ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ : 19-12-2022 ರಂದು ಬೆಳಿಗ್ಗೆ7-30 ಘಂಟೆಗೆ ದೂರುದಾರರು ಬಳ್ಕೂರಿನ ಪಾರೆಸ್ಟರ್‌ಮನೆಯ ಹತ್ತಿರ ತಲುಪುವಾಗ ಫಾರೆಸ್ಟ್‌ ಮನೆ ಕಡೆಯಿಂದ ಬಳ್ಕೂರು- ಗುಲ್ವಾಡಿ ರಸ್ತೆಗೆ ಆಪಾದಿತ ಶಿವರಾಮ ಎಂಬುವವರು ಟಿಪ್ಪರ್‌ನಂಬ್ರ KA20C-4247 ನೇದನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ಬಳ್ಕೂರಿನಿಂದ ಗುಲ್ವಾಡಿ ಕಡೆಗೆ ಸೈಕಲಿನಲ್ಲಿ ಹೋಗುತ್ತಿದ್ದ ಶಂಕರ ಪೂಜಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸೈಕಲ್‌ಸವಾರ ರಸ್ತೆಗೆ ಬಿದ್ದು ಆತನಿಗೆ ಎಡಕಾಲಿಗೆ ತೀವ್ರತರನಾದ ಗಾಯ ಉಂಟಾಗಿದ್ದು ಗಾಯಾಳುವನ್ನು ದೂರುದಾರರು ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಕುಂದಾಪುರದ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ವೈದ್ಯ್ರ ಸಲಹೆಯ ಮೇರೆಗೆ ಗಾಯಾಳುವಿನ ಮನೆಯವರು ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಮ್‌.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಬಾಬು ಪೂಜಾರಿ, (50), ತಂದೆ: ವೆಂಕಟ ಪೂಜಾರಿ, ವಾಸ: ಬಿ.ಹೆಚ್‌. ರಸ್ತೆ, ಕಂದಾವರ ಗ್ರಾಮ ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ, ಅಪರಾಧ ಕ್ರಮಾಂಕ 136/2022 ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕುಂದಾಪುರ: ದಿನಾಂಕ 18/12/2022 ರಂದು ಸಂಜೆ ಸುಮಾರು 7:00 ಗಂಟೆಗೆ ಕುಂದಾಪುರ ತಾಲೂಕು, ವಡೇರಹೋಬಳಿ ಗ್ರಾಮದ ನೆಹರೂ ಮೈದಾನ ಬಳಿ NH 66 ರಸ್ತೆಯಲ್ಲಿ, ಆಪಾದಿತ ಅವಿನಾಶ್‌ಎಂಬವರು KA20EH-5671ನೇ ಬೈಕನ್ನು ತಲ್ಲೂರು ಕಡೆಯಿಂದ ಕೊಟೇಶ್ವರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು, NH 66 ರಸ್ತೆ ದಾಟುತ್ತಿದ್ದ ಚಿನ್ನಪ್ಪ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಚಿನ್ನಪ್ಪರವರ ಎಡಕಾಲಿಗೆ ಒಳಪೆಟ್ಟಿನ ಗಾಯ ಹಾಗೂ ಮುಖ ಹಾಗೂ ಮೈಕೈಗೆ ತರಚಿದ ರಕ್ತಗಾಯ, ಹಾಗೂ ಅವಿನಾಶ್‌ರವರ ತಲೆಗೆ ರಕ್ತಗಾಯ ಹಾಗೂ ಮೈಕೈಗೆ ತರಚಿದ ರಕ್ತಗಾಯವಾಗಿದ್ದು, ಚಿನ್ನಪ್ಪ ರವರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋಗಿದ್ದು, ಹಾಗೂ ಅವಿನಾಶ್‌ರವರು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂಸಿ ಆಸ್ಪತ್ರೆಗೆ ಹೋಗಿರುತ್ತಾರೆ. ಈ ಬಗ್ಗೆ ಲಕ್ಷ್ಮಣ ಪ್ರಾಯ 34 ವರ್ಷ ತಂದೆ ಬಸಪ್ಪ ಗಡಿಗೇರ್‌ ವಾಸ: ಚಿಲಾಪುರ ಗ್ರಾಮ ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ, ಅಪರಾಧ ಕ್ರಮಾಂಕ 137/2022 ಕಲಂ 279, 338, ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ

ಅಸ್ವಾಭಾವಿಕ ಮರಣ ಪ್ರಕರಣಗಳು

  • ಬೈಂದೂರು: ಪಿರ್ಯಾದಿ: ಅಂಬಾ ಶೆಟ್ಟಿ ಪ್ರಾಯ: 45 ವರ್ಷ ಗಂಡ: ಶಂಕರ ಶೆಟ್ಟಿವಾಸ: ಶಿರೂರು, ಆರ್ಮಕ್ಕಿ, ಶಿರೂರು ಗ್ರಾಮ ಇವರೊಂದಿಗೆ ವಾಸಮಾಡಿಕೊಂಡಿದ್ದ ಅವರ ಅಕ್ಕ ಬೇಬಿ ಶೆಟ್ಟಿ (51) ರವರು ದಿನಾಂಕ 19-12-2022 ರಂದು ಬೆಳಿಗ್ಗೆ 7:00 ಗಂಟೆಗೆ ಮನೆಯಲ್ಲಿನ ಹಸುಗಳನ್ನು ಮೇಯಲು ಎಬ್ಬಿಕೊಂಡು ಹೋದವರು ವಾಪಾಸು ಮನೆಗೆ ಬಾರದೇ ಇರುವುದನ್ನು ಕಂಡು ಫಿರ್ಯಾದಿದಾರರು ಹುಡುಕುತ್ತಾ ಹೋದ ಸಮಯ ಶಿರೂರು ಆರ್ಮಕ್ಕಿ ರವೀಂದ್ರ ಶೆಟ್ಟಿಯವರು ಅವರ ಜಾಗದಲ್ಲಿರುವ ಬಾವಿಯಲ್ಲಿ ಬೇಬಿ ಶೆಟ್ಟಿಯವರು ಬಿದ್ದಿರುವುದನ್ನುಕಂಡು 7:30 ಗಂಟೆಗೆ ತಿಳಿಸಿರುತ್ತಾರೆ. ಬೇಬಿ ಶೆಟ್ಟಿಯವರು ದಿನಾಂಕ 19-12-2022 ರಂದು ಮನೆಯ ಹಸುಗಳನ್ನು ಮೇಯಲು ಎಬ್ಬಿಕೊಂಡು ಹೋದವರು ಬೆಳಿಗ್ಗೆ 7:00 ಗಂಟೆಯಿಂದ 7:30 ಗಂಟೆಯ ಮಧ್ಯಾವಧಿಯಲ್ಲಿ ಶಿರೂರು ಆರ್ಮಕ್ಕಿ ರವೀಂದ್ರ ಶೆಟ್ಟಿಯವರ ಜಾಗದಲ್ಲಿರುವ ಆವರಣವಿಲ್ಲದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ಠಾಣಾ ಯುಡಿಆರ್ 65/2022 ಕಲಂ 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಬೈಂದೂರು: ಪಿರ್ಯಾದಿ:ಪ್ರವೀಣ್ ಆಚಾರಿ ಪ್ರಾಯ: 48 ವರ್ಷ ತಂದೆ: ಜನಾರ್ಧನ ಆಚಾರಿ ವಾಸ: ಕಾಳಿಕಾಂಬಾ ಪ್ರಸನ್ನ , ಜ್ಯೂನಿಯರ್ ಕಾಲೇಜು ಬಳಿ, ಬೈಂದೂರು ಇವರು ದಿನಾಂಕ 19-12-2022 ರಂದು ಬೆಳಿಗ್ಗೆ 08:00 ಗಂಟೆಗೆ ಕೆಲಸದ ಬಗ್ಗೆ ತಮ್ಮ ಕಾರಿನಲ್ಲಿ ಶಿರೂರು ಕಡೆಗೆ ಹೋಗುತ್ತಿದ್ದಾಗ ಪಡುವರಿ ಗ್ರಾಮದ ಸೆಳ್ಳೆಕುಳ್ಳಿ ಬಳಿ ರಾ ಹೆ 66 ರ ಪಶ್ಚಿಮ ಬದಿಯ ರಸ್ತೆಯ ಬದಿಯಲ್ಲಿ ಸುಮಾರು 60 ರಿಂದ 65 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ಬಿದ್ದು ಕೊಂಡಿದ್ದನ್ನು ಕಂಡು ಹತ್ತಿರ ಹೋಗಿ ನೋಡಿದಾಗ ವ್ಯಕ್ತಿಯು ಮೃತಪಟ್ಟಿದ್ದು ಕಂಡು ಬಂದಿರುತ್ತದೆ. ಮೃತನು ಸಣಕಲು ಶರೀರ ಹೊಂದಿದ್ದು ಬಿಕ್ಷುಕನಂತೆ ಕಂಡು ಬಂದಿದ್ದು ಎರಡು ದಿನಗಳ ಹಿಂದೆ ಯಾವುದೇ ಅನ್ನ ಆಹಾರ ಇಲ್ಲದೇ ಮೃತಪಟ್ಟಿರಬಹುದು. ಈ ಬಗ್ಗೆ ಬೈಂದೂರು ಪೊಲೀಸ್‌ಠಾಣಾ ಯುಡಿಅರ್‌ನಂಬ್ರ 64/2022 ಕಲಂ 174 ಸಿಅರ್‌ಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣಗಳು

  • ಶಂಕರನಾರಾಯಣ: ಪಿರ್ಯಾದಿ: ಜಯರಾಮ ಹಾಲಂಬಿ ಪ್ರಯ 70 ವರ್ಷ ತಂದೆ, ರಾಜಶೇಖರ ಹಾಲಂಬಿ ವಾಸ, ಬಾಗಿಮನೆ ಕುಳ್ಳುಂಜೆ ಗ್ರಾಮ ಇವರಿಗೆ ಕುಂದಾಪುರ ತಾಲೂಕಿನ ಕುಳ್ಳುಂಜೆ ಗ್ರಾಮದ ಬಾಗೀಮನೆ ಎಂಬಲ್ಲಿ ಸರ್ವೇ ನಂ 94/6 ರಲ್ಲಿ 28 ಸೆಂಟ್ಸು ಪಟ್ಟಾ ಜಾಗವಿರುತ್ತದೆ, ಈ ಪಟ್ಟಾ ಜಾಗದಲ್ಲಿ ಆರೋಪಿಗೆ ನಡೆದಾಡಲು ರಸ್ತೆಇರುತ್ತದೆ, ಈ ರಸ್ತೆಯ ಬಗ್ಗೆ ಹಲವು ಆರೋಪಿ ಹಾಗೂ ಫಿರ್ಯಾದುದಾರರೊಳಗೆ ಗಲಾಟೆ ನಡೆದಿರುತ್ತದೆ, ಅಲ್ಲದೆ ಸದ್ರಿ ವಿಷಯವು ಮಾನ್ಯ ಸಿವಿಲ್ ನ್ಯಾಯಾಲಯದಲ್ಲಿ ಓ.ಎಸ್, ನಂ 135/22 ರಂತೆ ವಿಚಾರಣೆಯಲ್ಲಿ ಇರುತ್ತದೆ, ದಿನಾಂಕ 19.12.2022 ರಂದು ಸುಮಾರು ಬೆಳಿಗ್ಗೆ 9;45 ಘಂಟೆಗೆ ಫಿರ್ಯಾಧುದಾರರು ಸದ್ರಿ ಜಾಗದಲ್ಲಿ ಬೇಲಿ ಮಾಡುತ್ತಿರುವಾಗ ಆರೋಪಿಯು ಏಕಾಏಕೀ ಫಿರ್ಯಾದುದಾರರ ಪಟ್ಟಾ ಜಾಗದೊಳಗೆ ಅಕ್ರಮ ಪ್ರವೇಶ ಮಾಡಿ ಅವರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ ಕೈಯಿಂದ ದೂಡಿ ಹಾಕಿ ನಂತರ ಮರದ ದೊಣ್ಣೆಯಿಂದ ಎಡ ಕೆನ್ನೆಯ ಬಳಿ ಹಲ್ಲೆ ಮಾಡಿರುತ್ತಾನೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 138/2022 ಕಲಂ:. 341, 447,324 , ಐ.ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ .

 

ಇತ್ತೀಚಿನ ನವೀಕರಣ​ : 19-12-2022 06:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080