ಅಭಿಪ್ರಾಯ / ಸಲಹೆಗಳು


ಅಸ್ವಾಭಾವಿಕ ಮರಣ ಪ್ರಕರಣ

  • ಕಾಪು: ಪಿರ್ಯಾದಿದಾರರಾದ  ಅನೀತ್ ಮಾರ್ಟಿಸ್ ಪ್ರಾಯ : 52 ವರ್ಷ  ಗಂಡ  : ಮಾರ್ಕ್ ಮಾರ್ಟಿಸ್ ವಾಸ : ಅನೀಮ್ ವಿಲ್ಲ ಮೂಡಬೆಟ್ಟು ಗ್ರಾಮ  ಕಾಪು ಇವರ  ಗಂಡ ಮಾರ್ಕ್ ಮಾರ್ಟಿಸ್ ಪ್ರಾಯ : 63 ವರ್ಷ ಇವರು ಸುಮಾರು 2 ವರ್ಷದಿಂದ ವಿದೇಶದಿಂದ ಕೆಲಸ ಬಿಟ್ಟು ಮನೆಯಲ್ಲಿದ್ದು, ಅವರು ಇತ್ತೀಚೆಗೆ ನನಗೆ ತುಂಬಾ ಟೆನ್ಷನ್ ಇದೆ ಎಂದು ಪಿರ್ಯಾದಿದರರಲ್ಲಿ ಹೇಳುತ್ತಿದ್ದು, ಈ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಆದರೂ ಟೆನ್ಷನ್ ಮಾಡಿಕೊಂಡೆ ಇರುತ್ತಿದ್ದರು. ಟೆನ್ಷನ್ನಿಂದ ನಿದ್ರೆ ಸರಿಯಾಗಿ ಬರುತ್ತಿರಲಿಲ್ಲ ಈ ಬಗ್ಗೆ ಸ್ವಲ್ಪ ಬೇಸರದಿಂದ ಇರುತ್ತಿದ್ದರು. ದಿನಾಂಕ 19-05-2022 ರಂದು ಬೆಳಗ್ಗೆ ಪಿರ್ಯಾದಿದಾರರು ಮತ್ತು ಮಗಳು ಅನಿಮ್ ಎದ್ದು ಮಲ್ಲಿಗೆ ಹೂವು ಕಟ್ಟಿ, ಸುಮಾರು 09.00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರ ಮತ್ತು ಮಗಳು ಮನೆಯೊಳಗಿದ್ದು, ಪಿರ್ಯಾದಿದಾರರು ಗಂಡನನ್ನು ನೋಡದೇಯಿದ್ದು, ಈ ಬಗ್ಗೆ  ಗಾಬರಿಗೊಂಡು ಹುಡುಕಾಡಿದ್ದು ಎಲ್ಲಿಯೂ ಕಾಣಲಿಲ್ಲ ನಂತರ ಬೆಳಗ್ಗೆ 09.15 ಗಂಟೆಗೆ ಬಾವಿಯ ಸಮೀಪ ಕೊಡೆ ಕಂಡಿದ್ದು ಹೋಗಿ ಬಾವಿಯ ಒಳಗೆ ನೋಡುವಾಗ ನೀರೆತ್ತುವ ನೈಲೋನ್ ಹಗ್ಗವನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಇನ್ನೊಂದು ತುದಿಯನ್ನು ಸಮೀಪದ ಮರಕ್ಕೆ ಕಟ್ಟಿಕೊಂಡು ಬಾವಿಯ ಮಧ್ಯದಲ್ಲಿ  ನೇತಾಡಿದನ್ನು ನೋಡಿ ಪಿರ್ಯಾದಿದಾರರು ಬೊಬ್ಬೆ ಹಾಕಿ ನೆರೆಮನೆಯವರನ್ನು ಕೂಗಿ ಕರೆದಿದ್ದು, ನೆರೆಮೆನೆಯವರೆಲ್ಲ ಬಂದು ಅವರನ್ನು  ಎತ್ತಿ ಮೇಲಕ್ಕೆ ತಂದು ನೋಡುವಾಗ ಪಿರ್ಯಾದಿದಾರರ ಗಂಡ ಮಾರ್ಕ್ ಮಾರ್ಟಿಸ್ ರವರು ಮೃತ ಪಟ್ಟಿರುವುದಾಗಿ ತಿಳಿದು ಬಂದಿರುತ್ತಾರೆ. ಪಿರ್ಯಾದಿದಾರರ ಗಂಡ ವಿದೇಶದಿಂದ ಕೆಲಸ ಬಿಟ್ಟು ಮನೆಯಲ್ಲಿದ್ದು ಅವರಿಗೆ ಟೆನ್ಷನ್ ಮತ್ತು ನಿದ್ರಾಹೀನತೆಯಿದ್ದು, ಇದೆ ವಿಚಾರದಲ್ಲಿ ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 19-05-2022 ರಂದು ಬೆಳಗ್ಗೆ 08.45 ಗಂಟೆಯಿಂದ 09.15 ಗಂಟೆ ನಡುವಿನ ಸಮಯದಲ್ಲಿ ಮನೆಯ ಬಾವಿಯ ನೀರೆತ್ತುವ ಹಗ್ಗಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಯು.ಡಿ.ಆರ್‌.ನಂಬ್ರ 15/2022 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ

  • ಶಂಕರನಾರಾಯಣ:  ಫಿರ್ಯಾದಿದಾರರಾದ  ರಾಜೀವಿ  ಪ್ರಾಯ 63 ವರ್ಷ, ಗಂಡ: ಭುಜಂಗ  ಶೆಟ್ಟಿ, ವಾಸ: ಕುಂಡ್ಲು ಮನೆ ಯಡಮಗ್ಗೆಗ್ರಾಮ ಕುಂದಾಪುರ ತಾಲೂಕು ಇವರಿಗೆ ಆರೋಪಿ ರಾಜೇಶ ಯಡಮೊಗ್ಗೆ ಎಂಬಾತ ಯಾವಾಗಲೂ  ಅವಾಚ್ಯ  ಶಬ್ದದಿಂದ ಬೈದು  ಗಲಾಟೆ  ಮಾಡುತ್ತಿದ್ವದನು, ದಿನಾಂಕ 18.05.2022  ರಂದು ಸುಮಾರು  15;30 ಗಂಟೆಗೆ ಯಡಮೊಗ್ಗೆ ಗ್ರಾಮದ ಕುಂಡ್ಲು ಮನೆ  ಎಂಬಲ್ಲಿಗೆ ಕೈಯಲಿ  ಮರದ  ದೊಣ್ಣೆ  ಹಾಗೂ ಚೂರಿಯನ್ನು ಹಿಡಿದುಕೊಂಡು ಬಂದು  ಫಿರ್ಯಾದುದಾರರ  ಮನೆಯ  ಸೀಟೌಟಗೆ ಅಕ್ರಮ ಪ್ರವೇಶ  ಮಾಡಿ ಫಿರ್ಯಾದುದಾರರ  ಗಂಡನಲ್ಲಿ  ಅವಾಚ್ಯ ಶಬ್ದಗಳಿಂದ ಬೈದು ನೀವು ನನ್ನ ವಿರುದ್ದ  ಪೊಲೀಸ್ ಕಂಪ್ಲೇಟ್  ಕೊಡುತ್ತೀಯ  ಎಂದು   ಗಲಾಟೆ  ಮಾಡಿದಾಗ  ಅವರು   ನಿನಗೆ  ಬೇರೆ ಕೆಲಸ ಇಲ್ವಾ  ಯಾಕೆ  ಗಲಾಟೆ ಮಾಡುವುದು ಎಂದು ಕೇಳಿದಾಗ  ಅವರನ್ನು ತಡೆದು ನಿಲ್ಲಿಸಿ ಮರದ  ದೊಣ್ಣೆಯಿಂದ  ಬಲಕೈಗೆ ಹಲ್ಲೆ ಮಾಡಿರುತ್ತಾನೆ, ಈ ಸಮಯ  ಫಿರ್ಯಾಧುದಾರರು ಓಡಿ ಬಂದು  ಹೊಡೆಯದಂತೆ  ತಡೆದಾಗ  ಆರೋಪಿಯು ಫಿರ್ಯಾದುದಾರರಿಗೆ ಹಲ್ಲೆ ಮಾಡಿ ಬೆದರಿಕೆ  ಹಾಕಿ  ಹೋಗಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  51/2022 ಕಲಂ:448,341,324,354,504,506(2) ಐ.ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 19-05-2022 05:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080