ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು:

  • ಕುಂದಾಪುರ: ದಿನಾಂಕ 18-10-2021  ರಂದು ಮಧ್ಯಾಹ್ನ ಸುಮಾರು 03:15 ಗಂಟೆಗೆ ಕುಂದಾಪುರ ಕಸಬಾ ಶಾಸ್ತ್ರೀ ಪಾರ್ಕ – ಸಂಗಂ ರಾ ಹೆ 66 ರ ಸರ್ವಿಸ್‌ ರಸ್ತೆಯಲ್ಲಿ  ಆಪಾದಿತ ಸುನೀಲ್‌  ಎಂಬವರು KA15-EA 4427 ನೇ ಸ್ಕೂಟರ್‌ ನಲ್ಲಿ  ಬಿ.ಕಾವೇರಿ  ಎಂಬವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಶಾಸ್ತ್ರೀ ಪಾರ್ಕ್‌ ಕಡೆಯಿಂದ ಸಂಗಂ  ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ  ಸವಾರಿ ಮಾಡಿಕೊಂಡು  ಬಂದು, ಶ್ರೀ ಗಣೇಶ್‌ ಆಟೋ ವರ್ಕ್ಸ್ ಎದುರಿನ ಡಾಮಾರು ರಸ್ತೆಯಲ್ಲಿನ  ಹೊಂಡವನ್ನು ತಪ್ಪಿಸಲು ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ  ಹಿಂಬದಿ ಸಹ ಸವಾರಳಾದ ಬಿ ಕಾವೇರಿಯವರು ಸ್ಕೂಟರ್‌ನಿಂದ ಡಾಮರು ರಸ್ತೆಗೆ ಜಾರಿ ಬಿದ್ದು  ತಲೆಗೆ ಗಂಬೀರ ಸ್ವರೂಪದ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮದ್ಯಾಹ್ನ 03:45 ಗಂಟೆಗೆ ಮೃತ ಪಟ್ಟಿರುವುದಾಗಿದೆ. ಈ  ಬಗ್ಗೆ  ಬಿ ನಾಗಭೂಷಣಯ್ಯ  (ಪ್ರಾಯ 71) ತಂದೆ: ದಿ. ಮಹಾಬಲೇಶ್ವರಯ್ಯ ವಾಸ: ಮೂಕ್ಕೇರಿ ಬಸ್ರೂರು ಗ್ರಾಮ ಇವರು ಕುಂದಾಪುರ ಸಂಚಾರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಠಾಣಾ ಅಪರಾಧ ಕ್ರಮಾಂಕ 81/2021 ಕಲಂ 279,304(A)ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ  17/10/2021  ರಂದು  ಸಂಜೆ ಸುಮಾರು 6:00 ಗಂಟೆಗೆ ಕುಂದಾಪುರ  ತಾಲೂಕಿನ, ಕರ್ಕುಂಜಿ ಗ್ರಾಮದ ನೇರಳಕಟ್ಟೆಯ ಗುಡ್ರಿಯ  ಚಂದ್ರಶೇಖರ ಎಂಬವರ ಅಂಗಡಿಯ ಬಳಿ ರಸ್ತೆಯಲ್ಲಿ, ಆಪಾದಿತ ಸಂಧೇಶ್‌ ನಾಯಕ್‌   ಎಂಬವರು KA20-AA-2563ನೇ TATA  ಕಂಪೆನಿಯ ಯೋಧ ವಾಹನವನ್ನು  ಕೊಲ್ಲೂರು ಕಡೆಯಿಂದ  ನೇರಳಕಟ್ಟೆ ಕಡೆಗೆ  ಅತೀವೇಗ  ಹಾಗೂ ನಿರ್ಲಕ್ಷತನದಿಂದ ಚಾಲನೆ  ಮಾಡಿಕೊಂಡು ಬಂದು, ಅದೇ ದಿಕ್ಕಿನಲ್ಲಿ ಪಿರ್ಯಾದಿದಾರರಾದ ಅಪ್ಪು ಪ್ರಾಯ  50 ವರ್ಷ ತಂದೆ : ನಂದಿ ವಾಸ: ಸೆಳೆಕೋಡು, ಕೊಡ್ಲಾಡಿ ಗ್ರಾಮ ಕುಂದಾಪುರ ಅಪ್ಪು ರವರು KA20-R-3796ನೇ  ಬೈಕಿನಲ್ಲಿ  ಅವರ ಅಳಿಯ ರಾಘವೇಂದ್ರ ರವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಸವಾರಿ  ಮಾಡಿಕೊಂಡು ಹೋಗುತ್ತಿದ್ದ  ಮೇಲ್ಕಂಡ  ಬೈಕಿಗೆ ಹಿಂದಿನಿಂದ  ಡಿಕ್ಕಿ  ಹೊಡೆದು  ಆಪಾದಿತನು ವಾಹನವನ್ನು ನಿಲ್ಲಿಸದೇ ಹೋಗಿರುತ್ತಾನೆ. ಈ  ಅಪಘಾತದಿಂದ ರಾಘವೇಂದ್ರರವರಿಗೆ ಮುಖಕ್ಕೆ, ತಲೆಗೆ, ಕೈ ಕಾಲುಗಳಿಗೆ  ತರಚಿದ ರಕ್ತಗಾಯ ಹಾಗೂ ಒಳ ನೋವು  ಉಂಟಾಗಿ ಕುಂದಾಪುರ  ಚಿನ್ಮಯಿ   ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 80/2021 ಕಲಂ 279, 337 IPC & 134 (A) & (B) IMV ACT  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣಗಳು

  • ಪಡುಬಿದ್ರಿ: ಪಿರ್ಯಾದಿ ಗಣೇಶ್ ಎನ್ ಕೋಟ್ಯಾನ್, ಪ್ರಾಯ: 47 ವರ್ಷ, ತಂದೆ: ದಿ. ನಾಗಪ್ಪ ಪೂಜಾರಿ, ವಾಸ: #6-83, ಕೋಟ್ಯಾನ್ ನಿವಾಸ, ಗುಡ್ಡೆಚ್ಚಿ, ಪಡುಬಿದ್ರಿ  ಅಂಚೆ, ನಡ್ಸಾಲು ಗ್ರಾಮದಾರರ ಇವರ ಮಗ ಚಿರಾಗ್ ಎಂಬುವವರು ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ,ಕಾಂ ವ್ಯಾಸಂಗ ಮಾಡಿಕೊಂಡಿದ್ದು, ಆತನು ಪಿರ್ಯಾದಿದಾರರ ತಮ್ಮನ  KA-20-ED-7600 ನೇ ನಂಬ್ರದ FZS  ಮೋಟಾರು ಸೈಕಲನ್ನು ಪ್ರತಿದಿನ ಮನೆಯಿಂದ ಪಡುಬಿದ್ರಿ ಪೇಟೆಗೆ ಓಡಾಡಲು ಬಳಸುತ್ತಿದ್ದು, ಸದ್ರಿ ಮೋಟಾರ್ ಸೈಕಲ್ಲನ್ನು ದಿನಾಂಕ: 08.10.2021 ರಂದು ಬೆಳಿಗ್ಗೆ. 08:15 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿ ಪೇಟೆಯ ಅಪೊಲೋ ಮೆಡಿಕಲ್‌‌ ನ ಹಿಂಭಾಗದಲ್ಲಿ ನಿಲ್ಲಿಸಿ, ಕಾಲೇಜಿಗೆ ಹೋಗಿದ್ದು, ನಂತರ ಸಂಜೆ.18:30 ಗಂಟೆಗೆ ಬಸ್ಸಿನಲ್ಲಿ ವಾಪಸ್ಸು ಪಡುಬಿದ್ರಿಗೆ ಬಂದು ನೋಡಿದಾಗ ಬೈಕ್ ಕಾಣದೇ ಇದ್ದು, ಯಾರೋ ಕಳ್ಳರು ದಿನಾಂಕ:  08.10.2021 ರಂದು 08:15 ಗಂಟೆಯಿಂದ 18:30 ಗಂಟೆಯ ಮಧ್ಯಾವಧಿಯಲ್ಲಿ KA-20-ED-7600 ನೇ ನಂಬ್ರದ FZS  ನೇ ನಂಬ್ರದ ಮೋಟಾರು ಸೈಕಲ್ ಕಳವು ಮಾಡಿಕೊಂಡು ಹೋಗಿದ್ದು, ಕಳುವಾದ ಮೋಟಾರು ಸೈಕಲ್ ನ ಅಂದಾಜು ಮೌಲ್ಯ ರೂ 25,000/- ಆಗಿದ್ದು ಅದನ್ನು ಪತ್ತೆ ಹಚ್ಚಿಕೊಡಬೇಕು ಎಂಬಿತ್ಯಾದಿಯಾಗಿದ್ದು, ಪಿರ್ಯಾದಿದಾರರ ಮಗ 10 ದಿನಗಳ ಎನ್‌.ಎಸ್.ಎಸ್. ಕ್ಯಾಂಪ್‌ಗೆ ಹೋಗಿದ್ದು, ಕಳುವಾದ ಬೈಕನ್ನು ಹುಡುಕಾಡಿ ಪತ್ತೆಯಾಗದೇ ಇರುವುದರಿಂದ ದೂರು ನೀಡಲು ವಿಳಂಬವಾಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 99/2021 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 ಇತರ ಪ್ರಕರಣಗಳು

  • ಶಿರ್ವ: ದಿನಾಂಕ 18/10/2021  ರಂದು  ಬೆ.13.30 ಘಂಟೆಗೆ  ಫಿರ್ಯಾದುದಾರ ಪಿಎಸ್‌ಐ, ಶಿರ್ವ ಪೊಲೀಸ್ ಠಾಣೆ ಇವರಿಗೆ  ಸಿಕ್ಕಿದ  ಖಚಿತ  ಮಾಹಿತಿಯಂತೆ ಕಾಪು ತಾಲೂಕಿನ  ಬೆಳ್ಳೆ   ಗ್ರಾಮದ  ಮೂಡುಬೆಳ್ಳೆ ಪಂಚಾಯತ್ ನ ಸಂತೆ ಮೈದಾನದ ಬಳಿ ಇರುವ  ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಲಕ್ಷ್ಮಣ ಚೌಧರಿ,  ಪ್ರಾಯ 37 ವರ್ಷ ತಂದೆ, ದಿ/ ಚಂದ್ರಪ್ಪ,ಖಾಯಂ ವಾಸ:ತೋಟದ ಮನೆ, ಕಮ್ಮತ್ತಿಗೆ ಗ್ರಾಮ ಮತ್ತು ಅಂಚೆ ಹುನಗುಂದ  ತಾಲೂಕು,ಬಾಗಲಕೋಟೆ ಜಿಲ್ಲೆ. ಹಾಲಿ ವಾಸ: ಹನುಮಾನ್ ಗ್ಯಾರೇಜ್ ಬಳಿ ಚಿಟ್ಪಾಡಿ , ಉಡುಪಿ ತಾಲೂಕು ಮತ್ತು ಜಿಲ್ಲೆ ಈತನು ತಿಳಿಸಿದಂತೆ  ಸ್ವಂತ ಲಾಭಕ್ಕಾಗಿ  ಸಾರ್ವಜನಿಕರನ್ನು ಗುಂಪುಗೂಡಿಸಿಕೊಂಡು  1 ರೂಪಾಯಿಗೆ 70 ರೂಪಾಯಿ ನೀಡುವುದಾಗಿ  ಹೇಳಿ  ಮಟ್ಕಾ  ಜುಗಾರಿ ಆಟದ  ಬಗ್ಗೆ ಹಣ  ಸಂಗ್ರಹ ಮಾಡುತ್ತಿದ್ದಾಗ ದಾಳಿ ನಡೆಸಿ  ಮಟ್ಕಾ ಜುಗಾರಿ ಆಟದ ಬಗ್ಗೆ  ಸಂಗ್ರಹ ಮಾಡಿದ ನಗದು   ಹಣ 2500/- ಮಟ್ಕಾ ಚೀಟಿ   ಹಾಗೂ ಬಾಲ್‌ ಪೆನ್‌‌ -1  ನ್ನು ಮುಂದಿನ ಕ್ರಮದ ಬಗ್ಗೆ  ಸ್ವಾದೀನಪಡಿಸಿಕೊಂಡಿರುತ್ತಾರೆ.ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 57/2021 U/S 78(I)(III) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವ:  ದಿನಾಂಕ 18/10/2021 ರಂದು  ಬೆ.11.30 ಘಂಟೆಗೆ  ಪಿಎಸ್‌ಐ, ಶಿರ್ವ ಪೊಲೀಸ್ ಠಾಣೆ ಇವರಿಗೆ ಸಿಕ್ಕಿದ  ಖಚಿತ  ಮಾಹಿತಿಯಂತೆ ಕಾಪು ತಾಲೂಕಿನ  ಶಿರ್ವ  ಗ್ರಾಮದ  ಶಿರ್ವ ಪಂಚಾಯತ್ ನ ಹಿಂದುಗಡೆಯಿರುವ  ಬಳಿ ಇರುವ  ಸಾರ್ವಜನಿಕ ಸ್ಥಳದಲ್ಲಿ ಆರೋಪಿಯು ತಿಳಿಸಿದಂತೆ  ಕಮೀಷನ್  ಆಸೆಗಾಗಿ 1 ಆರೋಪಿ ದೇವಿಪ್ರಸಾದ್ ಶೆಟ್ಟಿ, ಪ್ರಾಯ 42 ವರ್ಷ ತಂದೆ, ಶಂಭು ಶೆಟ್ಟಿ, ವಾಸ, ಕುಸುಮಾ ನಿವಾಸ, ಕುಡ್ತಮಜಲು, ಶಿರ್ವಾ ಗ್ರಾಮ ಮತ್ತು ಅಂಚೆ ಕಾಪು ತಾಲೂಕು ಇವನು ಸಾರ್ವಜನಿಕರನ್ನು ಗುಂಪುಗೂಡಿಸಿಕೊಂಡು  1 ರೂಪಾಯಿಗೆ 70 ರೂಪಾಯಿ ನೀಡುವುದಾಗಿ  ಹೇಳಿ  ಮಟ್ಕಾ  ಜುಗಾರಿ ಆಟದ  ಬಗ್ಗೆ ಹಣ  ಸಂಗ್ರಹ ಮಾಡುತ್ತಿದ್ದಾಗ ದಾಳಿ ನಡೆಯಿಸಿ  ಮಟ್ಕಾ ಜುಗಾರಿ ಆಟದ   ಬಗ್ಗೆ  ಸಂಗ್ರಹ ಮಾಡಿದ ನಗದು   ಹಣ 2200/- ಮಟ್ಕಾ ಚೀಟಿ   ಹಾಗೂ ಬಾಲ್‌ ಪೆನ್‌‌ -1  ನ್ನು ಮುಂದಿನ ಕ್ರಮದ ಬಗ್ಗೆ  ಸ್ವಾದೀನಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 56/2021 U/S 78(I)(III) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-10-2021 10:14 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080