ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಚಂದ್ರ ಶೇಖರ (40), ತಂದೆ: ಮಂಜುನಾಥ, ವಾಸ: ಬಾವಿಕಟ್ಟೆ ಮನೆ ಗರಡಿ ಮಕ್ಕಿ ಗಿಳಿಯಾರು ಗ್ರಾಮ ಬ್ರಹ್ಮಾವರ ತಾಲೂಕು ಇವರ ತಮ್ಮ ಉದಯ (28) ರವರು ವಿಪರೀತ ಕುಡಿತದ ಚಟ ಹೊಂದಿದ್ದು ಮದ್ಯಪಾನ ಮಾಡಿ ಎಲ್ಲೆಂದರಲ್ಲಿ  ಮಲಗಿ ಎರಡು ಮೂರು ದಿನಕ್ಕೊಮ್ಮೆ ಮನೆಗೆ ಬರುತ್ತಿದ್ದವರು  ದಿನಾಂಕ 15/08/2021 ರಂದು ಬೆಳಿಗ್ಗೆ 08:00 ಗಂಟೆಗೆ ಮನೆಯಿಂದ ಹೋದವರು ಸಂಜೆ 4:00 ಗಂಟೆಯ ಮಧ್ಯಾವಧಿಯಲ್ಲಿ ಗಿಳಿಯಾರು ಗ್ರಾಮದ ಹಳೆ ಪ್ರವಾಸಿ ಮಂದಿರದ ಒಳಗೆ ಕಟ್ಟಡದ ಒಳಗಿನ ಪಕ್ಕಾಸಿಗೆ ಹಗ್ಗದಿಂದ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಕೊಂಡು ಮೃತ ಪಟ್ಟಿರುವುದಾಗಿದೆ . ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 27/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಶ್ರೀನಾಥ್‌ ಶೇಟ್‌(43), ತಂದೆ: ಕೃಷ್ಣಾನಂದ ಶೇಟ್‌, ವಾಸ: ಬಿ-1, ವಸತಿಗೃಹ, ಲೇಡಿ ಗೋಶನ್‌ ಆಸ್ಪತ್ರೆ, ಮಂಗಳೂರು, ದ.ಕ ಜಿಲ್ಲೆ ಇವರು ಉಡುಪಿ ತಾಲೂಕು 76-ಬಡಗುಬೆಟ್ಟು ಗ್ರಾಮದ ಸರ್ವೇ ನಂಬ್ರ: 31/5 ರಲ್ಲಿ 4 ಸೆಂಟ್ಸ್‌ವಿಸ್ತೀರ್ಣ ಸ್ಥಿರಾಸ್ತಿಯನ್ನು ನೊಂದಾಯಿತ ವಿಭಾಗ ಪತ್ರದಂತೆ ಹಿಸೆ ವಿಭಾಗಿಸಿಕೊಂಡಿದ್ದು, 1ನೇ ಆರೋಪಿ 1) ಕೆ. ರಾಘವೇಂದ್ರ ಶೇಟ್‌ (45), ತಂದೆ: ಕೃಷ್ಣಾನಂದ ಶೇಟ್‌, ವಾಸ: ಎಲ್‌ಐಜಿ 46, ದೊಡ್ಡಣಗುಡ್ಡೆ, ಉಡುಪಿ ಇವರು ದಿನಾಂಕ 30/12/2015 ರಂದು ನಕಲಿ ಜಿಪಿಎ ಸೃಷ್ಟಿಸಿ 2ನೇ ಆರೋಪಿ 2) ಬಿ. ಮುರಳೀಧರ ಸಾಮಗ (53), ತಂದೆ: ಬಿ. ವೆಂಕಟಕೃಷ್ಣ ಸಾಮಗ, ವಾಸ: ಪದ್ಮಕೃಷ್ಣ ನಿಲಯ, ಪಡುಬೆಳ್ಳೆ, ಉಡುಪಿ ಇವರಿಗೆ ಕೃಯಸಾಧನ ಬರೆದು ಕೊಟ್ಟಿದ್ದು, ಆರೋಪಿ 3)  ದಿವ್ಯ, ತಂದೆ: ನಾರಾಯಣ,  ಕೇರ್‌ಆಫ್‌ ವಾಸುದೇವ ಐತಾಳ್‌, ವಾಸುಕಿ ಟವರ್‌, ಉಡುಪಿ, 4) ಅಶ್ವಥ್‌ಎನ್‌. ರಾವ್‌ (33), ತಂದೆ: ರಾಘವೇಂದ್ರ ನಾರಾಯಣ ರಾವ್‌, ವಾಸ: ವೆಂಕಟಾದ್ರಿ ಆಪಾರ್ಟ್‌ಮೆಂಟ್‌‌, ಭರ್‌ಕಾಟ್‌ಪುರ, ಹೈದರಾಬಾದ್‌, 5) ಶ್ರೀಮತಿ ಅಮೃತ ರಾವ್‌(35), ತಂದೆ: ರಾಘವೇಂದ್ರ ನಾರಾಯಣ ರಾವ್‌, ವಾಸ: ವೆಂಕಟಾದ್ರಿ ಆಪಾರ್ಟ್‌ಮೆಂಟ್‌‌, ಭರ್‌ಕಾಟ್‌ಪುರ, ಹೈದರಾಬಾದ್‌ ಇವರು ಸೇರಿ ಒಳಸಂಚು ನಡೆಸಿ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಸುಳ್ಳು ಸೃಷ್ಟನೆಯ/ನಕಲಿ ಜಿ.ಪಿ.ಎ, ಸಾಲಪತ್ರಗಳನ್ನು ಹಾಗೂ ಇತರ ದಾಖಲಾತಿಗಳನ್ನು ಸೃಷ್ಟಿಸಿ, ಪಿರ್ಯಾದಿದಾರರಿಗೆ ಸಂಬಂಧಿಸಿದ ಸ್ಥಿರಾಸ್ತಿಯನ್ನು ಪಿರ್ಯಾದಿದಾರರ ಗಮನಕ್ಕೆ ಬಾರದಂತೆ 2ನೇ ಆರೋಪಿಗೆ ಮಾರಾಟ ಮಾಡಿದಂತೆ ಕ್ರಯ ಸಾಧನವನ್ನು ಸೃಷ್ಟಿಸಿಕೊಂಡು ಹೆಚ್ಚಿನ ಬೆಲೆಗೆ 4 ಮತ್ತು 5 ನೇ ಆರೋಪಿತರಿಗೆ ಮಾರಾಟ ಮಾಡಿದಂತೆ ದಾಖಲಾತಿಗಳನ್ನು ಸೃಷ್ಟಿಸಿ, 4 ಮತ್ತು 5ನೇ ಆರೋಪಿತರು ಬ್ಯಾಂಕಿನಿಂದ ಸಾಲ ಪಡೆದು ಹಣವನ್ನು ತಮ್ಮ ಸ್ವಂತಕ್ಕೆ ಬಳಸಿ ಪಿರ್ಯಾದಿದಾರರಿಗೆ ವಂಚಿಸಿ ನಷ್ಟ ಉಂಟು ಮಾಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 116/2021 ಕಲಂ: 120(b), 415, 417, 420, 463, 464, 465, 468, 471 ಜೊತೆಗೆ 37 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
     

ಇತ್ತೀಚಿನ ನವೀಕರಣ​ : 19-08-2021 09:33 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080