ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಉಡುಪಿ: ದಿನಾಂಕ:20-02-2021 ರಂದು 13:00 ಗಂಟೆಗೆ ಪಿರ್ಯಾದಿ ಶಕೀಲ ಜೆ ಶೆಟ್ಟಿ ಇವರು  ಠಾಣೆಗೆ ಬಂದು ನೀಡಿದ ಲಿಖಿತ ಫಿರ್ಯಾದಿಯ ಸಾರಾಂಶವೇನೆಂದರೆ, ಪಿರ್ಯಾದಿದಾರರು ಬೆಳಿಗ್ಗೆ ಸುಮಾರು 07:30 ಗಂಟೆಗೆ ಪಿರ್ಯಾದಿದಾರರು ಅವರ ಸಾಕು ನಾಯಿಯನ್ನು ಹೊರಗಡೆ ಖಾಲಿ ಜಾಗದಲ್ಲಿ ತಿರುಗಾಡಿಸಲು ಕರೆದುಕೊಂಡು ಹೋದಾಗ ಪಕ್ಕದ ಮನೆಯ ಚದ್ದು ಎಂಬುವವರು ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ, ಇದು ನಿನ್ನ ಅಪ್ಪನ ಜಾಗವ ಎಂದು ಹೇಳಿ ಅವ್ಯಾಚ್ಯ ಶಬ್ಧಗಳಿಂದ ಬೈದಿದ್ದು, ಆ ಸಮಯದಲ್ಲಿ ಅವರ ಮಕ್ಕಳಾದ ಆರೋಪಿ 2 ರೋಬೆರ್ಟ್ ಮತ್ತು 3 ನೇ ಕಿರಣ್  ಇವರು ಬಂದು ವಿನಾ ಕಾರಣ ಜಗಳ ಮಾಡಿ 3 ನೇ ಆಪಾದಿತನು ಪಿರ್ಯಾದಿದಾರರನ್ನು ಕೈಯಿಂದ ದೂಡಿರುತ್ತಾರೆ. ಆಗ ಪಿರ್ಯಾದಿದಾರರು ಕೆಳಗೆ ಬಿದ್ದು ಕೈಗೆ ಪೆಟ್ಟಾಗಿದ್ದು, ಜೋರಾಗಿ ಬೊಬ್ಬೆ ಹಾಕಿದಾಗ ಪಿರ್ಯಾದಿದಾರರ ಮಗ ಅಲ್ಲಿಗೆ ಬಂದಾಗ ಆಪಾದಿತರೆಲ್ಲರೂ ಸೇರಿ ಪಿರ್ಯಾದಿದಾರರ ಮಗನ ಕುತ್ತಿಗೆ ಹಿಡಿದು, ನೆಲಕ್ಕೆ ಬೀಳಿಸಿ ಕಲ್ಲಿನಿಂದ ಎತ್ತಿಹಾಕಲು ಬಂದಾಗ ಮನೆಯ ಮಾಲೀಕರಾದ ಮನೆ ಮಾಲೀಕರಾದ ಶ್ರೀಮತಿ ಶಾಂತ ರವರು ಗಲಾಟೆ ಬಿಡಿಸಲು ಬಂದಾಗ, ಆಪಾದಿತ 1 ನೇಯವರು ಪಿರ್ಯಾದಿದಾರರ ಎಡ ಕಣ್ಣಿನ ಕೆಳಗೆ ಗುದ್ದಿ ಗಾಯಗೊಳಿಸಿ ಪಿರ್ಯಾದಿದಾರರಿಗೆ ಹೊಡೆದಿರುತ್ತಾರೆ ಎಂಬಿತ್ಯಾದಿಯಾಗಿದೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 05/2021 ಕಲಂ:354, 323, 504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

 

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಪಿರ್ಯಾದಿ ಶ್ರೀಧರ ತಂದೆ: ನಾರಾಯಣ ವಾಸ: ಹೆರೆ ಜಡ್ಡು ಮಣೂರು ಗ್ರಾಮ ಬ್ರಹ್ಮಾವರ ತಾಲೂಕು ಇವರ ತಮ್ಮ ಮೃತ ಶೇಖರ (37 ವರ್ಷ) ಓಮಿನಿ ಕಾರಿನಲ್ಲಿ  ಬಾಡಿಗೆ ಮಾಡಿಕೊಂಡು ಜೀವನ ಮಾಡುತ್ತಿದ್ದು, ಈತನಿಗಿರುವ ಕುಡಿತದ ಚಟಕ್ಕೆ ಸಾಲ ಮಾಡಿಕೊಂಡಿದ್ದು ಅಲ್ಲದೇ ಸೊಸೈಟಿ ಬ್ಯಾಂಕಿನಲ್ಲಿ ಸಾಲ ಮಾಡಿಕೊಂಡಿದ್ದು,  ಅದೇ ವಿಚಾರವಾಗಿ ಅಥವಾ ಇನ್ನಾವುದೋ ಕಾರಣದಿಂದ ದಿನಾಂಕ: 19/02/2021 ರಂದು ರಾತ್ರಿ 11.30 ಗಂಟೆಯಿಂದ  ದಿನಾಂಕ 20/02/2021 ರ ಮುಂಜಾನೆ 04.00 ಗಂಟೆ ಮದ್ಯಾವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 06/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 20-02-2021 06:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ