ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಸಚಿನ್ ಆಚಾರ್ಯ (28), ತಂದೆ: ಯಾದವ ಆಚಾರ್ಯ, ವಾಸ: ಶ್ರೀ ಗಣೇಶ ನಿಲಯ ಸರಕಾರಿ ಬಾವಿಯ ಹತ್ತಿರ  ಉಳ್ತೂರು ಕುಂದಾಪುರ ತಾಲೂಕು ಇವರು ತನ್ನ  ಅಜ್ಜ ಮಹಾಬಲ ಆಚಾರಿ (91) ರವರಿಗೆ ಅಸೌಖ್ಯ ವಿದ್ದ ಕಾರಣ  ತೆಕ್ಕಟ್ಟೆ  ಕ್ಲಿನಿಕ್ ಗೆ ಹೋಗಲು ಹೊರಟು ದಿನಾಂಕ 19/08/2021 ರಂದು ಬೆಳಿಗ್ಗೆ 09:00 ಗಂಟೆಗೆ  ಮಹಾಬಲ ಆಚಾರಿಯವರನ್ನು ಜೊತೆಯಲ್ಲಿ ಕರೆದುಕೊಂಡು  ತೆಕ್ಕಟ್ಟೆಯ ಪೇಟೆಗೆ ಹೋಗಿ  ತೆಕ್ಕಟ್ಟೆಯ ಉಡುಪಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ರ ಬದಿಯಲ್ಲಿರುವ ಮೆಡಿಕಲ್ ಶಾಪ್ ನಿಂದ ಮದ್ದು ತೆಗೆದುಕೊಂಡು ನಂತರ ಅವರಿಗೆ ಡಾ. ಸುಮಂಗಲ ರವರ ಕ್ಲಿನಿಕ್ ಗೆ ಪರೀಕ್ಷಿಸುವ ಸಲುವಾಗಿ ಹೋಗಲು ತೆಕ್ಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಉಡುಪಿ ಕುಂದಾಪುರ ಏಕಮುಖ ರಾಷ್ಟ್ರೀಯ ಹೆದ್ದಾರಿ 66 ನ್ನು ದಾಟಿದ್ದು ಪಿರ್ಯಾದಿದಾರರ ಅಜ್ಜ ಪಿರ್ಯಾದಿದಾರರ ಹಿಂಬದಿಯಿಂದ ಬರುತ್ತಿರುವಾಗ ಪಿರ್ಯಾದಿದಾರರು  ಪೂರ್ವದ ಮಣ್ಣು ರಸ್ತೆಗೆ ಹೋಗುವಷ್ಟರಲ್ಲಿ KA-06-AA-4279 ನಂಬ್ರದ  ಕಾರು  ಚಾಲಕ ನು ತನ್ನ ಕಾರನ್ನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಹೋಗುತ್ತಿದ್ದ ಕಾರನ್ನು ಎಡಬದಿಯಿಂದ ಓವರ್ ಟೇಕ್ ಮಾಡಲು ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ಪಿರ್ಯಾದಿದಾರರ ಹಿಂದಿನಿಂದ ರಸ್ತೆ ದಾಟುತ್ತಿದ್ದ  ರಸ್ತೆಯ ಪೂರ್ವ ಬದಿಯ ಅಂಚಿನಲ್ಲಿದ್ದ  ಮಹಾಬಲ ಆಚಾರಿ  ರವರಿಗೆ  ಢಿಕ್ಕಿ ಹೊಡೆದ ಪರಿಣಾಮ ಮಹಾಬಲ ಆಚಾರಿಯವರು ಕಾರಿನ ಎದುರು ಗ್ಲಾಸ್ ನ ಮೇಲೆ ತಲೆ ಹೊಡೆದು ನಂತರ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ತೀವೃ ಸ್ವರೂಪದ ರಕ್ತಗಾಯವಾಗಿರುತ್ತದೆ . ಕಾರಿನ ಚಾಲಕನ ಹೆಸರು ಮೊಹಮ್ಮದ್ ಇಬ್ರಾಹಿಂ ಭಟ್ಕಳ ಎಂದು ತಿಳಿಯಿತು. ನಂತರ ಮಹಾಬಲ ಆಚಾರ್ಯರು ಮಾತನಾಡುವ ಸ್ಥಿತಿಯಲ್ಲಿ ಇಲ್ಲದವರನ್ನು  ಚಿಕಿತ್ಸೆಯ ಬಗ್ಗೆ ಒಂದು ಅಂಬುಲೆನ್ಸ ನಲ್ಲಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 153/2021 ಕಲಂ: 279,304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ: 19.08.2021 ರಂದು  ಬೆಳಗ್ಗೆ 09:00 ಗಂಟೆಗೆ ಪಿರ್ಯಾದಿ: ಶ್ರೀಮತಿ ಸುಕನ್ಯಾ, ಪ್ರಾಯ: 58 ವರ್ಷ, ಗಂಡ: ಜನಾರ್ಧನ, ವಾಸ: ದೇವಿ ಕೃಪಾ ಅಪಾರ್ಟ್ ಮೆಂಟ್, ಅಲಂಗಾರು, ಮೂಡಬಿದ್ರೆ,  ಇವರ ಸಂಬಂಧಿಕರಾದ ವಿಶ್ವನಾಥ ರವರೊಂದಿಗೆ ಕೆಲಸದ ನಿಮಿತ್ತ KA19EW 0613 ನೇ ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನದಲ್ಲಿ ಅಲಂಗಾರಿನಿಂದ ಇನ್ನಾಕ್ಕೆ ಹೊರಟಿದ್ದು,  ಸಮಯ ಸುಮಾರು ಬೆಳಗ್ಗೆ 09:30 ಗಂಟೆಗೆ ಕಾರ್ಕಳ ಪುಲ್ಕೇರಿ ಬೈಪಾಸ್ ತಲುಪುವಾಗ  ವಿಶ್ವನಾಥರು ಚಲಾಯಿಸುತಿದ್ದ ಮೋಟಾರ್ ಸೈಕಲ್ ಗೆ ನಾಯಿಯೊಂದು ಅಡ್ಡ ಬಂದಿದ್ದು ಅದನ್ನು ತಪ್ಪಿಸುವರೇ ವಿಶ್ವನಾಥರು ಅತಿ ವೇಗ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದವರು ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಮೋಟಾರ್ ಸೈಕಲ್ ಸ್ಕಿಡ್ ಆಗಿ ಮೋಟಾರ್ ಸೈಕಲ್ ಸಮೇತ ವಿಶ್ವನಾಥ ಹಾಗೂ ಸಹ ಸವಾರೆಯಾದ ಪಿರ್ಯಾದಿದಾರರು ಡಾಂಬಾರು ರಸ್ತೆಯ ಎಡಬದಿಗೆ ಬಿದ್ದಿದ್ದು, ಬಿದ್ದ ಪರಿಣಾಮ ಮೋಟಾರ್ ಸೈಕಲ್ ಜಖಂಗೊಂಡಿದ್ದು, ಪಿರ್ಯಾದಿದಾರ ಎಡಕೈಗೆ ತೀವ್ರ ಸ್ವರೂಪದ ಒಳ ಜಖಂ ಆಗಿದ್ದು, ವಿಶ್ವನಾಥರಿಗೆ ಎಡಕಾಲಿಗೆ ಗುದ್ದಿದ ಗಾಯ ಹಾಗೂ ಎಡ ಕೈಯ ಕೋಲು ಕೈಗೆ ತೆರಚಿದ ಗಾಯ ಹಾಗೂ ಕಣ್ಣಿನ ಬಳಿ ಗುದ್ದಿದ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 102/2021 ಕಲಂ 279,337,338 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ರಾಜೇಂದ್ರ ಎಸ್ ಕಾಂಚನ್ (34), ತಂದೆ: ಸುಬ್ಬ ಕಾಂಚನ್, ವಾಸ: ಲೀಲಾವತಿ  ಆನಗಳ್ಳಿ ಮನೆ, ಚಿಕ್ಕನ್ ಸಾಲ್ ರಸ್ತೆ, ಕುಂದಾಪುರ ಕಸಬಾ ಗ್ರಾಮ, ಕುಂದಾಪುರ ತಾಲೂಕು ಇವರ ಸ್ನೇಹಿತ ಸಂದೀಪ ಎಂಬುವವರು ದಿನಾಂಕ 19/08/2021 ರಂದು ಕುಂದಾಪುರ ಕಸಬಾ ಗ್ರಾಮದ ಹಾಲಾಡಿ ಹೊಳೆಯಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ಹೊಳೆಯಲ್ಲಿ ಒಂದು ಗಂಡಸಿನ ಮೃತ ದೇಹ ಕಂಡುಬಂದಿದ್ದು, ಈ ಬಗ್ಗೆ ಪಿರ್ಯಾದಿದಾರರು ಹೋಗಿ ಮೃತದೇಹವನ್ನು ನೋಡಲಾಗಿ  50-55 ವರ್ಷದ ಅಪರಿಚಿತ ಗಂಡಸಿನ ಮೃತ ದೇಹವಾಗಿದ್ದು, 2-3 ದಿನಗಳ ಹಿಂದೆ ಯಾವುದೋ ಕಾರಣದಿಂದ ಹೊಳೆಗೆ ಹಾರಿ ಮೃತಪಟ್ಟಿರಬಹುದು ಮೃತ ಶರೀರದ ಮೇಲೆ ಬಿಳಿ ಬಣ್ಣದ  ಕಪ್ಪು ಗೆರಗಳಿರುವ ತುಂಬುತೋಳಿನ ಅಂಗಿ ಇದ್ದು, ಮೃತದೇಹದ ಹಣೆಯ ಭಾಗ, ಎರಡುಕಣ್ಣುಗಳು, ಹಾಗೂ ಕಿವಿಯ ಭಾಗ ಮೀನು ಕಚ್ಚಿ ಗಾಯವಾಗಿರುತ್ತದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 30/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-08-2021 06:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080