ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

 • ಗಂಗೊಳ್ಳಿ: ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾನ್ಯ ಜಿಲ್ಲಾಧಿಕಾರಿಯವರು  ಸಂ ಎಂ.ಎಜಿ(2) ಆರ್,51/2020 -21E-54506 ದಿನಾಂಕ   12-06-2021 ರಂತೆ ಮಾರ್ಗಸೂಚಿ ಆದೇಶ ಹೊರಡಿಸಿದ್ದು, ಜಿಲ್ಲಾಧಿಕಾರಿಯವರ ಆದೇಶದಂತೆ ಪ್ರಭಾಕರ ಕುಲಾಲ್ (38 ವರ್ಷ), ತಂದೆ:ವಲಯ ಅರಣ್ಯ ಅಧಿಕಾರಿ, ಕುಂದಾಪುರ ವಲಯ, ಇವರು Flying squad ಅಧಿಕಾರಿಯಾಗಿದ್ದು, ದಿನಾಂಕ 18/06/2021 ಚಾಲಕ ಅಶೋಕ್‌ ರವರ ಜೊತೆಯೆಲ್ಲಿ ಗಂಗೊಳ್ಳಿ ಪೇಟೆ ಪರಿಸರದಲ್ಲಿ ಸಂಚರಿಸಿಕೊಂಡಿರುವಾಗ ಮೇಲ್‌ಗಂಗೊಳ್ಳಿ ನೀರು ಟ್ಯಾಂಕ್‌ ಬಳಿ ಅಹಲ್ಲಾದೀಸ್ ಧ್ಯಾನ ಕೇಂದ್ರದಲ್ಲಿ ಜನರು ಗುಂಪು ಸೇರಿ  ಪ್ರಾರ್ಥನೆ ಮತ್ತು ಪ್ರವಚನ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಗಂಗೊಳ್ಳಿ  ಠಾಣಾ ಪಿ.ಎಸ್.ಐ ಮತ್ತು ಗಂಗೊಳ್ಳಿ ಗ್ರಾಮ ಪಂಚಾಯತ್ ಪಿ.ಡಿ.ಓ ರವರೊಂದಿಗೆ ಮಧ್ಯಾಹ್ನ 1:45 ಗಂಟೆಗೆ ಸದ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಲ್ಲಿ ಆಪಾದಿತರಾದ 1] ಅಬ್ದುಲ್ ಅಜೀಜ್ (56), 2] ಮಹಮ್ಮದ್ ಹಸನ್  (62), 3] ಎಂ.ಹೆಚ್   ಜಾಹೀದ್ (62), 4] ಅಬ್ದುಲ್ ಪಾಯೀಜ್ (25), 5] ಮಹಮ್ಮದ್ ನಿಯಾಜ್ (51), 6] ಅಬ್ದುಲ್ ಬಾಸೀತ್(18) ಎಂಬುವವರು ಯಾವುದೇ ಅನುಮತಿ ಪಡೆಯದೇ ಹಾಗೂ ದಾಖಲೆಗಳಿಲ್ಲದೇ ಅಹಲ್ಲಾದೀಸ್ ಧ್ಯಾನ ಕೇಂದ್ರದಲ್ಲಿ ಧ್ವನಿವರ್ಧಕ ಅಳವಡಿಸಿಕೊಂಡು ಪ್ರಾರ್ಥನೆ/ಪ್ರವಚನ ಮಾಡುವ ಮೂಲಕ ಸರ್ಕಾರ ಮತ್ತು ಜಿಲ್ಲಾಡಳಿತದ ಆದೇಶವನ್ನು ಉಲ್ಲಂಘಿಸಿ, ಮಾನವ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್‌-19 ಸೋಂಕು ಹರಡುವ ಸಾಧ್ಯತೆ ಇದೆ ಎನ್ನುವ ವಿಷಯ ತಿಳಿದೂ ಸಕಾರಣವಿಲ್ಲದೇ ಕಟ್ಟಡದ ಒಳಗೆ ಗುಂಪು ಸೇರಿ ಪ್ರಾರ್ಥನೆ/ಪ್ರವಚನ ನಡೆಸಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ 53/2021 ಕಲಂ 269 ಐ.ಪಿ.ಸಿ ಹಾಗೂ ಕಲಂ 5 The Epidemic Disease Act 2020 ನಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಲ್ಪೆ: ದಿನಾಂಕ  18-10-2020  ರಂದು  ಉಡುಪಿ  ಜಿಲ್ಲೆಯ ಕಲ್ಯಾಣಪುರ  ಸಂತೆಕಟ್ಟೆಯಲ್ಲಿ  ಇರುವ  ಮೌಂಟ್ ರೋಜಾರಿ  ಇಂಗ್ಲೀಷ್  ಮೀಡಿಯಾಂ  ಶಾಲೆಯಲ್ಲಿ  ನಡೆದಿರುವ  ಕರ್ನಾಟಕ ರಾಜ್ಯ ಸಶಸ್ತ್ರ  ಪೊಲೀಸ್  ಕಾನ್ ಸ್ಟೇಬಲ್  ಹುದ್ದೆಯ  ನೇಮಕಾತಿ  ಲಿಖಿತ  ಪರೀಕ್ಷೆಯಲ್ಲಿ  ಪ್ರವೀಣ್ ಖೋಟ್  ಅರ್ಜಿ ನಂಬ್ರ  9818972 ,  ಹಾಲ್  ಟಿಕೇಟ್  ನಂಬ್ರ  8756152     ಎಂಬಾತನ  ಬದಲಿಗೆ   ಇನ್ನೊಬ್ಬ  ವ್ಯಕ್ತಿಯು   ಲಿಖಿತ ಪರೀಕ್ಷೆ  ಬರೆದಿದ್ದು , ಮುಂದುವರಿದು,  ಆ  ಬಳಿಕ ದಿನಾಂಕ  19-12-2020  ರಂದು ಧಾರವಾಡದಲ್ಲಿ ನಡೆದ ದೇಹದಾಡ್ಯತೆ   ಹಾಗೂ ಸಹಿಷ್ಣುತೆ  ಪರೀಕ್ಷೆಯಲ್ಲಿ   ಮತ್ತು   ದಿನಾಂಕ 13-01-2021  ರಂದು  ವೈಧ್ಯಕೀಯ  ಪರೀಕ್ಷೆಯಲ್ಲಿ ಪ್ರವೀಣ್ ಖೋಟ್   ಹಾಜರಾಗಿದ್ದು ,  ಈ ಬಗ್ಗೆ  ವಿಚಾರಣೆ  ನಡೆಸಿ  ಪಡೆದಿರುವ  ಬೆರಳು ಮುದ್ರೆ ಸಂಗ್ರಹಾಲಯ  ಬೆಂಗಳೂರು  ಇವರಿಂದ  ಪಡೆದಿರುವ  ಅಭಿಪ್ರಾಯ  ವರದಿಯಲ್ಲಿ  ದಿನಾಂಕ  18-10-2020 ರಂದು  ಸಂತೆಕಟ್ಟೆಯಲ್ಲಿ  ಇರುವ  ಮೌಂಟ್ ರೋಜಾರಿ  ಇಂಗ್ಲೀಷ್  ಮೀಡಿಯಾಂ  ಶಾಲೆಯಲ್ಲಿ  ನಡೆದಿರುವ ಲಿಖಿತ  ಪರೀಕ್ಷೆಯಲ್ಲಿ   ಹಾಜರಾಗಿರುವ  ಪ್ರವೀಣ್ ಖೋಟ್   ಎಂಬಾತನ   ಹೆಬ್ಬೆಟ್ಟಿನ  ಬೆರಳು ಮುದ್ರೆ  ಹಾಗೂ ಧಾರವಾಡದಲ್ಲಿ  ನಡೆದ ದೇಹದಾಡ್ಯತೆ   ಹಾಗೂ ಸಹಿಷ್ಣುತೆ  ಪರೀಕ್ಷೆಯಲ್ಲಿ   ಹಾಗೂ  ವೈಧ್ಯಕೀಯ  ಪರೀಕ್ಷೆಯಲ್ಲಿ ಹಾಜರಾದ ಅಭ್ಯರ್ಥಿಯ  ಹೆಬ್ಬೆಟ್ಟಿನ  ಬೆರಳು ಮುದ್ರೆ  ಹೊಂದಾಣಿಕೆ ಅಗದೆ  ಇರುವುದು  ಕಂಡು ಬಂದಿರುತ್ತದ.  ಆರೋಪಿ 1 ನೇ   ಪ್ರವೀಣ್  ಖೋಟ್  ಹಾಗೂ  ಆರೋಪಿ 2 ನೇ ಇನ್ನೊಬ್ಬ  ವ್ಯಕ್ತಿ  , ಪೊಲೀಸ್  ನೇಮಕಾತಿ  ಹೊಂದುವ ಉದ್ದೇಶ ಹೊಂದಿ, 2 ನೇ ಆರೋಪಿಯು ತಾನು  ಪ್ರವೀಣ್ ಖೋಟ್  ಅಲ್ಲದೇ ಇದ್ದರೂ  ಆತನಂತೆ ನಟಿಸಿ ಕಲ್ಯಾಣಪುರ  ಸಂತೆಕಟ್ಟೆಯಲ್ಲಿ  ಇರುವ  ಮೌಂಟ್ ರೋಜಾರಿ  ಇಂಗ್ಲೀಷ್  ಮೀಡಿಯಾಂ  ಶಾಲೆಯಲ್ಲಿ  ನಡೆದಿರುವ, ಪೊಲೀಸ ನೇಮಕಾತಿಯ ಲಿಖಿತ  ಪರೀಕ್ಷೆಯಲ್ಲಿ  ಹಾಜರಾಗಿದ್ದು , ಆ  ಬಳಿಕ ಧಾರವಾಡದಲ್ಲಿ  ನಡೆದ ದೇಹದಾಡ್ಯತೆ   ಹಾಗೂ ಸಹಿಷ್ಣುತೆ  ಪರೀಕ್ಷೆಯಲ್ಲಿ   ಹಾಗೂ  ವೈಧ್ಯಕೀಯ  ಪರೀಕ್ಷೆಯಲ್ಲಿ  1 ನೇ ಆರೋಪಿ ಪ್ರವೀಣ್  ಖೋಟ್  ಹಾಜರಾಗಿ , ವಂಚನೆಯನ್ನು ನಡೆಸಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ 78/2021 ಕಲಂ:416, 417, 419 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

 • ಬ್ರಹ್ಮಾವರ: ದಿನಾಂಕ:18/06/2021 ರಂದು  ಫಿರ್ಯಾದಿದಾರರಾದ ರಂಜಿತ್ ಶೆಟ್ಟಿ ರವರು ಅವರ ಬಾಬ್ತು ಮೋಟಾರ್ ಸೈಕಲ್‌ನಲ್ಲಿ ಸ್ನೇಹಿತನನ್ನು ಸಹಸವಾರರನ್ನಾಗಿ ಕುರಿಸಿಕೊಂಡು ಬ್ರಹ್ಮಾವರಕ್ಕೆ ಹೋಗಲು ಕೂರಾಡಿ ಕಡೆಯಿಂದ ನೀಲಾವರ ಕ್ರಾಸ್ ಕಡೆಗೆ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಬೆಳಿಗ್ಗೆ 09:00 ಗಂಟೆ ಸುಮಾರಿಗೆ ನೀಲಾವರ ಗ್ರಾಮದ ಮಧ್ಯಸ್ಥರ ಬೆಟ್ಟು  ಸ್ನೇಹ ಗೇಟ್ ಬಳಿ ತಲುಪುವಾಗ ಅವರ ಎದುರಿನಿಂದ ಅಂದರೆ ನೀಲಾವರ ಕ್ರಾಸ ಕಡೆಯಿಂದ ಆರೋಪಿ ಪಿ. ಶ್ರೀನಿವಾಸ ಭಟ್ ರವರು ಅವರ ಬಾಬ್ತು KA20MB7316 ನೇ ಇಕೋ ಫೋರ್ಡ್ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ  ಎದುರಿನಲ್ಲಿ ನೀಲಾವರ ಕಡೆಗೆ ಅಜಿತ್ ಎನ್.ಎಸ್ ರವರು ಸವಾರಿ ಮಾಡುತ್ತಿದ್ದ KA20EB6805 ನೇ ಬಜಾಜ್ ಪಲ್ಸರ್ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದಿರುವುದಾಗಿದೆ.  ಈ ಅಪಘಾತದ ಪರಿಣಾಮ ಅಜಿತ್ ಎನ್.ಎಸ್ ರವರು ತನ್ನ ಮೋಟಾರ್ ಸೈಕಲ್ ಸಮೇತ ಟಾರ್ ರಸ್ತೆಯ ಮೇಲೆ ಬಿದ್ದು ಅವರ ಕೈ ಕಾಲುಗಳಿಗೆ ತೀವ್ರ ಮೂಳೆ ಮುರಿತದ ಗಾಯವಾಗಿರುತ್ತದೆ. ಗಾಯಗೊಂಡ ಅವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅಲ್ಲಿಂದ ವೈಧ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 119/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ದಿನಾಂಕ: 18.06.2021 ರಂದು ಬೆಳಿಗ್ಗೆ ಫಿರ್ಯಾದಿದಾರರಾದ ರಾಘವೇಂದ್ರ ಕೊಳಂಬೆ ರವರು 52ನೇ ಹೇರೂರು ಗ್ರಾಮದ ರಾಜೀವ ನಗರದ ಅಂಗನವಾಡಿ ಸಮೀಪ ಅವರ ಸ್ನೇಹಿತನ ಜೋತೆ ರಸ್ತೆ ಬದಿಯಲ್ಲಿ ನಿಂತು ಮಾತನಾಡುತ್ತಿರುವಾಗ ಬೆಳಿಗ್ಗೆ 11:20 ಗಂಟೆ ಸುಮಾರಿಗೆ ಕೃಷಿಕೇಂದ್ರ ಕಡೆಯಿಂದ ರುಡ್‌ಸೆಟ್ ಕಡೆಗೆ ಆರೋಪಿ ಗಂಗಾಧರ ಎಂಬವರು ಅವರ ಬಾಬ್ತು KA20B3397 ನೇ ಟಿಪ್ಪರ್‌ ವಾಹನನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಟಿಪ್ಪರ್‌ನ ಎದುರುಗಡೆಯಿಂದ ಅಂದರೆ ರುಡ್‌ಸೆಟ್ ಕ್ರಾಸ್‌ನಿಂದ ಕೃಷಿಕೇಂದ್ರದ ಕಡೆಗೆ ಸಹಸವಾರನೊಂದಿಗೆ ಸವಾರಿ ಮಾಡುತ್ತಿದ್ದ KA20EQ0126 ನೇ ಬಜಾಜ್ ಪಲ್ಸರ್ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದು, ಈ ಅಪಘಾತದ ಪರಿಣಾಮ ಸದ್ರಿ ಮೋಟಾರ್ ಸೈಕಲ್ ಸಮೇತ ಅದರ ಸವಾರ ಯತಿರಾಜ್ ಹಾಗೂ ಸಹಸವಾರ ರೂಬನ್ ಡಿಅಲ್ಮೇಡಾ ರವರು ರಸ್ತೆಯ ಮೇಲೆ ಬಿದ್ದು, ಇಬ್ಬರಿಗೂ ಕೈಕಾಲು, ಮುಖ, ತಲೆಗೆ ಅಲ್ಲಲ್ಲಿ ತೀವ್ರ ರಕ್ತಗಾಯವಾಗಿರುತ್ತದೆ, ಗಾಯಾಳುಗಳು ಇಬ್ಬರನ್ನೂ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 120/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-06-2021 12:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080