶೆಟ್ಟಿ ರವರು ತವರು ಮನೆಯಲ್ಲಿದ್ದು ಜೀವನ ನೆಡೆಸುತ್ತಿದ್ದು ಆರೋಪಿತರು ತವರು ಮನೆಗೆ ಬಂದು ಹಣವನ್ನು ತರುವಂತೆ ಒತ್ತಾಯಿಸಿ ಶ್ರೀಮತಿ ಜ್ಯೋತಿ ಶೆಟ್ಟಿ ರವರಿಗೆ ಹಾಗೂ ಮನೆಯವರಿಗೆ ಬೈದು ಹಲ್ಲೆ ಮಾಡಿ ನಿನ್ನನ್ನು ಹಾಗೂ ನಿನ್ನ ಮಗುವನ್ನು ಕೊಂದು ಹಾಕಿ 1 ನೇ ಆರೋಪಿತನಿಗೆ ಬೆರೊಂದು ಮದುವೆ ಮಾಡಿಸಿತ್ತೇವೆ ಎಂಬುದಾಗಿ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 19/2021 ಕಲಂ: 498 (A). 504. 323.506 ಜೋತೆಗೆ 34  ಐಪಿಸಿ & 3.4.6. DP Act 1961 ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾಧ ನಾರಯಣ (47) ತಂದೆ, ದಿ|| ಶ್ರೀನಿವಾಸ ಮೊಗವೀರ ವಾಸ: ಕಲ್ಲುಗುಂಡಿ ಹಣೆಜೆಡ್ಡು ಗ್ರಾಮ ಕುಂದಾಪುರ ಇವರ ತಾಯಿ ಕುಷ್ನಿ ಮರಕಲ್ತಿ (79) ಇವರಿಗೆ ಬಿ.ಪಿ ಮತ್ತು ಶುಗರ್ ಕಾಯಿಲೆ ಇದ್ದು ತಮ್ಮ ಮನೆಯ ಗೇರು ತೋಟದಲ್ಲಿ ಗೇರು ಬೀಜವನ್ನು ಆರಿಸಲು ದಿನಾಂಕ 18/03/2021 ಬೆಳಿಗ್ಗೆ 8:30 ಗಂಟೆಯಿಂದ ದಿನಾಂಕ 19/03/2021ರ 20:00 ಗಂಟೆಯ ಮದ್ಯಾವಧಿಯಲ್ಲಿ ತಮ್ಮ ಮನೆಯ ಪಕ್ಕದ ಗೇರು ತೋಟದಲ್ಲಿ ಬಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 10/2021 ಕಲಂ 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 20-03-2021 09:48 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080