ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿ  ರುಕ್ಮಿಣಿ ಬಾಯಿ, (67 ) ಗಂಡ: ಶೀನ ನಾಯ್ಕ, ವಾಸ: ವಿದ್ಯಾನಗರ, 4 ನೇ ಕ್ರಾಸ್, ಚಾಂತಾರು ಗ್ರಾಮ ಬ್ರಹ್ಮಾವರ ಇವರು  ಲಕ್ಷ್ಮೀ ಎಕ್ಸಪ್ರೇಸ್ ಬಸ್ಸಿನಲ್ಲಿ ಹೊಸೂರು ಗ್ರಾಮದ ಕರ್ಜೆಗೆ ಪ್ರಯಾಣಿಸುವ ಸಮಯ ಬೆಳಿಗ್ಗೆ 11:15 ಗಂಟೆಯಿಂದ 11:45 ಗಂಟೆಯ ಮಧ್ಯಾವಧಿಯಲ್ಲಿ ಬಸ್ಸಿನಲ್ಲಿ ಯಾರೋ ಕಳ್ಳರು  ಪಿರ್ಯಾದಿದಾರರ ಕುತ್ತಿಗೆಯಲ್ಲಿ ಧರಿಸಿದ್ದ ಸುಮಾರು 32 ಗ್ರಾಂನ ಚಿನ್ನದ ಸರವನ್ನು ಕಳವು ಮಾಡಿರುವುದಾಗಿದೆ. ಸದ್ರಿ ಕಳವಾದ ಚಿನ್ನದ ಸರದ ಅಂದಾಜು ಮೌಲ್ಯ ರೂ 1,68,932/- ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಠಾಣೆ  ಅಪರಾಧ ಕ್ರಮಾಂಕ. 170/2022 ಕಲಂ : 379 ಐಪಿಸಿ ಯಂತೆ ಪ್ರಕರಣ ದಾಕಲಿಸಲಾಗಿದೆ.
 • ಕಾಪು: ಪಿರ್ಯಾದಿ ದಿನೇಶ ಡಿ. ಸಾಲಿಯಾನ್, ತಂದೆ : ದಿ. ದಯಾನಂದ ಸಾಲಿಯಾನ್ ವಾಸ : ಎರ್ಮಾಳ್ ತೆಂಕ ಕಾಪು ತಾಲ್ಲೂಕು ಇವರು ಬೆಂಗಳೂರಿನ ಎಸ್.ಎಸ್. ಪವರ್ ಸಿಸ್ಟಮ್ ಕಂಪನಿಯ ಉದ್ಯೋಗಿಯಾಗಿದ್ದು, ಕಂಪನಿಗೆ ಸಂಬಂಧಪಟ್ಟ ಬಿ.ಎಸ್.ಎನ್.ಎಲ್. ಟವರ್‌ಗೆ ಅಳವಡಿಸುವ ಜನರೇಟರ್‌ಗಳ ನಿರ್ವಹಣೆಯನ್ನು ನೋಡಿಕೊಂಡಿದ್ದು, ಪಿರ್ಯಾದಿದಾರರು ದಿನಾಂಕ 06-08-2022 ರಂದು ಪಾಂಗಾಳ ಸೈಟ್‌ಗೆ ಭೇಟಿ ನೀಡಿದಾಗ ಜನರೇಟರ್‌ಸುಸ್ಥಿತಿಯಲ್ಲಿದ್ದು,  ಬಳಿಕ ದಿನಾಂಕ 18-09-2022 ರಂದು ಎಂದಿನಂತೆ ಪಾಂಗಾಳ ಸೈಟ್‌ಗೆ ಭೇಟಿ ನೀಡಿ  ಬಿ.ಎಸ್.ಎನ್.ಎಲ್. ಟವರ್‌ಗೆ ಅಳವಡಿಸುವ ಜನರೇಟರ್‌ನ್ನು ಪರೀಶಿಲಿಸಿದಾಗ, ಜನರೇಟರ್‌ನ ಕಿರ್ಲೊಸ್ಕರ್‌ಕಂಪನಿಯ 02.2122 ಮಾದರಿಯ 15 ಕೆ.ವಿ.ಎ. ಸಾಮರ್ಥ್ಯ ಹೊಂದಿರುವ ಅಲ್ಟರ್‌ನೇಟರ್ ಎನ್ನುವ ಭಾಗವು ಕಾಣದೇ ಇದ್ದು, ಪಿರ್ಯಾದಿದಾರರು ಟವರ್‌ನ ಸುತ್ತಮುತ್ತ ಹುಡುಕಾಡಿದ್ದು, ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಸದ್ರಿ  ಅಲ್ಟರ್‌ನೇಟರ್ ಅಂದಾಜು ಮೌಲ್ಯ ರೂ.  40,000/- ಆಗಿರುತ್ತದೆ. ದಿನಾಂಕ 06-08-2022 ರಿಂದ ದಿನಾಂಕ 18-09-2022 ರ ಮಧ್ಯದಾವಧಿಯಲ್ಲಿ  ಅಲ್ಟರ್‌ನೇಟರ್‌ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ .117/2022 ಕಲಂ 379  ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಪಡುಬಿದ್ರಿ:  ಪಿರ್ಯಾದಿ ಮಾಲಿನಿ ಹೆಚ್ ಆಚಾರ್ಯ, ಪ್ರಾಯ: 48 ವರ್ಷ, ಗಂಡ: ಹರಿಶ್ಚಂದ್ರ  ಆಚಾರ್ಯ, ವಾಸ: ಮನೆ ನಂಬ್ರ: 5-36, ಕಂಪನಬೆಟ್ಟು, ಉದ್ಯಾವರ ಅಂಚೆ ಮತ್ತು ಗ್ರಾಮ. ಇವರ ಗಂಡ ಹರಿಶ್ಚಂದ್ರ ಆಚಾರ್ಯ ಎಂಬುವರು ಕಳೆದ 2 ತಿಂಗಳುಗಳಿಂದ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿಯ ಸದಾಸುಖಿ ಬಿಲ್ಡಿಂಗ್‌ನ 2 ನೇ ಮಹಡಿಯ ರೂಮ್ ನಂಬ್ರ ಸಿ-7 ರಲ್ಲಿ ಬಾಡಿಗೆಗೆ ಪಡೆದು ಬೆಳ್ಳಿ ಬಂಗಾರದ ಕೆಲಸ ಮಾಡಿಕೊಂಡಿದ್ದು, ಅಲ್ಲಿಯೇ ವಾಸವಿದ್ದು ಅಪರೂಪಕ್ಕೊಮ್ಮೆ ಮನೆಗೆ ಹೋಗಿ ಬರುತ್ತಿದ್ದರು. ಸದ್ರಿ ಹರಿಶ್ಚಂದ್ರ ಆಚಾರ್ಯ ರವರು ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದು, ಈ ಹಿಂದೆ 4-5 ಬಾರಿ ಮದ್ಯಪಾನ ಬಿಡಿಸುವ ಶಿಬಿರಕ್ಕೆ ಸೇರಿಸಿದರೂ ಮದ್ಯಪಾನ ಮಾಡುವುದನ್ನು ಬಿಟ್ಟಿರುವುದಿಲ್ಲ. ಅದರಂತೆ ನಿನ್ನೆ ದಿನ ದಿನಾಂಕ: 18.10.2022 ರಂದು 22:30 ಗಂಟೆಯಿಂದ ದಿನಾಂಕ: 19.10.2022 ರ ಬೆಳಿಗ್ಗೆ 06:30 ಗಂಟೆಯ ಮದ್ಯಾವಧಿಯಲ್ಲಿ ಅವರು ಕೆಲಸ ಮಾಡುವ ರೂಮಿನಲ್ಲಿ ವಿಪರೀತ ಮದ್ಯಪಾನ ಮಾಡಿ ಅದರ ಅಮಲಿನಲ್ಲಿ ಅಂಗಾತ ಬಿದ್ದು, ತಲೆಗೆ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯುಡಿಆರ್  ನಂಬ್ರ: 25/2022, ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಕಲಿಸಲಾಗಿದೆ.

ಮಟ್ಕಾ ಜುಗಾರಿ ಪ್ರಕರಣ

 • ಗಂಗೊಳ್ಳಿ: ಫಿರ್ಯಾದಿದಾರರಾದ ವಿನಯ್‌ಕೊರ್ಲಹಳ್ಳಿ ಪಿ.ಎಸ್.ಐ ಗಂಗೊಳ್ಳಿ ಠಾಣೆರವರು ದಿನಾಂಕ: 19-10-2022 ರಂದು ಠಾಣೆಯಲ್ಲಿರುವಾಗ ಗಂಗೊಳ್ಳಿ ಗ್ರಾಮದ ಫಿಶ್ ಮಾರ್ಕೆಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಶಂಕರ ಪೂಜಾರಿ ಎಂಬುವವರು ಅಕ್ರಮವಾಗಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಬಗ್ಗೆ ಗಂಗೊಳ್ಳಿ ಗ್ರಾಮದ ಬೀಟ್ ಸಿಬ್ಬಂದಿ ಪಿ.ಸಿ 1153 ನೇ ಸಚಿನ್ ರವರು ನೀಡಿದ ಖಚಿತ ಮಾಹಿತಿ ಮೇರೆಗೆ ಪಂಚರು ಹಾಗೂ ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ಹೋಗಿ ಮದ್ಯಾಹ್ನ 12:00 ಗಂಟೆಗೆ ಗಂಗೊಳ್ಳಿ ಫಿಶ್ ಮಾರ್ಕೆಟ್ ಸಮೀಪ ಮರೆಯಲ್ಲಿ ನಿಂತು ನೋಡಿ ಮಟ್ಕಾ ಜುಗಾರಿ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಮದ್ಯಾಹ್ನ 12:30 ಗಂಟೆಗೆ ದಾಳಿ ನಡೆಸಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಶಂಕರ ಪೂಜಾರಿ ಪ್ರಾಯ: 52 ವರ್ಷ, ತಂದೆ: ದಿ:” ಮಂಜ ಪೂಜಾರಿ, ವಾಸ: ಸಸಿಹಿತ್ಲು, ಫಿಶ್ ಮಾರ್ಕೆಟ್ ಬಳಿ, ಗಂಗೊಳ್ಳಿ ಗ್ರಾಮ, ಕುಂದಾಪುರ ತಾಲೂಕು ಇವರನ್ನು ವಶಕ್ಕೆ ಪಡೆದು ವಿಚಾರಿಸಿದಲ್ಲಿ ತಾನು ಸ್ವಂತ ಲಾಭಕ್ಕೋಸ್ಕರ ಮಟ್ಕ ಚೀಟಿ ಬರೆಯುತ್ತಿರುವುದಾಗಿ ತಿಳಿಸಿದ್ದ ಮೇರೆಗೆ  ಮಟ್ಕಾ ಜುಗಾರಿಗೆ ಬಳಸಿದ ಮಟ್ಕ ಚೀಟಿ-1, ಬಾಲ್ ಪೆನ್ನು-1 ಹಾಗೂ 675/- -ರೂ ನಗದನ್ನು ಸ್ವಾಧೀನ ಪಡಿಸಿಕೊಂಡು ಕ್ರಮ ಜರುಗಿಸಿದ್ದಾಗಿದೆ.ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 95/2021 ಕಲಂ:78(1)(3) ಕೆ.ಪಿ.ಆಕ್ಟ್  ರಂತೆ ಪ್ರಕರಣ ದಾಖಲಿಕಸಲಾಗಿದೆ.

ಇತ್ತೀಚಿನ ನವೀಕರಣ​ : 19-10-2022 06:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080