ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ:

 • ಉಡುಪಿ  ಪಿರ್ಯಾದಿ ಬಿ. ಅನಂತಕೃಷ್ಣ ಪೈ (61) ತಂದೆ: ದಿ. ಸೀತಾರಾಮ ಪೈ ವಾಸ: ತಕ್ಷಕ್‌ & ಅಕ್ಷತ್‌ ಹೌಸ್‌, ಓಕುಡೆ ರಾಮ ಭಟ್‌ ರಸ್ತೆ, ಕುಂಜಿಬೆಟ್ಟು ಇವರು ದಿನಾಂಕ 18/09/2021 ರಂದು 19:30 ಗಂಟೆಯಿಂದ 20:00 ಗಂಟೆ ಮಧ್ಯೆ ಹಣ್ಣು ತರಲು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕಡಿಯಾಳಿ ನರಸಿಂಹ ಕಾಮತ್‌ ರವರ ಅಂಗಡಿಗೆ ಹೋದಾಗ ಆಪಾದಿತರು ಸಮಾನ ಉದ್ದೇಶದಿಂದ ಒಟ್ಟು ಸೇರಿ ಪಿರ್ಯಾದುದಾರರನ್ನು ಉದ್ದೇಶಿಸಿ, ‘ನಿಮಗೆ ತುಂಬಾ ಅಹಂಕಾರ, ಹೋಗಿ ಸುಮ್ಮನೆ ಇಲ್ಲಿ ನಿಲ್ಲಬೇಡ ಹೋಗು’ ಎಂದು ಹೇಳಿ ರಸ್ತೆ ದೂಡಿದ್ದು, ಪಿರ್ಯಾದುದಾರರು ಹೆಂಡತಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಕೂಡಲೇ ಹೆಂಡತಿ ಮತ್ತು ಮಕ್ಕಳಾದ ತಕ್ಷತ್‌ ಹಾಗೂ ಅಕ್ಷತ್‌ರವರು ಬಂದಿದ್ದು, ಯಾಕೆ ಹೊಡೆಯುತ್ತಿರಾಎಂದು ಪ್ರಶ್ನಿಸಿದಾಗ ಎಲ್ಲಾ ಆಪಾದಿತರು ಪಿರ್ಯಾದುದಾರರ ಹೆಂಡತಿಗೆ ದೂಡಿ ರಸ್ತೆಗೆ ಉರುಳಿಸಿದ್ದು, ಅವಾಚ್ಯ ಶಬ್ದಗಳಿಂದ ಬೈದು, ನಾಲ್ವರನ್ನು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿ ಆಪಾದಿತ ಗಣೇಶ್‌ ಆಚಾರ್‌, ಕೃಷ್ಣ ಆಚಾರ್‌ ಹಾಗೂ ಗಿರೀಶ್‌ ಅಂಚನ್‌ ರವರು ಕಲ್ಲಿನಿಂದ ಹಾಗೂ ರೀಪಿನಿಂದ ಪಿರ್ಯಾದುದಾರರಿಗೆ ಹಲ್ಲೆ ಮಾಡಿದ್ದು, ಆಪಾದಿತ ಗಿರೀಶ್‌ ಅಂಚನ್‌ ರವರು ರೀಪಿನಿಂದ ಅಕ್ಷತ್‌ನಿಗೆ ಹೊಡೆದಿರುತ್ತಾರೆ.ಈ ಬಗ್ಗೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 135/2021 ಕಲಂ 143, 147, 148, 324, 504, 506 Rw 149  IPC ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಉಡುಪಿ:  ಪಿರ್ಯಾದುದಾರರುಗಣೇಶ್‌ ಆಚಾರ್ಯ (35) ತಂದೆ: ದಿ. ಮುತ್ತಣ್ಣ ಯಾನೆ ಮುತ್ತ ವಾಸ: ಕೇರ್‌ ಆಫ್‌ ನಾರಾಯಣ ಕಾಮತ್‌, ಕಾಮತ್‌ ಕಂಪೌಂಡ್‌, ಲಕ್ಷ್ಮಿ ನರಸಿಂಹ ಟವರ್‌ ಎದುರು, ಕಡಿಯಾಳಿ, ಕಲ್ಸಂಕ-ಮಣಿಪಾಲ ಮುಖ್ಯರಸ್ತೆ, ಇವರು ದಿನಾಂಕ 18/09/2021 ರಂದು ಕೆಲಸ ಮುಗಿಸಿ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕಡಿಯಾಳಿ ಕಾಮತ್‌ ಕಂಪೌಂಡ್‌ ಬಳಿ ಇರುವ ತಮ್ಮ ಮನೆಯ ಬಳಿಗೆ ಬಂದಾಗ ಸಮಯ 19:30 ಗಂಟೆಗೆ ಆಪಾದಿತರಾದ ಅನಂತ ಪೈ ಮತ್ತು ತಕ್ಷತ್‌ ಪೈ ರವರು ಪಿರ್ಯಾದುದಾರರ ಮನೆ ಮಾಲೀಕರಾದ ನರಸಿಂಹ ಕಾಮತ್‌ ರವರಿಗೆ ಅವಾಚ್ಯ ಶಬ್ದಗಳಿಂದ ಏರು ಧ್ವನಿಯಲ್ಲಿ ಬೈಯುತ್ತಿದ್ದು, ಇದನ್ನು ನೋಡುತ್ತಿದ್ದ ಆಪಾದಿತ ತಕ್ಷತ್‌ನು, ‘ನೀನು ಎಂತ ನೋಡುವುದು, ಎನ್ನುವುದಾಗಿ ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಚೂರಿಯಿಂದ ಇರಿಯುತ್ತೇನೆ, ಕೊಲ್ಲುವುದಾಗಿ ಬೆದರಿಕೆ ಹಾಕಿದ್ದು, ಸ್ಥಳಕ್ಕೆ ಶೈಲ ಬಾಯಿ ಹಾಗೂ ಅಕ್ಷತ್‌ ಪೈ ರವರು ಬಂದು ಅವಾಚ್ಯ ಶಬ್ದಗಳಿಂದ ಬೈದು, ಅಕ್ಷತ್‌ನು ಒಂದು ಕಲ್ಲಿನಿಂದ ಪಿರ್ಯಾದುದಾರರ ಎಡ ಕಣ್ಣು ಹಾಗೂ ಕಿವಿಯ ಮಧ್ಯದ ಭಾಗಕ್ಕೆ ಹೊಡೆದು ರಕ್ತಗಾಯಗೊಳಿಸಿದ್ದು, ಸ್ಥಳಕ್ಕೆ ಪಿರ್ಯಾದುದಾರರ ತಾಯಿ ಶಾರದಾ ಆಚಾರ್ಯ ಬಂದಾಗ ಶೈಲ ಬಾಯಿ ರವರು ಅವರನ್ನು ದೂಡಿ ಎಳೆದಾಡಿದ್ದು, ಗಿರೀಶ್‌ ಅಂಚನ್‌ ರವರು ಬಂದು ಗಲಾಟೆ ಬಿಡಿಸಿರುತ್ತಾರೆ ಜೊತೆಗೆ ಕೃಷ್ಣ ಆಚಾರಿಯವರ ಟಿ-ಶರ್ಟ್‌ನ್ನು ಹರಿದು ಹಾಕಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 134/2021ಕಲಂ 324, 504, 506 Rw 34  IPC  ಯಂತೆ ಪ್ರಕರಣ ದಾಖಲಿಸಲಾಗಿದೆ.

ಗಂಡಸು ಕಾಣೆ ಪ್ರಕರಣ

 • ಗಂಗೊಳ್ಳಿ: ಫಿರ್ಯಾದುದಾರರು ಶ್ರೀಮತಿ ವಾಣಿ (33 ವರ್ಷ), ಗಂಡ: ಹೆರಿಯಣ್ಣ ಆಚಾರ್ಯ, ವಾಸ: ಅಜ್ಜಯ್ಯನ ಮನೆ, ಮರವಂತೆ ಗ್ರಾಮ, ಕುಂದಾಪುರ  ತಾಲೂಕು, ಇವರು ತನ್ನ ಗಂಡ ಹೆರಿಯಣ್ಣ ಆಚಾರ್ಯ (41 ವರ್ಷ) ಹಾಗೂ ಮಕ್ಕಳೊಂದಿಗೆ ಅಜ್ಜಯ್ಯನ ಮನೆ, ಮರವಂತೆ ಗ್ರಾಮದಲ್ಲಿ ವಾಸವಾಗಿದ್ದು, ಹೆರಿಯಣ್ಣ ಆಚಾರ್ಯ ರವರು ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದು, ದಿನಾಂಕ 17/09/2021 ಸಂಜೆ 5:00 ಗಂಟೆಗೆ ಮನೆಯಿಂದ ಮೀನುಗಾರಿಕೆ ಬಗ್ಗೆ ಅರಬ್ಬೀ ಸಮುದ್ರಕ್ಕೆ ಹೋದವರು ಈವರೆಗೂ ಪತ್ತೆಯಾಗಿರುವುದಿಲ್ಲ ಎನ್ನುವುದಾಗಿ ದೂರು ನೀಡಿದ್ದು ,  ಈ ಬಗ್ಗೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 85/2021 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಮಣಿಪಾಲ:ಪಿರ್ಯಾದಿದಾರ ಅಂಬರೀಶ್ ಗಾಣಿಗ (38),ತಂದೆ:ದಿ. ವಿಠ್ಠಲ ಗಾಣಿಗ, ವಾಸ:ಮನೆ ನಂ 1-255, ಬೈಕಾಡಿ, ಗಾಂಧಿನಗರ,ಹಾರಾಡಿ ಗ್ರಾಮ, ಬ್ರಹ್ಮಾವರ,ಉಡುಪಿ ಇವರ ಅಣ್ಣ ರಮೇಶ್ ಪ್ರಾಯ 55 ವರ್ಷ ರವರು ಈ ದಿನ ದಿನಾಂಕ  18.09.2021 ರಂದು ಬೆಳಿಗ್ಗೆ ಮಣಿಪಾಲಕ್ಕೆ ಕೆಲಸಕ್ಕೆ ಹೋಗಿ ತಮ್ಮ ಮೋಟಾರ್  ಸೈಕಲ್ ನಲ್ಲಿ ವಾಪಾಸ್ಸು ಮನೆಗೆ ಬರುತ್ತಿರುವಾಗ ಮಧ್ಯಾಹ್ನ ಸುಮಾರು 2:45 ಗಂಟೆಗೆ  ಪೆರಂಪಳ್ಳಿ ಯಲ್ಲಿ ಎದೆ ನೋವು ಎಂದು ಕುಳಿತುಕೊಂಡವರನ್ನು ಸಾರ್ವಜನಿಕರು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಣಿಪಾಲ ಠಾಣಾ ಯುಡಿಆರ್‌‌ ನಂಬ್ರ 32/2021ಕಲಂ: 174 ಸಿ ಆರ್ ಪಿಸಿ. ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಬೈಂದೂರು: ದಿನಾಂಕ 17-09-2021 ರಂದು   ಅಣ್ಣಪ್ಪ ಮೊಗವೀರ ಪ್ರಾಯ:47 ವರ್ಷರವರು ಇತರ 6 ಜನರೊಂದಿಗೆ ಮೀನುಗಾರಿಕೆಯ ಬಗ್ಗೆ  ಬೈಂದೂರು ತಾಲೂಕು ಪಡುವರಿ ಗ್ರಾಮದ ಅಳಿವೆಕೋಡಿಯಿಂದ  ಅರಬ್ಬಿ ಸಮುದ್ರಕ್ಕೆ ತೆರಳಿ ಮೀನುಗಾರಿಕೆ ಮುಗಿಸಿಕೊಂಡು ಸಂಜೆ ವಾಪಾಸ್ಸು ದಡಕ್ಕೆ  ದೋಣಿಯಲ್ಲಿ ಬರುತ್ತಾ ಸಂಜೆ ಸಮಯ ಸುಮಾರು 6:00 ಗಂಟೆಗೆ ಸಮುದ್ರ ದಡದಿಂದ ಸುಮಾರು 200 ಮೀಟರ್  ದೂರದಲ್ಲಿ ಬರುತ್ತಿರುವಾಗ  ದೊಡ್ಡದಾದ ಸಮುದ್ರದ ಅಲೆಯೊಂದು ದೋಣಿಗೆ ಅಪ್ಪಳಿಸಿ ದೋಣಿ ಮಗುಚಿ ಸಮುದ್ರ  ನೀರಿಗೆ ಬಿದ್ದವರು ನೀರಿನಲ್ಲಿ ಮುಳುಗಿ  ಉಸಿರು ಗಟ್ಟಿ ಮೃತ ಪಟ್ಟಿದ್ದು,ಮೃತ ದೇಹವು ದಿನಾಂಕ 18-09-2021 ರಂದು ಸಮಯ  ಸುಮಾರು 16:30 ಗಂಟೆಗೆ ಉಪ್ಪುಂದ ಗ್ರಾಮದ ಕರ್ಕಿಕಳಿ ಅರಬ್ಬೀ ಸಮುದ್ರದ ತೀರದಲ್ಲಿ ದೊರಕಿರುತ್ತದೆ . ಈ ಬಗ್ಗೆ ರವೀಂದ್ರ  ಖಾರ್ವಿ ಪ್ರಾಯ:35    ವರ್ಷ,ತಂದೆ; ಕುಪ್ಪಯ್ಯ ಖಾರ್ವಿ ವಾಸ:  ತಮ್ಮಣ್ಣನ ಮನೆ,     ಅಳಿವೆಕೋಡಿ ರವರು ದೂರು ನೀಡಿದ್ದು  ಬೈಂದೂರು ಠಾಣಾ ಯುಡಿಆರ್‌‌ ನಂಬ್ರ 36/2021 ಕಲಂ: 174 ಸಿ ಆರ್ ಪಿಸಿ. ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಕುಂದಾಪುರ:  ಪಿರ್ಯಾದಿ ಕೆಂಚಪ್ಪ ಪ್ರಾಯ 41 ವರ್ಷ ತಂದೆ ಮಹದೇವಪ್ಪ   ವಾಸ: ಪಿಂಗಾಣಿಗುಡ್ಡೆ ತಲ್ಲೂರು ಗ್ರಾಮ  ಉಡುಪಿ ಜಿಲ್ಲೆ ಇವರ ಹೆಂಡತಿಯ ತಮ್ಮ ಅರ್ಜುನ ರವರ ಮಾವ ಸತ್ಯಪಾಲ ಪ್ರಾಯ ಸುಮಾರು 67 ವರ್ಷ  ಇವರು ಕೇರಳದ ಕಣ್ಣೂರು ನಿವಾಸಿಯಾಗಿದ್ದು ಸುಮಾರು 50 ವರ್ಷಗಳಿಂದ ತಲ್ಲೂರಿನ ಹೊಸಮಠ ದಲ್ಲಿ ಬಾವಿ ರಿಂಗ್ ಕೆಲಸ ಮಾಡಿಕೊಂಡು ಅಲ್ಲೇ ಮನೆ ಮಾಡಿಕೊಂಡು ವಾಸವಾಗಿದ್ದು,  ಸದ್ರಿಯವರಿಗೆ ವಿಪರೀತ ಶರಾಬು ಕುಡಿಯುವ ಚಟ ಇದ್ದು, ದಿನಾಂಕ 18/09/2021 ರಂದು ಬೆಳಿಗ್ಗೆ 10:30 ಗಂಟೆಯಿಂದ ಸಂಜೆ 4:30 ಗಂಟೆ ಮದ್ಯಾವಧಿಯಲ್ಲಿ ತಲ್ಲೂರು ಪೇಟೆಯ ವೈಭವ್ ಬಾರ್ ನ ಸಮೀಪ ರಾ.ಹೆ 66 ರ ಪೂರ್ವ ಬದಿಯ ತಗ್ಗು ಜಾಗದಲ್ಲಿ  ಮದ್ಯಸೇವನೆ ಮಾಡಿದ ಸ್ಥಿತಿಯಲ್ಲಿ ಬಿದ್ದವರು ಏಳಲಾಗದೇ ಅಥವಾ ಇನ್ಯಾವುದೊ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ  UDR NO: 37/2021
  ಕಲಂ: 174 CrPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 19-09-2021 10:55 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080