ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಶಿರ್ವ: ಪಿರ್ಯಾದಿ ಶ್ರೀಮತಿ ಬಲ್ಕೀಸ್‌ ಬಾನು ಇವರರು ತನ್ನ ಮಕ್ಕಳೊಂದಿಗೆ ದಿನಾಂಕ: 18.11.2022 ರಂದು 23:15 ಗಂಟೆಗೆ ಮನೆಯ ಎಲ್ಲಾ ಬಾಗಿಲನ್ನು ಭದ್ರಪಡಿಸಿ ಮಲಗಿರುತ್ತಾರೆ. ದಿನಾಂಕ: 19.11.2022 ರಂದು ಬೆಳಗ್ಗಿನ ಜಾವ 3:00  ಗಂಟೆಗೆ ಬಾತ್‌ರೂಮ್‌ಗೆ  ಹೋಗುವರೇ  ಎದ್ದು  ನೋಡಿದಾಗ  ಮನೆಯ  ಹಿಂದುಗಡೆಯ ಲೈಟ್‌ ಒನ್‌  ಇದ್ದು ಹಿಂದುಗಡೆ ಬಾಗಿಲು  ಕೂಡ ತೆರೆದಿರುತ್ತದೆ.ಇದನ್ನು ಕಂಡು ಆ  ಕೂಡಲೇ  ಪಿರ್ಯಾದಿದಾರರು ತನ್ನ  ಮಗನನ್ನು ಎಬ್ಬಿಸಿ  ಆತನಿಗೆ ವಿಚಾರ  ತಿಳಿಸಿದ್ದು  ನಂತರ ನೋಡಲಾಗಿ  ಮನೆಯ  ಹಿಂದುಗಡೆಯ ಮರದ  ಬಾಗಿಲಿಗೆ ಹಾಕಿದ್ದ  ಟವರ್‌ ಲಾಕ್‌ನ್ನು ಪಕ್ಕದಲ್ಲಿದ್ದ ಕಿಟಕಿಯ   ಮುಖಾಂತರ ಯಾವುದೋ ಸಾಧನವನ್ನು ಬಳಸಿ ಮೋಟಾರ್‌  ಸೈಕಲಿನ  ಸೈಡ್‌ ಮಿರರ್‌  ಉಪಯೋಗಿಸಿ ಯಾರೋ ಕಳ್ಳರು ಟವರ್‌  ಲಾಕ್‌ ತೆಗೆದು  ಮನೆಯ ಒಳಗಡೆ  ಪ್ರವೇಶಿಸಿ ಕೋಣೆಯ  ಒಳಗಡೆ ಇದ್ದ  ಮರದ   ಕಪಾಟಿನ ಒಳಗಡೆ   ಇಟ್ಟಿದ್ದ ಬಂಗಾರದ   ಸೊತ್ತುಗಳಾದ 24 ಗ್ರಾಮ್‌  ತೂಕದ  ಖಡ್ಗ ತರಹದ ಕೈ  ಬಲೆ -1, 28  ಗ್ರಾಮ್‌  ತೂಕದ ಬಂಗಾರದ ಉದ್ದ ಸರ -1,  16  ಗ್ರಾಮ್‌  ತೂಕದ ಮುತ್ತಿನ ಹಾರ-1, 6 ಗ್ರಾಮ್‌  ತೂಕದ ಉಂಗುರ-2. 16  ಗ್ರಾಮ್‌  ತೂಕದ ರಿಂಗ್‌  ಇದ್ದ ಬ್ರಾಸ್‌ಲೈಟ್‌ -1,  16  ಗ್ರಾಮ್‌  ತೂಕದ ಕೈ ಬಲೆ-1 ಈ  ಎಲ್ಲಾ ಸೊತ್ತುಗಳನ್ನು ಹೊರಗಡೆ  ಬ್ಯಾಗ್‌ನಲ್ಲಿಟ್ಟಿದ್ದ ಬೀಗದ  ಕೀಯನ್ನು ಉಪಯೋಗಿಸಿ ಕಳವು ಮಾಡಿಕೊಂಡು  ಹೋಗಿರುತ್ತಾರೆ.  ಈ  ಸಮಯದಲ್ಲಿ   ಕಪಾಟಿನ ಬಾಗಿಲು,ಮನೆಯ  ಹಿಂದಿನ  ಬಾಗಿಲು  ಜಖಂ  ಆಗಿರುವುದಿಲ್ಲ.  ಕಳವಾದ  ಬಂಗಾರದ   ಸೊತ್ತುಗಳ ಅಂದಾಜುಮೌಲ್ಯ ರೂ 4.24.000/-  ಆಗಬಹುದು. ಈ ಬಗ್ಗೆ ಶಿರ್ವ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 82/22, ಕಲಂ  457, 380 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

  • ಗಂಗೊಳ್ಳಿ: ದಾಮೋದರ ಶೆಟ್ಟಿ ಇವರು ಕುಂದಾಫುರ ತಾಲೂಕು ಹರ್ಕೂರು ಗ್ರಾಮದ ಹರ್ಕೂರು ಕೆಳಮನೆ ಎಂಬಲ್ಲಿರುವ ತನ್ನ ಮನೆಯಲ್ಲಿ  ದಿನಾಂಕ:18/11/2022 ರಂದು ರಾತ್ರಿ 10-45 ಗಂಟೆಗೆ ಹೆಂಡತಿಯೊಂದಿಗೆ ಊಟ ಮಾಡುತ್ತಿದ್ದಾಗ ಪಿರ್ಯಾದುದಾರರ  ಸಂಬಂಧಿಕರಾದ ಅತುಲ್‌ ಮತ್ತು ಅರ್ಜುನ್‌ ರವರು ಮನೆಯೊಳಗೆ ಬಂದು ಅಡಿಕೆ ವಿಚಾರದಲ್ಲಿ ಜಗಳ ಮಾಡಿ ನೀವು ಮನೆಯಲ್ಲಿ ಇರುವುದು ಬೇಡಾ, ನಿಮಗೆ ಇಲ್ಲಿ ಜಾಗ  ಇಲ್ಲಾ ಎಂದು ಹೇಳಿ ಅತುಲನು ಮನೆಯ ಶೋಕೇಸಿನಲ್ಲಿದ್ದ  ಗ್ಲಾಸ್‌ ಮತ್ತು ಪ್ಲೇಟನ್ನು ತೆಗೆದುಕೊಂಡು ಪಿರ್ಯಾದಿದಾರರ  ತಲೆಗೆ ಮತ್ತು ಮೈಗೆ ಹೊಡೆದನು.ಅರ್ಜುನನು ಮರದ ದೊಣ್ಣೆಯಿಂದ ಪಿರ್ಯಾದಿದಾರರ  ತಲೆಗೆ ಕೈಕಾಲಿಗೆ  ಹೊಡೆದಿದ್ದು ಆ ಸಮಯ  ತಪ್ಪಿಸಲು ಬಂದ ಪಿರ್ಯಾದಿದಾರರ ಹೆಂಡತಿ ಚಂದ್ರಮತಿಗೂ  ಅರ್ಜುನನು  ಹೊಡೆದಿರುತ್ತಾನೆ. ನಂತರ ಪಿರ್ಯಾದಿದಾರರು ಹಾಗೂ ಅವರ ಹೆಂಡತಿ ಜೋರಾಗಿ ಬೊಬ್ಬೆ ಹಾಕಿದಾಗ ಅಮೀಂದ್ರನು ಬಂದು ಜಗಳ ಬಿಡಿಸಿದಾಗ  ಆಪಾದಿತರು ಪಿರ್ಯಾದುದಾರರಿಗೆ  ಕೊಲೆ ಮಾಡದೇ ಬಿಡುವುದಲ್ಲಾಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ ಈ ಹಲ್ಲೆಯಿಂದ ಪಿರ್ಯಾದಿದಾರರಿಗೆ ಉಂಟಾದ ಗಾಯದ  ಬಗ್ಗೆ ಕುಂದಾಫುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ  ದಾಖಲಾಗಿರುವುದಾಗಿದೆ. ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 105/2022 ಕಲಂ: 448, 324, 504, 506 ಜೊತೆಗೆ 34 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-11-2022 05:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080