ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಪಡುಬಿದ್ರಿ: ಪಿರ್ಯಾದಿದಾರರಾಧ ಮಂಜುನಾಥ ಕೆ ಪೂಜಾರಿ (43): ಕೃಷ್ಣಪ್ಪ ಪೂಜಾರಿ ವಾಸ: ಶ್ರೀದೇವಿ ಕೃಪಾ, ಬೆಳಪು ಗ್ರಾಮ ಮತ್ತು ಅಂಚೆ, ಕಾಪು ಇವರ ತಮ್ಮ ರವೀಂದ್ರ (37) ಎಂಬವರು ದಿನಾಂಕ 18/07/2021 ರಂದು  ಕಾಪು ತಾಲೂಕು ಎಲ್ಲೂರಿನ ಪ್ರಸಾದ್ ಎಂಬವರ ಮನೆಗೆ ಮದುವೆಯ ಸಂಬಂಧ ಊಟಕ್ಕೆ ಹೋಗಿ ಅಲ್ಲಿ ಊಟ ಮಾಡಿ ರಾತ್ರಿ ಮನೆಗೆ ಬರುವರೇ ತನ್ನ KA-18-M-8329 ನೇ ನಂಬ್ರದ ಅಲ್ಟೋ ಕಾರನ್ನು ಚಲಾಯಿಸಿಕೊಂಡು ಎಲ್ಲೂರು ಕಡೆಯಿಂದ ಉಚ್ಚಿಲ ಕಡೆಗೆ ಬರುತ್ತಾ ರಾತ್ರಿ 22:55 ಗಂಟೆಗೆ ಎಲ್ಲೂರು ಗ್ರಾಮದ ಪೆಜತ್ತಕಟ್ಟೆ ಎಂಬಲ್ಲಿಗೆ ತಲುಪುವಾಗ ರವೀಂದ್ರರವರು ಕಾರನ್ನು ಅತೀವೇಗವಾಗಿ ಚಲಾಯಿಸಿದ್ದರಿಂದ ಮತ್ತು ಜೋರು ಮಳೆ ಬರುತ್ತಿರುವುದರಿಂದ ಕಾರು ನಿಯಂತ್ರಣ ತಪ್ಪಿ ರಸ್ತೆಯ ತೀರಾ ಎಡಕ್ಕೆ ಚಲಿಸಿ ಹುಲ್ಲು ತುಂಬಿದ್ದ ಚರಂಡಿ ಮೇಲೆ ಚಲಿಸಿ ಮಗುಚಿ ಬಿದ್ದು ಅದರಿಂದ ಕಾರು ಚಲಾಯಿಸುತ್ತಿದ್ದ ರವೀಂದ್ರ ರವರು ಹೊರಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡು ತೀವ್ರ ರಸ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 70/2021 ಕಲಂ: 279, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಹೆಂಗಸು ಕಾಣೆ ಪ್ರಕರಣ

  • ಉಡುಪಿ: ಫಿರ್ಯಾದಿ ಶಿವಪ್ಪ ಬಸಪ್ಪ ಇವರು 8 ವರ್ಷದ ಹಿಂದೆ ಪ್ರೇಮಾ 28 ವರ್ಷ ಎಂಬವಳನ್ನು ವಿವಾಹವಾಗಿದ್ದು ಪ್ರಸ್ತುತ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಪಜೀರ್‌ಲಚ್ಚಿಲ್‌ರಸ್ತೆ, ಕರಾವಳಿ ಬೈಪಾಸ್‌ಇಲ್ಲಿ ವಾಸವಿದ್ದು ಪಿರ್ಯಾದಿದಾರರಿಗೆ ರಮೇಶ 6 ವರ್ಷ ಹಾಗೂ ಲಕ್ಷ್ಮೀ 4 ವರ್ಷ ಎಂಬ ಇಬ್ಬರು ಮಕ್ಕಳು ಇದ್ದು , ದಿನಾಂಕ: 16/07/2021 ರಂದು 6:00 ಗಂಟೆಗೆ ಫಿರ್ಯಾದಿದಾರರು ಕೆಲಸಕ್ಕೆ ಹೋಗುವಾಗ ಹೆಂಡತಿ ಹಾಗೂ ಮಕ್ಕಳು ಮನೆಯಲ್ಲೇ ಇದ್ದರು. ಫಿರ್ಯಾದಿದಾರರು ಕೆಲಸಕ್ಕೆ ಹೋಗಿ ಬಸ್‌ಸ್ಟ್ಯಾಂಡಿನಲ್ಲಿದ್ದ ಸಮಯ ಬೆಳಿಗ್ಗೆ 07:50 ಗಂಟೆಗೆ  ತನ್ನ ಅಕ್ಕ ಫೋನ್‌ಮಾಡಿ ಪತ್ನಿ ಪ್ರೇಮಾ ಹಾಗೂ ಮಗ ರಮೇಶ ಮನೆಯಲ್ಲಿ ಇಲ್ಲದೆ ಕಾಣೆಯಾಗಿದ್ದು, ಎಲ್ಲಾ ಕಡೆ ಹುಡುಕಾಡಿದಲ್ಲಿ ಹಾಗೂ ಸಂಬಂಧಿಕರಲ್ಲಿ ಮತ್ತು ಹಿತೈಷಿಗಳಲ್ಲಿ ವಿಚಾರಿಸಿದಲ್ಲಿ ಈ ವರೆಗೆ  ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 103/2021 ಕಲಂ: ಹೆಂಗಸು ಮತ್ತು ಮಗು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ಶ್ರೀ ಜಿ.ಜಗದೀಶ, ಐ.ಎ.ಎಸ್, ರವರು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯವರಾಗಿದ್ದು, ದಿನಾಂಕ: 17/07/2021 ರಂದು ಯಾರೋ ಅಪರಿಚಿತ ವ್ಯಕ್ತಿಗಳು ಪಿರ್ಯಾದಿದಾರರ ಹೆಸರಿನಲ್ಲಿ G Jagadeesh Malalgadde ಎಂಬ ನಕಲಿ ಫೇಸ್ ಬುಕ್ ಖಾತೆಯನ್ನು ಸೃಷ್ಟಿಸಿ, ಅದರ ಫ್ರೋಫೈಲ್ ಗೆ ಪಿರ್ಯಾಧಿದಾರರ ಫೋಟೋವನ್ನು ದುರ್ಬಳಕೆ ಮಾಡಿ, ಇವರ ವೈಯಕ್ತಿಕ ಗೌರವಕ್ಕೆ ದಕ್ಕೆ ಉಂಟು ಮಾಡುವ ಉದ್ದೇಶದಿಂದ ಸದ್ರಿ ಫೇಸ್ ಬುಕ್ ಖಾತೆಯನ್ನು ತೆರೆದು ಹಣವನ್ನು ಕೇಳುತ್ತಿರುವ ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ದೂರು ನೀಡಿರುವುದಾಗಿದೆ.  ಬಗ್ಗೆ ಉಡುಪಿ ಸೆನ್‌ ಠಾಣಾ ಅಪರಾಧ ಕ್ರಮಾಂಕ 38-2021 ಕಲಂ 66(c), 66(d)  ಐ.ಟಿ. ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಮಣಿಪಾಲ: ಪಿರ್ಯಾದಿದಾರಾದ ರಾಘವೇಂದ್ರ ನಾಯ್ಕ ಇವರ ತಮ್ಮ ಉದಯ ಶಂಕರ್‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌(35)ರವರು  ದಿನಾಂಕ: 19.07.2021 ರಂದು ಬೆಳಿಗ್ಗೆ 10.30 ಗಂಟೆಗೆ ಉದಯ ಶಂಕರನು ಮನೆಯಲ್ಲಿನ ದನಗಳಿರುವ ಕೊಟ್ಟಿಗೆಯಲ್ಲಿನ ಸೆಗಣಿಯನ್ನು ತೆಗೆಯಲು ಹೋದವನು ಕೆಳಗೆ ಬಿದ್ದು, ಕೊಟ್ಟಿಗೆಯಲ್ಲಿನ ಸಿಮೆಂಟ್ ದಂಡೆಗೆ ಆತನ ತಲೆಗೆ ತಾಗಿ ರಕ್ತಗಾಯಗೊಂಡವನನ್ನು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ವೈದ್ಯರು ಪರೀಕ್ಷಿಸಿ ಉದಯಕುಮಾರನು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 25/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-07-2021 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080