ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಬೈಂದೂರು : ಪಿರ್ಯಾದಿ ಗಣೇಶ್ ಪ್ರಾಯ 33 ವರ್ಷ, ತಂದೆ: ಲಿಂಗ ಪೂಜಾರಿ, ವಾಸ: ಸುಬ್ಬಾರ್ ಹಿತ್ಲು ಮನೆ, ಉಪ್ಪುಂದ ಗ್ರಾಮ ಇವರು ನೀಡಿದ ದೂರಿನಂತೆ ದಿನಾಂಕ:18-06-2022 ರಂದು ತನ್ನ ಬಾಬ್ತು KA20EL7411ನೇ ಬುಲೇಟ್ ನ್ನು ಉಡುಪಿ ಕಡೆಯಿಂದ ಬೈಂದೂರು ಕಡೆಗೆ ರಾ.ಹೆ 66 ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಪುತ್ತೂರು ಗ್ರಾಮದ ಸಂತೆಕಟ್ಟೆ ಜಂಕ್ಷನ್ ನಿಂದ ಸ್ವಲ್ಪ ಮುಂದೆ ತಲುಪುವಾಗ ಸಮಯ ಸುಮಾರು 18-40 ಗಂಟೆಗೆ ಉಡುಪಿಯಿಂದ ಬ್ರಹ್ಮಾವರದ ಕಡೆಗೆ ಓರ್ವ ಮಿನಿ ಟೆಂಪೋ ಚಾಲಕ ತನ್ನ ಮಿನಿಟೆಂಪೋವನ್ನುದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬುಲೇಟ್ ನ ಎಡಬದಿಯಿಂದ ಒಮ್ಮೆಲೇ ಬಂದು ಎಡಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬುಲೇಟ್ ಸಮೇತ ರಸ್ತೆಗೆ ಬಿದ್ದು, ಚಿಕಿತ್ಸೆಯ ಬಗ್ಗೆ ಹೈಟೆಕ್ ಆಸ್ಪತ್ರೆ ಗೆ ದಾಖಲಾಗಿ ಪರೀಕ್ಷಿಸಿದ ವೈದ್ಯರು ಎಡಭುಜಕ್ಕೆ ಗಂಭೀರ ಸ್ವರೂಪದ ಮೂಳೆಮುರಿತದ ಜಖಂ,ಎಡಕೈಯ ಎರಡೂ ಬೆರಳಿಗೆ ಜಖಂ,ಎಡಬದಿಯ ರಿಬ್ಸ್ ಗೆ ಗುದ್ದಿದ ಜಖಂ,ಎಡಕಾಲಿನ ಮೊಣಗಂಟಿನ ಬಳಿ ಹಾಗೂ ಎಡಕಾಲಿನ ಬೆರಳಿಗೆ ತರಚಿದ ಗಾಯ ಹಾಗೂ ಬಲಕೈಯ ಅಂಗೈಗೆ ಬಲಕಾಲಿನ ಹೆಬ್ಬೆರಳಿಗೆ ತರಚಿದ ರಕ್ತಗಾಯ ಮತ್ತು ಎಡಕೈಯ ಭುಜದ ಬಳಿ ರಕ್ತ ಗಾಯ ಆಗಿರುತ್ತದೆ. ಅಪಘಾತಪಡಿಸಿದ ಮಿನಿಟೆಂಪೋ ವಾಹನವನ್ನು ಅದರ ಚಾಲಕ ಅಪಘಾತ ಸ್ಥಳದಲ್ಲಿ ನಿಲ್ಲಿಸದೇ ಮತ್ತು ಸ್ಥಳೀಯ ಪೊಲೀಸ್ ಠಾಣೆಗೆ ಅಪಘಾತದ ಮಾಹಿತಿಯನ್ನು ತಿಳಿಸದೇ , ಸ್ಥಳದಿಂದ ವಾಹನ ಸಮೇತ ಪರಾರಿಯಾಗಿರುತ್ತಾನೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  49/2022 ಕಲಂ: 279, 338 ಐ.ಪಿಸಿ.  ಮತ್ತು 134 ( ಎ) & (ಬಿ) ಜೊತೆಗೆ 187 ಐ.ಎಂ.ವಿ  ಕಾಯಿದೆ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣಗಳು

 • ಬ್ರಹ್ಮಾವರ : ಪಿರ್ಯಾದಿ ಚಾಲ್ಸ್‌ ಬುತೆಲ್ಲೊ , (68), ತಂದೆ: ಅಪ್ಲಿನ್‌ ರೊಡ್ರಿಗಸ್‌, ವಾಸ: ಉಪ್ಪಿನಕೋಟೆ, ಎಂಬಲ್ಲಿ  ವಾಸವಾಗಿದ್ದು ಆರೋಪಿತೆಯು ಪಿರ್ಯಾದಿದಾರರ ಸಹೋದರ- ಸಹೋದರಿಯವರ ವಿರುದ್ಧ ದಾರಿಯ ವಿಚಾರದಲ್ಲಿ ಸುಳ್ಳು ನಕ್ಷೆಯನ್ನು ತಯಾರು ಮಾಡಿ ಸದ್ರಿ ಸ್ಥಳದಲ್ಲಿ ದಾರಿಯಿದೆ ಎಂದು ಮತ್ತು ಅದಕ್ಕೆ ಸಂಬಂಧಪಟ್ಟ ದಾಖಲಾತಿ ಇದೆ ಎಂದು ಸುಳ್ಳು ದಾಖಲಾತಿಗಳನ್ನು ಸಲ್ಲಿಸಿ ಭೂಪರಿರ್ತನೆಯನ್ನು ಮಾಡಿಕೊಂಡಿರುತ್ತಾರೆ. ಅಲ್ಲದೇ ಪಿರ್ಯಾದಿದಾರರ ತಾಯಿಯು ದಿನಾಂಕ 05.09.1990 ರಂದು ಮೃತ ರಾಗಿದ್ದು, ಆರೋಪಿಗಳು ಯಾವ ರೀತಿಯಲ್ಲಾದರೂ ದಾರಿಯ ಹಕ್ಕನ್ನು ಪಡೆದುಕೊಳ್ಳುವ ಉದ್ದೇಶದಿಂದ  ದಿನಾಂಕ 07.12.2019 ರಂದು ಮೃತರಾದ ಪಿರ್ಯಾದಿದಾರರ ತಾಯಿಯ ಹೆಬ್ಬೆಟ್ಟೆನ್ನು ಆರೋಪಿಗಳು ತಾವೆ ಮಾಡಿಸಿಕೊಂಡು ಫೋರ್ಜರಿ ದಾಖಲಾತಿಯನ್ನು ಸೃಷ್ಟಿಸಿ, ತಾಯಿಯವರ ಒಪ್ಪಿಗೆ ಪತ್ರವನ್ನು ತಯಾರಿಸಿರುತ್ತಾರೆ.  ಸದ್ರಿ ಫೋರ್ಜರಿ ದಾಲಾತಿಯ ಆಧಾರದಲ್ಲಿ  ಪಿರ್ಯಾದಿದಾರರ ಸ್ಥಳದಲ್ಲಿ ಕಾನೂನಿಗೆ ವಿರುದ್ಧವಾಗಿ ಬಲಾತ್ಕಾರವಾಗಿ ರಸ್ತೆಯನ್ನು ನಿರ್ಮಾಣ ಮಾಡುವ ತಯಾರಿ ನಡೆಸಿರುತ್ತಾರೆ. ಸದ್ರಿ ಸ್ಥಳವು ಪಿರ್ಯಾದಿದಾರರ ಮತ್ತು ಅವರ ಕುಟುಂಬದ ಸ್ವಂತ ಸ್ವಾಧೀನಾನುಭವದ ಸ್ಥಳವಾಗಿದ್ದು, ಸದ್ರಿ ಸ್ಥಳದಲ್ಲಿ ಆರೋಪಿತರಿಗಾಗಗಲೀ ಇತರ ಯಾರಿಗೂ ಆಗಲೀ ಹೋಗಿ ಬರುವರೇ ಕಾಲುದಾರಿಯ ರಸ್ತೆಯಾಗಲೀ ಇರುವುದಿಲ್ಲ. ಆರೋಪಿಗಳು ಕಾನೂನಿಗೆ ವಿರುದ್ಧವಾದ ದಾಖಲಾತಿಗಳನ್ನು ಸೃಷ್ಟಿಸುವ ಉದ್ಧೇಶದಿಂದ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿದ್ದು ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ನೀಡಿರುವ ಪಿರ್ಯಾದು ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  108/2022 ಕಲಂ : 415, 416, 417, 420, 463, 464, 465, 469, 506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ,

ಅಸ್ವಾಭಾವಿಕ ಮರಣ ಪ್ರಕರಣಗಳು

 • ಕಾರ್ಕಳ:  ಕಾರ್ಕಳ ತಾಲೂಕು ಮುಡಾರು ಗ್ರಾಮದ ಗರಡಿಗುಡ್ಡೆ ನಿವಾಸಿ ಪಿರ್ಯಾದಿ ಪ್ರದೀಪ  (31),ತಂದೆ: ರಾಜು  ಪೂಜಾರಿ   ವಾಸ: ಭೃಮರಾಂಭ ಕೃಪಾ ಗರಡಿಗುಡ್ಡೆ ಬಜಗೋಳಿ ಇವರ ತಮ್ಮ ಪ್ರಶಾಂತ, ಪ್ರಾಯ 29 ವರ್ಷ, ಈತನು ಚಿಕ್ಕ ವಯಸ್ಸಿನಿಂದಲೂ ಅತಿಯಾದ ಮಧ್ಯ ವ್ಯಸನಿಯಾಗಿದ್ದು, ದಿನಾಂಕ 16/06/2022 ರಂದು ಸಂಜೆ 6:00 ಗಂಟೆಗೆ ಬುನ್ನಾಡಿಯ ತನ್ನ ದೊಡ್ಡಮ್ಮನ ಮನೆಗೆ ಹೋಗುವ ದಾರಿಯಲ್ಲಿ ನಿಂತು ಕೊಂಡಿದ್ದವನು ಕಾಣೆಯಾಗಿದ್ದು, ಆತನಗಿರುವ ಅತಿಯಾದ ಮದ್ಯಸೇವನೆಯ ಕಾರಣದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದವನು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 16/06/2022 ರಂದು ಸಂಜೆ 6:00 ಗಂಟೆಯಿಂದ ದಿನಾಂಕ 19/06/2022 ರ ಬೆಳಿಗ್ಗೆ 09:30 ಗಂಟೆಯ ಮಧ್ಯೆ ಮುಡಾರು ಗ್ರಾಮದ ಕೊಂಕದ ಕಾಪು ಎಂಬಲ್ಲಿರುವ ಯಾರು ವಾಸ್ತವ್ಯ ಇಲ್ಲದ ಶೆಡ್ ನಲ್ಲಿ ಮರದ ಪಕ್ಕಾಸಿಗೆ, ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪ್ರಶಾಂತನ ಮೃತ ದೇಹ ಪತ್ತೆಯಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಯುಡಿಆರ್  ಸಂಖ್ಯೆ 19/2022 US 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಪಿರ್ಯಾದಿ ಮಹೇಶ್ವರಿ ಪ್ರಾಯ 29 ವರ್ಷ ತಂದೆ: ಈಶ್ವರ ವಾಸ: ಬೋರುಗುಡ್ಡೆ ಮನೆ  ತೆಂಕೆಡಪದವು ಗ್ರಾಮ ಮಂಗಳೂರು ಹಾಲಿ ವಾಸ: ಗುಡ್ಡೆಟ್ಟುಇವರು ಮೂಲತಃ ಮಂಗಳೂರಿನ ವಾಸಿಗಳಾಗಿದ್ದು ದಿನಾಂಕ 14/06/2022 ರಂದು ತನ್ನ ದೊಡ್ಡಮ್ಮನ ಮನೆಯಾದ ಶಿರಿಯಾರ ಗ್ರಾಮದ ಗುಡ್ಡಟ್ಟುವಿಗೆ ಬಂದಿರುತ್ತಾರೆ. ಪಿರ್ಯಾದಿದಾರರ  ಅಣ್ಣ  ಶಂಕರ ಪ್ರಾಯ 33 ವರ್ಷ ಈತನು  ಸುಮಾರು 15 ವರ್ಷಗಳಿಂದ  ವಿಪರೀತವಾಗಿ  ಮಧ್ಯಪಾನ ಸೇವಿಸುತ್ತಿದ್ದು  ಇದರಿಂದ ಆತನಿಗೆ ವಿಪರೀತ ಅನಾರೋಗ್ಯ ಉಂಟಾಗಿದ್ದು ಅದಕ್ಕೆ  ಚಿಕಿತ್ಸೆ ಮಾಡಿಸಿದ್ದು ಅಲ್ಲದೇ  ಮದ್ಯಪಾನ ಮಾಡುವುದನ್ನು ನಿಲ್ಲಿಸಲು  ಕೂಡ  ಚಿಕಿತ್ಸೆ ಮಾಡಿಸುತ್ತಿದ್ದು,  ಆತನು ದಿನಾಂಕ 18/06/2022 ರಂದು  ಸಂಜೆ  ತೀವೃ  ನಿತ್ರಾಣ ಗೊಂಡು  ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ  ಕರೆದುಕೊಂಡು ಹೋಗುವಾಗಲೇ  ಮೃತ ಪಟ್ಟಿರುತ್ತಾನೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಯು.ಡಿ.ಆರ್ ನಂಬ್ರ 24/ /2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-06-2022 06:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080