ಅಭಿಪ್ರಾಯ / ಸಲಹೆಗಳು

ಜುಗಾರಿ ಪ್ರಕರಣ

  • ಕುಂದಾಪುರ: ದಿನಾಂಕ 19/02/2023 ರಂದು  ಪ್ರಸಾದ್ ಕುಮಾರ್  ಕೆ, ಪೊಲೀಸ್‌ ಉಪನಿರೀಕ್ಷಕರು (ತನಿಖೆ), ಕುಂದಾಪುರ ಪೊಲೀಸ್‌ ಠಾಣೆ  ಇವರು ರೌಂಡ್ಸ್  ಕರ್ತವ್ಯದಲ್ಲಿರುವಾಗ  ಕುಂದಾಪುರ ತಾಲೂಕು ತಲ್ಲೂರು  ಗ್ರಾಮದ ವೈಭವ ಬಾರ್‌ ಬಳಿ ಇರುವ ನೀರಿನ ಟ್ಯಾಂಕ ಬಳಿ ಸಾರ್ವಜನಿಕ  ಸ್ಥಳದಲ್ಲಿ ಅಂದರ್ ಬಾಹರ್ ಎಂಬ ಜುಗಾರಿ ಆಟ ಆಡುತ್ತಿದ್ದಾರೆಂದು ಬಂದ ಮಾಹಿತಿಯಂತೆ ದಾಳಿ ಮಾಡಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ 1) ಪುಟ್ಟ  ಎಸ್ (42), ತಂದೆ:ಸದಿಯ ವಾಸ:ಧ್ವಜ ಕಟ್ಟೆ ಹತ್ತಿರ, ಪಿಂಗಾಣಿಗುಡ್ಡೆ, ತಲ್ಲೂರ್ ಗ್ರಾಮ, ಕುಂದಾಪುರ ತಾಲೂಕು, 2)ಸುದರ್ಶನ (31), ತಂದೆ:ಶೇಖರ್,  ವಾಸ: ಸಹದೇವಿ ಹಾಲ್ ಹತ್ತಿರ, ಪಾರ್ತಿಕಟ್ಟೆ, ತಲ್ಲೂರ್ ಗ್ರಾಮ, ಕುಂದಾಪುರ ತಾಲೂಕು, 3)ಗಣೇಶ್ (49), ತಂದೆ: ಯಲ್ಲಪ್ಪ ವಾಸ: ಧ್ವಜ ಕಟ್ಟೆ ಹತ್ತಿರ, ಪಿಂಗಾಣಿಗುಡ್ಡೆ, ತಲ್ಲೂರ್ ಗ್ರಾಮ, ಕುಂದಾಪುರ ತಾಲೂಕು, 4)ಮುಡೂರ (56), ತಂದೆ:ಕುಷ್ಠ, ವಾಸ:ಗರಡಿ ಮನೆ ಹತ್ತಿರ, ತಲ್ಲೂರ್ ಗ್ರಾಮ ಕುಂದಾಪುರ ತಾಲೂಕು, 5)ಸುರೇಶ್ (47),  ತಂದೆ:ನಾರಾಯಣ, ವಾಸ: ರಾಜಾಡಿ ರಸ್ತೆ, ದೇವಸ್ಥಾನದ ಹತ್ತಿರ, ಕೋಟೆಬಾಗಿಲು, ತಲ್ಲೂರ್ ಗ್ರಾಮ ಕುಂದಾಪುರ ತಾಲೂಕು, 6)ಸೀತಾರಾಮ(43), ತಂದೆ:ಶೇಷು, ವಾಸ: ಹಳೆ ರೈಸ್ ಮಿಲ್ ಹತ್ತಿರ, ಕೋಟೆಬಾಗಿಲು, ತಲ್ಲೂರ್ ಗ್ರಾಮ ಕುಂದಾಪುರ ತಾಲೂಕು., 7)ಸುನೀಲ್ (30), ತಂದೆ:ಅಬ್ದುಲ್, ವಾಸ: ಕೋಟೆಬಾಗಿಲು ಶಾಲೆ ಹತ್ತಿರ, ಕೋಟೆಬಾಗಿಲು, ತಲ್ಲೂರ್ ಗ್ರಾಮ ಕುಂದಾಪುರ ತಾಲೂಕು ಇವರಿಂದ  ಇಸ್ಪೀಟು ಜುಗಾರಿ ಆಟಕ್ಕೆ ಉಪಯೋಗಿಸಿದ  1) ಹಳೆಯ ದಿನಪತ್ರಿಕೆ-1,  2) ಡೈಮಾನ್,ಆಟಿನ್,ಇಸ್ಪೀಟ್ ಕಳವಾರ್ ಚಿತ್ರಗಳಿರುವ 52 ಇಸ್ಪೀಟ್ ಎಲೆಗಳು 3) ನಗದು ರೂಪಾಯಿ 2420 /-  ಇವುಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 24/2023  ಕಲಂ:  87 KP ACT   ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ರೂಪಶ್ರೀ ಎಂ.ಸಿ. ( 27), ತಂದೆ: ದಿ. ಚಂದ್ರಶೇಖರ ಭಟ್, ವಾಸ: ವೆಂಕಟಾಚಲ ಹತ್ವಾರ್ ರವರ ಬಾಡಿಗೆ ಮನೆ, ಬೀಜಾಡಿ ಕೆನರಾ ಬ್ಯಾಂಕ್, ಬಳಿ, ಕೊಟೇಶ್ವರ ಪೋಸ್ಟ್, ಕುಂದಾಪುರ ತಾಲೂಕು ಇವರು  ವಿಧ್ಯಾಬ್ಯಾಸಕ್ಕಾಗಿ ಪುಸ್ತಕಗಳನ್ನು ಆನ್ ಲೈನ್ ನಲ್ಲಿ ಖರೀದಿಸಿದ್ದು, ಆದರೆ, ಆರ್ಡರ್ ಮಾಡಿ ಒಂದು ವಾರ ಕಳೆದರೂ ಪುಸ್ತಕಗಳು ಬಾರದೇ ಇರುವುದನ್ನು ಕಂಡು ದಿನಾಂಕ 18/02/2023 ರಂದು ಗೂಗಲ್ ನಲ್ಲಿ ಕೋರಿಯರ್ ಸಂಸ್ಥೆಯ ವಿವರವನ್ನು ಹುಡುಕಾಡಿ ಕಂಡು ಬಂದ ಮೊಬೈಲ್ ನಂಬ್ರ ಕ್ಕೆ ಕರೆ ಮಾಡಿದಲ್ಲಿ ಆತನು ತಾನು ಕೋರಿಯರ್ ಸಂಸ್ಥೆಯವನೆಂದು ನಂಬಿಸಿ, ಪಿರ್ಯಾದಿದಾರರ ಮೊಬೈಲ್ ಗೆ ಲಿಂಕ್ ಒಂದನ್ನು ಕಳುಹಿಸಿ, ವಿವರ ಪಡೆದು, ಅದೇ ದಿನ ಕ್ರಮವಾಗಿ 19 ಟ್ರಾನ್ಸೆಕ್ಷನ್ ಮುಖೇನ ಪಿರ್ಯಾದಿದಾರರ ಹೆಚ್.ಡಿ.ಎಫ್.ಸಿ. ಬ್ಯಾಂಕ್, ಕುಂದಾಪುರ ಖಾತೆಯ, ಖಾತೆಯಿಂದ ಒಟ್ಟು ರೂಪಾಯಿ 80,602/- ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿಸಿಕೊಂಡು, ಮೋಸದಿಂದ ನಷ್ಟ ಉಂಟು ಮಾಡಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 26/2023  ಕಲಂ: 66(C), 66(D) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.     

ಇತ್ತೀಚಿನ ನವೀಕರಣ​ : 20-02-2023 09:31 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080