ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಕೊಲ್ಲೂರು: ಪಿರ್ಯಾದಿದಾರರಾದ ಸುಕೇಶ್ ಶೆಟ್ಟಿ(37) ,ತಂದೆ: ಶಿವರಾಮ ಶೆಟ್ಟಿ, ವಾಸ: ಯಡೇರಿ ಹೊಸಮನೆ ಕಾಲ್ತೋಡ್ ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 18/10/2021 ರಂದು ಸಂಜೆ 6:00 ಗಂಟೆಗೆ ತನ್ನ ಬಾವ ಸಂತೋಷ್ ಶೆಟ್ಟಿ ಎಂಬವವರೊಂದಿಗೆ ತಾತ್ಕಾಲಿಕ ನೊಂದಾಣಿ ಸಂಖ್ಯೆ: T09211KA1897AV ಚಾಸೀಸ್ ನಂಬ್ರ ME4KL401GMG000634ನೇ ಹೋಡಾ ಯುನಿಕಾರ್ನ್ ಮೋಟಾರ್ ಸೈಕಲ್ ನಲ್ಲಿ ಹಿಂಬದಿ ಸವಾರನಾಗಿ ಕುಳಿತುಕೊಂಡು ಕಾಲ್ತೋಡ್ ನಿಂದ ಮಾರಣಕಟ್ಟೆಗೆ ಕಡೆಗೆ ಹೋಗುತ್ತಿದ್ದಾಗ ಆರೋಪಿ ಸಂತೋಷ್ ಮೋಟಾರ್ ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಬೈಂದೂರು ತಾಲೂಕು ಜಡ್ಕಲ್ ಗ್ರಾಮದ ಹಾಲ್ಕಲ್ ರಬ್ಬರ್ ತೋಟದ ಸಮೀಪ ತಿರುವು ರಸ್ತೆಯಲ್ಲಿ ಎದುರಿನಿಂದ ಬರುವ ವಾಹನ ನೋಡಿ ಗಲಿಬಿಲಿಗೊಂಡು ಮೋಟಾರ್ ಸೈಕಲ್ ನ ವೇಗ ನಿಯಂತ್ರಿಸಲಾಗದೇ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಹತೋಟಿ ತಪ್ಪಿ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಎಡ ಕಾಲು ಮುಂಗಾಲು ಒಳನೋವು ಉಂಟಾಗಿ ಹಾಗೂ ಎಡಕೈ ಮುಂಗೈ ಬಳಿ ತರಚಿತ ಗಾಯಾವಾಗಿದ್ದು ಹಾಗೂ ಆರೋಪಿಗೂ ಸಣ್ಣಪುಟ್ಟ ರಕ್ತಗಾಯವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 36/2021 ಕಲಂ: 279 , 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

  • ಮಣಿಪಾಲ: ಪಿರ್ಯಾದಿದಾರರಾದ ಪುಷ್ಪಲತಾ (41), ತಂದೆ: ದೇವೇಂದ್ರ ನಾಯ್ಕ್ ,ವಾಸ: ಹೈ ಪಾಯಿಂಟ್ ಬಳಿ, ಸರಳಬೆಟ್ಟು, ಹೆಗ್ರಾ ಗ್ರಾಮ, ಉಡುಪಿ ಜಿಲ್ಲೆ ಇವರ ಗಂಡ ದೇವೇಂದ್ರ ನಾಯ್ಕ್ (48)ರವರು ಉಬ್ಬಸ ಕಾಯಿಲೆ ಹಾಗೂ ಕಾಲು ನೋವಿನಿಂದ ಬಳಲುತ್ತಿದ್ದು ಈ ಬಗ್ಗೆ ಔಷದಿಯನ್ನು ಸೇವಿಸುತ್ತಿದ್ದರು, ದಿನಾಂಕ 18/10/2021 ರಂದು ರಾತ್ರಿ 07:40 ಗಂಟೆಗೆ ಕಾಲು ನೋವಿನ ಔಷದಿಯನ್ನು ಸೇವಿಸಿ TV ನೋಡುತ್ತಿದ್ದಾಗ ಮೂರ್ಛೆ ತಪ್ಪಿ ಅಸೌಖ್ಯಗೊಂಡವರನ್ನು ಉಪಚರಿಸಿ ರಾತ್ರಿ 10:00 ಗಂಟೆ ಸಮಯಕ್ಕೆ ಚಿಕಿತ್ಸೆ ಬಗ್ಗೆ ಮಣಿಪಾಲ KMC ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ದೇವೆಂದ್ರ ನಾಯ್ಕ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 36/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ನಾಗರಾಜ(40) ಇವರು 12 ವರ್ಷದ ಹಿಂದೆ ಪಿರ್ಯಾದಿದಾರರಾದ ಶ್ರೀಮತಿ ಮಮತಾ (34), ತಂದೆ: ನಾಗರಾಜ , ವಾಸ: ವಿವೇಕನಗರ 5 ಸೆಂಟ್ಸು ಮುಡಬಗೆ ಅಂಪಾರು ಗ್ರಾಮ ಕುಂದಾಪುರ ತಾಲೂಕು ಇವರನ್ನು ಮದುವೆ ಆಗಿ ಹೆಂಡತಿಯ ಮನೆಯಾದ ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಮೂಡಬಗ್ಗೆ ವಿವೇಕನಗರದ 5 ಸೆಂಟ್ಸು ಎಂಬಲ್ಲಿ ವಾಸವಾಗಿರುತ್ತಾರೆ. ನಾಗರಾಜ ಇವರಿಗೆ ವಿಪರೀತ ಶರಾಬು ಕುಡಿಯುವ ಚಟ ಹೊಂದಿದ್ದು, ಶರಾಬು ಕುಡಿದು ಯಾವಾಗಲೂ ಗಲಾಟೆ ಮಾಡುತ್ತಿದ್ದವರು, ಈ ವಿಷಯದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 18/10/2021 ರಂದು 20:30 ಗಂಟೆಯಿಂದ ದಿನಾಂಕ 19/10/2021 ರಂದು 6:00 ಗಂಟೆಯ ಮಧ್ಯದ ಅವಧಿಯಲ್ಲಿ ಅವರ ವಾಸದ ಮನೆಯ ಒಳಗಡೆ ಮನೆಯ ಜಂತಿಗೆ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 39/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ 

  • ಹೆಬ್ರಿ: ಫಿರ್ಯಾದಿದಾರರಾದ ಉಮೇಶ ನಾಯ್ಕ(39), ತಂದೆ: ವೆಂಕಟೇಶ ನಾಯ್ಕ ,ವಾಸ: ರುಕ್ಮನಿವಾಸ ವರಂಗ ವರಂಗ ಗ್ರಾಮ ಹೆಬ್ರಿ ತಾಲೂಕು ಇವರು ತನ್ನ ಸ್ನೇಹಿತ ದಿನೇಶ್ ರವರೊಂದಿಗೆ ದಿನಾಂಕ 18/10/2021 ರಂದು ರಾತ್ರಿ 9:30 ಗಂಟೆಗೆ ಮುನಿಯಲ್ ಬಾರ್ ಗೆ ಊಟ ಮಾಡಲು ಹೋಗಿ ವಾಪಾಸು ರಾತ್ರಿ 11:30 ಗಂಟೆಗೆ ವರಂಗದಲ್ಲಿರುವ ತನ್ನ ಮನೆಗೆ ಬಂದಾಗ ಯಾರೋ ಕಳ್ಳರು ಮನೆಯ ಹಿಂದಿನ ಬಾಗಿಲಿನ ಮರದ ಚಿಲಕವನ್ನು ಮುರಿದು ಮನೆಯ ಒಳಗೆ ಹೋಗಿ ಗ್ರೋಡೇಜ್ ನಲ್ಲಿರಿಸಿದ ನಗದು ಮತ್ತು ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು. ಕಳವು ಅದ ಸೊತ್ತುಗಳ ಮೌಲ್ಯ 1,40,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 62/2021 ಕಲಂ: 457,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 19-10-2021 06:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080