ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಲ್ಪೆ: ದಿನಾಂಕ  18-12-2021  ರಂದು  ಪಿರ್ಯಾದಿ ಸಂತೋಷ ಸಾಲ್ಯಾನ ಇವರು ಮತ್ತು ಅವರ ಹೆಂಡತಿ ಶಕುಂತಲಾ ರವರು ಬಡಾನಿಡಿಯೂರು ತಮ್ಮ ಮನೆಯಿಂದ ಮೀನುಗಾರಿಕೆ ಕೆಲಸದ ಬಗ್ಗೆ ಮಲ್ಪೆ ಬಂದರಿಗೆ ತನ್ನ ಬಾಬ್ತು ಸ್ಕೂಟರ್ ನಂಬ್ರ KA -20-EW-0097  ನೇದರನ್ನು ಬೆಳಿಗ್ಗೆ 04:40 ಗಂಟೆಗೆ ಸವಾರಿ ಮಾಡಿಕೊಂಡು  ಹೊರಟು 04:55 ಗಂಟೆಗೆ ಕೊರನೆಟ್ ಜಂಕ್ಷನಿಂದ ಸ್ವಲ್ಪ ಮುಂದೆ ರಮೇಶ್ ರವರ  ಜನರಲ್ ಸ್ಟೋರ್ ಎದುರುಗಡೆ ಹೋಗುತ್ತಿರುವಾಗ ಕೊಡವೂರು ಕಡೆಯಿಂದ ಮಲ್ಪೆ ಕಡೆಗೆ KA-20-AB-1501 ಎಸಿ ಟೆಂಪೋ ಚಾಲಕಿ ತನ್ನ ಬಾಬ್ತು ಎಸಿ ಟೆಂಪೋ ವನ್ನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಹಿಂದಿನಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ  ಸ್ಕೂಟರ್ ಗೆ ಡಿಕ್ಕಿ ಹೊಡೆದ  ಪರಿಣಾಮ  ಪಿರ್ಯಾದಿದಾರರು ಮತ್ತು ಅವರ ಹೆಂಡತಿ  ಸ್ಕೂಟರ್ ಸಮೇತ  ರಸ್ತೆಗೆ  ಬಿದ್ದು   ಪಿರ್ಯಾದಿದಾರರ   ಎಡ ಕಾಲಿನ ಮೊಣಗಂಟಿಗೆ ,ಎಡ ಕೈಯ ಮೊಣಗಂಟಿಗೆ ಮತ್ತು ಬಲಗಾಲಿನ ಹೆಬ್ಬರಳಿಗೆ  ರಕ್ತಗಾಯ ಮತ್ತು ಪಿರ್ಯಾದಿದಾರರ ಹೆಂಡತಿಗೆ ಎಡ ಕೈಯ ಕೊಲು ಕೈಗೆ ರಕ್ತಗಾಯ ಮತ್ತು  ಬಲ ಕೈಯ ಮೊಣಗಂಟಿನ ಕೆಳಗೆ ತೆರಚಿದ ಗಾಯವಾಗಿರುತ್ತದೆ. ಈ  ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 135/2021 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿ ದಿವ್ಯ ಶೆಟ್ಟಿ  ಇವರು ದಿನಾಂಕ: 18.12.2021 ತನ್ನ ಬಾಬ್ತು KA 20 EV 6823 ನೆ ಸ್ಕೂಟರ್‌ ನಲ್ಲಿ ಉಡುಪಿಯಿಂದ ಮಣಿಪಾಲ ಕಡೆಗೆ ಹೋಗುತ್ತಿರುವಾಗ ಮಧ್ಯಾಹ್ನ 12:30 ಗಂಟೆ ಸಮಯಕ್ಕೆ ಇಂದ್ರಾಳಿ ರೈಲ್ವೆ ಬ್ರಿಡ್ಜ್‌ ದಾಟಿ ಸ್ವಲ್ಪ ಮುಂದಕ್ಕೆ ಹೋದಾಗ ನಿರ್ಮಾಣ ಹಂತದಲ್ಲಿದ್ದ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದ ಕಾರಣ ಪಿರ್ಯಾದಿದಾರರು ತನ್ನ ಬಾಬ್ತು ಸ್ಕೂಟರನ್ನು  ರಸ್ತೆಬದಿಯಲ್ಲಿ  ನಿಲ್ಲಿಸಿರುತ್ತಾರೆ. ಆಗ ಪಿರ್ಯಾದಿದಾರರ ಹಿಂದಿನಿಂದ KA19B 9827 ನೇ ಬಸ್ಸನ್ನು ಅದರ ಚಾಲಕ ವಿಜಯ ಕೋಟ್ಯಾನ್‌ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಪಿರ್ಯಾದಿದಾರರ ಸ್ಕೂಟರ್‌‌ಗೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದಿರುತ್ತಾರೆ.  ಪರಿಣಾಮ ಪಿರ್ಯಾದಿದಾರರ ಬಲ ಕಾಲಿನ ಮೂಳೆಮುರಿತ ಮತ್ತು ತರಚಿದ ಗಾಯ ಉಂಟಾಗಿರುತ್ತದೆ ಹಾಗೂ ಪಿರ್ಯಾದಿದಾರರ ಸ್ಕೂಟರ್‌ ಜಖಂಗೊಂಡಿರುತ್ತದೆ, ಈ  ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 168/2021 ಕಲಂ 279, 338  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 18/12/2021 ರಂದು ಬೆಳಿಗ್ಗೆ ಸುಮಾರು 09:20  ಗಂಟೆಗೆ ಕುಂದಾಪುರ  ತಾಲೂಕಿನ ಆನಗಳ್ಳಿ  ಗ್ರಾಮದ   ಹೇರಿಕುದ್ರು  ಸೋಫಿಯಾರವರ ಮನೆಯ ಎದುರು ಹಾದು ಹೋದ  ರಾಷ್ಟೀಯ ಹೆದ್ದಾರಿ 66 ರ  ಬೈಂದೂರು ಕುಂದಾಪುರ ಏಕಮುಖ ಸಂಚಾರ ರಸ್ತೆಯಲ್ಲಿ.  KA 20 B 2614  ನೇ ಭಾರತಿ ಬಸ್ಸಿನಲ್ಲಿ ಪಿರ್ಯಾದಿ ಮಮತಾ ಶೆಟ್ಟಿ ಇವರು ಕುಂದಾಪುರಕ್ಕೆ ಹೋಗುವರೆ  ಈ ಬಸ್ಸನ್ನು ಹತ್ತಿದಾಗ ಸದ್ರಿ ಬಸ್ಸಿಗೆ ಬೈಂದೂರು ಕಡೆಯಿಂದ KA 31 F 1626 ನೇ  KSRTC  ಬಸ್ಸನ್ನು ಅದರ ಚಾಲಕ  ತನ್ನ ಬಸ್ಸನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಬಸ್ಸಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಬಸ್ಸಿನೊಳಗೆ ಬಿದ್ದು  ಪಿರ್ಯಾದಿದಾರರಿಗೆ ತಲೆಯ ಹಿಂಭಾಗ  ರಕ್ತಗಾಯವಾಗಿ ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ  ,ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಇತರ ಪ್ರಯಾಣಿಕರಾದ  ರವಿ ಶೆಟ್ಟಿರವರಿಗೆ ಹಲ್ಲು ಮೂರಿತ ಹಾಗೂ ಕೈ ಕಾಲಿಗೆ ತರಚಿದ ಗಾಯ  ,ಆನಂದ ರವರಿಗೆ ತಲೆಗೆ ಸಣ್ಣ ಗಾಯ , ಯಶೋಧ ರವರಿಗೆ ಬೆನ್ನಿಗೆ ,ಕೈ  ಕಾಲಿಗೆ ತರಚಿದ ಗಾಯ ,ಅಕ್ಕಮ್ಮ ರವರಿಗೆ ಬಲ ಕಾಲಿಗೆ ಒಳನೋವು ಉಂಟಾಗಿ  ಕುಂದಾಪುರ  ಆದರ್ಶ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಸವಿತಾ ಎಂಬುವರಿಗೆ ತರಚಿದ ರಕ್ತಗಾಯವಾಗಿ ಚಿನ್ಮಯ  ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ  ಹಾಗೂ KSRTC  ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ  ಲಕ್ಷ್ಮಣ ರವರಿಗೆ ಬಲ  ಕೈಗೆ ಒಳನೋವು ಆಗಿದ್ದು  ಚಿಕಿತ್ಸೆ ಬಗ್ಗೆ  ಕುಂದಾಪುರ  ಚಿನ್ಮಯ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ  ಬಗ್ಗೆ ಕುಂದಾಪುರ ಸಂಚಾರ  ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 107 /2021 ಕಲಂ 279, 337,338   ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಜೆಕಾರು: ಪಿರ್ಯಾದಿ ರವಿ ಇವರು ದಿನಾಂಕ: 18-12-2021 ರಂದು ಬೆಳಿಗ್ಗೆ 7:40 ಗಂಟೆಗೆ ಸುಂದರ ಹಾಗೂ ನಾರಾಯಣ ರವರುಗಳೊಂದಿಗೆ ಹಾಲಾಡಿ ಗೊಳಿಯಂಗಡಿಗೆ ಎಲಕ್ಟ್ರೀಕಲ್ ಕಂಬದ ಕೆಲಸಕ್ಕೆ ಹೋಗಿದ್ದು, ಕೆಲಸ ಮುಗಿಸಿ ಸಂಜೆ ವೇಳೆಗೆ Pick up ವಾಹನದಲ್ಲಿ ಮುನಿಯಾಲಿನವರೆಗೆ ಬಂದಿದ್ದು, ಅಲ್ಲಿಂದ ಅಜೆಕಾರು ಕಡೆಗೆ ಹೋಗುವ ಬಸ್ಸಿನಲ್ಲಿ ಕುಳಿತಿದ್ದು, ಬಸ್ಸಿನ ಕಂಡಕ್ಟರ್ ಈ ಬಸ್ಸು ಅಜೆಕಾರಿಗೆ ಹೋಗುವುದಿಲ್ಲ ಗುಡ್ಡೆಯಂಗಡಿಯವರೆಗೆ ಮಾತ್ರ ಹೋಗುತ್ತದೆ ಎಂದು ತಿಳಿಸಿದ ಮೇರೆಗೆ ಗುಡ್ಡೆಯಂಗಡಿಯ ಆಟದ ಮೈದಾನದ ಬಳಿ ಬಸ್ಸಿನಿಂದ ಇಳಿದು ಅಜೆಕಾರು-ಹೆಬ್ರಿ ರಸ್ತೆಯಲ್ಲಿ ಅಜೆಕಾರು ಕಡೆಗೆ ರಸ್ತೆಯ ಎಡಬದಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾ ರಾತ್ರಿ ಸುಮಾರು 8:00 ಗಂಟೆಯ ಸಮಯಕ್ಕೆ ಗುಡ್ಡೆಯಂಗಡಿ ನರ್ಸರಿ ಬಳಿ ತಲುಪಿದಾಗ ಹಿಂದಿನಿಂದ ಅಂದರೆ ಹೆಬ್ರಿ ಕಡೆಯಿಂದ ಬಂದ ವಾಹನವೊಂದು ಪಿರ್ಯಾದುದಾರರ ಸಮೇತ  3 ಜನರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು,  3 ಜನರು ಒಮ್ಮೇಲೆ ರಸ್ತೆಗೆ ಬಿದ್ದಿರುತ್ತಾರೆ.  ಬಳಿಕ ಫಿರ್ಯಾದುದಾರರು ಎದ್ದು  ಡಿಕ್ಕಿ ಹೊಡೆದು ಮುಂದೆ ಹೋದ ವಾಹನವನ್ನು ನೋಡಲಾಗಿ ಮಾರುತಿ ಸುಜುಕಿ ಒಮಿನಿ ಕಾರು ಆಗಿದ್ದು, ಒಮಿನಿ ವಾಹನದ ನಂಬ್ರವನ್ನು ನೋಡಲು ಪ್ರಯತ್ನಿಸಿದ್ದು ಒಮಿನಿ ವಾಹನವು ತುಂಬಾ ವೇಗವಾಗಿ ಹೋಗುತ್ತಿದ್ದ ಕಾರಣ ನಂಬ್ರ ನೋಡಲು ಸಾಧ್ಯವಾಗಿರುವುದಿಲ್ಲ.  ಕಾರು ಡಿಕ್ಕಿಪಡಿಸಿದ ಪರಿಣಾಮ ಫಿರ್ಯಾದದಾರರ ಕೈಗೆ, ತುಟಿಗೆ ತರಚಿದ ರೀತಿಯ ಸಣ್ಣ ಪುಟ್ಟ ಗಾಯಗಳಾಗಿದ್ದು, ಸಂದರ ರವರಿಗೆ ತಲೆಯ ಹಿಂಭಾಗದಲ್ಲಿ ತೀವ್ರ ರಕ್ತಗಾಯವಾಗಿ ಪ್ರಜ್ಞೆ ತಪ್ಪಿರುತ್ತದೆ. ನಾರಾಯಣ ರವರ ಬಲಗಣ್ಣಿನ ಭಾಗದಲ್ಲಿ ತೀವ್ರ ರಕ್ತಗಾಯವಾಗಿದ್ದು ಕಣ್ಣಿನ ಭಾಗ ಉದಿಕೊಂಡಿರುತ್ತದೆ. ಬಳಿಕ ಸ್ಥಳದಲ್ಲಿ ಸೇರಿದ ಸಾರ್ವಜನಿಕರ ಸಹಾಯದಿಂದ ಸಂದರ ಹಾಗೂ ನಾರಾಯಣ ರವರನ್ನು ಅಜೆಕಾರಿನ ಸುಜೀತ್ ರವರ ಒಮಿನಿ ವಾಹನದಲ್ಲಿ ಚಿಕಿತ್ಸೆ ಬಗ್ಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈಧ್ಯರು ಪರೀಕ್ಷಿಸಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಆಸ್ಪತ್ರೆಯ 108 ಅಂಬುಲೆನ್ಸ್ ನಲ್ಲಿ ಸುಂರ ರವರ ಅಣ್ಣ ಸಂಜೀವ ಎಂಬುವವರು ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ.  ಈ  ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 32/2021  ಕಲಂ: 279, 337, 338  ಐಪಿಸಿ & 134(a)(b) R/W 187 IMV Act ನಂತೆ ಪ್ರಕರಣ ದಾಖಲಾಗಿರುತ್ತದೆ. 

ಹಲ್ಲೆ ಪ್ರಕರಣ

  • ಕಾರ್ಕಳ: ಪಿರ್ಯಾದಿ ವಿಶ್ವನಾಥ್ ಇವರ ಮಗ ಮಂಜುನಾಥನು ಹೆಂಡತಿ ಮಕ್ಕಳನ್ನು ಬಿಟ್ಟು ಸುಮಾರು 02 ವರ್ಷಗಳಿಂದ ಕೆಲಸಕ್ಕೆ ಹೋಗದೇ ಕಾರ್ಕಳ ತಾಲೂಕು ನಂದಳಿಕೆ ಗ್ರಾಮದ ಗೋಳಿಕಟ್ಟೆ 05 ಸೆಂಟ್ಸ್ ಎಂಬಲ್ಲಿ ಇರುವ ಪಿರ್ಯಾದುದಾರರ ವಾಸ್ತವ್ಯದ ಮನೆಯಲ್ಲಿ ಇದ್ದು ತಂದೆ ತಾಯಿ ದುಡಿದು ತಂದು ಹಾಕಿದ್ದನ್ನು ತಿಂದುಕೊಂಡಿದ್ದು ಇದೇ ವಿಚಾರದಲ್ಲಿ ಪಿರ್ಯಾದುದಾರರಿಗೂ ಹಾಗೂ ಆರೋಪಿ ಅವರ ಮಗ ಮಂಜುನಾಥನಿಗೂ ಗಲಾಟೆ ಆಗುತ್ತಿದ್ದು ದಿನಾಂಕ: 17/12/2021 ರಂದು  ಸಂಜೆ 7:00 ಗಂಟೆ ಸಮಯಕ್ಕೆ ಮನೆಯಲ್ಲಿ ಇದ್ದ ಪಿರ್ಯಾದುದಾರನ್ನು ಉದ್ದೇಶಿಸಿ ಬೈದು ಒಮ್ಮೆಲೆ ಪಿರ್ಯಾದುದಾರರಿಗೆ ಕಾಲಿನಿಂದ ತುಳಿದು ನೆಲಕ್ಕೆ ಬೀಳಿಸಿ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಕೈಯಲ್ಲಿ ಇದ್ದ ಗಾಜಿನ ಬಾಟಲಿಯನ್ನು ಒಡೆದು ಪಿರ್ಯಾದುದಾರರ ಹೊಟ್ಟೆಗೆ ತಿವಿದು ರಕ್ತಗಾಯಗೊಳಿಸಿದ್ದು ಬಳಿಕ ಪಿರ್ಯಾದುದಾರರ ಹೆಂಡತಿ ಮತ್ತು ಅಳಿಯ ಸೇರಿ ಒಂದು ವಾಹನದಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ. ಈ  ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 139/2021 ಕಲಂ : 323, 324,504,506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಮಾಸೆಬೈಲು: ದಿನಾಂಕ 18/12/2021 ರಂದು ಬೆಳ್ಳಿಗ್ಗೆ 10:15 ಗಂಟೆಗೆ  ಕುಂದಾಪುರ ತಾಲುಕು ಮಚ್ಚಟ್ಟು ಗ್ರಾಮದ ಸೂರಿಬೈಲು ಎಂಬಲ್ಲಿ ಆಪಾದಿತರಾದ ವೇದಾವತಿ ಶೆಟ್ಟಿಗಾರ, ಅಣ್ಣಪ್ಪ ಶೆಟ್ಟಿಗಾರ, ಅವಿನಾಶ ಶೆಟ್ಟಿಗಾರ ಎಂಬುವವರು  ಪಿರ್ಯಾದಿ ಶ್ರೀಮತಿ ಶಮಿತ  ಇವರ  ಅಂಗಳದಲ್ಲಿ ಒಣಗಿಸಿದ  ಅಡಿಕೆಯನ್ನು  ತೆಗೆದುಕೊಂಡು ಹೋಗುವರೇ ಬಂದಾಗ ಪಿರ್ಯಾದಿದರರು ಅಡಿಕೆ ತೆಗೆದುಕೊಂಡು ಹೋಗದಂತೆ ಆಕ್ಷೇಪಿಸಿದಕ್ಕೆ ಆಪಾದಿತರು ಜಾಗದ ತಕರಾರಿನ ದ್ವೇಷದಲ್ಲಿ ಪಿರ್ಯಾದಿದಾರರಾದ ಶ್ರೀಮತಿ ಶಮಿತ ಎಂಬುವವರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿ ಮನೆಯ ಒಳಗೆ ಪ್ರವೇಶ ಮಾಡಿ ಕೈ ಗಳಿಂದ  ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಿ   ತಡೆಯಲು ಬಂದ  ಪಿರ್ಯಾದಿದಾರರ ಗಂಡ ವಿಜಯ ಶೆಟ್ಟಿಗಾರ ಎಂಬುವವರಿಗೂ ದೊಣ್ಣೆಯಿಂದ ಹೊಡೆದು ಕಾಲಿನಿಂದ ತುಳಿದು ಹಲ್ಲೆ ಮಾಡಿ ನೋವುಂಟು ಮಾಡಿರುತ್ತಾರೆ. ಈ  ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 39/2021 ಕಲಂ: 504,506,448,323,324 R/W 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಮಾಸೆಬೈಲು : ದಿನಾಂಕ 18/12/2021 ರಂದು ಬೆಳ್ಳಿಗ್ಗೆ 10:30 ಗಂಟೆಗೆ  ಕುಂದಾಪುರ ತಾಲುಕು ಮಚ್ಚಟ್ಟು ಗ್ರಾಮದ ಸೂರಿಬೈಲು ಎಂಬಲ್ಲಿ  ಪಿರ್ಯಾದಿ ವೇದಾವತಿ ಶೆಟ್ಟಿಗಾರ  ಇವರ ಪಾಲಿನ ಅಡಿಕೆ  ತೋಟ ದಿಂದ  ಆಪಾದಿತರಾದ  ಶ್ರೀಮತಿ ಶಮಿತ ಮತ್ತು ವಿಜಯ ಶೆಟ್ಟಿಗಾರ ಎಂಬುವವರು ಅಡಿಕೆ ಕೊಯ್ಯುತ್ತಿರುವುದನ್ನು ನೋಡಿದ ಪಿರ್ಯಾದಿದಾರರು ಅಡಿಕೆ ಕೊಯ್ಯದಂತೆ ಆಕ್ಷೇಪಿಸಿದಕ್ಕೆ ಪಿರ್ಯಾದುದಾರರಿಗೆ ಆಪಾದಿತರು  ಅವಾಚ್ಯ ಶಬ್ದಗಳಿಂದ ಬೈದು ನಮಗೂ ಈ ಜಾಗದಲ್ಲಿ ಪಾಲಿದೆ  ನಿನ್ನನ್ನು ಕೊಂದು ಮುಗಿಸುತ್ತೆವೆ. ಎಂದು ಬೆದರಿಕೆ ಹಾಕಿ ಪಿರ್ಯಾದಿದಾರರ ಕೈ ಹಿಡಿದು ಎಳೆದುಕೊಂಡು ಆಪಾದಿತರ ಮನೆಯ ಒಳಗೆ ಎಳೆದುಕೊಂಡು ಹೋಗಿ ಕೈಯಿಂದ ಮತ್ತು ಕಟ್ಟಿಗೆಯಿಂದ ಹಲ್ಲೆ ಮಾಡಿದ್ದು ತಡೆಯಲು ಬಂದ ಪಿರ್ಯಾದಿದಾರರ ಮಗ  ಅಣ್ಣಪ್ಪ ಶೆಟ್ಟಿಗಾರ ಎಂಬುವವರಿಗೂ ಕತ್ತಿಯಿಂದ ಮತ್ತು ಕಟ್ಟಿಗೆಯಿಂದ ಹಲ್ಲೆ ಮಾಡಿ ನೋವುಂಟು ಮಾಡಿರುತ್ತಾರೆ. ಈ  ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 40/2021 ಕಲಂ: 504,506,323,324,R/W 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಣಿಪಾಲ: ನವೀನ್‌ (31) ಇವರು ವಿಪರೀತ ಕುಡಿತದ ಚಟ ಹೊಂದಿದ್ದು, ದಿನಾಂಕ: 16/12/2021 ರಾತ್ರಿ 08:00 ಗಂಟೆಯಿಂದ ದಿನಾಂಕ: 18/12/2021 ಮಧ್ಯಾನ 01:00 ಗಂಟೆ ಮಧ್ಯಾವಧಿಯಲ್ಲಿ ವಿಪರೀತ ಕುಡಿತದ ಚಟದಿಂದ ಮಾನಸಿಕ ಖಿನ್ನತಗೆ ಒಳಗಾಗಿ ಅಥವಾ ಇತರೆ ಕಾರಣದಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮೂಡುಸಗ್ರಿ ಎಂಬಲ್ಲಿ  ಹಾಡಿಯಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.  ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 45/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಮಲ್ಪೆ: ಪಿರ್ಯಾದಿದಾರರಾದ ಸಂಜೀವ್ ಮೈಂದನ್ ಹಾಗೂ ಮಂಜು ಸಾಲಿಯಾನ ಮತ್ತು ಹುಸೇನ್ ರವರ ಪಾಲುದಾರಿಕೆಯ ಬೋಟನಲ್ಲಿ ಕೆಲಸ ಮಾಡಲು ಬಂದಿದ್ದ ಛತ್ತಿಸಗಡದ ಜಲ್ ಗರ್ ಧನ್ ಸೇನ್(42) ಎಂಬುವವರಿಗೆ ದಿನಾಂಕ 16/12/2021 ರಂದು ಜ್ವರ ಬಂದಿದ್ದು ಈ ಕುರಿತು ಮಲ್ಪೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಚಿಕಿತ್ಸೆ ಪಡೆದರು ಜ್ವರ ನಿಲ್ಲದೆ ಇರುವುದರಿಂದ ಈ ದಿನ ದಿನಾಂಕ 18/12/2021 ರಂದು ಸುಮಾರು ಬೆಳಿಗ್ಗೆ 08:00 ಗಂಟೆಗೆ ತೀವ್ರ ಅಸ್ವಸ್ಥಗೊಂಡವರನ್ನು ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅವರನ್ನು ಪರಿಕ್ಷಿಸಿದ ವೈದ್ಯರು ಸದ್ರಿಯವರಿಗೆ ಅರಸಿನ ಕಾಯಿಲೆ(ಜಾಯಿಂಡಿಸ್) ಉಲ್ಬಣ ಗೊಂಡಿರುವುದಾಗಿ ತಿಳಿಸಿ  ಮಣಿಪಾಲ ಕೆ ಎಮ್ ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿರುತ್ತಾರೆ. ಅದರಂತೆ ಜಲ್ ಗರ್ ಧನ್ ಸೇನ್(42) ರವರನ್ನು ಮಣಿಪಾಲ್ ಕೆ ಎಮ್ ಸಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಕರೆದುಕೊಂಡು ಹೋದಾಗ ಅಲ್ಲಿ ಅವರನ್ನು ಪರಿಕ್ಷಿಸಿದ ವೈದ್ಯರು ಸದ್ರಿಯವರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 48/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 20-12-2021 06:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080