ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಸಂತೋಷ್ ಕರ್ಕೆರಾ (38), ತಂದೆ: ಸುಂದರ, ವಾಸ: ಪ್ರಶಾಂತ ನಿಲಯ ಪೆಕಿರ್ನಕಟ್ಟೆ ಮಲ್ಲಾರು ಗ್ರಾಮ ಕಾಪು ತಾಲೂಕು ಇವರು ದಿನಾಂಕ 17/05/2023 ರಂದು ಸಂತೆ 6:30 ಗಂಟೆಗೆ ಅಶ್ವಿನಿಯವರನ್ನು ಸಹಸವಾರಳನ್ನಾಗಿ ಕುಳ್ಳಿರಿಸಿಕೊಂಡು ತನ್ನ  ಮೋಟಾರು ಸೈಕಲ್ ನಂಬ್ರ KA-20-EM-6977 ನೇದರಲ್ಲಿ ಕಾಪು ಕಡೆಯಿಂದ ಬ್ರಹ್ಮಾವರ ಕಡೆಗೆ ಹೋಗುತ್ತಿರುವಾಗ ಪುತ್ತೂರು ಗ್ರಾಮದ ನಿಟ್ಟೂರು ಬ್ಬು ಸ್ವಾಮಿ ದೇವಸ್ಥಾಬನದ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹಿಂದಿನಿಂದ KA-20-EN-0937 ಸ್ಕೂಟರ್ ಸವಾರ ದಯಾನಂದ ಪೂಜಾರಿ ತನ್ನ ಸ್ಕೂಟರನ್ನು ದುಡುಕುತನ ಮತ್ತು ನಿರ್ಲ್ಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ KA-20-EM-6977 ಬೈಕ್ ಸವಾರ ಹಾಗೂ ಸಹಸವಾರ ಅಶ್ವಿನಿಯ ರವರು ಬೈಕ್ ಸಮೇತ ರಸ್ತೆಗೆ ಬಿದ್ದು, ಅಶ್ವಿನಿಯವರಿಗೆ ಬಲಕಾಲಿಗೆ ಮೂಳೆಮುರಿತದ ಜಖಂ ಉಂಟಾಗಿರುತ್ತದೆ. ಹಾಗೂ KA 20EN0937 ಸ್ಕೂಟರ್ ಸವಾರ ದಯಾನಂದ ಪೂಜಾರಿ ರವರಿಗೂ ಪೆಟ್ಟಾಗಿ ಇಬ್ಬರೂ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 52/2023 ಕಲಂ: 279 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿದಾರರಾದ ಗಣೇಶ್ (53), ತಂದೆ: ರಾಮ ಮೂಲ್ಯ,  ವಾಸ: ಶಿವಶಕ್ತಿ ನಿವಾಸ, ಸಚ್ಚರಿಪೇಟೆ, ಮುಂಡ್ಕೂರು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರು KA-19-AD-4279 ನೇ ನಂಬರಿನ ನವದುರ್ಗಾ ಬಸ್ಸಿನ ನಿರ್ವಾಹಕರಾಗಿದ್ದು ಎಂದಿನಂತೆ ತಮ್ಮ ಬಸ್ಸಿನಲ್ಲಿ ಪ್ರಯಾಣಿಕರನ್ನು ಕರೆದುಕೊಂಡು 15:25 ಗಂಟೆಗೆ ಬೆಳ್ಮಣ್ ನಿಂದ ಕಿನ್ನಿಗೋಳಿ ಕಡೆಗೆ ಹೊರಟು ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆ ಕ್ರಾಸ್ ಗಿಂತ ಸ್ವಲ್ಪ ಹಿಂದೆ ಕಿನ್ನಿಗೋಳಿ ಕಡೆಗೆ ಹೋಗುತ್ತಿರುವಾಗ ಎದುರಿನಿಂದ  ಸಂಕಲಕರಿಯ ಕಡೆಯಿಂದ 15:50 ಗಂಟೆಗೆ MH-04-LB-5467 ಕಾರನ್ನು ಅದರ ಚಾಲಕ  ಅತಿವೇಗ ಹಾಗು ಅಜಾಗರುಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಬಲಬದಿಗೆ ಬಂದು ಪಿರ್ಯಾದಿದಾರರು ಇದ್ದ ಬಸ್ಸಿನ ಬಲಬದಿಯ ಹಿಂಭಾಗದ ಚಕ್ರಕ್ಕೆ ಡಿಕ್ಕಿಹೊಡೆದು ಸುಮಾರು 20 ಮೀಟರ್ ನಷ್ಟು ಮುಂದಕ್ಕೆ ಚಲಿಸಿ ರಸ್ತೆಯ ಎಡ ಬದಿಯಲ್ಲಿದ್ದ ಚರಂಡಿಗೆ ಕಾರು ಬಿದ್ದಿದ್ದು  ಕೂಡಲೆ ಪಿರ್ಯಾದುದಾರರು ಹಾಗು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ  ಪ್ರಯಾಣಿಕರು ಕಾರಿನಲ್ಲಿದ್ದವರನ್ನು ಹೊರತೆಗೆದು ಅಲ್ಲಿ ಕೂರಿಸಿ ಉಪಚರಿಸಿದಾಗ ಅಲ್ಲಿಗೆ ಬಂದ ಅವರ ಸಂಬಂದಿಕರು ಬೆರೊಂದು ಕಾರಿನಲ್ಲಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಬಸ್ಸಿನಲ್ಲಿದ್ದವರಿಗೆ ಯಾವುದೇ ಪೆಟ್ಟಾಗಿರುವುದಿಲ್ಲ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 66/2023 ಕಲಂ:279  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ರಾಜೇಶ್ ಅಮೀನ್ ಇವರು ದಿನಾಂಕ 11/05/2023 ರಂದು ಸ್ಕೂಟರ್ ಖರೀಧಿಸುವ ಬಗ್ಗೆ ಆನ್‌‌ಲೈನ್ ನಲ್ಲಿ ಹುಡುಕಾಡಿದ್ದು, OLA Electrical Mobility Prv.ltd ಎಂಬ ವೆಬ್‌‌ಸೈಟ್ ನಲ್ಲಿ ಕಂಡು ಬಂದ ಮೊಬೈಲ್ ನಂಬ್ರಕ್ಕೆ ಸಂಪರ್ಕಿಸಿದಲ್ಲಿ ಆತನು ಮುಂಗಡ ಹಣ ಪಾವತಿಸುವಂತೆ ಬ್ಯಾಂಕ್ ಖಾತೆ ನಂಬ್ರ ನೀಡಿದ್ದು, ಪಿರ್ಯಾದಿದಾರರು ಆತನನ್ನು ನಂಬಿ ಸ್ಕೂಟರ್ ಖರೀದಿಸುವ ಬಗ್ಗೆ ರೂಪಾಯಿ 30,000/-, 38,940/- ಮತ್ತು ರೂಪಾಯಿ 499/- ರಂತೆ ಒಟ್ಟು ರೂಪಾಯಿ 69,439/- ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿರುತ್ತಾರೆ. ಯಾರೋ ಅಪರಿಚಿತ ವ್ಯಕ್ತಿ OLA Electrical Mobility Prv.ltd ಎಂಬ ಕಂಪೆನಿಯವನೆಂದು ಹೇಳಿ, ಸ್ಕೂಟರ್ ನೀಡುವುದಾಗಿ ಪಿರ್ಯಾದಿದಾರರನ್ನು ನಂಬಿಸಿ, ಪಿರ್ಯಾದಿದಾರರಿಂದ ಒಟ್ಟು ರೂಪಾಯಿ 69,439/- ಹಣವನ್ನು ಪಡೆದು ಸ್ಕೂಟರ್ ನೀಡದೇ ಪಡೆದ ಹಣವನ್ನು ವಾಪಾಸು ನೀಡದೇ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 97/2023 97/2023 ಕಲಂ: 66(C), 66(D) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ .

ಗಂಡಸು ಕಾಣೆ ಪ್ರಕರಣ

 • ಮಣಿಪಾಲ: ಪಿರ್ಯಾದಿದಾರರಾದ ಗೀತಾ ಡಿ ಶೆಟ್ಟಿ  ( 73 ) , ಗಂಡ: ದಿನಕರ ಶೆಟ್ಟಿ, ವಾಸ: ಮನೆ ನಂಬರ್ 301, 3 ನೆ ಮಹಡಿ ನಿರ್ಮಾಣ್ ಶೆಲ್ಟರ್ ಅಪಾರ್ಟಮೆಂಟ್ ವಿದ್ಯಾರತ್ನನಗರ ಶಿವಳ್ಳಿ ಗ್ರಾಮ, ಮಣಿಪಾಲ ಉಡುಪಿ ಇವರ  ಗಂಡ ದಿನಕರ ಶೆಟ್ಟಿ (73) ಇವರು 2 ವರ್ಷದಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಪಿರ್ಯಾದಿದಾರರ ಗಂಡ ದಿನಕರ ಶೆಟ್ಟಿ ರವರು ದಿನಾಂಕ 14/05/2023 ರಂದು ಸಂಜೆ   04:30 ಮುದರಂಗಡಿ ಸಮೀಪ ಇರುವ ಸಾಂತೂರು ಎಂಬಲ್ಲಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋದವರು ಸಾಂತೂರಿಗೆ ಹೋಗದೆ ವಾಪಾಸು ಮನೆ ಬಾರದೆ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 115/2023  ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

 • ಮಣಿಪಾಲ: ಪಿರ್ಯಾದಿದಾರರಾದ ಬ್ರಿಜೇಶ್ ಶೆಟ್ಟಿ (27 ) , ತಂದೆ: ಸೂರಜ್ ಶೆಟ್ಟಿ, ವಾಸ: 212, 2 ನೇ ಪ್ಲೋರ್ , ಬ್ಲೂ ಬೇರಿ ವುಡ್ಸ್ , ಮಣಿಪಾಲ ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಇವರ  ತಂದೆ ಸೂರಜ್ ಶೆಟ್ಟಿ (55) ಇವರು ಮಣಿಪಾಲ ಮಾಹೆ ವಿಶ್ವವಿದ್ಯಾಲಯದಲ್ಲಿ  ಸೀನಯರ್ ಕನ್ಸಲ್ಟೆಂಟ್ ಮುಖ್ಯಸ್ಥರಾಗಿ  ಕೆಲಸಮಾಡುತ್ತಿದ್ದು, ದಿನಾಂಕ  18/05/2023 ರಂದು ಮಧ್ಯಾಹ್ನ 01:10 ಗಂಟೆಗೆ ಊಟಕ್ಕೆಂದು ಅವರು ಕೆಲಸ ಮಾಡುವ ಸಂಸ್ಥೆಯ ವಾಹನದಲ್ಲಿ  ಅವರು ವಾಸವಿರುವ ಬ್ಲೂ ಬೇರಿ ವುಡ್ಸ್  ಅಪಾರ್ಟಮೆಂಟ್ ನ  ಗೇಟ್ ನ ವರೆಗೆ ಬಂದು ಅಲ್ಲಿಂದ ನಡೆದುಕೊಂಡು ಮನೆಗೆ ಬರುತ್ತಿರುವಾಗ ಒಮ್ಮೇಲೆ ಕುಸಿದು ಬಿದ್ದಿದ್ದು ಕೂಡಲೇ ಪಿರ್ಯಾದಿದಾರರು ಹಾಗೂ ಇತರರು ಉಪಚರಿಸಿ ತೀವ್ರವಾಗಿ ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವವರನ್ನು ಮಧ್ಯಾಹ್ನ 01:30 ಗಂಟೆಗೆ ಚಿಕಿತ್ಸೆಯ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಕರೆತಂದವರನ್ನು ಪರೀಕ್ಷಿಸಿದ ವೈದ್ಯರು ಪಿರ್ಯಾದಿದಾರರ ತಂದೆಯವರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಪಿರ್ಯಾದಿದಾರರ ತಂದೆ ಸೂರಜ್ ಶೆಟ್ಟಿ ಪ್ರಾಯ: 55 ವರ್ಷ ಇವರು ದಿನಾಂಕ 18/05/2023 ರಂದು ಮಧ್ಯಾಹ್ನ 01:10 ಗಂಟೆಯಿಂದ 01:30 ಗಂಟೆಯ ಮಧ್ಯಾವಧಿಯಲ್ಲಿ ಹೃದಯಾಘಾತದಿಂದ ಮೃತ ಪಟ್ಟಿರಬಹುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 25/2023 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾದ ಸಂಸನ್‌ ದೇವಪ್ರಸಾದ್‌ ಅಮ್ಮನ್ನ (58), ತಂದೆ: ದಿ: ಎಡ್ವಡ್‌೯ ಅಮ್ಮನ್ನ, ವಾಸ: 105 ಎಫ್‌, ಅಲೆಗ್ಸಾಂಡರ್‌ ಕಾಂಪ್ಲೇಕ್ಸ್‌, ವಿ.ಬಿ ರೋಡ್‌, ಸ್ಯಾಂಡ್ರಾ ಗ್ಯಾರೇಜ್‌ ಹತ್ತಿರ, ಉಡುಪಿ ತಾಲೂಕು ಇವರ ಚಿಕ್ಕಮ್ಮ ಎಡಲಿನ ಡೆಲಿಶಾ ಅಮ್ಮನ್ನ (83) ಹಾಗೂ ಅವರ ಮಗ ಸಬೆಸ್ಟಿನ್‌ ಅಮಿತ್‌ ಅಮ್ಮನ್ನ (46) ರವರು ಉಡುಪಿ ತಾಲೂಕು 76-ಬಡಗುಬೆಟ್ಟು ಗ್ರಾಮದ ವೀರಭದ್ರ ಕಲಾ ಭವನದ ಬಳಿ, ಗರಡಿ ರೋಡ್‌, ಈಡನ್‌, ಮನೆ ನಂಬ್ರ: 5-1-64ಎ6(2) ಎಂಬ ಮನೆಯಲ್ಲಿ ವಾಸವಾಗಿದ್ದರು. ಎಡಲಿನ ಡೆಲಿಶಾ ಅಮ್ಮನ್ನ ರವರು ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದು ಜೊತೆಗೆ ತನ್ನ ಮಗನ ಸ್ನೇಹಿತ ಚೇತನ್‌ ಎಂಬುವವರು ಮೃತಪಟ್ಟ ಬಳಿಕ ಸ್ವಲ್ಪ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಹಾಗೂ ಸಬೆಸ್ಟಿನ್‌ ಅಮಿತ್‌ ಅಮ್ಮನ್ನ ರವರು ವಿಪರೀತ ಮಧ್ಯ ಸೇವನೆ ಮಾಡುತ್ತಿದ್ದು, 2-3 ಬಾರಿ ಕಿಡ್ನಿ ತೊಂದರೆ ಉಂಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾನೆ ಹಾಗೂ ಆತನು ಹಲವಾರು ಜನರಿಗೆ ಹಣವನ್ನು ಸಾಲವಾಗಿ ನೀಡಿದ್ದು ಅವರು ಸಮಯಕ್ಕೆ ಸರಿಯಾಗಿ ಹಿಂದಿರುಗಿಸದೇ ಇದ್ದ ಕಾರಣದಿಂದಲೋ ಅಥವಾ ಇನ್ನಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಇವರಿಬ್ಬರೂ ದಿನಾಂಕ 18/05/2023 ರಂದು ಬೆಳಿಗ್ಗೆ 10:25 ಗಂಟೆಯಿಂದ 13:15 ಗಂಟೆಯ ಮಧ್ಯಾವಧಿಯಲ್ಲಿ ಸಬೆಸ್ಟಿನ್‌ ಅಮಿತ್‌ ಅಮ್ಮನ್ನ ರವರು ಅಡುಗೆ ಮನೆಯ ಫ್ಯಾನ್‌ಗೆ ಹಾಗೂ ಎಡಲಿನ ಡೆಲಿಶಾ ಅಮ್ಮನ್ನ ರವರು ಅದೇ ಅಡುಗೆ ಕೋಣೆಯ ಕಿಟಕಿಯ ಮೇಲ್ಬಾಗದ ಕಬ್ಬಿಣದ ಸರಳಿಗೆ ನೈಲಾನ್‌ ಹಗ್ಗ ಬಳಸಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 26/2023 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾದ ತಾರನಾಥ ಕೋಟ್ಯಾನ್‌ ಇವರು ಕಾರ್ಕಳ ಮಿಯಾರು ಗ್ರಾಮದ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದು, ದಿನಾಂಕ 10/05/2023  ರಂದು ನಡೆದ ಕರ್ನಾಟಕ ವಿಧಾನ ಸಭಾ ಚುನಾವಣೆಗೆ  ಸಂಬಂಧಿಸಿದ ಮಿಯಾರು ಗ್ರಾಮದ ಮತಗಟ್ಟೆ  ಸಂಖ್ಯೆ  155 ರಲ್ಲಿ ಸಂಜೆ 17:45 ಗಂಟೆಗೆ ಕಾನೂನು ಸಂಘರ್ಷಕ್ಕೊಳಗಾದ ಬಾಲಕನು ತನ್ನನ್ನು ಸುಹಾಸ್ ಶೆಟ್ಟಿ  ಎಂದು  ಮತಗಟ್ಟೆ ಅಧಿಕಾರಿಗಳಿಗೆ  ಪರಿಚಯಿಸಿಕೊಂಡು ವಿದೇಶದಲ್ಲಿರುವ ಸುಹಾಸ್  ಶೆಟ್ಟಿರವರ  ಹೆಸರಿನಲ್ಲಿ  ಅಕ್ರಮವಾಗಿ ಮತ ಚಲಾಯಿಸಿದ್ದು ಇದಕ್ಕೆ  ನವೀನ್ ಮತ್ತು  ಬಿಜೆಪಿ ಕಾರ್ಯಕರ್ತರಾದ  ರೋಹಿತ್ ಶೆಟ್ಟಿ ಇವರು  ಕಾನೂನು ಬಾಹಿರವಾಗಿ ಮತ  ಚಲಾಯಿಸಲು ಕುಮ್ಮಕ್ಕು  ನೀಡಿದ್ದಾರೆ ಎಂಬ ಗುಮಾನಿ ಇರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 64/2023  ಕಲಂ:  171(D), 109 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಕೋಟ: ಪಿರ್ಯಾದಿದಾರರಾದ ಶಶಿಕಲ ಎ ಮೊಗವೀರ (51), ಗಂಡ: ಆನಂದ, ವಾಸ: ಚಾವಡಿಮನೆ, ಮಂಜಿ ನಿಲಯ ಮಣೂರು ಪಡುಕೆರೆ ಗ್ರಾಮ ಬ್ರಹ್ಮಾವರ ತಾಲೂಕು  ಇವರು ದಿನಾಂಕ 17/05/2023 ರಂದು 20:15 ಗಂಟೆಗೆ ಮಣೂರು ಪಡುಕೆರೆ ಗ್ರಾಮದ ಚಾವಡಿಮನೆ, ಮಂಜಿ ನಿಲಯದ ಎದುರುಗಡೆಯ ತೋಟದಲ್ಲಿ ವಾಕಿಂಗ್ ಮಾಡುವಾಗ  ಪಿರ್ಯಾದಿದಾರರ ಸಂಬಂಧಿಕರಾದ ನಾರಾಯಣ ಮೆಂಡನ್ ಮತ್ತು ರಾಮಚಂದ್ರ ಇವರು ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರನ್ನು ಉದ್ದೇಶಿಸಿ  ನಮಗೆ ಜಾಗವನ್ನು ಕಮ್ಮಿಕೊಟ್ಟಿದ್ದೀರಿ ಎಂದು ಆರೋಪಿಗಳು ಇಬ್ಬರೂ ಸೇರಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದು,  ಪಿರ್ಯದಿದಾರರು ಬೊಬ್ಬೆ ಹಾಕಿದಾಗ ಆರೋಪಿಗಳಿಬ್ಬರೂ ಅಲ್ಲಿಂದ ಹೋಗಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 96/2023  ಕಲಂ: 447, 504, 323, 354  ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
     

ಇತ್ತೀಚಿನ ನವೀಕರಣ​ : 19-05-2023 09:22 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080