ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ:  ಪಿರ್ಯಾದಿ: ರಾಜೇಶ್‌ ಕೋಟ್ಯಾನ್‌, ಪ್ರಾಯ: 51 ವರ್ಷ, ತಂದೆ: ಶೀನ ಪೂಜಾರಿ, ವಾಸ: ಅಪೂರ್ವ ನಿವಾಸ, ಪುಲ್ಕೇರಿ, ಸಾಣೂರು ಗ್ರಾಮ ಇವರು ದಿನಾಂಕ: 19.01.2023 ರಂದು ಸಂಜೆ ಬಜಗೋಳಿ ಕಡೆಯಿಂದ ಕಾರ್ಕಳ ಪುಲ್ಕೇರಿ ಬೈಪಾಸ್ ಕಡೆಗೆ ತನ್ನ ವಾಹನದಲ್ಲಿ ಬರುತ್ತಾ ಸಮಯ ಸುಮಾರು ಸಂಜೆ 7:30 ಗಂಟೆಗೆ ಕಾರ್ಕಳ ತಾಲೂಕು ಸಾಣೂರು ಗ್ರಾಮದ ಪುಲ್ಕೇರಿ ಬೈಪಾಸ್ ಬಳಿ ಸಾಗುವಾಗ ಪಿರ್ಯಾದಿದಾರರ ಎದುರಿನಲ್ಲಿ ಬಜಗೋಳಿ ಕಡೆಯಿಂದ ಪಡುಬಿದ್ರೆ ಕಡೆಗೆ KA51Z3621 ನೇ ನಂಬ್ರದ ಕಾರು ಹೋಗುತ್ತಿದ್ದು ಅದೇ ವೇಳೆಗೆ ಮೂಡುಬಿದ್ರೆ  ಕಡೆಯಿಂದ ಕಾರ್ಕಳ ಪುಲ್ಕೇರಿ ಕಡೆಗೆ KA43M3515 ನೇ ನಂಬ್ರದ ವಾಹನವನ್ನು ಚಾಲಕ ರಿಬ್ಬನ್ ಎಂಬಾತನು ಅತಿ ವೇಗ ಹಾಗೂ ನಿರ್ಲಕ್ಷತನದಿಂದ ಬಂದು KA51Z3621 ನೇ ನಂಬ್ರದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆಶಾಕಾಂತಿ ಎಂಬುವವರಿಗೆ ಎದೆಯ ಬಳಿ ಒಳಜಖಂ ಗಾಯ, ಕಲಾವತಿ ಎಂಬುವವರಿಗೆ ಹೊಟ್ಟೆಗೆ ಗುದ್ದಿದ ಗಾಯ ಉಂಟಾಗಿದ್ದು ಕಾರಿನ ಚಾಲಕ ರವೀಂದ್ರ ಹಾಗೂ ಇನ್ನೊಬ್ಬರಿಗೆ ಯಾವುದೇ ಗಾಯ ಆಗಿರುವುದಿಲ್ಲ. ಚಿಕಿತ್ಸೆಯ ಬಗ್ಗೆ ಗಾಯಗೊಂಡ ಆಶಾಕಾಂತಿ ಹಾಗೂ ಕಲಾವತಿ ರವರನ್ನು ಕಾರ್ಕಳ ಸ್ಪಂದನಾ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿದ್ದು, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಗಾಯಗೊಂಡ ಆಶಾಕಾಂತಿ ಹಾಗೂ ಕಲಾವತಿ ರವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 08/2023 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.   
  • ಶಂಕರನಾರಾಯಣ:  ದಿನಾಂಕ 18.01.2023  ರಂದು 15;00 ಘಂಟೆಗೆ ಪಿರ್ಯಾದಿ: ಜೀವನ ಶೆಟ್ಟಿ   ಪ್ರಾಯ 18 ವರ್ಷ ತಂದೆ, ಮಂಜುನಾಥ  ಶೆಟ್ಟಿ ವಾಸ, ಸಮೃದ್ದಿ  ನಿಲಯ   ನಂಚಾರು ಗ್ರಾಮ  ಇವರ  ತಂದೆ, ಮಂಜುನಾಥ  ಶೆಟ್ಟಿ ಇವರು ಕೆಎ.20 ಇಕೆ. 4577  ನೇ ನಂಬ್ರದ ನಾಲ್ಕು  ಚಕ್ರದ  ಸ್ಕೂಟಿಯನ್ನು ಬ್ರಹ್ಮಾವರ ತಾಲೂಕಿನ ಹಿಲಿಯಾಣ ಗ್ರಾಮದ ಗೋಳಿಯಂಗಡಿ ವಿಜಯ ಎಂಬುವರ  ಹೊಟೇಲ್ ಬಳಿ ಗೋಳೀಯಂಗಡಿ  ಕಡೆಯಿಂದ  ನಂಚಾರು ಕಡೆಗೆ  ಹೋಗುತ್ತಿರುವಾಗ  ರಸ್ತೆಯ ಬದಿಯಲ್ಲಿ ನಿಲ್ಲಿಸಿದ  ಕೆಎ, 20 ಎಮ್‌‌ಎ. 6032  ನೇ  ನಂಬ್ರದ  ಕಾರನ್ನು  ಆರೋಪಿಯು  ಒಮ್ಮೆಲೇ  ಅತೀ  ವೇಗ  ಹಾಗೂ  ಅಜಾಗರೂಕತೆಯಿಂದ   ರಸ್ತೆಯ  ಬದಿಯ  ಮಣ್ಣು  ರಸ್ತೆಯಿಂದ   ಮುಖ್ಯ ರಸ್ತೆಯ  ಕಡೆಗೆ  ಚಲಾಯಿಸಿ  ಮಂಜುನಾಥ  ಶೆಟ್ಟಿ  ಇವರು  ಚಲಾಯಿಸಿಕೊಂಡು   ಹೋಗುತ್ತಿದ್ದ  ನಾಲ್ಕು ಚಕ್ರದ  ಸ್ಕೂಟಿಗೆ  ಡಿಕ್ಕಿ ಹೊಡೆದಿದ್ದು, ಇದರ  ಪರಿಣಾಮ ಮಂಜುನಾಥ  ಶೆಟ್ಟಿ  ಇವರು ರಸ್ತೆಯ  ಮೇಲೆ  ಬಿದ್ದು, ತಲೆಗೆ  ಗಂಭೀರ  ಗಾಯಗೊಂಡಿದ್ದು, ಚಿಕಿತ್ಸೆಯ ಬಗ್ಗೆ   ಉಡುಪಿ  ಆದರ್ಶ   ಆಸ್ಪತ್ರೆಯಲ್ಲಿ  ಚಿಕಿತ್ಸೆ   ಪಡೆಯುತ್ತಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 09/2023  ಕಲಂ:279,338 ಐ.ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.     

ಅಸ್ವಾಭಾವಿಕ ಮರಣ  ಪ್ರಕರಣಗಳು

  • ಬ್ರಹ್ಮಾವರ:  ಪಿರ್ಯಾದಿ: ಸತ್ಯನಾರಾಯಣ ಬಿ. (65 ವರ್ಷ) ತಂದೆ: ದಿ. ಶಿವರಾಮ ಬಿ.ಎಸ್.‌ ವಾಸ: ಶಿವಗೌರಿ ನಿಲಯ, ಪೆರ್ವಾಜೆ, ಮುಕ್ಕೂರು ಗ್ರಾಮ, ಇವರು ಹೆಬ್ಬಾರು ಬೆಟ್ಟು ಎಂಬಲ್ಲಿ ಸಕಲೇಶಪುರದ ಎನ್‌.ಆರ್‌ವಿವೇಕ್‌ಎಂಬವರಿಗೆ ಸಂಬಂಧಿಸಿದ ಕೃಷಿ ಫಾರ್ಮ್‌ನಲ್ಲಿ ಮೇನಜರ್‌ಆಗಿ ಕೆಲಸ ಮಾಡಿಕೊಂಡಿದ್ದು,  ಸದ್ರಿ ಫಾರ್ಮ್‌ನಲ್ಲಿ ಬಿಹಾರ ಮೂಲದ ರಾಜ್‌ಕುಮಾರ್‌ಮತ್ತು ಆತನ ಹೆಂಡತಿ ರುಣಾ ದೇವಿ ಎಂಬವರು ಕೂಲಿ ಕೆಲಸ ಮಾಡಿಕೊಂಡು, ತಮ್ಮ 5 ಜನ ಮಕ್ಕಳೊಂದಿಗೆ ಅಲ್ಲಿಯೇ ಸಮೀಪ ಒಂದು ಸಣ್ಣ ರೂಮ್‌ನಲ್ಲಿ ವಾಸವಾಗಿರುತ್ತಾರೆ.  ರುಣಾ ದೇವಿ ಕಳೆದ ಒಂದು ತಿಂಗಳ ಹಿಂದೆ ಹೆಣ್ಣು ಮಗವಿಗೆ ಜನ್ಮ ನೀಡಿರುತ್ತಾಳೆ. ಅವಳು ಆ ಮಗುವಿನೊಂದಿಗೆ ಮನೆಯಲ್ಲಿಯೇ ಇದ್ದು, ದಿನಾಂಕ 20.01.2023 ರಂದು ಬೆಳಿಗ್ಗೆ 03:00  ಗಂಟೆಯ ಸಮಯಕ್ಕೆ ಮಗುವಿಗೆ ಹಾಲು ಕುಡಿಸಿ ಮಲಗಿಸಿದ್ದು, ಮಲಗಿದ್ದ ಮಗುವನ್ನು  ಬೆಳಿಗ್ಗೆ 07:00 ಗಂಟೆಯ ಸಮಯಕ್ಕೆ ಎಬ್ಬಿಸಿದಾಗ ಮಗು ಉಸಿರಾಡದೇ ಮೃತ ಪಟ್ಟಿರುತ್ತದೆ ಎಂಬುದಾಗಿ ಮಗುವಿನ ತಂದೆ ರಾಜ್‌ಕುಮಾರ್‌ ನು ಫಿರ್ಯಾದಿದಾರರಿಗೆ ತಿಳಿಸಿರುವುದಾಗಿದೆ.  ಒಂದು ತಿಂಗಳ ಹೆಣ್ಣು ಮಗು ಚಾಂದಿನಿ ಯಾವುದೋ ಕಾರಣದಿಂದ ಮೃತಪಟ್ಟಿದ್ದು, ಸದ್ರಿ ಮಗುವಿನ ಮರಣದಲ್ಲಿ ಸಂಶಯವಿರುವುದಾಗಿ ತಿಳಿಸಿದ್ದು ಈ ಬಗ್ಗೆ ಬ್ರಹ್ಮಾವರ ಠಾಣೆ  ಯುಡಿಆರ್ ನಂ. 04/2023 ಕಲಂ 174 (3) & (iv) ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 20-01-2023 06:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080