ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ಶಿವಪ್ರಸಾದ್ (19), ತಂದೆ: ರಾಜೇಂದ್ರ, ವಾಸ: ಮರವಂತೆ ನಿರೋಣಿ, ಮರವಂತೆ ಗ್ರಾಮ, ಬೈಂದೂರು ತಾಲೂಕು ಇವರು ನಾವುಂದ ಪೆಟ್ರೋಕ್‌ ಬಂಕ್‌ನಲ್ಲಿ  ಕೆಲಸ ಮಾಡಿಕೊಂಡಿದ್ದು, ದಿನಾಂಕ 19/02/2021 ರಂದು ಮರವಂತೆ ನಿರೋಣಿಯಿಂದ ನಾವುಂದ ಪೆಟ್ರೋಲ್ ಬಂಕ್ ಕೆಲಸಕ್ಕೆ ಹೋಗುವ ಸಲುವಾಗಿಸಂಜೆ 4:45 ಗಂಟೆಗೆ ಮರವಂತೆಯ AR ಫಾರ್ಮ್‌ ಸಮೀಪ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬೈಂದೂರು ಕಡೆಯಿಂದ ಕುಂದಾಪು ಕಡೆಗೆ KA-09-MC-8966ನೇ ಇನೋವಾ ಕಾರನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದುದಾರರು ತೀವ್ರ ಸ್ವರೂಪದ ಗಾಯಗೊಂಡು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 17/2021 ಕಲಂ : 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ದಿನಾಂಕ 16/02/2021 ರಂದು ಸಂಜೆ 04:30 ಗಂಟೆಗೆ ಮಲ್ಪೆ ಬಂದರಿನಿಂದ ಮಹಾಬಲೇಶ್ವರ (IND KA.20.MM.924) ಮೀನುಗಾರಿಕಾ ಬೋಟಿನಲ್ಲಿ ಪಿರ್ಯಾದಿದಾರರು ಹಾಗೂ ಮೀನುಗಾರರಾದ ದಿನಕರ ಕಲ್ಯಾಣಪುರ, ವಿಶ್ವನಾಥ ಕಲ್ಯಾಣಪುರ ಇರೊಂದಿಗೆ ಮೀನುಗಾರಿಕೆಗೆ ತೆರಳಿದ್ದು ದಿನಾಂಕ 17/02/2021 ರಂದು ಬೆಳಿಗ್ಗೆ 4:15 ಗಂಟೆಗೆ 26 ಮಾರು ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಸಮಯ ಗಾಳಿಯ ಅಬ್ಬರಕ್ಕೆ ದೊಡ್ಡದಾದ ಅಲೆಗಳಿಂದ ಬೋಟು ಅಲುಗಾಡಿದ್ದು ಆಗ ಬೋಟಿನಲ್ಲಿದ್ದ ವಿಶ್ವನಾಥ(48) ಸಮುದ್ರಕ್ಕೆ ಬಿದ್ದಿರುತ್ತಾರೆ. ಆ ಸಮಯ ಪಿರ್ಯಾದಿದಾರರು ಹಾಗೂ ದಿನಕರ ಕಲ್ಯಾಣಪುರ ರವರು ಹುಡುಕಾಡಿದ್ದಲ್ಲಿ ಸಿಗದೇ ಇದ್ದು ಹಾಗೆಯೇ ಹುಡುಕಾಡುತ್ತಿರುವಾಗ ದಿನಾಂಕ 19/02/2021 ರಂದು ಸಂಜೆ  4:30 ಗಂಟೆಗೆ ವಿಶ್ವನಾಥನು ಸಮುದ್ರದ ನೀರಿಗೆ ಬಿದ್ದ ಸ್ವಲ್ಪ ದೂರದಲ್ಲಿ ಒಂದು ಮೃತ ಶರೀರ ತೇಲುತ್ತಿದ್ದು ಅದನ್ನು ಪರಿಶೀಲಿಸಲಾಗಿ ವಿಶ್ವನಾಥ ರವರ ಮೃತ ಶರೀರವೆಂದು ಗುರುತಿಸಿ ಅದೇ ಬೋಟಿನಲ್ಲಿ ಮೃತ ದೇಹವನ್ನು  ಹಾಕಿಕೊಂಡು ಬಂದು ಉಡುಪಿ ಅಜ್ಜರಕಾಡು ಆಸ್ಪತ್ರೆ ಶವಾಗಾರದಲ್ಲಿ ಇಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 10/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಶಿರ್ವಾ: ಪಿರ್ಯಾದಿದಾರರಾದ ಅಂಕಿತ್‌ ಅಶೋಕ್‌ ಮಿನೇಜಸ್‌(22), ತಂದೆ: ವಲೇರಿಯನ್‌ಮಿನೇಜಸ್‌, ವಾಸ: ಕೇರಾಫ್‌: ವಿನ್ನಿಫ್ರೆಡ್‌ತೌವ್ರೋ ರವರ ಬಾಡಿಗೆ ಮನೆ, ಬಂಟಕಲ್‌ ಇಂಜಿನಿಯರಿಂಗ್‌ ಕಾಲೇಜ್‌ ಬಳಿ, ಅರಸಿಕಟ್ಟೆ, ಶಿರ್ವಾ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರಿಗೆ ದಿನಾಂಕ 18/02/2021 ರಂದು ರಾತ್ರಿ 10:00 ಗಂಟೆಗೆ ಗೆಳೆಯ ಅಜಿತ್‌ ಕುಲಾಲ್‌  ಬಂಟಕಲ್‌ ಅರಸೀಕಟ್ಟೆಗೆ ಬರುವಂತೆ ತಿಳಿಸಿದಂತೆ ಪಿರ್ಯಾದಿದಾರರು ಅರಸೀಕಟ್ಟೆ ತೆರಳಿದ್ದು, ಅರಸೀಕಟ್ಟೆಯಲ್ಲಿ ನಡೆಯುವ ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಲ್ಲಿಂದ ಮಧ್ಯರಾತ್ರಿ 12:30 ಗಂಟೆಗೆ ಅಜಿತ್‌ ನೊಂದಿಗೆ ವಾಪಸ್‌ ಮನೆಗೆ ಹೋಗುತ್ತಿರುವಾಗ ಅರಸೀಕಟ್ಟೆ ಬಸ್‌ಸ್ಟಾಂಡ್‌ ತಲುಪುವಾಗ ಪರಿಚಯದ ಅಕ್ಷಯ್‌, ಗುಂಡ ಹಾಗೂ ದಲ್ಲು ರವರು ಸೇರಿಕೊಂಡು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದದಿಂದ ಬೈದುದಲ್ಲದೆ  ಆರೋಪಿ ಅಕ್ಷಯ ಎಂಬಾತನು ಇತರರೊಂದಿಗೆ ಸೇರಿಕೊಂಡು ಕೈಯಿಂದ ಕೆನ್ನೆಗೆ, ಬೆನ್ನಿಗೆ, ಕಣ್ಣಿಗೆ ಹೊಡೆದುದಲ್ಲದೆ ತಲೆಗೆ ಕಲ್ಲಿನಿಂದ ಹೊಡೆದ ಪರಿಣಾಮ ಎಡಬದಿ ತಲೆಗೆ ಗಾಯವಾಗಿದ್ದು, ಮೈ ಕೈಗೆ ತರಚಿದ ಗಾಯವಾಗಿರುತ್ತದೆ. ನೋವು ಜಾಸ್ತಿಯಾದ ಕಾರಣ ದಿನಾಂಕ 19/02/2021 ರಂದು ಬೆಳಿಗ್ಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಾಗಿದ್ದು, ಪರೀಕ್ಷಿಸಿದ ವೈದ್ಯಾಧಿಕಾರಿಯವರು ಒಳರೋಗಿಯಾಗಿ ದಾಖಲಿಸಿರುವುದಾಗಿ ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 10/2021, ಕಲಂ: 323, 324, 504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-02-2021 09:51 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ