ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಕಾರ್ಕಳ  : ದಿನಾಂಕ: 18/07/2021 ರಂದು ಪಿರ್ಯಾಧಿ ಶೈಲೇಶ್ ಇವರು ಅವರ ಬೈಕಿನಲ್ಲಿ ಬಜಗೋಳಿ ಪೇಟೆಗೆ ಬಂದು ಕೆಲಸ ಮುಗಿಸಿ ಮರಳಿ ಮನೆಗೆ ಹೋಗುವಾಗ ಕಾರ್ಕಳ ತಾಲೂಕು ಮುಡಾರು ಗ್ರಾಮದ ಕಡಾರಿ ಸುಮ್ಮ ಕಿರಿಯ ಪ್ರಾಥಮಿಕ ಶಾಲೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮಯ ಸುಮಾರು ರಾತ್ರಿ 9:00 ಗಂಟೆಗೆ ಮಾಳ ಕಡೆಗೆ ಕಾರೊಂದು ಹಿಂದಿಕ್ಕಿ ಅತೀ ವೇಗ ಅಜಾಗರೂಕತೆಯಿಂದ ಕಾರಿನ ಚಾಲಕನು ಚಲಾಯಿಸಿಕೊಂಡು ಚಾಲಕನ ನಿಯಂತ್ರಣ ತಪ್ಪಿ  ರಸ್ತೆಯ ಎಡಭಾಗದಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿರುತ್ತದೆ. ಪಿರ್ಯಾಧಿದಾರರು ಕೂಡಲೇ ಬೈಕ್ ನಿಲ್ಲಿಸಿ ಅಪಘಾತವಾದ ಸ್ಥಳಕ್ಕೆ ಹೋಗಿ ನೋಡಲಾಗಿ ಪರಿಚಯದ  ಕಾರಿನ ಚಾಲಕ ದೀಕ್ಷಿತ್, ಅಶೋಕ, ಹಾಗೂ ಸತೀಶ್ ಆಗಿದ್ದು, ಕಾರು ಸಂಫೂರ್ಣ ಜಖಂಗೊಂಡಿದ್ದು, ಸತೀಶನ ಕೈಗೆ ಹಾಗೂ ದೀಕ್ಷಿತನ  ತಲೆಗೆ ರಕ್ತ ಗಾಯವಾಗಿದ್ದು, ಅಶೋಕನಿಗೆ ಎದೆ , ಸೊಂಟ ಮತ್ತು ಕೈಗಳಿಗೆ ರಕ್ತ ಗಾಯವಾಗಿದ್ದು , ಕಾರಿನ ನಂಬರ್ ನೋಡಲಾಗಿ ಕೆಎ 05 ಎಮ್.ಡಿ 6671 ಆಗಿದ್ದು ,  ಕೂಡಲೇ ಗಾಯಾಳುಗಳನ್ನು ಜಗದೀಶ ರವರ ಕಾರಿನಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ  ವೈದ್ಯರು ಚಿಕಿತ್ಸೆ ನೀಡಿ, ನಂತರ ವೈದ್ಯರ ಸೂಚನೆಯಂತೆ ದೀಕ್ಷಿತ್ ನನ್ನು ಆದರ್ಶ ಆಸ್ಪತ್ರೆಗೆ, ಆಶೋಕ ಮತ್ತು ಸತೀಶನನ್ನು ವೆನ್ ಲಾಕ್ , ಮಂಗಳೂರು ಆಸ್ಪತ್ರೆಗೆ ಚಿಕಿತ್ಸೆಗೆ  ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  86/2021 ಕಲಂ: 279,337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ:     

  • ಕಾಪು: ತಿಮ್ಮೇಶ ಬಿ. ಎನ್ (ಅಪರಾಧ) ಪಿ.ಎಸ್.ಐ. ಕಾಪು ಠಾಣೆ ಇವರು ದಿನಾಂಕ: 18.07.2021 ರಂದು 19.00 ಗಂಟೆಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಜೂರು ಗ್ರಾಮದ ಉಮ್ಮರ ರವರ ಮನೆಯ ಎದುರು  ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಈ ಬಗ್ಗೆ ದಾಳಿ ನಡೆಸಿ  ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿಗಳ ಮೇಲೆ ಪ್ರಥಮ ವರ್ತಮಾನ ವರದಿ ತಯಾರಿಸಿ, ತನಿಖೆಯನ್ನು ಕೈಗೊಂಡು, ಮಾನ್ಯ ನ್ಯಾಯಾಲಯಕ್ಕೆ ದೋಷಾರೊಪಣಾ ಪತ್ರವನ್ನು ಸಲ್ಲಿಸಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಪಂಚರುಗಳೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ರಾತ್ರಿ ಠಾಣಾ ಪ್ರಭಾರದಲ್ಲಿರುವ ಹೆಚ್.ಸಿ. ನಾರಾಯಣ ಇವರೊಂದಿಗೆ ಇಲಾಖಾ ವಾಹನದಲ್ಲಿ ಹೊರಟು ಸದ್ರಿ ಮನೆಯಿಂದ ಸುಮಾರು 50 ಮೀಟರ್ ದೂರದಲ್ಲಿ ವಾಹನವನ್ನು ನಿಲ್ಲಿಸಿ ನೋಡಲಾಗಿ ಸದ್ರಿ ಮಜೂರು ಗ್ರಾಮದ ಉಮ್ಮರ ರವರ ಮನೆಯ ಎದುರು ಸಮೀಪ ಸಾರ್ವಜನಿಕ ಸ್ಥಳದಲ್ಲಿ ಮೊಂಬತ್ತಿ ಬೆಳಕಿನಲ್ಲಿ ಇಸ್ಪೀಟ್ ಜುಗಾರಿ ಆಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಬೆಳಗ್ಗೆ 20:45 ಗಂಟೆಯ ಸಮಯಕ್ಕೆ ದಾಳಿ ನಡೆಸಿ ನೋಡುವಾಗ 07 ಜನರು ಸುತ್ತುವರೆದು ಕುಳಿತುಕೊಂಡಿದ್ದರನ್ನು  ದಾಳಿ ನಡೆಸಿ ಆಪಾದಿತ 1) ಉಮ್ಮರ್ , 2)  ಸಲೀಂ , 3)  ಮೊಹಮ್ಮದ್ ಆಸ್ಲಾಂ, 4) ಮೊಹಮ್ಮದ್ ತೈಯಬ್ , 5) ಮೊಹಮ್ಮದ್ ಸುಮೀರ್, 6) ಹನೀಪ್ 7) ಇಕ್ಬಾಲ ಇವರುಗಳನ್ನು ವಶಕ್ಕೆ ಪಡೆದುಕೊಂಡು ಸ್ಥಳವನ್ನು ಪರಿಶೀಲಿಸಿದ್ದು ಆರೋಪಿಗಳು ಇಸ್ಪಿಟ್ ಜುಗಾರಿ ಆಟಕ್ಕೆ ಬಳಸಿದ ನಗದು ಹಣ 3790/- ರೂ. ಗಳು ಆಟಕ್ಕೆ ಬಳಸಿದ ಇಸ್ಪಿಟ್ ಎಲೆಗಳು – 52 , ನೆಲಕ್ಕೆ ಹಾಸಿದ ಹಳೆ ನ್ಯೂಸ್ ಪೇಪರ್ -2 ಮತ್ತು ಬೆಳಕಿಗೆ ವ್ಯವಸ್ಥೆ ಮಾಡಿಕೊಂಡ ದೊಡ್ಡ ಮೊಂಬತ್ತಿಗಳು - 2 ಸದ್ರಿ ಸೊತ್ತುಗಳನ್ನು ಮಹಜರ್ ಮುಖೇನ ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 120/2021 ಕಲಂ: 87 ಕೆಪಿ ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ.

 ಮನುಷ್ಯ ಕಾಣೆ ಪ್ರಕರಣ

  • ಕುಂದಾಪುರ: ಫಿರ್ಯಾದಿ ಕೇಶವ ಇವರ ತಮ್ಮ ಅಶೋಕ (36) ರವರು  ಕೂಲಿ ಕೆಲಸ ಮಾಡಿಕೊಂಡು ಫಿರ್ಯಾದಿದಾರರೊಂದಿಗೆ ವಾಸ ಮಾಡಿಕೊಂಡಿರುವುದಾಗಿದೆ. ದಿನಾಂಕ 17/07/2021 ರಂದು ರಂದು ಸಂಜೆ 19.30 ಗಂಟೆಗೆ ಮನೆಯಿಂದ ಹೋದವರು ವಾಪಾಸ್‌ ಈತನಕ ಬಂದಿರುವುದಿಲ್ಲ ತಮ್ಮ ಸಂಬಂಧಿಕರಲ್ಲಿ ಹಾಗೂ ಸ್ನೇಹಿತರಲ್ಲಿ  ವಿಚಾರಿಸಿ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 52/2021 ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 19-07-2021 09:35 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080