ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಸಂತೋಷ (27), ತಂದೆ: ಗಣಪು ಮೊಗವೀರ, ವಾಸ: ಪ್ರತಿಮ ನಿಲಯ, ಶಂಕರನಾರಾಯಣ ಗ್ರಾಮ ಅಂಚೆ ಕುಂದಾಪುರ ತಾಲೂಕು ಇವರ ತಾಯಿಯ ತಂದೆ ತಿಮ್ಮ ದೇವಾಡಿಗ (85) ಇವರಿಗೆ ಮೂರು ವರ್ಷದಿಂದ ಗಂಟಲು ಕ್ಯಾನ್ಸರ್ ಖಾಯಿಲೆ ಇದ್ದು,  ಇದೇ ಕಾರಣದಿಂದ ಜೀವನದಲ್ಲಿ ಜೀಗುಪ್ಸೆ ಗೊಂಡು ಮನೆಯ ಎದುರಿನ ದನದ ಕೊಟ್ಟಿಗೆಯಲ್ಲಿ ತನ್ನ ಲುಂಗಿಯನ್ನು ಹರಿದು ಹಗ್ಗವನ್ನು ಮಾಡಿಕೊಂಡು ಸಂಜೆ 16:00 ಗಂಟೆಯಿಂದ 18:00 ಗಂಟೆಯ ಮಧ್ಯಾವಧಿಯಲ್ಲಿ ಕುಂದಾಪುರ ತಾಲೂಕು ಶಂಕರನಾರಾಯಣ ಗ್ರಾಮ ಯಡಮಕ್ಕಿ ಎಂಬಲ್ಲಿ ಇರುವ ಮನೆಯ ಎದುರು ಇರುವ ದನದ ಕೊಟ್ಟಿಗೆ ಮಾಡಿನ  ಮರದ ಅಡ್ಡೆಗೆ ಕುತ್ತಿಗೆಗೆ ನೇಣುಬಿಗಿದು ಕೊಂಡು ಅತ್ಮ ಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 31/2022  ಕಲಂ: 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕುಂದಾಪುರ: ದಿನಾಂಕ 17/09/2022 ರಂದು ರಾತ್ರಿ 08:00 ಗಂಟೆಯಿಂದ  ದಿನಾಂಕ 18/09/2022 ರಂದು ರಾತ್ರಿ ವೇಳೆಯಲ್ಲಿ ಕುಂದಾಪುರ ತಾಲೂಕು ಕೋಟೆಶ್ವರ ಗ್ರಾಮದ ಕಾಮತ್ ಪೆಟ್ರೋಲ್ ಪಂಪ್  ಎದುರಿನ ಬೊಬ್ಬರ್ಯ ದೇವಸ್ಥಾನ ಬಳಿ ಇರುವ ಬೀಗ ಹಾಕಿದ್ದ ಪಿರ್ಯಾದಿದಾರರಾದ ಪ್ರಸನ್ನ ನಾರಾಯಣ ಆಚಾರ್ಯ(47), ತಂದೆ: ನಾರಾಯಣ ಕೃಷ್ಣ ಆಚಾರ್ಯ, ವಾಸ: “ಸಿರಿದೇವಿ”, ಬೊಬ್ಬರ್ಯ ದೇವಸ್ಥಾನದ ಬಳಿ, ಸಾಗರ ರಸ್ತೆ, ಕಾಮತ್ ಪೆಟ್ರೋಲ್ ಬಂಕ್ ಎದುರು, ಕೋಟೆಶ್ವರಗ್ರಾಮ, ಕುಂದಾಪುರ ತಾಲೂಕು ಇವರ ವಾಸ್ತವ್ಯದ ಮನೆಯ ಎದುರಿನ ಬಾಗಿಲನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ  ಮೀಟಿ ತೆರೆದು ಒಳಪ್ರವೇಶಿಸಿ ಮನೆಯ ಬೆಡ್ ರೂಂ ನ ಪ್ಲೈವುಡ್ ಕಪಾಟಿನ ಚಿಲಕವನ್ನು ಮೀಟಿ ತೆಗೆದು ಅದರೊಳಗಿದ್ದ,  64 ಗ್ರಾಂ ತೂಕದ ಚಿನ್ನದ  ಲಕ್ಷ್ಮೀ ಹಾರ  , 12 ಗ್ರಾಂ ತೂಕದ  ಬ್ರೇಸ್ಲೇಟ್ , ಬೆಳ್ಳಿಯ   ಲೋಟ-4, ಬೆಳ್ಳಿಯ  ಚಮಚ -4  ಹಾಗೂ ನಗದು ರೂ 12,000/-   ಸೇರಿ ಒಟ್ಟು ರೂಪಾಯಿ 3,66,000/- ಮೌಲ್ಯದ ಸ್ವತ್ತುಗಳನ್ನು  ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 104/2022 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಗುರುರಾಜ್ ಕುಲಾಲ್  (40), ತಂದೆ: ಬಾಡು ಕುಲಾಲ್, ವಾಸ: ದುರ್ಗಾಪರಮೇಶ್ವರಿ ಬೇರ್ಮಕ್ಕಿ ಯಡಾಡಿ ಮತ್ಯಾಡಿ ಅಂಚೆ ಮತ್ತು ಗ್ರಾಮ, ಕುಂದಾಪುರ ತಾಲೂಕು ಇವರು  ದಿನಾಂಕ 17/09/2022 ರಂದು ಮರದ ವ್ಯವಹಾರದ ಕೆಲಸ ಮುಗಿಸಿ ತನ್ನ ಪಿಕ್ ಅಫ್  ವಾಹನ ನಂಬ್ರ KA-18-7175 ರಲ್ಲಿ ಬಂದು ಮನೆಯ ಅಂಗಳದಲ್ಲಿ  ಮೇಲಕ್ಕೆ ಶೆಡ್ ಬಳಿ ರಾತ್ರಿ 9:30 ಗಂಟೆಗೆ ಬಂದಾಗ  ಪಿರ್ಯಾದಿದಾರರ ತಮ್ಮ ದೇವರಾಜ್ ಮತ್ತು ಬಾವ ಪ್ರಕಾಶ್ ಕುಲಾಲ್ ಶೆಡ್ ಬಳಿ ಬಂದು  ಅಂಗಳಕ್ಕೆ ಬಂದು ವಾಹನ ತಿರುಗಿಸಿದ್ದು ಯಾಕೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಅವರು  ತೆಗೆದುಕೊಂಡು ಬಂದ ಕಬ್ಬಿಣದ ಪಟ್ಟಿಯಿಂದ ಪಿಕ್ ಅಫ್ ವಾಹನದ ಚಾಲಕನು ಕುಳಿತುಕೊಳ್ಳುವ  ಬಲಬದಿಯ ಗ್ಲಾಸ್ ಒಡೆದು  ನಂತರ ಬಾಗಿಲು ತೆರೆದು ಪಿರ್ಯಾದಿದಾರರನ್ನು ಹೊರಗೆ ಎಳೆದು ಕಬ್ಬಿಣದ ಪಟ್ಟಿಯಿಂದ ತಲೆ, ಮುಖ ಎಲ್ಲೆಂದರಲ್ಲಿ ಹೊಡೆದು ಕಾಲಿನಿಂದ ತುಳಿದಿರುತ್ತಾರೆ. ಪಿರ್ಯಾದಿದಾರರ ಮುಖ, ಮೂಗು,ಹಣೆಗೆ ರಕ್ತಗಾಯವಾಗಿ ರಕ್ತ ಸುರಿಯುತ್ತಿದ್ದು ಕೂಡಲೇ ತಮ್ಮ ರವಿರಾಜ್ ರಿಗೆ ಫೋನ್ ಮಾಡಿ ನೆರೆಮನೆಯ ನಾಗರಾಜ್ ರವರ ಜೊತೆ ಬಂದು ಪಿರ್ಯಾದಿದಾರರನ್ನು ಒಂದು ವಾಹನದಲ್ಲಿ ಬ್ರಹ್ಮಾವರ  ಪ್ರಣವ್  ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲು ಮಾಡಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 148/2022 ಕಲಂ: 323, 324,504 , 427 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ಪಿರ್ಯಾದಿದಾರರಾದ ಶ್ರೀಮತಿ. ಶಾಂತಿ ಡೇಸಾ (50), ಗಂಡ: ವಿನ್ಸೆಂಟ್  ಡೇಸಾ,  ವಾಸ: ಸಂತ ಜೊಸೇಪರ  ಕಾಲೋನಿ  ಗುಮ್ಮಹೊಲ ಬೆಳ್ವೆ  ಗ್ರಾಮ  ಹೆಬ್ರಿ ತಾಲೂಕು ಹಾಗೂ ಊರಿನ  ಕೈಸ್ತ ಧರ್ಮದವರು ಹೆಬ್ರಿ ತಾಲೂಕಿನ  ಬೆಳ್ವೆ  ಗ್ರಾಮದ  ಗುಮ್ಮಹೊಲ ಎಂಬಲ್ಲಿ ಇರುವ  ಸಂತ  ಜೊಸೇಪರ  ಚರ್ಚಿನಲ್ಲಿ  ಪ್ರಾರ್ಥನೆ   ಮಾಡುತ್ತಾರೆ, 3  ನೇ  ಆರೋಪಿ ಅಲೆಕ್ಸಾಂಡರ್  ಲೂಯಿಸ್  , ಚರ್ಚನ   ಧರ್ಮಗುರು  ಆಗಿದ್ದು  ಆತನು  ಭಕ್ತರೊಂದಿಗೆ   ಯಾವಾಗಲೂ  ವಿನಾಕಾರಣ  ಜಗಳ  ಮಾಡುತ್ತಿರುವ  ಕಾರಣ  ಅವರೊಳಗೆ   ಮನಸ್ತಾಪ  ಇರುತ್ತದೆ,  ಅದರಂತೆ  ದಿನಾಂಕ   08/09/2022  ಹಾಗೂ ದಿನಾಂಕ 11/09/2022  ರಂದು  ಚರ್ಚನಲ್ಲಿ  ನಡೆದ  ಪ್ರಾರ್ಥನೆ ಸಮಯ  3  ನೇ  ಆರೋಪಿ  ಪ್ರಾರ್ಥನೆ  ಹಾಳು   ಮಾಡಿ  ಭಕ್ತರಿಗೆ  ಬೆದರಿಕೆ    ಹಾಕಿ   ಹೋಗಿರುತ್ತಾನೆ, ಆ ನಂತರ  ಈ  ದಿನ  ದಿನಾಂಕ   18/09/2022  ರಂದು ಬೆಳಿಗ್ಗೆ  8:00  ಗಂಟೆಗೆ  ಭಕ್ತಾಧಿಗಳು  ಪ್ರಾರ್ಥನೆ   ಮಾಡಲು  ಬಂದಾಗ  ಧರ್ಮಗುರುಗಳು  ಇಲ್ಲದೆ  ಇದ್ದು,  ಆ  ಸಮಯದಲ್ಲಿ ಆನಲೈನ್ ಮೂಲಕ  ಪ್ರಾರ್ಥನೆ   ಮಾಡಿರುತ್ತಾರೆ, ಆ ಬಳಿಕ ಪಿರ್ಯಾದಿದಾರರು ಹಾಗೂ  ಅವರೊಂದಿಗೆ  ಬಂದ  ಪ್ರಿಯಾ ಡಿ’ಸೋಜಾ ಹಾಗೂ  ಸ್ಯಾಂಡ್ರಾ   ಎಂಬುವವರು  ಚರ್ಚನ   ಬಳಿ  ಇರುವ   ಹಾಸ್ಟೆಲ್‌ಗೆ   ನೀರು  ಕುಡಿಯಲು  ಹೋದಾಗ ಆರೋಪಿ 1) ಪ್ರವೀಣ, 2) ಪ್ರವೀಣನ  ತಂದೆ ಇವರು   3  ನೇ  ಆರೋಪಿಯ   ಪ್ರಚೋದನೆಯಿಂದ  ಹಾಸ್ಟೇಲ್  ಒಳಗಡೆ ಬರಬೇಡಿ  ಗುಮ್ಮ ಹೊಲದ ಕೈಸ್ತರು   ಚರ್ಚಿನ   ಪರಿಸರದಲ್ಲಿ  ಸುತ್ತಾಡಿದರೇ  ನೀವು ಅವರಿಗೆ  ಹಲ್ಲೆ  ಮಾಡಿ  ಎಂದು  ಧರ್ಮಗುರುಗಳು  ಹೇಳಿದ್ದಾರೆ  ಎಂದು  ಹೇಳಿ  ಕೈಯಿಂದ  ಹಲ್ಲೆ  ಮಾಡಿದ್ದು,   ಈ ಬಗ್ಗೆ  ಗಾಯಾಳುಗಳು  ಹೆಬ್ರಿ ಸರಕಾರಿ ಆಸ್ಪತ್ರೆಯಲ್ಲಿ  ಚಿಕಿತ್ಸೆ  ಪಡೆದುಕೊಂಡಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 90/2022  ಕಲಂ:  323, 354, 506, 109 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ಪಿರ್ಯಾದಿದಾರರಾದ ರಘುರಾಮ ಶೆಟ್ಟಿ (61), ತಂದೆ: ಹೆರಿಯಣ್ಣ ಶೆಟ್ಟಿ, ವಾಸ: ವೈಟ್   ಹೌಸ್  ಮುಖ್ಯ ರಸ್ತೆ ಅಂಬಲಪಾಡಿ ಉಡುಪಿ ಇವರಿಗೆ ಹಾಗೂ ಆರೋಪಿಗಳಾದ 1) ಸುಧರ್ಶನ್  ಶೆಟ್ಟಿ,  2)  ರಾಜೀವ  ಶೆಟ್ಟಿ, 3)ಶ್ರೀಮತಿ  ಗಿರಿಜಮ್ಮ  ಶೆಡ್ತಿ, 4) ಸುಪ್ರೀಯಾ  ಶೆಟ್ಟಿ, 5) ಸುಧೇಶ  ಶೆಟ್ಟಿ ಇವರಿಗೂ    ಕುಂದಾಪುರ  ತಾಲೂಕಿನ  ಸಿದ್ದಾಪುರ   ಗ್ರಾಮದಲ್ಲಿ  ಜಾಗದ  ತಕರಾರು  ಇರುತ್ತದೆ, ಜಾಗದ  ತಕರಾರು ಮಾನ್ಯ  ಉಚ್ಚ  ನ್ಯಾಯಾಲಯ  ಬೆಂಗಳೂರು   ಇಲ್ಲಿ ವಿಚಾರಣೆಯಲ್ಲಿ  ಇರುತ್ತದೆ, ಮಾನ್ಯ ಉಚ್ಚ   ನ್ಯಾಯಾಲಯವು   ಕುಂದಾಪುರ   ತಾಲೂಕು  ತಹಶೀಲ್ದಾರರಿಗೆ  ತಕರಾರು  ಇರುವ  ಜಾಗವನ್ನು  ದಿನಾಂಕ  21/09/2022  ರಂದು  ಸರ್ವೇ   ಮಾಡಿ ವರದಿ  ನೀಡುವಂತೆ  ಆದೇಶ  ಮಾಡಿರುತ್ತದೆ.  ಈ  ಸರ್ವೇ  ಬಗ್ಗೆ  ಪೂರ್ವ ಭಾವಿಯಾಗಿ ಚರ್ಚೆ   ಮಾಡಲು  ಪಿರ್ಯಾದಿದಾರರು ದಿನಾಂಕ  19/08/2022  ರಂದು KA-20- MC-0569 ನೇ  ನಂಬ್ರದ  ಕಾರಿನಲ್ಲಿ  ಸಿದ್ದಾಪುರ ಗ್ರಾಮದ   ಬಾಳೆಬೇರು  ಎಂಬಲ್ಲಿ  ಮಂಜುನಾಥ   ಎಂಬುವvರ  ಮನೆಯ ಕಡೆಗೆ  17:08 ಗಂಟೆಗೆ  ಹೋಗುತ್ತಿರುವಾಗ  ತಕರಾರು  ಇರುವ  ಸರ್ವೇ  ನಂಬ್ರ 244/2. 233/1ಬಿ1 ಹಾಗೂ  233/1ಬಿ2  ರಲ್ಲಿ  ಅಪರಿಚಿತ ವ್ಯಕ್ತಿಗಳು  ಕೆಲಸ  ಮಾಡುವುದನ್ನು ನೋಡಿ  ಕಾರನ್ನು  ತಿರುಗಿಸಿಕೊಂಡು   ಕಾರನ್ನು  ರಸ್ತೆಯ  ಬದಿಯಲ್ಲಿ  ನಿಲ್ಲಿಸಿಕೊಂಡು   ಪೋಟೊ   ತೆಗೆಯುತ್ತಿರುವಾಗ 1 ನೇ  ಆರೋಪಿ  ಉಳಿದ  ಆರೋಪಿಗಳ  ಕುಮ್ಮಕಿನಿಂದ  KA-20-ES- 4781 ನೇ  ನಂಬ್ರದ  ಸ್ಕೂಟಿಯಲ್ಲಿ   ಬಂದು   ಸ್ಕೂಟಿಯನ್ನು ಕಾರಿಗೆ  ಗುದ್ದಿರುತ್ತಾನೆ, ಈ ಸಮಯ ಆತನ ಕೈಯಲ್ಲಿ  ಕತ್ತಿ ಇರುವುದನ್ನು ನೋಡಿದ  ಪಿರ್ಯಾದಿದಾರರು  ಹಾಗೂ   ರಾಜರಾಮ  ಶೆಟ್ಟಿ   ಇವರು   ಕಾರಿನ ಒಳಗಡೆ   ಕುಳಿತುಕೊಂಡಾಗ  ಆರೋಪಿ ಸ್ಕೂಟಿಯನ್ನು  ಕಾರಿನ  ಎದುರುಗಡೆ ಅಡ್ಡ  ನಿಲ್ಲಿಸಿ  ಕಾರು  ಮುಂದೆ  ಹೋಗದಂತೆ   ತಡೆ ಉಂಟು  ಮಾಡಿ    ಅವರನ್ನು  ಕೊಲೆ   ಮಾಡುವ  ಉದ್ದೇಶದಿಂದ ಕಾರಿನ  ಗ್ಲಾಸಿನ  ಮೇಲೆ     ಕಲ್ಲನ್ನು  ಬಿಸಾಡಿರುತ್ತಾನೆ,  ಆಗ  ಪಿರ್ಯಾದಿದಾರರು ಹಾಗೂ  ರಾಜ ರಾಮ  ಶೆಟ್ಟಿ  ಇವರು  ಹೆದರಿಕೊಂಡು  ಕಾರಿನಿಂದ  ಇಳಿದು  ಓಡಿ  ಹೋಗುವಾಗ   ಆರೋಪಿಯು  ಆತನ ಕೈಯಲ್ಲಿ   ಇದ್ದ  ಕತ್ತಿಯಿಂದ  ಪಿರ್ಯಾದಿದಾರರನ್ನು  ಕೊಲೆ ಮಾಡುವ  ಉದ್ದೇಶದಿಂದ   ಕತ್ತಿಯನ್ನು  ಕುತ್ತಿಗೆಯ ಬಳಿ  ಬೀಸಿರುತ್ತಾನೆ. ಆಗ ಅವರು  ಹೆದರಿಕೊಂಡು ಜೀವ  ಭಯದಿಂದ   ಕಾರನ್ನು  ಅಲ್ಲಿಯೇ  ಬಿಟ್ಟು  ಸಿದ್ದಾಪುರಕ್ಕೆ ಓಡಿ ಬಂದಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 91/2022  ಕಲಂ:  307, 341, 427, 109 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .       

ಇತ್ತೀಚಿನ ನವೀಕರಣ​ : 19-09-2022 09:36 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080