ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಮಲ್ಪೆ: ಪಿರ್ಯಾದಿದಾರರಾದ ಪ್ರಜ್ವಲ್ ನಾಯ್ಕ್(34), ತಂದೆ:ಕೃಷ್ಣಮೂರ್ತಿ, ವಾಸ:ಪ್ರೀಯ ನಗರ, ಕಬ್ಯಾಡಿ, ಅತ್ರಾಡಿ ಪೊಸ್ಟ್, 80ನೇ ಬಡಗುಬೆಟ್ಟು ಉಡುಪಿ ಇವರು ದಿನಾಂಕ  18/05/2022  ರಂದು ಪಿರ್ಯಾದಿದಾರರ KA-20-AA-2872 ನಂಬರಿನ ಆಟೋ ರಿಕ್ಷಾದಲ್ಲಿ ಮಣಿಪಾಲ  ರಿಕ್ಷಾ ನಿಲ್ದಾಣ ದಿಂದ ಪ್ರಾನ್ಸ್ ದೇಶದ ಪ್ರಜೆಗಳಾದ Margot Quesnel ಮತ್ತು Gregoire Ricono ರವರನ್ನು ಮಲ್ಪೆ ಬೀಚ್ ಗೆ ಬಾಡಿಗೆಗೆ ಕರೆದು ಕೊಂಡು ಹೊರಟು ಮಲ್ಪೆ ಜಂಕ್ಷನ್ ನಿಂದ ವಡಭಾಂಡೇಶ್ವರ ರಸ್ತೆಯಲ್ಲಿ ಬರುತ್ತಿರುವಾಗ ಮದ್ಯಾಹ್ನ 3:30 ಗಂಟೆ ಸಮಯಕ್ಕೆ ಮಲ್ಪೆ ಸಿಟಿಜನ್ ಸರ್ಕಲ್ ನ ಸ್ವಲ್ವ ಹಿಂದೆ ತಲುಪುವಾಗೆ ವಡಭಾಂಡೇಶ್ವರ ಕಡೆಯಿಂದ ಮಲ್ಪೆ ಕಡೆಗೆ KA-20-B 7504 ನೇ ಟ್ಯಾಂಕರ್ ನ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ರಸ್ತೆಯ ತೀರ ಬಲ ಬದಿಗೆ ಬಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಮೂಗಿಗೆ ಮತ್ತು ಬಲ ಕೈಗೆ ರಕ್ತ ಗಾಯ ಮತ್ತು ರಿಕ್ಷಾ ಪ್ರಯಾಣಿಕರಾದ Margot Quesnel ರವರಿಗೆ ಹಣೆಗೆ , ಕಾಲು ಮತ್ತು ಕೈಗೆ ರಕ್ತಗಾಯ ಮತ್ತು Gregoire Ricono ರವರ ಮೂಗಿಗೆ ತರಚಿದ ಗಾಯ ಗಾಯವಾಗಿರುತ್ತದೆ. ಗಾಯಗೊಂಡ ಪಿರ್ಯಾದಿದಾರನ್ನು ರಿಕ್ಷಾ ಪ್ರಯಾಣಿಕರನ್ನು ಅಲ್ಲಿನ ಸಾರ್ವಜನಿಕರು ಒಂದು ವಾಹನದಲ್ಲಿ ಚಿಕಿತ್ಸೆಯ ಬಗ್ಗೆ  ಮಣಿಪಾಲ ಕೆ ಎಮ್ ಸಿ  ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 42-2022 ,ಕಲಂ: 279, 337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ಪ್ರವೀಣ (31), ತಂದೆ: ದಿ ಮಂಜುನಾಥ ಮರಕಾಲ, ವಾಸ: ಹೆಗ್ರಿ ಪಾಂಡೇಶ್ವರ ಗ್ರಾಮ ಬ್ರಹ್ಮಾವರ ತಾಲೂಕು ಇವರ ತಮ್ಮ ಪ್ರಶಾಂತ (26) ರವರು ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದವರು, ದಿನಾಂಕ 17/05/2022 ರಂದು ಸಂಜೆ ವಾಂತಿ ಮಾಡಿಕೊಂಡು  ಸಾಸ್ತಾನ ದಲ್ಲಿ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದು ಪುನಃ ರಾತ್ರಿ ಊಟ ಆದ ನಂತರ ವಾಂತಿ ಜೋರಾದ ಕಾರಣ ಚಿಕಿತ್ಸೆಯ ಬಗ್ಗೆ ಬ್ರಹ್ಮಾವರ ಮಹೇಶ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ದಿನಾಂಕ 18/05/2022 ರಂದು ಬೆಳಿಗ್ಗೆ  ಹೆಚ್ಚಿನ ಚಿಕಿತ್ಸೆಯ ಬಗ್ಗೆ  ಮಣಿಪಾಲ ಬಗ್ಗೆ ಕೆ ಎಂ ಸಿ ಆಸ್ಪತ್ರೆಗೆ  ಕರೆದುಕೊಂಡು ಬಂದಿದ್ದು ಪ್ರಶಾಂತರಿಗೆ  ಹೊಟ್ಟೆನೋವು ,ವಾಂತಿ ಅಥವಾ ವಿಷ ಪದಾರ್ಥ ದಿಂದಲೋ ಬಿಪಿ ಕಡಿಮೆಯಾಗಿ ನಿತ್ರಾಣ ಗೊಂಡು ಚಿಕಿತ್ಸೆಯಲ್ಲಿರುತ್ತಾ  ಬೆಳಿಗ್ಗೆ  11:05 ಗಂಟೆಗೆ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಯುಡಿಅರ್‌ ಕ್ರಮಾಂಕ  18 /2022 ಕಲಂ: 174 CRPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಕುಂದಾಪುರ: ಪಿರ್ಯಾದಿದಾರರಾದ ದಿನೇಶ್ ಕೆ.ಎನ್ (30), ತಂದೆ:ನರಸಿಂಹ ದೇವಾಡಿಗ, ವಾಸ: ಶ್ರೀ ಲಕ್ಷ್ಮಿ ನಿಲಯ, ಕಿನಾರಾ ರಸ್ತೆ, ಕುಂಭಾಶಿ, ಕುಂದಾಪುರ ತಾಲೂಕು ಇವರು ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಸರ್ಕಲ್ ಬಳಿ ಉಪಾಧ್ಯಾಯ ಕಾಂಪ್ಲೆಕ್ಸ್ ನ 4 ನೇ ಕೊಠಡಿಯಲ್ಲಿ ಐಸಿರಿ ಮೊಬೈಲ್ ಎಂಬ ಮೊಬೈಲ್ ಅಂಗಡಿ ವ್ಯವಹಾರ ಮಾಡಿಕೊಂಡಿರುವುದಾಗಿದೆ.  ದಿನಾಂಕ 17/05/2022 ರಂದು 21:00 ಗಂಟೆಗೆ ಮೊಬೈಲ್ ಅಂಗಡಿ ವ್ಯವಹಾರ ಮುಗಿಸಿ ಬೀಗ ಹಾಕಿಕೊಂಡು ಹೋಗಿದ್ದು ದಿನಾಂಕ 18/05/2022 ರಂದು 03:45 ಗಂಟೆ ವೇಳೆಗೆ ಅಂಗಡಿಯ ಎದುರಿನ ಮನೆಯ ಆದರ್ಶ ಎಂಬುವವರು ಪಿರ್ಯಾದಿದಾರರಿಗೆ ಕರೆ ಮಾಡಿ ಅಂಗಡಿಯ ಶಟರ್ ಜಖಂಗೊಳಿಸಿ ತೆರೆದಿರುವುದಾಗಿ ತಿಳಿಸಿದ ಮೇರೆಗೆ ಪಿರ್ಯಾದಿದಾರರು ಅಂಗಡಿಗೆ ಹೋಗಿ ನೋಡಲಾಗಿ ಯಾರೋ ಕಳ್ಳರು ದಿನಾಂಕ 18/05/2022 ರಂದು 03:10 ಗಂಟೆಯಿಂದ 03:45 ಗಂಟೆಯ ಮದ್ಯಾವಧಿಯಲ್ಲಿ ಅಂಗಡಿಯ ಬೀಗ ಮುರಿದು ಒಳನುಗ್ಗಿ ಮಾರಾಟಕ್ಕೆ ಇಟ್ಟಿದ್ದ 06 ಮೊಬೈಲ್ ಪೋನ್ , ಮೊಬೈಲ್ ಚಾರ್ಜರ್  ಸ್ಕ್ರೀನ್ ಗಾರ್ಡ್ ಇಯರ್ ಫೋನ್, ಬ್ಲ್ಯೂಟೂತ್ ಮತ್ತು ನಗದು ಹಣ 15,000/-  ರೂಪಾಯಿ ಹಾಗೂ ಪಿರ್ಯಾದಿದಾರರ ಉಪಯೋಗಿಸುತ್ತಿದ್ದ ಮೊಬೈಲ್ ಪೋನ್ ಹಾಗೂ ಅದರಲ್ಲಿದ್ದ  ಸಿಮ್ ಕಾರ್ಡ್  ಕಳವು ಮಾಡಿಕೊಂಡು ಹೋಗಿದ್ದು ಕಳವಾದ ನಗದು ಹಾಗೂ ಸ್ವತ್ತುಗಳ ಒಟ್ಟು ಮೌಲ್ಯ 70,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 54/2022 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

 • ಹೆಬ್ರಿ: ಪಿರ್ಯಾದಿದಾರರಾದ ಶ್ರೀಮತಿ ಶಕುಂತಳಾ (31), ಗಂಡ: ಕೃಷ್ಣ, ವಾಸ: ಜನತಾ ಕಾಲೋನಿ ಮುಳ್ಳುಗುಡ್ಡೆ, ಶಿವಪುರ ಗ್ರಾಮ, ಹೆಬ್ರಿ ತಾಲೂಕು ಇವರು ತನ್ನ ಸಂಸಾರ ಮತ್ತು ಕುಟಂಬದವರೊಂದಿಗೆ ಶಿವಪುರ ಗ್ರಾಮದ ಮುಳ್ಳುಗುಡ್ಡೆಯ ಜನತಾ ಕಾಲೋನಿ ಎಂಬಲ್ಲಿ ವಾಸವಾಗಿದ್ದು. ಅವರಿಗೆ ಸಾಕ್ಷಿ ( 2 ½  ವರ್ಷ) ಮತ್ತು ಕುಶಿ (6 ತಿಂಗಳು ) ಎಂಬ ಹೆಸರಿನ  ಎರಡು ಸಣ್ಣ ಹೆಣ್ಣು ಮಕ್ಕಳು ಇರುತ್ತಾರೆ. ದಿನಾಂಕ 17/05/2022 ರಂದು ರಾತ್ರಿ ಮನೆಯ ಬದಿಯಲ್ಲಿರುವ ಗುಡ್ಡದ ದೈವದ ತಂಬಿಲ ಇದ್ದು. ಅದರ ಊಟಕ್ಕೆ  ಮನೆಯ ಬಳಿವಿರುವ ನಮ್ಮ ಸಂಬಂಧಿ ರಾಜು ಎಂಬುವವರು ರಾತ್ರಿ ಸಮಯ ಮನೆಗೆ ಬಂದಿದ್ದು, ರಾತ್ರಿ 8:00 ಗಂಟೆಗೆ ಮನೆಯ ಛಾವಡಿಯಲ್ಲಿ ಪಿರ್ಯಾದಿದಾರರ ಮಗಳು ಸಾಕ್ಷಿ (2 ½   ವರ್ಷ) ಇವಳು ಅಟವಾಡುತ್ತಿರುವಾಗ ಮಗುವನ್ನು ಎತ್ತಿ ಅಡಿಸುವ ಸಲುವಾಗಿ ಅಪಾದಿತ ರಾಜು ಇವರು ಮಗುವನ್ನು ಎರಡು ಕೈಯಿಂದ ಎತ್ತಿ ಅಟ ಅಡಿಸುವಾಗ ಮಗು ಅತನ ಕೈಯಿಂದ ಕಳಗೆ ಜಾರಿ ನೆಲದ ಮೇಲೆ ಬಿದ್ದ ಪರಿಣಾಮ ಮಗುವಿನ ಎಡಕಿವಿಯ ಬಳಿ ತೀವ್ರ ಸ್ವರೂಪದ ಗಾಯವಾಗಿರುತ್ತದೆ. ಈ ಘಟನೆಯು ಅಪಾದಿತ ರಾಜು ಇವರ ನಿರ್ಲಕ್ಷತನದಿಂದ ಅಗಿರುವುದಾಗಿ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 22/2022 ಕಲಂ:338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಕಾರ್ಕಳ: ಪಿರ್ಯಾದಿದಾರರಾದ ಚರಣ್, ತಂದೆ: ಬೂದ ಹರಿಜನ, ವಾಸ: ಇಂದಾರು 5 ಸೆಂಟ್ಸ್ ಕಾಲನಿ, ಬೆಳ್ಮಣ್ ಗ್ರಾಮ, ಕಾರ್ಕಳ: ತಾಲೂಕು ಇವರು ದಿನಾಂಕ 18/05/2022 ರಂದು ಬೆಳಗ್ಗೆ 8:45 ಗಂಟೆಗೆ ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಪೇರಲ್ಪಾದೆ ಎಂಬಲ್ಲಿ ಪ್ರಕಾಶ್ ಡಿಸೋಜಾ ಎಂಬುವವರ ಹೂವಿನ ಕಟ್ಟೆಯಲ್ಲಿ ಕೆಲಸ ಮಾಡಿಕೊಂಡಿರುವಾಗ ಬೆಳ್ಮಣ್‌‌ಗ್ರಾಮದ ನಿವಾಸಿಗಳಾದ ಅನಿತಾ ಡಿಸೋಜಾ ಹಾಗೂ ಫ್ರಾನ್ಸಿಸ್ ಡಿಸೋಜಾರವರು ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ "ನೀನು ಪ್ರಕಾಶ್ ಡಿಸೋಜಾನೊಂದಿಗೆ ಕೆಲಸ ಮಾಡಬಾರದು, ನಾಳೆಯಿಂದ ನನ್ನ ಹೂವಿನ ಕಟ್ಟೆಗೆ ಬಂದು ಕೆಲಸ ಮಾಡು ಎಂದು ಬೈಯ್ದಿದ್ದು, ಅದಕ್ಕೆ ಪಿರ್ಯಾದಿದಾರರು ತನಗೆ ಕೆಲಸ ಮಾಡಲು ಬಿಡಿ ಎಂದು ಹೇಳಿದಾಗ ಅನಿತಾ ಡಿಸೋಜಾರವರು ಪಿರ್ಯಾದಿದಾರರ ಮೈಗೆ ಕೈ ಹಾಕಿ ನೆಲಕ್ಕೆ ದೂಡಿ ನಿಂದನೆ ಮಾಡಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ಬೈಯ್ದು, ಜೀವ ಬೆದರಿಕೆಯನ್ನು ಹಾಕಿದ್ದು, ಫ್ರಾನ್ಸಿಸ್ ಡಿಸೋಜಾ ಸಹ ಪಿರ್ಯಾದಿದಾರರನ್ನು ಉದ್ದೇಶಿಸಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 62/2022 ಕಲಂ: 323, 504, 506  ಐಪಿಸಿ ಮತ್ತು ಕಲಂ: 3(1)(r),(s) 3(2)(v-a) SCST Act ರಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 19-05-2022 09:54 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080