ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಗಂಗೊಳ್ಳಿ: ದಿನಾಂಕ:19/02/2022 ರಂದು ಪಿರ್ಯಾದಿ ಸತೀಶ್‌ಆರ್‌ (24) ತಂದೆ: ರಾಜಪ್ಪ, ವಾಸ: ಅಚಡಾ, ಕಟಪಾಡಿ, ಕಾಪು ತಾಲೂಕು ಉಡುಪಿ ಉಡುಪಿ ರವರು ತನ್ನ KA-20 EA-7067 ನೇ ಹೀರೋ ಹೊಂಡಾ ಸ್ಲೆಂಡರ್‌ಬೈಕ್‌ನಲ್ಲಿ ವಾಸುದೇವ ರವರನ್ನು ಸಹಸವಾರರನ್ನಾಗಿ ಕುಳ್ಳಿಸಿಕೊಂಡು ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ NH 66 ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತೀರುವಾಗ ಸಮಯ ಸುಮಾರು 21:30 ಗಂಟೆಗೆ ತ್ರಾಸಿ ಗ್ರಾಮದ ತ್ರಾಸಿ ಜಂಕ್ಷನ್‌ಬಳಿ ತಲುಪುವಾಗ ಆರೋಪಿ ಸಂತೋಷ ಎಂಬವರು KA-20 ED-8924 ನೇ ಮೋಟಾರು ಸೈಕಲ್‌ನ್ನು ಗಂಗೊಳ್ಳಿಯಿಂದ ತ್ರಾಸಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಒಮ್ಮೇಲೆ NH 66  ರಸ್ತೆಗೆ ಬಂದು ಸತೀಶ ರವರ ಬೈಕ್‌ಗೆ  ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸಮೇತವಾಗಿ ಇವರು ಹಾಗೂ ಸಹಸವಾರ ವಾಸುದೇವ ರವರು ಮತ್ತು ಆರೋಪಿಯು ರಸ್ತೆಗೆ ಬಿದ್ದು ಸತೀಸ್‌ ರವರಿಗೆ ರಕ್ತವಾಗಿದ್ದು ಹಾಗೂ ವಾಸುದೇವ ರವರಿಗೆ ತಲೆಗೆ ತೀವ್ರ ಜಖಂ ಆಗಿದ್ದು,  ಕುಂದಾಪುರ ಆದರ್ಶ ಅಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದು ವಾಸುದೇವ ರವರು ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಅಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಫರಾಧ ಕ್ರಮಾಂಕ 17/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 19/02/2022 ರಂದು  ರಾತ್ರಿ ಸುಮಾರು 8:30 ಗಂಟೆಗೆ, ಕುಂದಾಪುರ  ತಾಲೂಕಿನ ವಡೇರಹೋಬಳಿ  ಗ್ರಾಮದ  ಬಸ್ರೂರು ಮೂರು ಕೈ ಜಂಕ್ಷನ್‌‌ಬಳಿ  ಪೂರ್ವ ಬದಿಯ ಫ್ಲೈ ಓವರ್‌‌NH 66 ರಸ್ತೆಯಲ್ಲಿ , ಆಪಾದಿತ ನಾಗರಾಜ ನಾಯ್ಕ ಎಂಬವರು KA47-Q-4285ನೇ ಬೈಕನ್ನು  ಉಡುಪಿ ಕಡೆಯಿಂದ  ಶಿರೂರು ಕಡೆಗೆ  ವಿರುದ್ಧ ದಿಕ್ಕಿನಲ್ಲಿ ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ  ಚಾಲನೆ ಮಾಡಿಕೊಂಡು ಬಂದು, ಪಿರ್ಯಾದಿದಾರರಾದ ಮಂಜುನಾಥ (46) ತಂದೆ: ಗಣಪತಿ ಮೇಸ್ತಾ  ವಾಸ:ಕೊಟೆಮನೆ, ಶಿರೂರು,  ಹಾಲಿ ವಾಸ:ಸಾಯಿರಾಧ  ಫ್ರೈಡ್‌‌, ಬ್ರಹ್ಮಗಿರಿ ಉಡುಪಿ ಇವರು ಶಿರೂರು  ಕಡೆಯಿಂದ  ಉಡುಪಿ ಕಡೆಗೆ ಚಾಲನೆ ಮಾಡಿಕೊಂಡು ಹೋಗುತ್ತಿದ್ದ KA-15-N-0941 ನೇ ಪೋರ್ಡ ಇಕೊ ಸ್ಟೋರ್ಟ್ಸ ಕಾರಿಗೆ ಎದುರುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ  ನಾಗರಾಜ ನಾಯ್ಕರವರ  ಬಲಕಾಲಿಗೆ ಒಳಜಖಂ ಗಾಯ  ಹಾಗೂ ಮೈ ಕೈಗೆ  ತರಚಿದ ಗಾಯವಾಗಿ ಕುಂದಾಪುರ  ಚಿನ್ಮಯಿ  ಆಸ್ಪತ್ರೆಯಲ್ಲಿ   ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಫರಾಧ ಕ್ರಮಾಂಕ 26/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕಾಪು: ಪಿರ್ಯಾದಿದಾರರಾಧ ಸಂಜೀವ (50) ತಂದೆ : ದಿ. ಕೂಸ  ವಾಸ : ಮನೆ ನಂಬ್ರ 1-36 ಶಯನ ದೀಪ ಹೌಸ್ ಮೂಡುಶೆಡ್ಡೆ  ಅಂಚೆ, ಪಿಲುಕುಳ ಗ್ರಾಮ ಮಂಗಳೂರು ಇವರಿಗೆ ದಿನಾಂಕ 20/02/2022 ರಂದು ಬೆಳಗ್ಗೆ  07:00 ಗಂಟೆಯ ಸಮಯಕ್ಕೆ ಕಟಪಾಡಿ ಕಡೆಯಿಂದ ಪರಿಚಯದವರು ಫೋನ್ ಮಾಡಿ ನಿಮ್ಮ ತಮ್ಮ  ನೇಮರಾಜು (45) ರವರು  ಕಟಪಾಡಿ ಮೂಡಬೆಟ್ಟು ಗ್ರಾಮದ ಮಂಗಳೂರು ಉಡುಪಿ ರಾ ಹೆ 66 ಸರ್ವಿಸ್ ರಸ್ತೆಯ ಬದಿಯಲ್ಲಿರುವ ನಾಗಬನದ ಸಮೀಪ ಮೃತಪಟ್ಟಿರುವ ಸ್ಥಿತಿಯಲ್ಲಿದ್ದು, ಮೃತ ದೇಹವನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆ ಶವಾಗಾರದಲ್ಲಿ ಇರಿಸಿರುವ ಬಗ್ಗೆ ತಿಳಿಸಿದಂತೆ  ಸಂಜೀವ ರವರು ಕೂಡಲೇ ಹೊರಟು ಬಂದು ಶವಾಗಾರದಲ್ಲಿರುವ ತಮ್ಮನ ಮೃತ ದೇಹವನ್ನು ನೋಡಿ ಗುರುತಿಸಿ,  ಸಂಜೀವ ರವರ ತಮ್ಮ ನೇಮರಾಜು ರವರು ಮನೆಗೆ ಬಾರದೇ ಸುಮಾರು 30 ವರ್ಷಗಳಿಂದ ಕಟಪಾಡಿ ಪರಿಸರದಲ್ಲಿ ತಿರುಗಾಡಿಕೊಂಡು ಕೂಲಿ ಕೆಲಸ ಮತ್ತು ಗುಜುರಿ ಹೆಕ್ಕುವ  ಕೆಲಸ ಮಾಡಿಕೊಂಡಿರುವುದಾಗಿ ತಿಳಿದಿರುತ್ತದೆ. ಅವರಿಗೆ ಮದುವೆ ಯಾಗದೇ ಇದ್ದು, ವಿಪರೀತ ಶರಾಬು ಕುಡಿತದ ಅಭ್ಯಾಸವನ್ನು ಹೊಂದಿದ್ದು,  ಶರಾಬು ಕುಡಿತದಿಂದಲೇ ಅನ್ನ ನೀರನ್ನು  ಸರಿಯಾಗಿ  ಸೇವಿಸದೇ ಅಸ್ವಸ್ಥರಾಗಿ  ದಿನಾಂಕ 20-02-2022 ರಂದು  ಬೆಳಗ್ಗೆ  05.00 ಗಂಟೆಯಿಂದ 07.00 ನಡುವಿನ ಸಮಯದಲ್ಲಿ ಯಾವುದೋ ಖಾಯಿಲೆಯಿಂದ ಮೃತ ಪಟ್ಟಿರುವ ಸಾಧ್ಯತೆ ಇರುತ್ತದೆ.  ಮೃತರ ಮರಣದಲ್ಲಿ  ಬೇರೆ ಯಾವುದೇ  ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಯು.ಡಿ.ಆರ್ ಕ್ರಮಾಂಕ 02/2022 ಕಲಂ: 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣದಂತೆ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕುಂದಾಪುರ: ಪಿರ್ಯಾದಿದಾರರಾದ ವಿ ಮಂಜಪ್ಪ (71) ತಂದೆ: ದಿ ಸುಬ್ರಮಣ್ಯ ಎಂ  ವಾಸ: ಶ್ರೀದೇವಿ ಜಯಲಕ್ಷ್ಮೀ ನಿಲಯ ಭಂಡಾರ್ಕಾರ್ಸ್‌‌ಕಾಲೇಜಿನ ಹಿಂದೆ ವಡೇರಹೋಬಳಿ ಗ್ರಾಮ ಕುಂದಾಪುರ ಇವರ ತಂಗಿಯಾದ 1ನೇ ಆರೋಪಿತೆ ಶ್ರೀಮತಿ ವಿ ಜಯಲಕ್ಷ್ಮೀ  ಹಾಗೂ ಆಕೆಯ ಮಗನಾದ 2ನೇ ಆರೋಪಿತ ಕಮಲಾಕ್ಷ ಎಂಬವರು ದಿನಾಂಕ: 19/02/2022 ರಂದು ಸಂಜೆ 03:30 ಗಂಟೆಗೆ ಇವರನ್ನು ಹಾಗೂ ಇವರ ಹೆಂಡತಿಯನ್ನು ಉದ್ದೇಶಿಸಿ ವಾಚ್ಯ ಶಬ್ದಗಳಿಂದ ಬೈದು, ಆರೋಪಿತರಿಬ್ಬರೂ ಸಮಾನ ಉದ್ದೇಶದಿಂದ ವಿ ಮಂಜಪ್ಪ ರವರ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಫರಾಧ ಕ್ರಮಾಂಕ 19/2022 ಕಲಂ: 448, 504, 506 R/W 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದುದಾರರಾಧ ಪ್ರಮೀಳಾ ಬಂಗೇರ (54) ಗಂಡ: ಅಗೋಸ್ಟೀನ್‌ರತ್ನಾಕರ ಬಂಗೇರ ವಾಸ: ಕಕ್ಕುಂಜೆ, ಅಂಬಾಗಿಲು, ಶಿವಳ್ಳಿ ಗ್ರಾಮ, ಉಡುಪಿ ಇವರು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಅಂಬಾಗಿಲು ಕಕ್ಕುಂಜೆ ಎಂಬಲ್ಲಿ ವಾಸ್ತವ್ಯವಿದ್ದು, ದಿನಾಂಕ 21/01/2022 ರಿಂದ ದಿನಾಂಕ 20/02/2022 ರ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಮನೆಯ ಗೋದ್ರೇಜ್‌ನಲ್ಲಿಸಿದ್ದ ಬಂಗಾರದ ಸರ-2, ಬಳೆ-2, ಉಂಗುರ-3, ಕಿವಿಯ ಓಲೆ-1ಜೊತೆ, ಬ್ರೆಸ್‌ಲೆಟ್‌1 ಒಟ್ಟು ಸುಮಾರು 9 ಪವನ್‌ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂಪಾಯಿ. 3,15,000/- ಆಗಿದ್ದು, ಮನೆಗೆ ಬರುತ್ತಿದ್ದ ಸಂತೋಷ ಎಂಬಾತನ ಮೇಲೆ ಸಂಶಯ ಇರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಫರಾಧ ಕ್ರಮಾಂಕ 32/2022, ಕಲಂ: 454 457 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ದಿನಾಂಕ 20/02/2022 ರಂದು ಬೆಳಿಗ್ಗೆ 09:00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಆಶಾ ಸುರೇಂದ್ರ (51) ಗಂಡ: ಸುರೇಂದ್ರಪೂಜಾರಿ  ವಾಸ: ಮನೆ ನಂಬ್ರ: 11-4/ಎ ಆಶಾ ನಿಲಯ ಅಂಬಾಗಿಲು, ಹಳೆ ಮೀನು ಮಾರ್ಕೇಟ್‌ರಸ್ತೆ,ಸಂತೆಕಟ್ಟೆ ಪುತ್ತೂರು ಗ್ರಾಮ, ಉಡುಪಿ ಇವರು ಉಡುಪಿ ತಾಲೂಕು ಪುತ್ತೂರು ಗ್ರಾಮದ ಕೊಡಂಕೂರು ಪ್ರಮೋದ್‌ರಾಜ್‌ಕಾಲೋನಿಯ ಪಕ್ಕದ ಪಿರ್ಯಾದುದಾರರ ತಮ್ಮ ಅರುಣ್‌ಕುಮಾರ್‌ನ 24 ಸೆಂಟ್ಸ್ ಜಾಗವನ್ನು ಸ್ವಚ್ಛಗೊಳಿಸಲು ಶ್ರೀಮತಿ ಆಶಾ ಸುರೇಂದ್ರ ರವರ ತಂದೆ ಎನ್‌ ಗೋಪಾಲ್‌ ಸುವರ್ಣ ಮತ್ತು ಕೆಲಸಗಾರರೊಂದಿಗೆ ಹೋದಾಗ ಸಮಯ ಸುಮಾರು 10:00 ಗಂಟೆಯಿಂದ 10:30 ಗಂಟೆಯ ವೇಳೆಗೆ ಆರೋಪಿತರುಗಳು ಶ್ರೀಮತಿ ಆಶಾ ಸುರೇಂದ್ರ ರವರ ಸಂಬಂಧಿಕರಾದ ರಾಜೇಂದ್ರ ಮತ್ತು ಆತನ ಪತ್ನಿಯಾದ ಶ್ರೀಮತಿ ಮಮತರವರು ಸಮಾನ ಉದ್ದೇಶದಿಂದ ಒಟ್ಟು ಸೇರಿ ಏಕಾಏಕಿ ಪಿರ್ಯಾದುದಾರರ ತಂದೆಯನ್ನು ತಳ್ಳಿ ಕೆಳಗೆ ಬೀಳಿಸಿ, ಪಿರ್ಯಾದುದಾರಿಗೆ ಕುಕ್ಕರಿನ ಮುಚ್ಚಳದಿಂದ ತಲೆಗೆ ಹೊಡೆದು ಹಲ್ಲೆ ಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಫರಾಧ ಕ್ರಮಾಂಕ 31/2022, ಕಲಂ: 323, 324, Rw 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-02-2022 06:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080