ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

 • ಉಡುಪಿ: ಪಿರ್ಯಾದಿ ಶಾಬಿಸ್ತ ಮರಿಯಂ ಇವರು 1 ನೇ  ಅಪಾದಿತ ಶೋಯಬ್‌ ಮೊಹಮ್ಮದ್‌ನೊಂದಿಗೆ ದಿನಾಂಕ: 27/02/2022 ರಂದು ಬ್ರಹ್ಮಾವರ ಮದರ್‌ ಪ್ಯಾಲೇಸ್‌ ಹಾಲ್‌ನಲ್ಲಿ ಮದುವೆಯಾಗಿದ್ದು, ಮದುವೆಯ ಸಮಯ ರೂಪಾಯಿ 5 ಲಕ್ಷ ಕ್ಯಾಶ್‌,  80 ಜೊತೆ ಬಟ್ಟೆ, ಹಾಗೂ  50 ತೋಲ ಚಿನ್ನ ಹಾಕಿದ್ದು, ಮದುವೆಯಾಗಿ 8 ದಿನಗಳಲ್ಲಿ 1ನೇ ಆಪಾದಿತನ ತನಗೆ ಇನ್ನೂ 5 ಲಕ್ಷ ರೂಪಾಯಿ ಕ್ಯಾಶ್‌ ಬೇಕು ಎಂದು ಪಿರ್ಯಾದಿದಾರರಿಗೆ ಚಿತ್ರ ಹಿಂಸೆ ನೀಡಿರುತ್ತಾನೆ. 1ನೇ ಆಪಾದಿತನ ತಂದೆ ಹಾಗೂ ತಾಯಿಯಾದ ಆಪಾದಿತ 2ನೇ ಮೊಹಮ್ಮದ್‌ ಹನೀಫ್‌ ಹಾಗೂ 3ನೇ ಆಪಾದಿತ ಜುಲೇಖಾ  ಬಿ  ಯವರು ಪಿರ್ಯಾದಿದಾರರಿಗೆ ಕೆಟ್ಟ ಪದಗಳಿಂದ ಬೈಯ್ಯುತ್ತಿದ್ದು, 1ನೇ ಆಪಾದಿತನಲ್ಲಿ ಪಿರ್ಯಾದಿದಾರರ ಬಗ್ಗೆ ಇಲ್ಲ ಸಲ್ಲದ ವಿಚಾರ ಹೇಳಿ 1ನೇ ಆಪಾದಿತ ಪಿರ್ಯಾದಾರರಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ಕೊಡುವಂತೆ ಪ್ರಚೋದಿಸಿರುತ್ತಾರೆ. 1ನೇ ಆಪಾದಿತ ಪಿರ್ಯಾದಿದಾರರಿಗೆ ತಂದೆಯ ಹತ್ತಿರ ಹೇಳಿ ತನಗೆ ಪ್ಲ್ಯಾಟ್‌ ಕೊಡಿಸು ಎಂದು ಪೀಡಿಸಿ ಕಿರುಕುಳ ಕೊಡುತ್ತಿದ್ದು, ಅಲ್ಲದೇ ಆತ ವಿದೇಶಕ್ಕೆ ಹೋಗುವವನಿದ್ದು, ಪಿರ್ಯಾದಿದಾರರನ್ನು ಜೊತೆಗೆ ಕರೆದುಕೊಂಡು ಹೋಗಲು ನಿರಾಕರಿಸಿರುತ್ತಾನೆ ಎಂಬಿತ್ಯಾದಿ. ಈ ಬಗ್ಗೆ ಮಹಿಳಾ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ : 58/2022  ಕಲಂ: 498(ಎ), 504, 506 ಜೊತೆಗೆ 34 ಐ.ಪಿ.ಸಿ ಮತ್ತು 4 ಡಿ.ಪಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಉಡುಪಿ: ದಿನಾಂಕ 20.05.2022 ರಂದು, ಪಿರ್ಯಾದಿ ಪೂರ್ಣಿಮಾ ಇವರಿಗೆ NAAPTOL ಕಂಪೆನಿಯಿಂದ Scratch Win ಎಂಬ ಕೂಪನ್ ಪೋಸ್ಟ್ ಮುಖೇನ ಬಂದಿದ್ದು, ಸದ್ರಿ ಕೂಪನ್ ನಲ್ಲಿ ರೂ. 14,80,000/- ವಿಜೇತರಾಗಿದ್ದಿರಿ ಎಂಬುದಾಗಿದ್ದು, ಈ ಬಗ್ಗೆ ಅದರಲ್ಲಿದ್ದ ಮೊಬೈಲ್ ನಂಬ್ರ ಕ್ಕೆ  ಸಂಪರ್ಕಿಸಿದಲ್ಲಿ ತಾನು ಆನಂದ್ NAAPTOL ಕಂಪೆನಿಯವರು ಎಂಬುದಾಗಿ ಹೇಳಿ ಪಿರ್ಯಾದಿದಾರರನ್ನು ನಂಬಿಸಿ, ಮೇಲಿನ ಹಣವನ್ನು ಪಡೆಯುವರೆ ಸರ್ವಿಸ್ ಚಾರ್ಜ್‌, ಸ‌ರ್ಚ್, NOC & LOC ಚಾರ್ಜ್‌, ಸೆಕ್ಯೂರಿಟಿ ಡೆಪೋಸಿಟ್, GST & Central Tax, ಹಾಗೂ ಇತರೇ ಖರ್ಚುಗಳಿಗಾಗಿ ದಿನಾಂಕ20.05.2022 ರಿಂದ12.08.2022 ರ ಮಧ್ಯಾವದಿಯಲ್ಲಿ ಒಟ್ಟು ರೂ. 15,33,934/- ಹಣವನ್ನು ಪಿರ್ಯಾದಿದಾರರಿಂದ, ಮೇಲಿನ ಆರೋಪಿಯು ಆತನಬೇರೆ ಬೇರೆ ಬ್ಯಾಂಕ್ ಖಾತೆಗೆ ಆನ್‌ ಲೈನ್‌ ಮುಖೇನ ಹಣ ಜಮಾ ಮಾಡಿಸಿಕೊಂಡು,  ವಿಜೇತವಾಗಿರುವ ಹಣವನ್ನು ನೀಡದೇ ಪಿರ್ಯಾದಿದಾರರು ಕಟ್ಟಿದ ಹಣವನ್ನು ವಾಪಾಸು ನೀಡದೇ ನಂಬಿಸಿ, ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಸೆನ್ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ :43/2022 ಕಲಂ 66(ಡಿ), ಐ.ಟಿ. ಆಕ್ಟ್ ಮತ್ತು ಕಲಂ 420 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 ಹಲ್ಲೆ ಪ್ರಕರಣ

 • ಶಂಕರನಾರಾಯಣ : ದಿನಾಂಕ  18.08.2022 ರಂದು   15;00  ಘಂಟೆಗೆ  ಪಿರ್ಯಾದಿ ಶ್ರೀಮತಿ  ಸುಶೀಲಾ   ಇವರು  ಕುಂದಾಪುರ ತಾಲೂಕಿನ  76 ಹಾಲಾಡಿ ಗ್ರಾಮದ ನರಸಿಂಹ ದೇವಸ್ಥಾನದ   ಬಳಿ  ಇರುವ ರಾಮ ನಾಯ್ಕ   ಇವರ  ಮನೆಯಲ್ಲಿ ಅಡಿಕೆ  ಸೊಲಿಯುತ್ತಿರುವಾಗ  ಆರೋಪಿ ಉಮೇಶ ಹಾಲಾಡಿ ಯು ಬಂದು  ಫಿರ್ಯಾದು ದಾರರ   ಮಗಳು   ಶ್ರೀಮತಿ ಲಕ್ಷೀ (ಆರೋಪಿಯ ಹೆಂಡತಿ)   ಇವಳಲ್ಲಿ   ಜಗಳ ಮಾಡಿ ಅವಳಿಗೆ ಅವಾಚ್ಯ  ಶಬ್ದದಿಂದ  ಬೈದು   ನೀನು  ಇಲ್ಲಿ   ಇರುವುದು ಬೇಡ  ನಮ್ಮ  ಮನೆಗೆ ಬಾ  ಎಂದು    ಹೇಳಿ  ಕೈಯಿಂದ  ಹೊಡೆಯುಲು  ಹೋದಾಗ ಫಿರ್ಯಾದುದಾರರು   ಇದನ್ನು ತಡೆಯಲು  ಹೋಗಿದ್ದು  ಈ  ಸಮಯ   ಆರೋಪಿಯು  ಮರದ  ರೀಪಿನಿಂದ ಫಿರ್ಯಾದುದಾರರ   ಬಲಕೈ ಹಾಗೂ ತಲೆಗೆ  ಹೊಡೆದು  ಹಲ್ಲೆ  ಮಾಡಿರುತ್ತಾನೆ,  ಇದರ  ಪರಿಣಾಮ   ಫಿರ್ಯಾದುದಾರರ  ತಲೆಗೆ   ರಕ್ತಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಕುಂದಾಪುರ  ಸರಕಾರಿ  ಆಸ್ಪತ್ರೆಯಲ್ಲಿ  ದಾಖಲಾಗಿರುತ್ತಾರೆ  ,  ಆರೋಪಿಯು  ಫಿರ್ಯಾದುದಾರರಿಗೆ  ಹಲ್ಲೆ  ಮಾಡಿ  ಹೋಗುವಾಗ   ಫಿರ್ಯಾದುದಾರರಲ್ಲಿ    ನಿನ್ನ ಮಗಳನ್ನು  ನನ್ನ ಜೊತೆ   ಕಳುಹಿಸು  ಇಲ್ಲದೆ   ಇದ್ದರೆ , ನಿನನ್ನು   ಬಿಡುವುದಿಲ್ಲ  ಎಂದು ಜೀವ  ಬೆದರಿಕೆ ಹಾಕಿರುತ್ತಾನೆ.   ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ : 80/2022  ಕಲಂ: 324. 504. 506 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ ‌

 • ಶಂಕರನಾರಾಯಣ : ದಿನಾಂಕ 19.08.2022  ರಂದು  ಬೆಳಿಗ್ಗೆ  7:30 ಘಂಟೆಯಿಂದ 08:30 ಘಂಟೆಯ  ಮಧ್ಯದ ಅವಧಿಯಲ್ಲಿ     ಹಾಲಾಡಿ   ಪ್ರೌಡಶಾಲೆಯಲ್ಲಿ   9 ನೇ ತರಗತಿ  ವ್ಯಾಸಾಂಗ  ಮಾಡಿಕೊಂಡಿರುವ   ಗಣೇಶ  ಪ್ರಾಯ  14 ವರ್ಷ ಈತನು  ಶಾಲೆಗೆ ಹೋಗಲು  ಮನಸ್ಸು  ಇಲ್ಲದೆ  ಇರುವ ಕಾರಣವೊ  ಅಥವಾ ಬೇರೆ ಯಾವುದಾದರೂ  ವಿಷಯದಲ್ಲಿ  ಮನಸ್ಸಿಗೆ ಬೇಸರ  ಆದ  ಕಾರಣದಿಂದಲೊ  ಮನನೊಂದು     ಕುಂದಾಪುರ ತಾಲೂಕಿನ ಹೆಂಗವಳ್ಳಿ ಗ್ರಾಮದ  ನಿಲ್ಸಕಲ್  ಇರಿಗೆ   ಎಂಬಲ್ಲಿ  ಮನೆಯ  ಪಕ್ಕದಲ್ಲಿ  ಇರುವ   ಸೌದೆ  ತುಂಬುವ  ಮಾಡಿನ ಒಳಗಡೆ ನೇಣು  ಬಿಗಿದು  ಆತ್ಮಹತ್ತೆ ಮಾಡಿಕೊಂಡಿರುತ್ತಾನೆ, ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ಠಾಣೆ ಯು.ಡಿ.ಆರ್ 27/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಬೈಂದೂರು: ಪಿರ್ಯಾದಿ ಸಂತೋಷ ನಾಯ್ಕ  ಇವರು ದಿನಾಂಕ 19-08-2022 ರಂದು ಬಿಜೂರು ರೈಲ್ವೆ ಸ್ಟೇಷನ್ ನಲ್ಲಿ  ಕರ್ತವ್ಯ ದಲ್ಲಿರುವ ಸಮಯ ಬೆಳಗ್ಗೆ 05:30 ಗಂಟೆಗೆ ಟ್ರ್ಯಾಕ್ ಪೆಟ್ರೋಲ್ ಮ್ಯಾನ್ ಆದ ಸುಬ್ರಹ್ಮಣ್ಯ ರವರು  ಪಿರ್ಯಾಧಿದಾರರಿಗೆ ಕರೆಮಾಡಿ ತಾನು ಟ್ರ್ಯಾಕ್ ವೀಕ್ಷಣೆ ಕರ್ತವ್ಯದಲ್ಲಿರುವಾಗ  633/2 ರಿಂದ 633/3 ರ ನಡುವೆ ನಾಯ್ಕನಕಟ್ಟೆ  ಸಮೀಪದಲ್ಲಿರುವ ಗೇಟ್ ನಂಬ್ರ ಎಲ್ ಸಿ 76 ನ ಸಮೀಪದಲ್ಲಿ  ಒಂದು ಅಪರಿಚಿತ ಗಂಡಸಿನ ಮೃತದೇಹ ರೈಲ್ವೆ ಹಳಿಯ ಕೆಳಗೆ ಬಿದ್ದಿದೆ ಎಂಬುದಾಗಿ ಪಿರ್ಯಾಧಿದಾರರಿಗೆ  ತಿಳಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ಠಾಣೆ ಯು.ಡಿ.ಆರ್ 43/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಕಾರ್ಕಳ: ಫಿರ್ಯಾದು ಪ್ರಕಾಶ ಪೈ ಎಂಬವರ  ಮಗ ವಿಘ್ನೇಶ ಪೈ ಎಂಬಾತನು ನಿಟ್ಟೆ ಕಾಲೇಜಿನಲ್ಲಿ  2 ನೇ ಬಿಬಿಎ ವಿದ್ಯಾಭ್ಯಾಸ ಮಾಡುತ್ತಿದ್ದು  ದಿನಾಂಕ 18-08-2022 ರಂದು ಬೆಳಿಗ್ಗೆ ಕಾಲೇಜಿಗೆ ಹೋಗಿ ಸಂಜೆ 6 ಗಂಟೆಗೆ ಕಾಲೇಜಿನಿಂದ ಮನೆಗೆ ಬಂದಿದ್ದು, ಫಿರ್ಯಾದುದಾರರ ಹೆಂಡತಿ  ಸಂಜೆ  ಕೃಷ್ಣಜನ್ಮಾಷ್ಟಮಿ ಪೂಜೆಗೆ ಹೋಗಲು ಮಗ ವಿಘ್ನೇಶನನ್ನು ಕರೆದಿದ್ದು ತನಗೆ ಆಯಾಸವಾಗಿದೆ ಎಂದು ಹೇಳಿರುತ್ತಾನೆ. ಫಿರ್ಯಾದುದಾರರ ಹೆಂಡತಿ ಸಂಜೆ 7 ಗಂಟೆಗೆ ಪೂಜೆಗೆ   ಹೋಗಿದ್ದು  ಫಿರ್ಯಾದುದಾರರು ರಾತ್ರಿ9-30 ಗಂಟೆಗೆ ಮಲಗಿರುತ್ತಾರೆ. ರಾತ್ರಿ 11-50 ಗಂಟೆಗೆ  ಫಿರ್ಯಾದುದಾರರ ಹೆಂಡತಿ ಪೂಜೆ ಮುಗಿಸಿ ಮನೆಗೆ ಬಂದಾಗ  ವಿಘ್ನೇಶನು  ಕಾರ್‌ಶೆಡ್‌ನಲ್ಲಿ  ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ಠಾಣೆ ಯು.ಡಿ.ಆರ್ 37/2022 ಕಲಂ: 174 (ಸಿ) ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 19-08-2022 06:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080