ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಕಾರ್ಕಳ : ದಿನಾಂಕ 18/09/2021 ರಂದು 22:45 ಗಂಟೆಗೆ ಪಿರ್ಯಾದಿದಾರರಾದ ದಿನೇಶ್ ಮೊಯಿಲಿ, ಪ್ರಾಯ 37 ವರ್ಷ, ತಂದೆ: ಸೇಸು ಮೊಯಿಲಿ ವಾಸ: ಕಂಬಳಗುತ್ತು ಮನೆ ಬೋಳ ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು ಇವರು ತನ್ನ ಗೆಳೆಯ ಪ್ರಶಾಂತ ಸವಾರಿ ಮಾಡುತ್ತಿದ್ದ KA -70 -H-5840 ನೇ ದ್ವಿಚಕ್ರ ವಾಹನದಲ್ಲಿ ಸಹ ಸವಾರನಾಗಿ ಕುಳಿತು ಮಂಜರಪಲ್ಕೆ ಕಡೆಗೆ ಬರುತ್ತಿರುವಾಗ ಕಾರ್ಕಳ ತಾಲೂಕು, ನಂದಳಿಕೆ ಗ್ರಾಮದ ಅಬ್ಬನಡ್ಕದ ನಾಗಂದೊಟ್ಟು ಕ್ರಾಸ್ ಬಳಿ ತಲುಪುವಾಗ ಪ್ರಶಾಂತನು ತಾನು ಸವಾರಿ ಮಾಡುತ್ತಿದ್ದ ದ್ವಿಚಕ್ರ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿದ ಪರಿಣಾಮ ಹತೋಟಿ ತಪ್ಪಿ ವಾಹನ ಸಮೇತ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದು, ಪಿರ್ಯಾದಿದಾರರಿಗೆ ಯಾವುದೇ ಗಾಯವಾಗಿರುವುದಿಲ್ಲ. ಪ್ರಶಾಂತನ ತಲೆ ಮತ್ತು ಮುಖಕ್ಕೆ ರಕ್ತ ಗಾಯವಾಗಿದ್ದು , ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 110/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಅಬ್ದುಲ್ ಲತೀಫ್, ಪ್ರಾಯ: 66 ವರ್ಷ, ತಂದೆ:ದಿ, ಸಾಬ್‌‌ಜಾನ್, ವಾಸ: ದಾರ್‌‌ ಅಸ್‌ ಸಹೀಫ್, ಪೆರಂಗಡಿ, ಉಪ್ಪಳ ಮಂಗಲ್ಪಾಡಿ ಗ್ರಾಮ, ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ ಇವರ KL-14-X-1287 ನೇ ನಂಬ್ರದ ಎರ್ಟಿಗಾ ಕಾರಿ‌ನಲ್ಲಿ ದಿನಾಂಕ: 18/09/2021 ರಂದು ಬೆಳಿಗ್ಗೆ ಉಡುಪಿಯ ಹೂಡೆಯಲ್ಲಿರುವ ಅವರ ಸಂಬಂಧಿಕರ ಮನೆಗೆ ಬಂದು, ವಾಪಾಸ್ಸು ಅವರ ಮನೆಗೆ ಹೋಗುತ್ತಿರುವ ಸಮಯ ಕಾರನ್ನು ಅವರ ಬಾವ ಮುಹಮ್ಮದ್ ಇಸ್ತಿಯಾಕ್ ಎಂಬುವವರು ಚಾಲನೆ ಮಾಡುತ್ತಾ ರಾಷ್ಟ್ರೀಯ ಹೆದ್ದಾರಿ-66 ರ ಉಡುಪಿ- ಮಂಗಳೂರು ಏಕಮುಖ ಸಂಚಾರ ರಸ್ತೆಯಲ್ಲಿ ಹೋಗುತ್ತಿರುವ ಸಮಯ 16:30 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮದ ಬೀಡು ಬಳಿ ತಲುಪುತ್ತಿದ್ದಂತೆ, ಚಾಲಕ ಮುಹಮ್ಮದ್ ಇಸ್ತಿಯಾಕ್ ನು ಕಾರನ್ನು ಅತೀ ವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿ ರಸ್ತೆಯ ಮಧ್ಯದ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಪಿರ್ಯಾದಿದಾರರ ಪತ್ನಿ ಗುಲ್‌‌ಶನ್ ಬಾನು (54) ಎಂಬುವರಿಗೆ ಬಲ ಕೈಗೆ ಒಳಗುದ್ದಿದ ನೋವುಟಾಗಿರುತ್ತದೆ. ನಂತರ ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಲಾಗಿದೆ. ಅಪಘಾತದಿಂದ ಪಿರ್ಯಾದಿದಾರರ ಕಾರು ಹಾಗೂ ರಸ್ತೆಯಡಿವೈಡರ್ ಮತ್ತುಡಿವೈಡರ್‌ಗೆ ಅಳವಡಿಸಿದ್ದ ಮೆಟಲ್ ಬಿನ್ ಕ್ರಾಸ್‌ ಬ್ಯಾರಿಯರ್ ಜಖಂಗೊಂಡಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 94/2021 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಅಸ್ವಾಭಾವಿಕ ಮರಣ ಪ್ರಕರಣ 

  • ಹೆಬ್ರಿ: ಪಿರ್ಯಾದಿದಾರರಾದ ಚಂದ್ರಶೇಖರ (54), ತಂದೆ: ಜಗನ್ನಾಥ ಶೆಟ್ಟಿ, ವಾಸ: ಮಾತೃಶ್ರೀ ನಿಲಯ ಖಜಾನೆ ಶಿವಪುರ ಅಂಚೆ ಮತ್ತು ಗ್ರಾಮ ಹೆಬ್ರಿ ತಾಲೂಕು ಇವರ ತಮ್ಮ ಸುಧಾಕರ ಶೆಟ್ಟಿ (48) ರವರು ಹೊಟೇಲ್ ಕೆಲಸ ಮಾಡಿಕೊಂಡಿದ್ದು, ಅವರ ಸಂಸಾರದೊಂದಿಗೆ ಸ್ಯಾಬ್ರಕಟ್ಟೆ ಯಲ್ಲಿರುವ ಅವರ ಹೆಂಡತಿ ಮನೆಯಲ್ಲಿ ವಾಸ ಮಾಡಿಕೊಂಡಿರುವುದಾಗಿದೆ. ಸುಧಾಕರ ಶೆಟ್ಟಿ ರವರಿಗೆ 15-20 ವರ್ಷಗಳಿಂದ ಮಾನಸಿಕ ಖಾಯಿಲೆ ಇದ್ದು ಈ ಬಗ್ಗೆ ಅವರಿಗೆ ಉಡುಪಿ ಬಾಳೀಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿದ್ದು ದಿನಂಪ್ರತಿ ಖಾಯಿಲೆಗೆ ಸಂಬಂದಿಸಿದ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುವುದಾಗಿದೆ. ದಿನಾಂಕ 14/09/2021 ರಂದು ಶಿವಪುರ ಗ್ರಾಮದ ಖಜಾನೆ ಎಂಬಲ್ಲಿರುವ ಅವರ ಮನೆಗೆ ಕೆಲಸದ ನಿಮಿತ್ತ ಬಂದಿದ್ದು , ದಿನಾಂಕ 19/09/2021 ರಂದು ಮುಂಜಾನೆ 04:00 ಗಂಟೆಗೆ ಸುಧಾಕರ ಶೆಟ್ಟಿ ರವರು ಹೊಟ್ಟೆ ಉರಿಯುತ್ತಿರುವುದಾಗಿ ಮನೆಯವರಿಗೆ ತಿಳಿಸಿದ್ದು ಮನೆಯವರು ಕೂಡಲೇ ಅವರಿಗೆ ಎಳನೀರು ಕುಡಿಸಿ ಉಪಚರಿಸಿ ವಿಚಾರಿಸಿದಾಗ ದಿನಂಪ್ರತಿ ತೆಗೆದುಕೊಳ್ಳುವ ಮಾನಸಿಕ ಖಾಯಿಲೆಗೆ ಸಂಬಂಧಿಸಿದ ಮಾತ್ರೆಗಳನ್ನು ಕೈತಪ್ಪಿನಿಂದ ರಾತ್ರಿ ಮಿತಿ ಮಿರಿ ಸೇವಿಸಿರುವುದಾಗಿ ತಿಳಿಸಿರುತ್ತಾರೆ ನಂತರ ಕೂಡಲೇ ಒಂದು ವಾಹನದಲ್ಲಿ ಅವರನ್ನು ಚಿಕಿತ್ಸೆಯ ಬಗ್ಗೆ ಬೆಳಿಗ್ಗೆ ಸಮಯ ಸುಮಾರು 07:30 ಗಂಟೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿನ ವೈದ್ಯರಲ್ಲಿ ತೋರಿಸಿದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 30/2021ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತ್ತೀಚಿನ ನವೀಕರಣ​ : 19-09-2021 06:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080