ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

 • ಬ್ರಹ್ಮಾವರ:  ಬ್ರಹ್ಮಾವರ ತಾಲೂಕು ನಡೂರು ಗ್ರಾಮದ ನಡೂರು ಪಟೇಲ್‌ ಶ್ರೀ ಅಂತಯ್ಯ ಶೆಟ್ಟಿ ಸ್ಮಾರಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ , ದಿನಾಂಕ 18.07.2022 ರಂದು ರಾತ್ರಿ 8:00 ಗಂಟೆಯಿಂದ ದಿನಾಂಕ 19.07.2022 ಬೆಳಿಗ್ಗೆ 08:00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು  ಸದ್ರಿ ಶಾಲೆಯಲ್ಲಿರುವ ಅಡುಗೆ ಮನೆಯ ಬೀಗ ಮುರಿದು ಒಳಗೆ ಇಟ್ಟಿದ್ದ ಇಂಡಿಯನ್‌ ಗ್ಯಾಸ್‌ ಸಿಲಿಂಡರ್‌ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಸಿಲಿಂಡರ್‌ನ  ಅಂದಾಜು ಮೊತ್ತ ರೂ. 2,800/- ಆಗಿರುತ್ತದೆ ಈ  ಬಗ್ಗೆ  ಶ್ರೀನಿವಾಸ, ಅಧ್ಯಕ್ಷರು/ ಕಾರ್ಯದರ್ಶಿಗಳು, S.D.M.C, ನಡೂರು ಪಟೇಲ್‌ ಶ್ರೀ ಅಂತಯ್ಯ ಶೆಟ್ಟಿ ಸ್ಮಾರಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಡೂರು ರವರು ಬ್ರಹ್ಮಾವರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು ಅಪರಾಧ ಕ್ರಮಾಂಕ  122/2022 ಕಲಂ 457, 380 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ

 • ಕಾಪು: ಪಿರ್ಯಾದಿ ಶ್ರೀಶೈಲ್ ಡಿ. ಮುರಗೋಡ ಪಿಎಸ್‌ಐ(ಕಾ & ಸು) ಕಾಪು ಪೊಲೀಸ್ ಠಾಣೆ ರವರು  ದಿನಾಂಕ 18.07.2022 ರಂದು ಸಮಯ ಬೆಳಗ್ಗೆ 11:00 ಗಂಟೆಗೆ  ಠಾಣಾ ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪಿನಲ್ಲಿ ಠಾಣಾ ವ್ಯಾಪ್ತಿಯಲ್ಲಿ  ರೌಂಡ್ಸ್ ಕರ್ತವ್ಯದಲ್ಲಿರುವಾಗ ಏಣಗುಡ್ಡೆ  ಗ್ರಾಮದ ಫಾರೆಸ್ಟ್  ಗೇಟ್  ಹತ್ತಿರ  ಅನುಮಾನಾಸ್ಪದ ಓರ್ವ ವ್ಯಕ್ತಿ ಕಂಡು ಬಂದಿದ್ದು ಆತನನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಾದಕ ಸೇವನೆಯ ನಶೆಯಲ್ಲಿರುವ ಬಗ್ಗೆ ಅನುಮಾನಗೊಂಡು ಆತನನ್ನು ಸ್ಥಳದಲ್ಲಿಯೇ ವಶಕ್ಕೆ ಪಡೆದುಕೊಂಡು ಆತನ ಹೆಸರು, ವಿಳಾಸ ವಿಚಾರಿಸಿಲಾಗಿ ಆತನ ಹೆಸರು ಅಶ್ಲೇಷ್ ಎ . ಕೋಟ್ಯಾನ್ ಎಂದು ತಿಳಿಸಿದ್ದು ಸದ್ರಿಯವರಿಗೆ ಪೊಲೀಸ್ ನೋಟಿಸ್ ನೀಡಿ ವೈದ್ಯಕೀಯ ಪರೀಕ್ಷೆಯ ಬಗ್ಗೆ ಪ್ರೊಫೆಸರ್ ಅಂಡ್ ಹೆಡ್, ಕೆ.ಎಂ.ಸಿ ಪೊರೆನ್ಸಿಕ್ ವಿಭಾಗ ಮಣಿಪಾಲ  ಇವರ  ಮುಂದೆ ಹಾಜರುಪಡಿಸಿದ್ದು,  ಅದರಂತೆ ಪರೀಕ್ಷಿಸಿದ ವೈದ್ಯರು ದಿನಾಂಕ 19.07.2022 ರಂದು ಅಶ್ಲೇಷ್ ಎ. ಕೋಟ್ಯಾನ್ ಎಂಬಾತನು ಗಾಂಜಾ ಸೇವಿಸಿರುವ ಬಗ್ಗೆ ದೃಢ ಪತ್ರ ನೀಡಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 74/2022 ಕಲಂ : 27(ಬಿ) ಎನ್ ಡಿ ಪಿ ಎಸ್ ಕಾಯ್ದೆಯಂತೆ  ಪ್ರಕರಣ ದಾಖಲಿಸಲಾಗಿದೆ.
 • ಗಂಗೊಳ್ಳಿ: ಪಿರ್ಯಾದಿ ಮಹಮ್ಮದ್‌ ಆಸೀಫ್‌(31 ವರ್ಷ), ತಂದೆ: ಹುಸೈನಾರ್‌ವಾಸ: ಸುಲ್ತಾನ್‌ಮಸೀದಿ ಹತ್ತಿರ ಗಂಗೊಳ್ಳಿ ಗ್ರಾಮ ಇವರು ಇನ್ಸೂಲೇಟರ್‌ ಮೀನಿನ ಲಾರಿ ಹೊಂದಿದ್ದು,   ಸುಮಾರು 2 ವರ್ಷದ ಹಿಂದೆ ಸದ್ರಿ  ವಾಹನವನ್ನು ಬಾಡಿಗೆಗೆ ಆರೋಪಿ ಅಬ್ದುಲ್ ನಾಸೀರ್‌ರವರಿಗೆ ನೀಡಿದ್ದು,  ಅವರು ವಾಹನದ ಬಾಡಿಗೆ ಬಾಬ್ತು ರೂ 1,30,000/ ಹಣವನ್ನು ಪಿರ್ಯಾದಿದಾರರಿಗೆ ನೀಡಲು ಬಾಕಿ ಇರುತ್ತದೆ.  ದಿನಾಂಕ 17.07.2022 ರಂದು ಪಿರ್ಯಾದಿದಾರರು ಸಂಬಂಧಿಕರ ಮದುವೆಯ ಬಗ್ಗೆ ಮರವಂತೆ ಮಸೀದಿಯ ಹಾಲ್‌ಗೆ   ಹೋಗಿದ್ದು,  ಆ ಮದುವೆಗೆ ಆರೋಪಿ ಅಬ್ದುಲ್‌ ನಾಸೀರ್‌ ಮತ್ತು ಅಬ್ದುಲ್‌ ಶಾಕೀರ್‌ ರವರು ಬಂದಿರುತ್ತಾರೆ. ಸಮಯ ಸುಮಾರು 13:30 ಗಂಟೆಗೆ ಪಿರ್ಯಾದಿದಾರರು ಆಪಾದಿತ ಅಬ್ದುಲ್‌ ನಾಸೀರ್‌ ರವರಲ್ಲಿ ಬಾಕಿ ಇರುವ ವಾಹನದ ಬಾಡಿಗೆ ಹಣವನ್ನು  ಕೊಡುವಂತೆ ಕೇಳಿದಾಗ ಅಬ್ದುಲ್‌ ನಾಸೀರ್‌ ಹಾಗೂ ಅಬ್ದುಲ್ ಶಾಕೀರ್‌ ರವರು ಪಿರ್ಯಾದಿದಾರರಲ್ಲಿ ಜಗಳ ಮಾಡಿ ಹಣವನ್ನು ನೀಡುವುದಿಲ್ಲ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿ ಮದುವೆ ಹಾಲ್‌ ನಿಂದ ಹೊರಗೆ ಹೋಗು ಇಲ್ಲದಿದ್ದರೇ ನಿನ್ನನ್ನು ಇಲ್ಲಿಯೇ ಕೊಲೆ ಮಾಡುತ್ತೇವೆ ಎಂದು ಕೊಲೆ ಬೆದರಿಕೆ ಹಾಕಿತ್ತಾರೆ. ನಂತರ ಆರೋಪಿ ಅಬ್ದುಲ್‌ನಾಸೀರ್‌ಮತ್ತು ಅಬ್ದುಲ್ ಸಾಕೀರ್‌ಸದ್ರಿ ಮದುವೆ ಹಾಲ್‌ಬಳಿ ಹೊರಗೆ ನಿಲ್ಲಿಸಿದ್ದ ಕಾರಿನಲ್ಲಿರುವ ಕಬ್ಬಿಣದ ರಾಡ್‌, ಚೂರಿ, ದೊಣ್ಣೆಯನ್ನು ಹಿಡಿದುಕೊಂಡು ಆರೋಪಿಗಳ ಸಂಬಂದಿಕರಾದ ಕಾದ್ರಿ, ಆಸೀಪ್, ಜಲೀಲ್‌, ಸಲಾಂ ಮತ್ತು ಇತರರೊಂದಿಗೆ ಬಂದು ಆರೋಪಿ ಅಬ್ದುಲ್‌ಶಾಕೀರ್‌ರಾಡ್‌ನಿಂದ ಪಿರ್ಯಾದಿದಾರರ ತಲೆಗೆ, ಆರೋಪಿ ಅಬ್ದುಲ್‌ನಾಸೀರ ನು ದೊಣ್ಣೆಯಿಂದ ಕೈ ಕಾಲುಗಳಿಗೆ ಹೊಡೆದಿದ್ದು, ಆರೋಪಿ ಕಾದ್ರಿ, ಆಸೀಫ್‌, ಜಲೀಲ್‌, ಸಲಾಂ ಹಾಗೂ ಇತರರು ಕೈಯಿಂದ ಪಿರ್ಯಾದಿದಾರರ ಕೆನ್ನೆಗೆ, ಬೆನ್ನಿಗೆ ಹೊಡೆದು ಕಾಲಿನಿಂದ ತುಳಿದಿರುತ್ತಾರೆ,  ಪಿರ್ಯಾದಿದಾರರು ಬೊಬ್ಬೆ ಹಾಕಿದಾಗ ಸದ್ರಿ ಹಾಲ್‌ನಲ್ಲಿದ್ದ  ಜನರು ಹತ್ತಿರಕ್ಕೆ ಬಂದಾಗ ಆಪಾದಿತರು “ ಇನ್ನೊಂದು ಬಾರಿ ದುಡ್ಡು ಕೇಳಿದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ" ಎಂದು ಬೆದರಿಕೆ ಹಾಕಿ ಹೋಗಿರುತ್ತಾರೆ. ಸದ್ರಿ ಹಲ್ಲೆಯಿಂದ ಪಿರ್ಯಾದಿದಾರರ ಹಣೆಗೆ, ಕೈಕಾಲು ಸೊಂಟಕ್ಕೆ ಪೆಟ್ಟಾಗಿದ್ದು, ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಹೋಗಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋಗಿದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  64/2022 ಕಲಂ: 143,147, 148, 323, 324.  504, 506 R/w 149  IPC ಯಂತೆ ಪ್ರಕರಣ ದಾಖಲಿಸಲಾಗಿದೆ.  

ಅಸ್ವಾಭಾವಿಕ ಮರಣ ಪ್ರಕರಣಗಳು:

 • ಬೈಂದೂರು: ಫಿರ್ಯಾದಿ ರವೀಂದ್ರ ಶೆಟ್ಟಿ ಪ್ರಾಯ:36 ವರ್ಷ ತಂದೆ: ಮಹಾಬಲ ಶೆಟ್ಟಿ ವಾಸ: ಉದ್ದಿನಹಕ್ಲು, ಉಳ್ಳೂರು, ಮೂಡುಮಠ ಇವರ ಅಣ್ಣ ರಾಘವೇಂದ್ರ ಶೆಟ್ಟಿ  (42 ವರ್ಷ) ಇವರು ಬೆಂಗಳೂರಿನ ಜಯನಗರದಲ್ಲಿ ಕ್ಯಾಟರಿಂಗ್ ಸರ್ವಿಸ್ ಕೆಲಸ ಮಾಡಿಕೊಂಡಿದ್ದು ದಿನಾಂಕ 18-07-2022 ರಂದು ಬೆಂಗಳೂರಿನಿಂದ ಹೊರಟು  ಸಂಜೆ 5:00 ಗಂಟೆಗೆ ತನ್ನ ಮನೆಯಾದ  ಉದ್ದಿನಹಕ್ಲು  ಮೂಡುಮಠ  ಎಂಬಲ್ಲಿಗೆ ಬಂದು  ಮನೆಯಲ್ಲಿ ಸ್ನಾನ ಮಾಡಿ ತನ್ನ ತಂಗಿ ಅಶ್ವಿನಿ ಶೆಟ್ಟಿಯವರಲ್ಲಿ ತನಗೆ ಸರಿಯಾದ ಕೆಲಸ ಇಲ್ಲ  ಜೀವನ ನಿರ್ವಹಣೆಗೆ  ಕಷ್ಟ ಆಗಿದೆ ಜೀವನವೇ  ಬೇಡ ಎಂಬುದಾಗಿ  ಹೇಳಿ ಹೋಗಿದ್ದು,  ರಾಘವೇಂದ್ರ ಶೆಟ್ಟಿಯವರು ವಿಪರೀತ ಮಧ್ಯಪಾನ  ಮಾಡುವ  ಚಟವುಳ್ಳವರಾಗಿದ್ದು, ಸರಿಯಾದ ಕೆಲಸ ಇಲ್ಲದೇ ಇದ್ದು ಆರ್ಥಿಕ ಸಂಕಷ್ಟದ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು  ಉಳ್ಳೂರು ಗ್ರಾಮದ ಗೈಡರ ಶೆಡ್ ಬಳಿಯ ಹಾಡಿಯಲ್ಲಿ  ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡವರನ್ನು ಕುಂದಾಪುರ ಆದರ್ಶ ಆಸ್ಪತ್ರೆಗೆ ಚಿಕಿತ್ಸೆ  ಬಗ್ಗೆ  ಸೇರಿಸಿದ್ದು ರಾಘವೇಂದ್ರ ಶೆಟ್ಟಿ  ರವರು ಚಿಕಿತ್ಸೆ ಫಲಕಾರಿಯಾಗದೇ  ದಿನಾಂಕ 18-07-2022 ರಂದು ರಾತ್ರಿ  10:20 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಯುಡಿಅರ್‌ನಂಬ್ರ 33/2022 ಕಲಂ 174 ಸಿಅರ್‌ಪಿಸಿ.  ಯಂತೆ ಪ್ರಕರಣ ದಾಖಲಿಸಲಾಗಿದೆ. 
 • ಕೋಟ: ಪಿರ್ಯಾದಿ ದಿನೇಶ ಕಮಾರ್ ಪ್ರಾಯ 40 ವರ್ಷ ತಂದೆ: ರಾಮ ದಾಸ ಖಾರ್ವಿ ವಾಸ: ಆದಿಶಕ್ತಿ  ಕೃಪಾ  ಹೆಬ್ಬಾರ್ ಬೆಟ್ಟು ಮಣೂರು  ಇವರ ಹೆಂಡತಿಯ ತಂದೆ ಮೃತ ನಾರಾಯಣ ಖಾರ್ವಿ 58  ವರ್ಷ ರವರು ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದವರು  ವಿಪರೀತ ಕುಡಿತದ ಚಟ ಹೊಂದಿರುತ್ತಾರೆ. ಮೃತರು ದಿನಾಂಕ 13/07/2022 ರಂದು  ಬೆಳಿಗ್ಗೆ 04.00  ಗಂಟೆಗೆ ಎದ್ದವರು  ಸಾರಾಯಿ ಕುಡಿದು ನಶೆಯಲ್ಲಿ ಮಧು ಎಂಬುವುದಾಗಿ  ತಿಳಿದು ಕಿಟಕಿಯ ಬಳಿಯಿದ್ದ ಇಲಿ ಪಾಶಾಣವನ್ನು ಸೇವಿಸಿ ಅಸ್ವಸ್ಥ ಗೊಂಡವರನ್ನು ಚಿಕಿತ್ಸೆಯ ಬಗ್ಗೆ  ಉಡುಪಿ ಜಿಲ್ಲಾ ಆಸ್ಪತ್ರೆ ಗೆ ಕರೆದುಕೊಂಡು ಹೋಗಿದ್ದು ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ   ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದು ,  ದಿನಾಂಕ 19/07/2022 ರಂದು  ಬೆಳಿಗ್ಗೆ  .09.30 ಗಂಟೆಗೆ  ರಂದು ಮೃತ ಪಟ್ಟಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಯು.ಡಿ.ಆರ್ ನಂಬ್ರ 31/ /2022 ಕಲಂ: 174 CRPC ಯಂತೆ ಪ್ರಕರಣ ದಾಖಲಿಸಲಾಗಿದೆ.  

ಇತ್ತೀಚಿನ ನವೀಕರಣ​ : 19-07-2022 06:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080