Feedback / Suggestions

ಕಳವು ಪ್ರಕರಣ

  • ಶಿರ್ವ: ಪಿರ್ಯಾದಿ ಶ್ರೀಮತಿ ಬಲ್ಕೀಸ್‌ ಬಾನು ಇವರರು ತನ್ನ ಮಕ್ಕಳೊಂದಿಗೆ ದಿನಾಂಕ: 18.11.2022 ರಂದು 23:15 ಗಂಟೆಗೆ ಮನೆಯ ಎಲ್ಲಾ ಬಾಗಿಲನ್ನು ಭದ್ರಪಡಿಸಿ ಮಲಗಿರುತ್ತಾರೆ. ದಿನಾಂಕ: 19.11.2022 ರಂದು ಬೆಳಗ್ಗಿನ ಜಾವ 3:00  ಗಂಟೆಗೆ ಬಾತ್‌ರೂಮ್‌ಗೆ  ಹೋಗುವರೇ  ಎದ್ದು  ನೋಡಿದಾಗ  ಮನೆಯ  ಹಿಂದುಗಡೆಯ ಲೈಟ್‌ ಒನ್‌  ಇದ್ದು ಹಿಂದುಗಡೆ ಬಾಗಿಲು  ಕೂಡ ತೆರೆದಿರುತ್ತದೆ.ಇದನ್ನು ಕಂಡು ಆ  ಕೂಡಲೇ  ಪಿರ್ಯಾದಿದಾರರು ತನ್ನ  ಮಗನನ್ನು ಎಬ್ಬಿಸಿ  ಆತನಿಗೆ ವಿಚಾರ  ತಿಳಿಸಿದ್ದು  ನಂತರ ನೋಡಲಾಗಿ  ಮನೆಯ  ಹಿಂದುಗಡೆಯ ಮರದ  ಬಾಗಿಲಿಗೆ ಹಾಕಿದ್ದ  ಟವರ್‌ ಲಾಕ್‌ನ್ನು ಪಕ್ಕದಲ್ಲಿದ್ದ ಕಿಟಕಿಯ   ಮುಖಾಂತರ ಯಾವುದೋ ಸಾಧನವನ್ನು ಬಳಸಿ ಮೋಟಾರ್‌  ಸೈಕಲಿನ  ಸೈಡ್‌ ಮಿರರ್‌  ಉಪಯೋಗಿಸಿ ಯಾರೋ ಕಳ್ಳರು ಟವರ್‌  ಲಾಕ್‌ ತೆಗೆದು  ಮನೆಯ ಒಳಗಡೆ  ಪ್ರವೇಶಿಸಿ ಕೋಣೆಯ  ಒಳಗಡೆ ಇದ್ದ  ಮರದ   ಕಪಾಟಿನ ಒಳಗಡೆ   ಇಟ್ಟಿದ್ದ ಬಂಗಾರದ   ಸೊತ್ತುಗಳಾದ 24 ಗ್ರಾಮ್‌  ತೂಕದ  ಖಡ್ಗ ತರಹದ ಕೈ  ಬಲೆ -1, 28  ಗ್ರಾಮ್‌  ತೂಕದ ಬಂಗಾರದ ಉದ್ದ ಸರ -1,  16  ಗ್ರಾಮ್‌  ತೂಕದ ಮುತ್ತಿನ ಹಾರ-1, 6 ಗ್ರಾಮ್‌  ತೂಕದ ಉಂಗುರ-2. 16  ಗ್ರಾಮ್‌  ತೂಕದ ರಿಂಗ್‌  ಇದ್ದ ಬ್ರಾಸ್‌ಲೈಟ್‌ -1,  16  ಗ್ರಾಮ್‌  ತೂಕದ ಕೈ ಬಲೆ-1 ಈ  ಎಲ್ಲಾ ಸೊತ್ತುಗಳನ್ನು ಹೊರಗಡೆ  ಬ್ಯಾಗ್‌ನಲ್ಲಿಟ್ಟಿದ್ದ ಬೀಗದ  ಕೀಯನ್ನು ಉಪಯೋಗಿಸಿ ಕಳವು ಮಾಡಿಕೊಂಡು  ಹೋಗಿರುತ್ತಾರೆ.  ಈ  ಸಮಯದಲ್ಲಿ   ಕಪಾಟಿನ ಬಾಗಿಲು,ಮನೆಯ  ಹಿಂದಿನ  ಬಾಗಿಲು  ಜಖಂ  ಆಗಿರುವುದಿಲ್ಲ.  ಕಳವಾದ  ಬಂಗಾರದ   ಸೊತ್ತುಗಳ ಅಂದಾಜುಮೌಲ್ಯ ರೂ 4.24.000/-  ಆಗಬಹುದು. ಈ ಬಗ್ಗೆ ಶಿರ್ವ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 82/22, ಕಲಂ  457, 380 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

  • ಗಂಗೊಳ್ಳಿ: ದಾಮೋದರ ಶೆಟ್ಟಿ ಇವರು ಕುಂದಾಫುರ ತಾಲೂಕು ಹರ್ಕೂರು ಗ್ರಾಮದ ಹರ್ಕೂರು ಕೆಳಮನೆ ಎಂಬಲ್ಲಿರುವ ತನ್ನ ಮನೆಯಲ್ಲಿ  ದಿನಾಂಕ:18/11/2022 ರಂದು ರಾತ್ರಿ 10-45 ಗಂಟೆಗೆ ಹೆಂಡತಿಯೊಂದಿಗೆ ಊಟ ಮಾಡುತ್ತಿದ್ದಾಗ ಪಿರ್ಯಾದುದಾರರ  ಸಂಬಂಧಿಕರಾದ ಅತುಲ್‌ ಮತ್ತು ಅರ್ಜುನ್‌ ರವರು ಮನೆಯೊಳಗೆ ಬಂದು ಅಡಿಕೆ ವಿಚಾರದಲ್ಲಿ ಜಗಳ ಮಾಡಿ ನೀವು ಮನೆಯಲ್ಲಿ ಇರುವುದು ಬೇಡಾ, ನಿಮಗೆ ಇಲ್ಲಿ ಜಾಗ  ಇಲ್ಲಾ ಎಂದು ಹೇಳಿ ಅತುಲನು ಮನೆಯ ಶೋಕೇಸಿನಲ್ಲಿದ್ದ  ಗ್ಲಾಸ್‌ ಮತ್ತು ಪ್ಲೇಟನ್ನು ತೆಗೆದುಕೊಂಡು ಪಿರ್ಯಾದಿದಾರರ  ತಲೆಗೆ ಮತ್ತು ಮೈಗೆ ಹೊಡೆದನು.ಅರ್ಜುನನು ಮರದ ದೊಣ್ಣೆಯಿಂದ ಪಿರ್ಯಾದಿದಾರರ  ತಲೆಗೆ ಕೈಕಾಲಿಗೆ  ಹೊಡೆದಿದ್ದು ಆ ಸಮಯ  ತಪ್ಪಿಸಲು ಬಂದ ಪಿರ್ಯಾದಿದಾರರ ಹೆಂಡತಿ ಚಂದ್ರಮತಿಗೂ  ಅರ್ಜುನನು  ಹೊಡೆದಿರುತ್ತಾನೆ. ನಂತರ ಪಿರ್ಯಾದಿದಾರರು ಹಾಗೂ ಅವರ ಹೆಂಡತಿ ಜೋರಾಗಿ ಬೊಬ್ಬೆ ಹಾಕಿದಾಗ ಅಮೀಂದ್ರನು ಬಂದು ಜಗಳ ಬಿಡಿಸಿದಾಗ  ಆಪಾದಿತರು ಪಿರ್ಯಾದುದಾರರಿಗೆ  ಕೊಲೆ ಮಾಡದೇ ಬಿಡುವುದಲ್ಲಾಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ ಈ ಹಲ್ಲೆಯಿಂದ ಪಿರ್ಯಾದಿದಾರರಿಗೆ ಉಂಟಾದ ಗಾಯದ  ಬಗ್ಗೆ ಕುಂದಾಫುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ  ದಾಖಲಾಗಿರುವುದಾಗಿದೆ. ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 105/2022 ಕಲಂ: 448, 324, 504, 506 ಜೊತೆಗೆ 34 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

Last Updated: 19-11-2022 05:56 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080