ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 19/01/2023 ಮಧ್ಯಾಹ್ನ 01:30 ಗಂಟೆಗೆ ಕುಂದಾಪುರ  ತಾಲೂಕಿನ, ಕುಂಭಾಶಿ ಗ್ರಾಮದ ಆನೆಗುಡ್ಡೆ ಸ್ವಾಗತ ಗೋಪುರದ ಬಳಿ ಪೂರ್ವ ಬದಿಯ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯಲ್ಲಿ, ಆಪಾದಿತ ಹೇಮಂತ ಕುಮಾರ್  KA-19-AD-0693ನೇ ಟಾಟಾ ಏಸ್ ಮಿನಿ ಗೂಡ್ಸ್ ವಾಹನವನ್ನು ಕುಂದಾಪುರ ಕಡೆಯಿಂದ ತೆಕ್ಕಟ್ಟೆ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ  ಮಾಡಿಕೊಂಡು ಬಂದು, ಅದೇ  ದಿಕ್ಕಿನಲ್ಲಿ ಸೈಕಲ್ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಗಣೇಶ ನಾವಡರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಗಣೇಶ ನಾವಡರವರ ತಲೆಗೆ, ಮುಖ, ಹಾಗೂ ಕೈ ಕಾಲುಗಳಿಗೆ  ರಕ್ತಗಾಯ ಹಾಗೂ ಒಳನೋವಾದ ಗಾಯವಾಗಿ ಪ್ರಜ್ಞೆ ಕಳೆದುಕೊಂಡವರು ಕುಂದಾಪುರ  ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು  ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂಸಿ ಆಸ್ಪತ್ರೆಗೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 08/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 19/01/2023 ರಂದು ಮಧ್ಯಾಹ್ನ 12:30  ಗಂಟೆಗೆ, ಕುಂದಾಪುರ  ತಾಲೂಕಿನ, ಹಂಗಳೂರು ಗ್ರಾಮದ ದುರ್ಗಾಂಭಾ ಮೋಟಾರ್ಸ್‌ ಗ್ಯಾರೇಜ್‌ ಬಳಿ, ಪಶ್ಚಿಮ ಬದಿಯ ರಾಷ್ಟ್ರೀಯ ಹೆದ್ದಾರಿ 66 ಸರ್ವಿಸ್‌ ರಸ್ತೆಯಲ್ಲಿ,  KA-20-P-2600ನೇ ಕಾರಿನ ಚಾಲಕಿ ಕಾರನ್ನು ದುರ್ಗಾಂಭಾ ಮೋಟಾರ್ಸ್‌ ಗ್ಯಾರೇಜ್‌ನಿಂದ ಪಶ್ಚಿಮ ಬದಿಯ ರಸ್ತೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ಕೊಟೇಶ್ವರ ಕಡೆಯಿಂದ ಕುಂದಾಪುರ ಕಡೆಗೆ ಪಿರ್ಯಾದಿದಾರರಾದ ಮಧುಕರ (37), ತಂದೆ: ಬಡಿಯ ದೇವಾಡಿಗ, ವಾಸ:  ಶ್ರೀ ರಾಮ ನಿಲಯ ಅಂಗಡಿಬೆಟ್ಟು ಉಪ್ಪಿನಕುದ್ರು ಗ್ರಾಮ ಕುಂದಾಪುರ ತಾಲೂಕು ಇವರು KA-20-ES-4255ನೇ ಬೈಕಿನಲ್ಲಿ ಅವರ ಹೆಂಡತಿ ಭಾಗಿರತಿಯವರನ್ನು ಸಹ ಸವಾರಳಾಗಿ ಕುಳ್ಳಿರಿಸಿಕೊಂಡು  ಸವಾರಿ ಮಾಡಿಕೊಂಡು ಬರುತ್ತಿರುವಾಗ  ಬೈಕಿನ ಎಡಬದಿಗೆ ಡಿಕ್ಕಿ ಹೊಡೆದ ಪರಿಣಾಮ ಮಧುಕರ  ಹಾಗೂ ಭಾಗಿರತಿಯವರು ಬೈಕ್‌ ಸಮೇತ ರಸ್ತೆಗೆ ಬಿದ್ದು ಗಾಯಗೊಂಡು  ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 09/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾದ ಉದಯರಾಜ್ (19), ತಂದೆ: ಶ್ಯಾಮಧರ್ ಯಾದವ್ , ವಾಸ: ದಿನೇಶ್ ಡಿಸೋಜಾ ರವರ ಬಾಡಿಗೆ ಮನೆ ಅಲ್ ಇಬಾದ್ ಶಾಲೆ ಹತ್ತಿರ ಪೆರಂಪಳ್ಳಿ ಶಿವಳ್ಳಿ ಗ್ರಾಮ,  ಉಡುಪಿ ತಾಲುಕು ಮತ್ತು ಜಿಲ್ಲೆ ಇವರು ದಿನಾಂಕ 19/01/2023 ರಂದು ಅಂಬಾಗಿಲಿನಿಂದ ಪೆರಂಪಳ್ಳಿಗೆ  ಅಂಬಾಗಿಲು-ಪೆರಂಪಳ್ಳಿ  ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬೆಳಿಗ್ಗೆ 09:45 ಗಂಟೆಗೆ ಸಂತೋಷನಗರ  ತಲುಪುವಾಗ ಅಂಬಾಗಿಲು ಕಡೆಯಿಂದ ಮಣಿಪಾಲ ಕಡೆಗೆ ಆರೋಪಿ ರೈಹಾನ್ ತನ್ನ KA-46-M-2141 ನೇ ಕಾರನ್ನು ಅಂಬಾಗಿಲು ಕಡೆಯಿಂದ ಮಣಿಪಾಲ ಕಡೆಗೆ  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬೇರೊಂದು ವಾಹನವನ್ನು ಎಡಗಡೆಯಿಂದ ಓವರ್ ಟೇಕ್ ಮಾಡಿ ರಸ್ತೆಯ ತೀರ ಎಡಬಾಗಕ್ಕೆ ಚಲಾಯಿಸಿ  ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಎಸೆಯಲ್ಪಟ್ಟ ಪರಿಣಾಮ ಪಿರ್ಯಾದಿದಾರರಿಗೆ ತಲೆಗೆ ರಕ್ತ ಗಾಯ, ಬಲಕೈಯ ಮುಂಗೈ ಬಳಿ, ಸೊಂಟದ ಹಿಂಬದಿ ತರಚಿದ ಗಾಯ ಹಾಗೂ ಹೊಟ್ಟೆಯ ಬಲಭಾಗದಲ್ಲಿ  ತೀವ್ರ ಒಳ ಜಖಂ ಉಂಟಾಗಿರುತ್ತದೆ ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಕೆಎಂಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ   ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 14/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಅಯೂಬ್ ಅಸ್ಸಾದಿ( 50) , ತಂದೆ: ಅಬ್ದುಲ್ ರಹೀಮ್ ಅಸ್ಸಾದಿ, ವಾಸ: ಜುಬೇದಾ ರವರ ಬಾಡಿಗೆ ಮನೆ ಉದ್ಯಾವರ ಬೇಲ್ಜಿಟ್ ಕಾಪು ತಾಲೂಕು ಉಡುಪಿ ಜಿಲ್ಲೆ ಇವರು ದಿನಾಂಕ 19/01/2023 ರಂದು ತನ್ನ ರಿಕ್ಷಾ KA-20-D-7386ರಲ್ಲಿ ಬಾಡಿಗೆಯ ಬಗ್ಗೆ ನಿಟ್ಟೂರಿಗೆ ಕರಾವಳಿ ಬೈಪಾಸ್ ಆಗಿ ಹೋಗುತ್ತಿರುವಾಗ ಪಿರ್ಯಾದಿದಾರರ ಮುಂದುಗಡೆಯಿಂದ KA-22-B-2806ನೇ ಟಿಪ್ಪರ್ ವಾಹನದ ಚಾಲಕನು ಅಂಬಾಗಿಲು ಕಡೆಗೆ ಹೋಗುತಿದ್ದು,ಸಂಜೆ 6:30 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 66ರ ನಿಟ್ಟೂರು ಅಂಬಿಕಾ ಟಿಂಬರ್ಸ್ ಎದುರುಗಡೆ ತಲುಪುವಾಗ ಟಿಪ್ಪರ್ ಚಾಲಕ ದೇವಪ್ಪ ನಾಗವಿ ತಾನು ಚಲಾಯಿಸುತ್ತಿದ್ದ ಟಿಪ್ಪರ್ ನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ತೀರಾ ಎಡಬದಿಗೆ ಚಲಾಯಿಸಿ ತನ್ನ ಎದುರಿನಿಂದ ಅಬ್ದುಲ್ ರಶೀದ್ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-20-EF-2954ನೇ ಸ್ಕೂಟರ್ ನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಅಬ್ದುಲ್ ರಶೀದ್ ರವರು  ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು, ಟಿಪ್ಪರ್ ಚಾಲಕನು ಅಬ್ದುಲ್ ರಶೀದ್ ರವರ ತಲೆಯ ಮೇಲೆ ಟಿಪ್ಪರ್ ನ್ನು ಚಲಾಯಿಸಿದ ಪರಿಣಾಮ ತಲೆಯು ಜಜ್ಜಿ ಚೆಲ್ಲಾಪಿಲ್ಲಿಯಾಗಿ ತಲೆಯ ಮಾಂಸ ಹೊರ ಬಂದಿದ್ದು, ಅಬ್ದುಲ್ ರಶೀದ್ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ . ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 04/2023 ಕಲಂ: 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ವಂಚನೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಡಿ ಸೋಜಾ ವಿಲ್ ಬೀರಿಯಸ್ ಎವಂಗ್ಲಿಸ್ಟ್, ತಂದೆ: ಡಿ ಸೋಜಾ ವಿಲಿಯಂ, ವಾಸ: ವಿಲಿಲ್ಲಾ-ವಿಲ್ಲಾ, ಬಲೈಪಾದೆ , ರಾ.ಹೆ -66, ಉಡುಪಿ ಇವರು ಉಡುಪಿ ಕೋರ್ಟ್ ರಸ್ತೆಯಲ್ಲಿನ ಕೆನರಾ ಬ್ಯಾಂಕ್ ನಲ್ಲಿ ಎಸ್.ಬಿ. ಖಾತೆ ಹೊಂದಿರುತ್ತಾರೆ. ದಿನಾಂಕ 03/09/2022 ರಂದು ಪಿರ್ಯಾದಿದಾರರಿಗೆ ವಿದ್ಯುತ್‌ ಬಿಲ್‌ ಆನ್‌ಲೈನ್‌ನಲ್ಲಿ ಕಟ್ಟಿಸಿಕೊಳ್ಳುವ ನೆಪದಲ್ಲಿ, ಸಂದೇಶ ಬಂದಿದ್ದು, ಈ ಬಗ್ಗೆ ಪಿರ್ಯಾದಿದಾರರು ಸಂದೇಶವನ್ನು ವಿದ್ಯುತ್‌ ಇಲಾಖೆಯ ಅಧಿಕಾರಿಗಳೇ ಕಳುಹಿಸಿರಬಹುದೆಂದು ತಿಳಿದು, ನಂಬ್ರಗಳಿಗೆ ಕರೆ ಮಾಡಿದಲ್ಲಿ ಆತನು ತಾನು ವಿದ್ಯುತ್‌ ಇಲಾಖೆಯ ಅಧಿಕಾರಿ ಎಂದು ಪಿರ್ಯಾದಿದಾರರನ್ನು ನಂಬಿಸಿ, ಪಿರ್ಯಾದಿದಾರರ ಬ್ಯಾಂಕ್ ಖಾತೆಯ ವಿವರ, ಎ.ಟಿ.ಎಂ. ಕಾರ್ಡ್ ವಿವರ, ಸಿ.ವಿ.ವಿ. ವಿವರವನ್ನು ಪಡೆದು, ಅಲ್ಲದೇ ಪಿರ್ಯಾದಿದಾರರ ಮೊಬೈಲ್ ಗೆ ಬಂದಿರುವ OTP ಯನ್ನು ಸಹಾ ಪಡೆದು, ಅದೇ ದಿನ ಪಿರ್ಯಾದಿದಾರರ ಮೇಲಿನ ಖಾತೆಯಿಂದ ಕ್ರಮವಾಗಿ ರೂಪಾಯಿ 30,999/- ಮತ್ತು 49,000/-  ಹಣವನ್ನು 2 ಟ್ರಾನ್ಸೆಕ್ಷನ್ ಮುಖೇನ ಒಟ್ಟು ರೂಪಾಯಿ 79,999/- ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿ, ಪಿರ್ಯಾದಿದಾರರಿಗೆ ನಷ್ಟವಾಗಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 04/2023 ಕಲಂ: 66(C), 66(D) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

 ಇತರ ಪ್ರಕರಣ

  • ಬೈಂದೂರು: ಫಿರ್ಯಾದಿದಾರರಾದ ಎಸ್ ನಾರಾಯಣ ನಾಯರಿ (44), ತಂದೆ: ಎಂ ಶ್ರೀನಿವಾಸ ನಾಯರಿ,  ವಾಸ: ಮನೆ ನಂಬ್ರ 2/32 ನಾಯರಿಕೇರಿ, ಸೋಡಿತಟ್ಟು,ಕಿರಿಮಂಜೇಶ್ವರ ಗ್ರಾಮ, ಬೈಂದೂರು ತಾಲೂಕು ಇವರ ತಂದೆ ತಾಯಿಗೆ ಒಟ್ಟು 8 ಜನ ಮಕ್ಕಳಿದ್ದು, ಪಿರ್ಯಾದಿದಾರರ 2 ನೇ ತಂಗಿ ವಿಜಯಲಕ್ಷ್ಮೀ ಯನ್ನು 2004 ನೇ ಇಸವಿಯಲ್ಲಿ ಕಿರಿಮಂಜೇಶ್ವರ  ಗ್ರಾಮದ  ಹೊಸಮನೆ ಅಣ್ಣಪ್ಪ ನಾಯರಿ ರವರ ಮಗ ಶಿವಶಂಕರ ನಾಯರಿ ರವರಿಗೆ ಮದುವೆ ಮಾಡಿ ಕೊಟ್ಟಿದ್ದು, ಮದುವೆಯ ನಂತರ ಸ್ವಲ್ಪ ಸಮಯ ಗಂಡನ ಮನೆಯಲ್ಲಿದ್ದು ನಂತರ ತಾಯಿ ಮನೆಯಲ್ಲಿಇದ್ದರು.   ಆರೋಪಿತ ಶಿವಶಂಕರ ನಾಯರಿ  ಮದ್ಯಪಾನ ಮಾಡಿ ಹೆಂಡತಿ ವಿಜಯಲಕ್ಷ್ಮಿ ಯೊಂದಿಗೆ  ಜಗಳ ಮಾಡಿ ಹೊಡೆದು, ಬಡಿದು  ಬೆದರಿಕೆ  ಹಾಕುತ್ತಿ̧ದ್ದು ಆರೋಪಿತರಾದ ಶಿವಶಂಕರ ನಾಯರಿ ,  ಲಲಿತಾ, ಜಯಲಕ್ಷ್ಮಿ, ಗೀತಾ ಪಿರ್ಯಾದಿದಾರರ ಮನೆ ಬಳಿ ಬಂದು ಗಲಾಟೆ ಮಾಡಿ ಹೋಗಿದ್ದು, ಆರೋಪಿತರಾದ ಲಲಿತಾ, ಜಯಲಕ್ಷ್ಮಿ  ಹಾಗೂ  ಗೀತಾ ರವರು ವಿಜಯಲಕ್ಷ್ಮಿಯನ್ನು  ಕೊಲ್ಲುವ ಉದ್ದೇಶದಿಂದ ಆರೋಪಿ ಶಿವಶಂಕರ ನಾಯರಿಗೆ ಕುಮ್ಮಕ್ಕು  ನೀಡಿ ಕಳುಹಿಸಿದ್ದು ಹೀಗಿರುತ್ತಾ   ದಿನಾಂಕ19/01/2023 ರಂದು ಕಿರಿಮಂಜೇಶ್ವರ ಗ್ರಾಮದ  ಶ್ರೀ ಕಾನವೀರ ಬಸ್ತಿ ಅಮ್ಮನವರ ದೈವಸ್ಥಾನದಲ್ಲಿ ಧಕ್ಕೆ ಮಂಡಲ ಪ್ರಯುಕ್ತ ಪಿರ್ಯಾದಿದಾರರು, ತಂಗಿ ವಿಜಯಲಕ್ಷ್ಮಿ ಮತ್ತು ಮನೆಯವರೊಂದಿಗೆ  ಉರುಳು ಸೇವೆ ಮುಗಿಸಿ ಅನ್ನ ಪ್ರಸಾದ ಸ್ವೀಕರಿಸಲು ಸರತಿ ಸಾಲಿನಲ್ಲಿ  ನಿಂತುಕೊಂಡಿರುವಾಗ  ಮಧ್ಯಾಹ್ನ 13:15 ಗಂಟೆಯಿಂದ 13:30 ಗಂಟೆಯ ಮದ್ಯಾವಧಿಯಲ್ಲಿ ಆರೋಪಿಯು ಪಿರ್ಯಾದಿದಾರರ ತಂಗಿ ವಿಜಯಲಕ್ಷ್ಮಿಯ ಬಳಿ ಕೆಳಗೆ ಕುಳಿತು ಏನನ್ನೊ ಮಾಡುತ್ತಿರುವುದನ್ನು ಪಿರ್ಯಾದಿದಾರರ ಇನ್ನೊಬ್ಬ ತಂಗಿ ಭವ್ಯ  ನೋಡಿ ಗಮನಿಸಿ  ಗಂಡ ಗೋಪಾಲ ಕೃಷ್ಣನಿಗೆ ತಿಳಿಸಿದಾಗ  ಗೋಪಾಲ ಕೃಷ್ಣನು ಒಮ್ಮೇಲೆ ಬೊಬ್ಬೆ  ಹಾಕಿದಾಗ ಪಿರ್ಯಾದಿದಾರರು ತಿರುಗಿ ನೋಡಿದಾಗ ಆರೋಪಿ ಶಿವಶಂಕರ ನಾಯರಿಯು ಯಾವುದೋ ಒಂದು ಪ್ಲಾಸ್ಟಿಕ್ ಬಾಟಲಿಯಲ್ಲಿ  ಪೆಟ್ರೋಲ್  ನಂತೆ ಕಾಣುವ ದ್ರವವನ್ನು ವಿಜಯಲಕ್ಷ್ಮಿಯ ಕಾಲ ಕೆಳಗೆ ಹಾಗೂ  ಸೀರೆಯ ಮೇಲೆ  ಚೆಲ್ಲಿ  ಲೈಟರ್ ನಿಂದ ಒಮ್ಮೇಲೆ ಬೆಂಕಿ ಹತ್ತಿಸಿದ್ದು  ತಕ್ಷಣವೇ ಬೆಂಕಿ  ವಿಜಯಲಕ್ಷ್ಮಿಯ ಕಾಲ ಕೆಳಗೆ ಮತ್ತು  ಬಟ್ಟೆಗೆ  ಹತ್ತಿಕೊಂಡಾಗ  ಗೋಪಾಲಕೃಷ್ಣ ಹಾಗೂ ಇತರರು ಸೇರಿ  ಬೆಂಕಿಯನ್ನು  ನಂದಿಸಿ ಒಂದು ರಿಕ್ಷಾದಲ್ಲಿ  ತ್ರಾಸಿಯವರೆಗೆ ಕರೆ ತಂದು  ನಂತರ ಅಂಬುಲೆನ್ಸ್  ನಲ್ಲಿ  ಕುಂದಾಪುರದ   ಆದರ್ಶ ಆಸ್ಪತ್ರೆಗೆ ಕರೆತಂದು  ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಸಂಜೆ  17:00 ಗಂಟೆಗೆ ಮಣಿಪಾಲದ  ಕೆ.ಎಂ ಸಿ ಆಸ್ಪತ್ರೆಯ ಅಗ್ನಿ ಚಿಕಿತ್ಸಾ ಘಟಕದಲ್ಲಿ  ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ.    ಆರೋಪಿತನು  ಪದೇ ಪದೇ ಕುಡಿದು ಬಂದು  ಮನೆಯಲ್ಲಿ ಗಲಾಟೆ ಮಾಡಿ ಪೆಟ್ರೋಲ್ ಹಾಕಿ ಸುಟ್ಟು  ಕೊಲ್ಲುತ್ತೇನೆ ಎಂದು   ಜೀವ ಬೆದರಿಕೆ  ಹಾಕುತ್ತಿದ್ದು  ಅಲ್ಲದೇ   ಆರೋಪಿತರಾದ ಲಲಿತಾ, ಜಯಲಕ್ಷ್ಮಿ  ಹಾಗೂ  ಗೀತಾ ರವರು ಪಿರ್ಯಾದಿದಾರರ ತಂಗಿಗೆ ಹಿಂಸೆ ನೀಡಿ ಆರೋಪಿ ಶಿವಶಂಕರ ನಾಯರಿಗೆ  ವಿಜಯಲಕ್ಷ್ಮಿಯನ್ನು ಕೊಲ್ಲುವಂತೆ ಕುಮ್ಮಕ್ಕು ನೀಡಿದ್ದು ಅದೇ ಕುಮ್ಮಕ್ಕಿನಿಂದ  ಆರೋಪಿತನು  ಕೊಲ್ಲುವ ಉದ್ದೇಶದಿಂದ  ಪೆಟ್ರೋಲ್ ನಂತೆ  ಕಾಣುವ  ದ್ರವ ಪದಾರ್ಥ ವನ್ನು ವಿಜಯಲಕ್ಷ್ಮಿಯ ಕಾಲಿನ ಬಳಿ ಮತ್ತು ಸೀರೆಯ ಮೇಲೆ  ಸುರಿದು ಬೆಂಕಿ ಹಚ್ಚಿ  ಕೊಲ್ಲಲು ಪ್ರಯತ್ನಿಸಿರುವುದಾಗಿ ನೀಡಿದ ದೂರಿನಂತೆ  ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 12/2023 ಕಲಂ:  307, 109 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
     

ಇತ್ತೀಚಿನ ನವೀಕರಣ​ : 20-01-2023 09:44 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080