ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಣಿಪಾಲ: ದಿನಾಂಕ 14/11/2021 ರಂದು  ಬೆಳಿಗ್ಗೆ 9:30 ಗಂಟೆಗೆ ಶಿವಳ್ಳಿ ಗ್ರಾಮದ ಲಕ್ಷ್ಮಿಂದ್ರ ನಗರ Bachus Inn Restaurant ಬಳಿ ಸೈಕಲ್ ಸವಾರೆ ಕ್ಯಾಲಿಡ ಪಿಂಟೊ ಎಂಬವವರು ತನ್ನ ಸೈಕಲ್ನಲ್ಲಿ ಉಡುಪಿ ಕಡೆಯಿಂದ ಮಣಿಪಾಲ ಕಡೆಗೆ ಹೋಗುತ್ತಿರುವಾಗ KA-20 Z-7029 ನೇ ಕಾರು ಚಾಲಕ ಮೊಹಮ್ಮದ್ ಅಬ್ಸರ್ ಎಂಬುವರು ತನ್ನ ಕಾರನ್ನು ಉಡುಪಿ ಕಡೆಯಿಂದ ಮಣಿಪಾಲ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರ ಎಡಭಾಗದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಾದ ಕ್ಯಾಲಿಡ ಪಿಂಟೊ ಗಂಡ: ಸನ್ನಿ ಜೇಸುದಾಸನ್ ವಾಸ: ಮೆಡೀನ ವಿಲ್ಲ ಬಿ ವಿ ರೋಟ್ ಅತ್ತಾವರ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ ಇವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಇವರು ಸೈಕಲ್ ಸಮೇತ ರಸ್ತೆಗೆ ಬಿದ್ದು ಎಡ ಕೈಯ ಮೊಣಕೈಗಂಟಿನ ಬಳಿ ತೀವ್ರ ಒಳ ಜಖಂ ಉಂಟಾಗಿರುತ್ತದೆ ಅಲ್ಲದೆ ಎರಡೂ ಮೊಣಕಾಲಿಗೆ ಬಳಿ ತರಚಿದ ಗಾಯವಾಗಿರುತ್ತದೆ,  ಕ್ಯಾಲಿಡ ಪಿಂಟೊ ರವರು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಅತ್ತಾವರ ಕೆ ಎಮ್ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 149/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ದಿನೇಶ ದೇವಾಡಿಗ(47) ತಂದೆ: ದಿ|| ಅನಂತ ದೇವಾಡಿಗ ವಾಸ: ಸಾಂತಾವರ ಅರಮಶ್ರೀ ಕೃಪಾ, ಮೂಡ್ಲಕಟ್ಟೆ, ಕಂದಾವರ ಗ್ರಾಮ, ಕುಂದಾಪುರ ಇವರ ತಮ್ಮನಾದ ಗಿರೀಶ್ ದೇವಾಡಿಗ (59) ರವರು ಅವಿವಾಹಿತರಾಗಿದ್ದು, ಸುಮಾರು ಒಂದು ವರ್ಷದಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಹಾಗೂ ಮದ್ಯಪಾನ ಮಾಡುವ ಚಟ ಹೊಂದಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 18/11/2021 ರಂದು ರಾತ್ರಿ 09:45 ಗಂಟೆಯಿಂದ ದಿನಾಂಕ 19/11/2021 ರ ಬೆಳಿಗ್ಗೆ 05:30 ಗಂಟೆಯ ನಡುವೆ ಮನೆಯ ಮಲಗುವ ಕೋಣೆಯಲ್ಲಿ ಸೀಲಿಂಗ್ ನ ಹುಕ್ಕಿಗೆ ಸೀರೆಯಿಂದ  ಕುತ್ತಿಗೆ ನೀಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಯು.ಡಿ.ಆರ್ ಕ್ರಮಾಂಕ 34/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ನಿಶಾ ಡಿ.ಎಸ್ (21) ಗಂಡ:ಅಶೋಕ್ ಕೆವಿನ್ ಡಿಸೋಜಾ, ವಾಸ: 13-43, ಸೈಂಟ್ ಪೀಟರ್ ವಿಲ್ಲಾ, ಬಂಡಸಾಲೆ ತೋಟ, ಪೆರಂಪಳ್ಳಿ, ಶಿವಳ್ಳಿ ಗ್ರಾಮ, ಕುಂಜಿಬೆಟ್ಟು ಇವರು  ಆಪಾದಿತ 1 ಅಶೋಕ್ ಕೆವಿನ್ ಡಿಸೋಜ ಇವರನ್ನು ದಿನಾಂಕ 26/01/2020 ರಂದು ಪೆರಂಪಳ್ಳಿ ಫಾತಿಮಾ ಚರ್ಚ್‌ನಲ್ಲಿ ಮದುವೆಯಾಗಿದ್ದು ಮದುವೆಯಾದ ಸ್ವಲ್ಪ ದಿನ ಆಪಾದಿತ 1 ನೇಯವರು ನಿಶಾ ಡಿ.ಎಸ್ ರವರನ್ನು ಒಳ್ಳೆಯ ರೀತಿಯಲ್ಲಿ ನೋಡಿಕೊಂಡಿದ್ದು ನಂತರ ಆಪಾದಿತ ಅಲೆಕ್ಸ್ ಡಿಸೋಜ ಮತ್ತು ಹಿಲ್ಡಾ ಡಿಸೋಜ ನೇಯವರ ಕುಮ್ಮಕ್ಕಿನಿಂದ ನಿಶಾ ಡಿ.ಎಸ್ ರವರಿಗೆ ಚಿಕ್ಕ ಚಿಕ್ಕ ವಿಷಯಗಳಿಗೆ  ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ನೀಡಿ ಇವರ ತವರು ಮನೆಯಾದ ಚಿಕ್ಕಮಗಳೂರಿಗೆ ಕಳುಹಿಸಿದ್ದು ನಂತರ ಆರೋಪಿತರು ನಿಶಾ ಡಿ.ಎಸ್ ರವರಿಗೆ ನೀನು ಬಡವರ ಮನೆಯವಳು ವರದಕ್ಷಿಣೆ ಏನನ್ನೂ ಕೊಡದೇ ಮದುವೆಯಾಗಿದ್ಧೀ ಎಂದು ಹಂಗಿಸಿ ವರದಕ್ಷಿಣೆ ಸಲುವಾಗಿ ವಿಪರೀತ ಕಿರುಕುಳ ನೀಡಿ ಮನೆ ಕೆಲಸವನ್ನೇಲ್ಲ ಮಾಡಿಸುತ್ತಿದ್ದು ಮಾತ್ರವಲ್ಲದೇ ನಿಶಾ ಡಿ.ಎಸ್ ರವರು ದುಡಿದು ಹಣವನ್ನು ಮನೆಗೆ ಕೊಡಬೇಕೆಂದು ಹೇಳಿ ಇವರ ಇಚ್ಚೆಗೆ ವಿರುದ್ಧವಾಗಿ ನರ್ಸಿಂಗ್ ಕಾಲೇಜಿಗೆ ಸೇರಿಸಿರುತ್ತಾರೆ. ದಿನಾಂಕ 10/10/2020 ರಂದು ಬೆಳಿಗ್ಗೆ 10:00 ಗಂಟೆಗೆ ಆಪಾದಿತ 1 ನೇಯವರ ಕುಮ್ಮಕ್ಕಿನಿಂದ ನಿಶಾ ಡಿ.ಎಸ್ ರವರನ್ನು ಆಪಾದಿತ 2 ಮತ್ತು 3 ನೇಯವರು ಮನೆಯಲ್ಲಿ ಕೂಡಿ ಹಾಕಿ 2 ನೇ ಆಪಾದಿತನು ಪಿರ್ಯಾದಿದಾರರಿಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿದು ಹಲ್ಲೆ ಮಾಡಿ ಮಾನಹಾನಿ  ಮಾಡಿದ್ದು ಆಪಾದಿತ 3 ನೇಯವರು ಕಾಲಿನಿಂದ ತುಳಿದು ಮನೆಯಿಂದ ಹೊರಗೆ ಹೋಗದಂತೆ ನಿರ್ಭಂಧ ಮಾಡಿರುತ್ತಾರೆ. ನಿಶಾ ಡಿ.ಎಸ್ ರವರ ಲೈಫ್ ಹಾಳು ಮಾಡಿ  ಊರಿಗೆ ಬಂದು ಮುಗಿಸಿಬಿಡುತ್ತೇನೆ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಮಹಿಳಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 48/2021 ಕಲಂ: 498(A), 312, 323, 342, 354, 376, 501, 506 ಜೊತೆಗೆ 34 ಐಪಿಸಿ ಹಾಗೂ 3, 4 DP Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದುದಾರರಾದ ಶ್ರೀಮತಿ ನಿರ್ಮಲ ಉಡುಪ (78) ಗಂಡ: ಜನಾರ್ಧನ ಉಡುಪ ವಾಸ: ಜನ್ನಿ ಮನೆ ಉಪ್ಪಿನಕುದ್ರು ಗ್ರಾಮ ಕುಂದಾಪುರ ಇವರಿಗೂ ಆಪಾದಿತನಿಗೂ ಜಾಗದ ವಿಚಾರದಲ್ಲಿ ತಕರಾರು ಇದ್ದು ಶ್ರೀಮತಿ ನಿರ್ಮಲ ಉಡುಪ ರವರ ಮನೆಗೆ ಹೋಗುವ ರಸ್ತೆಯನ್ನು ಆರೋಪಿಯು ಮುಚ್ಚಿ ಹಾಕಲು ಯತ್ನಿಸಿದ್ದರಿಂದ ಶ್ರೀಮತಿ ನಿರ್ಮಲ ಉಡುಪ ರವರು ಸಿವಿಲ್ ನ್ಯಾಯಾಲಯದಲ್ಲಿ ದಾವೆ ದಾಖಲಿಸಿರುತ್ತಾರೆ.  ಹೀಗಿರುತ್ತಾ ಆಪಾದಿತ ಚಂದ್ರಶೇಖರ ಉಡುಪ ತಂದೆ ದಿ ದೇವರಾಯ ಉಡುಪ ಉಪ್ಪಿನಕುದ್ರು ಗ್ರಾಮ ಕುಂದಾಪುರ ಇತನು ದಿನಾಂಕ 19/11/2021 ರಂದು ಬೆಳಿಗ್ಗೆ ಸಮಯ ಸುಮಾರು 8:30 ಗಂಟೆಗೆ  ಶ್ರೀಮತಿ ನಿರ್ಮಲ ಉಡುಪ ರವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿದಾಗ ಆಪಾದಿತನಲ್ಲಿ ನಮ್ಮ ಜಾಗಕ್ಕೆ ಯಾಕೆ ಬಂದಿದ್ದು ಎಂದು ಕೇಳಿದ್ದಕ್ಕೆ ನಿನಗೊಂದು ಗತಿ ಕಾಣಿಸುತ್ತೇನೆ ಇಲ್ಲೆ ಇರು, ಎಂದು ಹೇಳಿ ನಮ್ಮ ಜಾಗದ  ಗಡಿಯಲ್ಲಿರುವ ಶಿಲೆಕಲ್ಲು ಕಂಬವನ್ನು ಆತನ ಕೈಯಲ್ಲಿದ್ದ ಸುತ್ತಿಗೆಯಿಂದ ಒಡೆದು ಹಾಕುತ್ತಿದ್ದಾಗ  ಶ್ರೀಮತಿ ನಿರ್ಮಲ ಉಡುಪ ರವರು ಕೇಳಿದ್ದಕ್ಕೆ ಇವರನ್ನು ದೂಡಿ ಹಾಕಿದ್ದು, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ  ಅಲ್ಲಿಂದ  ಓಡಿ ಹೋಗಿದ್ದು  ಆಪಾದಿತನು ಶಿಲೆಕಲ್ಲು ಕಂಬವನ್ನು  ಒಡೆದು ಹಾಕಿದ್ದರಿಂದ  ಸುಮಾರು 5000 ರೂಪಾಯಿ ನಷ್ಟ ಉಂಟಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 123/2021 ಕಲಂ: 447,  504,427.354(B) 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-11-2021 06:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080