ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 18/12/2022 ರಂದು ಬೆಳಿಗ್ಗೆ 9:30 ಗಂಟೆಗೆ, ಕುಂದಾಪುರ  ತಾಲೂಕಿನ,  ಕೊಟೇಶ್ವರ ಗ್ರಾಮದ ಮೆಜೆಸ್ಟಿಕ್‌ಹಾಲ್‌‌‌ನ ಎದುರುಗಡೆ NH 66 ಸರ್ವಿಸ್‌ರಸ್ತೆಯಲ್ಲಿ, ಆಪಾದಿತ ಸೃಜನ್‌ ಶೆಟ್ಟಿ ಎಂಬುವವರು KA-20-EU-5494ನೇ ಬುಲೆಟ್‌ನ್ನು  ಕುಂದಾಪುರ ಕಡೆಯಿಂದ ಕೊಟೆಶ್ವರ  ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷತನದಿಂದ  ಚಲಾಯಿಸಿಕೊಂಡು ಬಂದು,  ರಸ್ತೆ ದಾಟಲು ನಿಂತುಕೊಂಡಿದ್ದ ಮೊಹಮ್ಮದ್‌ಬಾಷರ್‌ ರವರಿಗೆ ಡಿಕ್ಕಿ ಹೊಡೆದ ಪರಿಣಾಮ, ಮೊಹಮ್ಮದ್‌ಬಾಷರ್‌ ರವರ ಎಡಕಾಲಿನ ಮುಂಗಾಲು ಗಂಟಿಗೆ ಒಳಜಖಂ ಗಾಯ ಮತ್ತು ತಲೆಗೆ ಹಾಗೂ ಎಡಕೈಗೆ ತರಚಿದ ಗಾಯವಾಗಿ ಅಂಕದಕಟ್ಟೆಯ ಸರ್ಜನ್‌ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಬಳಿಕ ಕುಂದಾಪುರ ಶ್ರೀದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ  ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 135/2022  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ಶಾಹಿನ್ ಮೊಹಮ್ಮದ್ ರಫೀಕ್  (50),  ಗಂಡ : ಮೊಹಮ್ಮದ್ ರಫೀಕ್,  ವಾಸ : ಮನೆ ನಂಬ್ರ 1-128ಎ,ನೂರುಲ್ಲಾ ಹುದಾ ಮದ್ರಾಸ್‌ ಬಳಿ ಕೊಪ್ಪಲಂಗಡಿ, ಮಲ್ಲಾರು ಗ್ರಾಮ ಕಾಪು ತಾಲ್ಲೂಕು ಉಡುಪಿ ಜಿಲ್ಲೆ ಇವರು  ದಿನಾಂಕ 18/12/2022 ರಂದು  ಅವರ KA-20-MA- 2785 ನೇ ಕಾರಿನಲ್ಲಿ ಪಿರ್ಯಾದಿದಾರರ ಮಗ ಹಾಗೂ ಬಾವನ ಮಗಳು, ಅವಳ 2 ಮಕ್ಕಳೊಂದಿಗೆ ಅಂಗಡಿಯಿಂದ ದಿನಸಿ ವಸ್ತುಗಳನ್ನು ತರಲು ಪಡು ಗ್ರಾಮದ ಕೊಪ್ಪಲಂಗಡಿಯ ರಾಷ್ಟ್ರೀಯ ಹೆದ್ದಾರಿ 66 ರ ಸಮೀಪ ಇರುವ ಶ್ರೀರಾಮ್ ಕಾಂಪ್ಲೇಕ್ಸ್ ನಲ್ಲಿರುವ ಅಂಗಡಿಗೆ ಪಿರ್ಯಾದಿದಾರರು ಕಾರು ಚಲಾಯಿಸಿಕೊಂಡು ಬಂದಿದ್ದು,  ಶ್ರೀರಾಮ್ ಕಾಂಪ್ಲೇಕ್ಸ್ ನ ಎದುರು ಪಿರ್ಯಾದಿದಾರರು ಕಾರು ನಿಲ್ಲಿಸಿ ಕಾರಿನಿಂದ ಇಳಿದು ಅಂಗಡಿಯಿಂದ ದಿನಸಿ ವಸ್ತುಗಳನ್ನು  ತರಲು ಅಂಗಡಿಗೆ ಹೋದಾಗ ಸಮಯ  ಸಂಜೆ 4:35 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 66 ರ  ಮಂಗಳೂರು ಉಡುಪಿ ರಸ್ತೆಯಲ್ಲಿ ಸುಪ್ರಸಾದ ರವರು KA-20-MC- 8423  ನೇ ಕಾರನ್ನು  ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿರುವಾಗ ಅವರ ಕಾರಿನ ಮುಂದಿನ ಎಡಬದಿಯ ಚಕ್ರವನ್ನು ಸ್ಪೋಟಗೊಂಡು ಅವರ ಹತೋಟಿ ತಪ್ಪಿ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂಬದಿಗೆ ಢಿಕ್ಕಿ ಹೊಡೆದ  ಪರಿಣಾಮ ಪಿರ್ಯಾದಿದಾರರ ಕಾರಿನ ಹಿಂಭಾಗ ಸಂಪೂರ್ಣ ಜಖಂಗೊಂಡಿದ್ದು, ಪಿರ್ಯಾದಿದಾರರ ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ. ಪಿರ್ಯಾದಿದಾರ ಕಾರಿಗೆ ಢಿಕ್ಕಿ ಹೊಡೆದ ಕಾರಿನಲ್ಲಿ ಪಲ್ಲವಿ ಹಾಗೂ ಜಯ ಎಂಬ ಇಬ್ಬರು ಮಹಿಳೆಯರು ಹಾಗೂ  ಚಿಕ್ಕ ಮಗುವಿದ್ದು,  ಮಹಿಳೆಯರಿಗೆ ಗಾಯವಾಗಿದ್ದು,  ಸುಪ್ರಸಾದ ರವರು ಒಂದು ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿ ಕಡೆಗೆ ಕರೆದುಕೊಂಡು ಹೋಗಿದ್ದು, ಢಿಕ್ಕಿ ಹೊಡೆದ ಕಾರಿನ ಮುಂಭಾಗವು ಸಂಪೂರ್ಣ ಜಖಂ ಗೊಂಡಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 137/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಕಳವು ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ರವಿ ಶಂಕರ್ ಪೈ (36), ತಂದೆ: ದಿ. ಸುರೇಂದ್ರ ಪೈ,  ವಾಸ: ಅಕ್ಷಯ ನಿವಾಸ ಮನೆ ನಂಬ್ರ 2-91/ಬಿ ನಾಯ್ಕನಕಟ್ಟೆ, ಕೆರ್ಗಾಲು ಗ್ರಾಮ ಬೈಂದೂರು  ತಾಲೂಕು ಇವರು ಪೋಟೋ ಗ್ರಾಫರ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ  ದಿನಾಂಕ 17/12/2022 ರಂದು ಬೆಳಿಗ್ಗೆ 9:30 ಗಂಟೆಗೆ  ಅವರ ಅಕ್ಕ ಅನುಷಾ ಭಟ್ ರವರೊಂದಿಗೆ  ಅವರ ಸ್ನೇಹಿತನ ಮಗುವಿನ ಪೋಟೋ ಶೂಟ್ ಗೆ ಹೊನ್ನಾವರಕ್ಕೆ  ಹೋಗಿದ್ದು  ದಿನಾಂಕ 18/12/2022 ರಂದು ಬೆಳಿಗ್ಗೆ 9:30 ಗಂಟೆಗೆ ಪಿರ್ಯಾದಿದಾರರು  ಹಾಗೂ  ಅವರ  ಅಕ್ಕ ವಾಪಾಸ್ಸು ಮನೆಗೆ ಬಂದಾಗ ಅವರ ಮನೆಯ ಮುಖ್ಯದ್ವಾರದ ಬಾಗಿಲಿನ ಚಿಲಕ ತೆಗೆದಾಗ ಬಾಗಿಲು ಒಮ್ಮೆಲೇ ತೆರೆದುಕೊಂಡಿದ್ದು, ಬಾಗಿಲನ್ನು ಯಾವುದೋ ಆಯುಧದಂದ ಮೀಟಿ ತೆಗೆದಿದ್ದು, ಡೋರ್ ಲಾಕ್ ಮುರಿದು ಹೋಗಿರುತ್ತದೆ  . ಯಾರೋ ಕಳ್ಳರು ದಿನಾಂಕ 17/12/2022 ರ ಬೆಳಿಗ್ಗೆ 9:30 ಗಂಟೆಯಿಂದ ದಿನಾಂಕ 18/12/2022 ರ ಬೆಳಿಗ್ಗೆ 9:30 ಗಂಟೆಯ ಮದ್ಯಾವಧಿಯಲ್ಲಿ ಫಿರ್ಯಾದುದಾರರ ಮನೆಯ ಎದುರಿನ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ, ಬಾಗಿಲನ್ನು ಒಡೆದು ಮನೆಗೆ ಒಳ ಪ್ರವೇಶಿಸಿ, ಡ್ರವರ್ ನಲ್ಲಿ ಇರಿಸಿದ್ದ ಪಿರ್ಯಾದಿದಾರರ  ಅಕ್ಕನ 3 ½  ಪವನ್  ತೂಕದ  ಚಿನ್ನದ ಕರಿಮಣಿ ಸರ ಹಾಗೂ 3 ½  ಪವನ್  ತೂಕದ   ಚಿನ್ನದ ಹವಳದ ಸರ ಹಾಗೂ ಗೋದ್ರೇಜ್ ನಲ್ಲಿಟ್ಟಿದ್ದ ಪಿರ್ಯಾದಿದಾರರ 2 ಗ್ರಾಂ ತೂಕದ   ಚಿನ್ನದ ನಾಣ್ಯ ಹಾಗೂ 2 ಗ್ರಾಂ ತೂಕದ  ಚಿನ್ನದ ಪೆಡೆಂಟ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ  ಚಿನ್ನದ ಅಂದಾಜು ಮೌಲ್ಯ 1,47,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 245/2022 ಕಲಂಳ 454, 457, 380  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಗಣೇಶ್ ಪ್ರಸಾದ್ ಶೆಟ್ಟಿ (23), ತಂದೆ: ಅಣ್ಣಪ್ಪ ಶೆಟ್ಟಿ, ವಾಸ: ಯಡೇರಿ ಜನತಾ ಕಾಲೋನಿ, ಕಾಲ್ತೋಡು ಗ್ರಾಮ ಬೈಂದೂರು ತಾಲೂಕು ಇವರು ಉಪ್ಪುಂದ ಪೇಟೆಯ ಅಂಡರ್ ಪಾಸ್  ಬಳಿ ಇರುವ ನವೀನ್ ಚಂದ್ರರವರ ದುರ್ಗಾದೇವಿ ಕಾಂಪ್ಲೆಕ್ಸ್  ನಲ್ಲಿ ನಮ್ದೆ ಎಂಬ ಹೆಸರಿನ ಬಟ್ಟೆ ಅಂಗಡಿಯನ್ನು ದಿನಾಂಕ 01/11/2020 ರಿಂದ ಬಾಡಿಗೆ ಪಡೆದು  ವ್ಯಾಪಾರ ಮಾಡಿಕೊಂಡಿದ್ದು, ಪಿರ್ಯಾದಿದಾರರ ಬಟ್ಟೆ ಅಂಗಡಿಯಲ್ಲಿ  1 ½  ವರ್ಷಗಳಿಂದ ನಂದನವನ ನಿವಾಸಿ ಎನ್ ರವಿಚಂದ್ರ ರವರು ಕೆಲಸಕ್ಕೆ ಇದ್ದು, ದಿನಾಂಕ 16/12/2022 ರಂದು ಪಿರ್ಯಾದಿದಾರರಿಗೆ ಜ್ವರ ಬಂದ ಕಾರಣ ಅಂಗಡಿಯನ್ನು ನೋಡಿಕೊಳ್ಳುವಂತೆ ಎನ್ ರವಿಚಂದ್ರ ರವರಿಗೆ ತಿಳಿಸಿ ಹೋಗಿದ್ದು ಮನೆಯಲ್ಲಿ ಆರೈಕೆಯಲ್ಲಿದ್ದು ಪಿರ್ಯಾದಿದಾರರು ದಿನಾಂಕ 18/12/2022 ರಂದು ಮಧ್ಯಾಹ್ನ 1:00 ಗಂಟೆಗೆ ಅವರ ಅಂಗಡಿಯ ಪಕ್ಕದಲ್ಲಿರುವ ಮೆಡಿಕಲ್ ಶಾಫ್ ನಲ್ಲಿ ಔಷದಿಯನ್ನು ತರಲು ಬಂದಾಗ ಪಿರ್ಯಾದಿದಾರರ ಅಂಗಡಿಯು ಬಂದ್  ಆಗಿದ್ದು ಅಂಗಡಿಯ ಎದುರು  KA-20-AA-3765 ನೇ ಆಟೋ ನಿಂತುಕೊಂಡಿದ್ದು  ಆಟೋದಲ್ಲಿ 3 ಚೀಲ ಬಟ್ಟೆ ಹಾಗೂ 2 ಬಾಕ್ಸ್ ಬಟ್ಟೆ ಇರುವುದು ಕಂಡು ಬಂದಿದ್ದು ಆಟೋ ರಿಕ್ಷಾ ಚಾಲಕನಲ್ಲಿ ವಿಚಾರಿಸಿದಾಗ ಎನ್ ರವಿಚಂದ್ರ ರವರು ಬಟ್ಟೆಯನ್ನು  ತುಂಬಿಸಿ ಹೋಗಿದ್ದು ಮನೆಗೆ ತಂದು ಹಾಕುವಂತೆ ತಿಳಿಸಿರುತ್ತಾರೆ ಎಂಬುದಾಗಿ ಹೇಳಿದ್ದು, ಪಿರ್ಯಾದಿದಾರರು ಎನ್ ರವಿಚಂದ್ರ ರವರಿಗೆ ಪೋನ್ ಮಾಡಿದಲ್ಲಿ ಸ್ವಿಚ್ ಆಫ್ ಆಗಿದ್ದು, ಪಿರ್ಯಾದಿದಾರರ ಅಂಗಡಿಯಲ್ಲಿನ ಬಟ್ಟೆಯನ್ನು ಪಿರ್ಯಾದಿದಾರರಿಗೆ ಹೇಳದೆ ಕೇಳದೆ ಕಳವು ಮಾಡಿಕೊಂಡು ಹೋಗಿದ್ದು ಪಿರ್ಯಾದಿದಾರರ ಅಂಗಡಿಯ ಕೀಯನ್ನು ಹಾಗೂ  3 ಲಕ್ಷ ರೂ ಮೊತ್ತದ ಬಟ್ಟೆಯನ್ನು ಕಳವು ಮಾಡಿಕೊಂಡು ಹೋಗಿದ್ದು ಅಲ್ಲದೇ ಅಂಗಡಿಯ ಬಟ್ಟೆಯನ್ನು 2 ಲಕ್ಷ ರೂ ಹಣ ನೀಡಿದರೆ ಬಿಟ್ಟು ಕೊಡುವುದಾಗಿ  ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 246/2022  ಕಲಂ: 381 , 385  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಬೈಂದೂರು: ದಿನಾಂಕ 16/12/2022 ರಂದು ಪಿರ್ಯಾದಿದಾರರಾದ ಓಮನ್ (50), ಗಂಡ: ತಂ̧ಬಿ ವಾಸ: ಪುತನ್ ಪರಂಬಿಲ್ , ಗಂಗನಾಡು ತಗ್ಗರ್ಸೆ ಗ್ರಾಮ , ಬೈಂದೂರು ತಾಲೂಕು ಇವರ ಜಾಗಕ್ಕೆ ಹಾಕಿರುವ ಬೇಲಿಯನ್ನು ಆರೋಪಿತರಾದ ಜೋಸೆಫ್ ಮೋಹಸ್ಸಿ ಮತ್ತು ರೋಬಿಸ್ ರವರು ಕಿತ್ತು ಹಾಕಿದ್ದು ಸಂಜೆ 5:00 ಗಂಟೆಗೆ ಪಿರ್ಯಾದಿದಾರರು ಬೇಲಿಯನ್ನು ಸರಿಮಾಡುತ್ತಾ ಇರುವಾಗ ಆರೋಪಿರಾದ ಜೋಸೆಫ್ ಮೋಹಸ್ಸಿ ಹಾಗೂ ರೋಬಿಸ್ ರವರು ಅಲ್ಲಿಗೆ ಬಂದು ಜೋಸೇಫನು ಒಂದು ದೊಣ್ಣೆಯಿಂದ ಪಿರ್ಯಾದಿದಾರರ ಬೆನ್ನಿಗೆ, ಸೊಂಟಕ್ಕೆ ಹಾಗೂ ಬಲಕೈಗೆ ಹೊಡೆದು ದೂಡಿಹಾಕಿರುತ್ತಾನೆ, ನಂತರ ಜೋಸೆಫ್ ಮೋಹಸ್ಸಿ , ರೋಬಿಸ್ ರವರು ಪಿರ್ಯಾದಿದಾರರಿಗೆ ಸೊಂಟಕ್ಕೆ, ಬೆನ್ನಿಗೆ ತುಳಿದಿರುತ್ತಾರೆ. ಪಿರ್ಯಾದಿದಾರರು ತಪ್ಪಿಸಿಕೊಂಡು ಓಡುವಾಗ ಕಲ್ಲಿನಿಂದ ಬೆನ್ನಿಗೆ ಹೊಡೆದು ಇನ್ನು ಮುಂದಕ್ಕೆ ನೀನು ಜಾಗದಲ್ಲಿರುವ ಬೇಲಿಯನ್ನು ಮುಟ್ಟಲು ಬಂದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಅವಾಚ್ಯ ಶಬ್ಧಗಳಿಂದ ಬೈದು ಹೋಗಿರುತ್ತಾರೆ. ಪಿರ್ಯಾದಿದಾರರಾದ ಅವರ ಅಣ್ಣ ಕುಂಜಿ ಮೋಣು ಹಾಗೂ ಅಣ್ಣನ ಮಗ ಬೆಲಿನ್ ರವರಿಗೆ ಕರೆ ಮಾಡಿ ತಿಳಿಸಿದ್ದು ಅವರು ಪಿರ್ಯಾದಿದಾರರನ್ನು ಚಿಕಿತ್ಸೆಯ ಬಗ್ಗೆ ಬೈಂದೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಪರೀಕ್ಷಿಸಿದ ವೈದ್ಯಾಧಿಕಾರಿಯವರು ಹೆಚ್ಚಿನ ಚಿಕಿತ್ಸೆಯ  ಬಗ್ಗೆ ಕುಂದಾಪುರಕ್ಕೆ ಹೋಗುವಂತೆ ತಿಳಿಸಿದ್ದು  ಪಿರ್ಯಾದಿದಾರರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲಿಸಿರುತ್ತಾರೆ, ಆರೋಪಿತರು ಫಿರ್ಯಾದಿದಾರರಿಗೆ ಹಲ್ಲೆಮಾಡಿರುವುದರಿಂದ ಅವರಿಗೆ ಬೆನ್ನು, ಸೊಂಟ ಹಾಗೂ ಹೊಟ್ಟೆ ಭಾಗಗಳಿಗೆ ತೀವೃತರಹದ ನೋವಾಗಿರುತ್ತದೆ. ಪಿರ್ಯಾದಿದಾರರು ಅವರ ಅಳಿಯ ಹಾಗೂ ಮಗಳೊಂದಿಗೆ ಚರ್ಚಿಸಿ ದೂರನ್ನು ನೀಡಲು ವಿಳಂಬವಾಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 247/2022 ಕಲಂ: 323, 324, 354,  504, 506 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .  

ಇತ್ತೀಚಿನ ನವೀಕರಣ​ : 19-12-2022 09:51 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080