ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಗಂಗೊಳ್ಳಿ: ದಿನಾಂಕ: 19/09/2022 ರಂದು ನಾಡ ಕಡೆಯಿಂದ ತ್ರಾಸಿ ಕಡೆಗೆ KA.20.M.4837 ನೇ ಮಾರುತಿ ಓಮಿನಿ ಕಾರಿನಲ್ಲಿ ಕಾನೂನು ಬಾಹಿರವಾಗಿ ಅಕ್ರಮ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಸಾಗಾಟ ಮಾಡುತ್ತಿರುವುದಾಗಿ ಪಿರ್ಯಾದಿ ಸುರೇಶ್ ಹೆಚ್‌.ಎಸ್‌, ಆಹಾರ ನಿರೀಕ್ಷರು ಕುಂದಾಪುರ ಇವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಗಂಗೊಳ್ಳಿ ಪೊಲೀಸ್ ಠಾಣಾ ಸಿಬ್ಬಂದಿಯವರೊಂದಿಗೆ  ಪಿರ್ಯಾದಿದಾರರು ಕುಂದಾಪುರ ತಾಲೂಕು, ತ್ರಾಸಿ ಗ್ರಾಮದ ಮೋವಾಡಿ ಗಾಣದಮಕ್ಕಿ ಕ್ರಾಸ್ ಬಳಿ,  ಕಾದು  ಕುಳಿತಿರುವಾಗ ಸಮಯ ಸುಮಾರು  09:30 ಗಂಟೆಗೆ ನಾಡ ಕಡೆಯಿಂದ ತ್ರಾಸಿ ಕಡೆಗೆ ಒಂದು ಮಾರುತಿ ಓಮಿನಿ ಕಾರು ಬಂದಿದ್ದು ತಡೆದು ನಿಲ್ಲಿಸಿ  ಪರಿಶೀಲಿಸಿದಾಗ ಮಾರುತಿ ಓಮಿನಿ ವಾಹನದಲ್ಲಿ ಒಟ್ಟು 14 ಚೀಲಗಳಲ್ಲಿ ತುಂಬಿದ್ದ 700 ಕೆ.ಜಿ ಬೆಳ್ತಿಗೆ ಅಕ್ಕಿ ಸುಮಾರು 15,400/ರೂ ಮೌಲ್ಯ ದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಯಾರಿಂದಲೋ ಖರೀದಿಸಿ ಹೆಚ್ಚಿನ ಬೆಲೆಗೆ ಅಂಗಡಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದು ಕಂಡುಬಂದಿರುತ್ತದೆ, ಸದ್ರಿ ಅಕ್ಕಿ, ಹಾಗೂ ವಾಹನ ವನ್ನು ಸ್ವಾಧೀನಪಡಿಸಿಕೊಂಡು. ಆಪಾದಿತರಾದ 1) ಕೋಡಿ ಅಶ್ರಪ್ ಬ್ಯಾರಿ, 2) ರಜಬ್ ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದು ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 89/2022 ಕಲಂ 3, 6, 7 ಅವಶ್ಯಕ ವಸ್ತುಗಳ ಅಧಿನಿಯಮ ಕಾಯ್ದೆ-1995 ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ ‌

  • ಪಡುಬಿದ್ರಿ: ಪಿರ್ಯಾದಿ ಸುಲೋಚನ ಇವರ ತಮ್ಮ ಭಾಸ್ಕರ ಪೂಜಾರಿ(37) ಎಂಬುವರು ಎರಡೂ ಕಾಲುಗಳ ನರಕ್ಕೆ ಸಂಬಂಧಿಸಿದ ವೆರಿಕೋಸ್ ಖಾಯಿಲೆಯಿಂದ ಬಳಲುತ್ತಿದ್ದು, ಈ ಹಿಂದೆ ಎರಡು ಸಲ ನರ ಒಡೆದು ರಕ್ತಸ್ರಾವ ಉಂಟಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದವರು, ಕಳೆದ ಮೂರು ವರ್ಷಗಳಿಂದ ಕಾಪು ತಾಲೂಕು ನಂದಿಕೂರು ಗ್ರಾಮ ಅಡ್ವೆಯ ನವೀನ್‌ ‌ಚಂದ್ರ ಸುವರ್ಣ ರವರ ಮಾಲೀಕತ್ವದ ಬಾರಿನಲ್ಲಿ ಕ್ಲೀನಿಂಗ್ ಕೆಲಸ ಮಾಡಿಕೊಂಡಿದ್ದು, ದಿನಾಂಕ: 18.09.2022 ರಂದು ರಾತ್ರಿ ಕೆಲಸ ಮುಗಿಸಿ 23:30 ಗಂಟೆಗೆ ಮಲಗಿದ್ದು, ನಂತರ ಮೂತ್ರ ಶಂಕೆಗೆ ಅಡ್ವೆ ಬಾರಿನಲ್ಲಿರುವ ಶೌಚಾಲಯಕ್ಕೆ ಹೋಗಿದ್ದ ಸಮಯ ಆತನ ಕಾಲಿನ ನರ ಒಡೆದು ರಕ್ತ ಸ್ರಾವ ಉಂಟಾಗಿದ್ದು, ಈ ಸಮಯ ಯಾರೂ ನೋಡದೇ ಇದ್ದುದ್ದರಿಂದ ನಿತ್ರಾಣಗೊಂಡಿದ್ದು, ದಿನಾಂಕ: 19.09.2022 ರಂದು 01:45 ಗಂಟೆಗೆ ಅವರ ಜೊತೆ ಕೆಲಸ ಮಾಡುವ ಕೇಶವ ಎಂಬುವರು ನೋಡಿದ್ದು, ನಂತರ ಭಾಸ್ಕರ ಪೂಜಾರಿಯವರನ್ನು ಚಿಕಿತ್ಸೆಯ ಬಗ್ಗೆ ರಾತ್ರಿ 02:15 ಗಂಟೆಗೆ ಮುಕ್ಕಾ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಭಾಸ್ಕರ ಪೂಜಾರಿ ಯವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಯು.ಡಿ.ಆರ್ 21/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಬೈಂದೂರು: ಫಿರ್ಯಾದಿ ನಿತೀನ್ ಶೆಟ್ಟಿ ಇವರ ಅಣ್ಣನಾದ  ರಾಘವೇಂದ್ರ ಶೆಟ್ಟಿ  ಪ್ರಾಯ: 37 ವರ್ಷ ರವರು ಕಾಲ್ತೋಡು ಗ್ರಾಮದ ಕಬ್ಸೆ  ಬಾಳೆಹಿತ್ಲು ಮನೆ ಎಂಬಲ್ಲಿ ಫಿರ್ಯಾದುದಾರರ ಜೊತೆಯಲ್ಲಿ ವಾಸ ಮಾಡಿಕೊಂಡಿದ್ದು ಬೈಂದೂರಿನಲ್ಲಿ ಹೋಟೆಲ್ ವ್ಯವಹಾರ ಮಾಡಿಕೊಂಡಿರುತ್ತಾರೆ. ರಾಘವೇಂದ್ರ ಶೆಟ್ಟಿಯವರು ದಿನಾಂಕ 18/09/2022 ರಂದು  ಬೆಳಿಗ್ಗೆ 8:30 ಗಂಟೆಗೆ ಮನೆಯಿಂದ ಹೊಟೇಲ್ ಗೆ ಹೊರಡುವಾಗ  ನಾನು ರಾತ್ರಿ ಹೋಟೆಲ್  ನಲ್ಲಿಯೇ  ಉಳಿದುಕೊಳ್ಳುವುದಾಗಿ ಮನೆಗೆ ಬರುವುದಿಲ್ಲವಾಗಿ ಹೇಳಿ ಹೋಗಿರುತ್ತಾರೆ. ಈ ದಿನ ದಿನಾಂಕ 19/09/2022 ರಂದು ಬೆಳಿಗ್ಗೆ 7:30 ಗಂಟೆಗೆ ಫಿರ್ಯಾದುದಾರರಿಗೆ ನೆರೆಮನೆಯ ಸತೀಶ ಶೆಟ್ಟಿ ರವರು ಕರೆ ಮಾಡಿ  ರಾಘವೇಂದ್ರ ಶೆಟ್ಟಿಯವರು ಕಾಲ್ತೋಡು ಗ್ರಾಮದ ಕಬ್ಸೆ ಅನು ಕೋಳಿಫಾರ್ಮ ಹತ್ತಿರದ  ಹಾಡಿಯಲ್ಲಿ. ಗೇರುಮರಕ್ಕೆ ನೇಣು ಬಿಗಿದುಕೊಂಡಿರುವ ಬಗ್ಗೆ ಮಾಹಿತಿ ನೀಡಿದ ಮೇರೆಗೆ ಫಿರ್ಯಾದುದಾರರು ಸ್ಥಳಕ್ಕೆ  ಬಂದು  ನೋಡಿದಲ್ಲಿ  ರಾಘವೇಂದ್ರ ಶೆಟ್ಟಿಯವರು ಗೇರು ಮರಕ್ಕೆ ನೈಲಾನ್ ರೋಪ್ ಕಟ್ಟಿ ಕುತ್ತಿಗೆಗೆ ನೇಣುಬಿಗಿದುಕೊಂಡು ನೇತಾಡುತ್ತಿರುವುದು ಕಂಡು ಫಿರ್ಯಾದುದಾರರು ಹಾಗೂ ಇತರರು ನೇಣಿನಿಂದ  ಕೆಳಗೆ ಇಳಿಸಿ ನೋಡಿದಲ್ಲಿ ರಾಘವೇಂದ್ರ ಶೆಟ್ಟಿ ರವರು ಮೃತಪಟ್ಟಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯು.ಡಿ.ಆರ್ 52/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 19-09-2022 05:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080