ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

 • ಅಜೆಕಾರು: ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ: 10/05/2021 ರಿಂದ ದಿನಾಂಕ: 24/05/2021 ರವೆರೆಗೆ ಕೋವಿಡ್ ಗೆ ಸಂಬಂದಿಸಿದಂತೆ ಲಾಕ್ ಡೌನ್ ವಿಧಿಸಿ ಆದೇಶ ಹೊರಡಿಸಿದ್ದು ಈ ಲಾಕ್ ಡೌನ್  ಜಾರಿಗೊಳಿಸುವ ಬಗ್ಗೆ ಪೋಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು ಈ ಸಮಯದಲ್ಲಿ ಅನಗತ್ಯವಾಗಿ ಸಾರ್ವಜನಿಕರ ಓಡಾಟಕ್ಕೆ ನಿಷೇಧ ಇರುತ್ತದೆ. ಶುಭಕರ್ ಪಿ.ಎಸ್.ಐ, ಅಜೆಕಾರು ಪೊಲೀಸ್ ಠಾಣೆ ಇವರು ದಿನಾಂಕ 18/05/2021 ರಂದು 18:45 ಗಂಟೆಯ ವೇಳೆಗೆ ಠಾಣಾ ಸರಹದ್ದಿನ ಜಾರ್ಕಳ ಮುಂಡ್ಲಿ ಗ್ರಾಮದಲ್ಲಿ ಇಲಾಖಾ ವಾಹನದಲ್ಲಿ ಸಿಬ್ಬಂದಿಯವರ ಜೊತೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಪ್ರವೀಣ್ ಸ್ಟೋರ್ಸ್‌ ಬಳಿ ಬರುವ ವೇಳೆಗೆ ಕೆರ್ವಾಶೆ ಕಡೆಯಿಂದ ಹೆರ್ಮುಂಡೆ ಕಡೆಗೆ ಒಂದು ದ್ವಿಚಕ್ರ ವಾಹನ ನಂ: KA 20 ET 9433 ನೇಯದರಲ್ಲಿ ಚಾಲಕ ಸಂದೀಪ್ ಪ್ರಾಯ 31 ವರ್ಷ ತಂದೆ: ಕೊರಗ ಪೂಜಾರಿ ವಾಸ:   ಹೈಸ್ಕೂಲ್ ಬಳಿ, ಶಿರ್ಲಾಲು ಗ್ರಾಮ, ಕಾರ್ಕಳ ತಾಲೂಕು 2)ಸಹ ಸವಾರ :ಸತೀಶ್ ( 32) ತಂದೆ: ಬಾಬು ಪೂಜಾರಿ ವಾಸ: ಹಾರೊದ ಬೈಲು, ಜಾರ್ಕಳ- ಮುಂಡ್ಲಿ ಬರುತ್ತಿದ್ದು, ಸದ್ರಿ ದ್ವಿಚಕ್ರ ವಾಹನವನ್ನು ನಿಲ್ಲಿಸಿ ವಿಚಾರಿಸಲಾಗಿ ಸದ್ರಿ ವ್ಯಕ್ತಿಗಳು  ಸಮಂಜಸವಾದ ಉತ್ತರವನ್ನು ನೀಡದೇ ಇದ್ದುದರಿಂದ ಆಪಾದಿತರಿಗೆ ಘನ ಕರ್ನಾಟಕ ಸರಕಾರವು ಕೋವಿಡ್-19 ಮಹಾಮಾರಿ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ನಿಯಮಗಳ ಬಗ್ಗೆ ತಿಳುವಳಿಕೆ ಇದ್ದರೂ, ಅನಗತ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿ ಸರಕಾರ ಮತ್ತು ಜಿಲ್ಲಾಡಳಿತದ ಆದೇಶ ಹಾಗೂ ಕೋವಿಡ್ ನಿಯಮಾವಳಿಯ ಉಲ್ಲಂಘನೆ ಮಾಡಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 14/2021 ಕಲಂ: 269 ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿರುತ್ತದೆ.
 • ಕಾರ್ಕಳ: ಮಧು ಬಿ.ಇ.  ಪೊಲೀಸ್ ಉಪ ನಿರೀಕ್ಷಕರು, ಕಾರ್ಕಳ ನಗರ ಪೊಲೀಸ್ ಠಾಣೆ ಇವರು ಠಾಣಾ ಸಿಬ್ಬಂದಿಯವರೊಂದಿಗೆ ದಿನಾಂಕ:18.05.2021 ರಂದು  ಠಾಣಾ ಸರಹದ್ದಿನಲ್ಲಿ ರೌಂಡ್ಸು ಕರ್ತವ್ಯದಲ್ಲಿರುತ್ತಾ  ಸಮಯ ಸುಮಾರು  ಮದ್ಯಾಹ್ನ 14:00  ಗಂಟೆಗೆ  ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ  ಜೋಡುರಸ್ತೆ ನಡಿಮಾರ್‌ ಪೆಟ್ರೋಲ್‌ ಬಳಿ ತಲುಪುವಾಗ ಮಹಾಲಕ್ಷ್ಮೀ ಸಿರಾಮಿಕ್ಸ್‌  ಎಂಬ ಹೆಸರಿನ ಅಂಗಡಿಯನ್ನು ಅಂಗಡಿ ಮಾಲಕ ಹರಿರಾಮ್‌ ತೆರೆದು ವ್ಯಾಪಾರ ಮಾಡುತ್ತಿದ್ದುದ್ದನ್ನು ಕಂಡು ಪಿರ್ಯಾದಿದಾರರು ಅಂಗಡಿ ಮಾಲಕರಲ್ಲಿ  ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ಕೋವಿಡ್ ಕರ್ಪ್ಯೂ ವಿಧಿಸಿ ಆದೇಶ ಹೊರಡಿಸಿದ ಬಗ್ಗೆ  ವಿಚಾರಿಸಿದಾಗ  ಅಂಗಡಿ ಮಾಲಕ ಸಮಂಜಸವಾಗಿ ಉತ್ತರಿಸದೇ ಇದ್ದುದ್ದಲ್ಲದೆ  ಆತನು ಕರ್ನಾಟಕ ಸರಕಾರವು ಹೊರಡಿಸಿರುವ ಆದೇಶವನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದರಿಂದ ಆತನ ವಿರುದ್ದ ಕಾರ್ಕಳ ನಗರ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 60/2021 ಕಲಂ: 269 ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿರುತ್ತದೆ.
 • ಹೆಬ್ರಿ: ಕೋವೀಡ್ -19 ವೈರಸ್ ಹರಡುವುದನ್ನು ತಡಗಟ್ಟುವ ಸಲುವಾಗಿ ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ; 10/05/2021 ರಿಂದ ದಿನಾಂಕ: 24/05/2021 ರ ತನಕ ರಾಜ್ಯಾದಂತ್ಯ ಲಾಕ್ ಡೌನ್ ಆದೇಶವನ್ನು ಹೊರಡಿಸಿದಲ್ಲದೇ ಕಲಂ: 144 ಸಿ.ಆರ್.ಪಿ.ಸಿ ಅಡಿಯಲ್ಲಿ ನಿಷೇದಾಜ್ಞೆ ಅದೇಶವನ್ನು ಹೊರಡಿಸಿದ್ದು. ದಿನಾಂಕ: 18/05/2021 ರಂದು 18:20 ಗಂಟೆಗೆ  ಹೆಬ್ರಿ ತಾಲೂಕು ಚಾರ ಗ್ರಾಮದ ಚಾರ ಲಯನ್ಸ್ ಸರ್ಕಲ್ ಬಳಿ ಮಹೇಶ.ಟಿ.ಎಂ, ಪಿಎಸ್ಐ ಹೆಬ್ರಿ ಪೊಲೀಸ್ ಠಾಣೆ ಇವರು ಸಿಬ್ಬಂದಿಗಳೊಂದಿಗೆ ವಾಹನ ತಪಾಸಣೆ ಮಾಡುತ್ತಿರುವಾಗ ಸರಕಾರವು ಹೊರಡಿಸಿರುವ ನಿಯಮಗಳ ಬಗ್ಗೆ ತಿಳುವಳಿಕೆ ಇದ್ದರೂ ಕೋವೀಡ್ ನಿಯಮವನ್ನು ಉಲ್ಲಂಘನೆ ಮಾಡಿದ ಸಂದೇಶ ನಾಯ್ಕ ಪ್ರಾಯ 26 ವರ್ಷ ರವರು ಮತ್ತು ಅವರು ಚಲಾಯಿಸಿದ KA.20.Y.3345 ನೇ ಮೋಟಾರ್ ಸೈಕಲ್ ನ್ನು ಮಹಜರು ಮೂಲಕ ಸ್ವಾದೀನ ಪಡಿಸಿಕೊಂಡು ಮತ್ತು ಆರೋಪಿಯನ್ನು ವಶಕ್ಕೆ ಪಡೆದು ಅವರ ವಿರುದ್ದ ಹೆಬ್ರಿ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 27/2021 ಕಲಂ: 269 ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿರುತ್ತದೆ.
 • ಕುಂದಾಪುರ:   ದಿನಾಂಕ 18-05.2021 ರಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಹೆಚ್‌ಸಿ  ಸತೀಶ ಇವರು ಕೋವಿಡ್‌-19 ವೈರಾಣು ಸಾಂಕ್ರಾಮಿಕ ರೋಗದ ಹರಡುವಿಕೆ ನಿಯಂತ್ರಣದ ಸಂಬಂಧ ಮುಂಜಾಗ್ರತಾ ಕ್ರಮದ ಬಗ್ಗೆ  ಕರ್ತವ್ಯದಲ್ಲಿರುವ ವೇಳೆ 17:30 ಗಂಟೆಗೆ ಕುಂದಾಪುರ ತಾಲೂಕು  ಕರ್ಕುಂಜೆ ಗ್ರಾಮದ  ಸಾರಳ ಬಳಿ  KA 20 EA 9625ನೇ ವಾಹನದ ಚಾಲಕ ನು ತನ್ನ ವಾಹನವನ್ನು ಚಲಾಯಿಸಿಕೊಂಡು ಬಂದಿದ್ದು ಪೊಲೀಸ್‌ರನ್ನು ನೋಡಿ ವಾಹನವನ್ನು ಬಿಟ್ಟು ಓಡಿ ಹೋಗಿರುತ್ತಾನೆ. ಸದ್ರಿ  ವಾಹನ ಚಾಲಕನು  ಕೋವಿಡ್‌-19 ಸಂಬಂಧ ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸದೆ, ನಿರ್ಲಕ್ಷತನ ತೋರಿಸಿರುತ್ತಾರೆ ಈ ಬಗ್ಗೆ  ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 37/2021 ಕಲಂ: 269 ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿರುತ್ತದೆ.
 • ಗಂಗೊಳ್ಳಿ: ದಿನಾಂಕ: 18-05-2021 ರಂದು ಠಾಣಾ ಹೆಚ್‌.ಸಿ ಮಂಜುನಾಥ ರವರು ಸಿಬ್ಬಂದಿ ಸಂತೋಷ ಖಾರ್ವಿ ಯವರೊಂದಿಗೆ ಸಮವಸ್ತ್ರದಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವಾಗ ಬೆಳಿಗ್ಗೆ 11:00 ಗಂಟೆಗೆ ಗಂಗೊಳ್ಳಿ ಗ್ರಾಮದ ಮೇಲ್‌ಗಂಗೊಳ್ಳಿಯಲ್ಲಿ KA20EB-0977 APACHE FTR ನೇ ಮೋಟಾರ್ ಸೈಕಲನ್ನು ಅದರ ಸವಾರ ಉಸ್ಮಾನ್ (48), ತಂದೆ: ಹಸನ್ ಸಾಬ್, ವಾಸ: ರಾಮ ಮಂದಿರದ ಹತ್ತಿರ, ಗಮಗೊಳ್ಳಿ ಗ್ರಾಮ, ಕುಂದಾಪುರ ತಾಲೂಕು  ಎಂಬವರು ಸಕಾರಣವಿಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸುವ ಮೂಲಕ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತವು ಕೋವಿಡ್-19 ತಡೆಗಟ್ಟಲು ಹೊರಡಿಸಿದ ಲಾಕ್‌ಡೌನ್ ಆದೇಶ/ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದು, ಮಾನವನ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ಸೋಂಕು ಹರಡುವ ಸಂಭವ ಇದೆ ಎಂದು ತಿಳಿದೂ ನಿರ್ಲಕ್ಷತನ ತೋರಿದ್ದರಿಂದ ಈ ಬಗ್ಗೆ  ಗಂಗೊಳ್ಳಿ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 46/2021 ಕಲಂ: 269 ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿರುತ್ತದೆ.
 • ಶಿರ್ವ: ದಿನಾಂಕ 18/05/2021 ರಂದು ಸಂಜೆ 15:30 ಗಂಟೆಗೆ ಶ್ರೀಶೈಲ್ ಡಿ.ಎಂ ಪಿ.ಎಸ್‌.ಐ ಶಿರ್ವ ಠಾಣೆ ಇವರು ಠಾಣಾ ಸರಹದ್ದಿನಲ್ಲಿ ಗಸ್ತು ಸಂಚಾರದಲ್ಲಿರುವಾಗ ಶಿರ್ವ ಗ್ರಾಮದ ಸೊರ್ಪು ಬ್ರಹ್ಮಮುರ್ಗೇಕಳ ದೈವಸ್ಥಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ  ಕೋಳಿ ಅಂಕ ನಡೆಯುತ್ತಿರುವ  ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ  ಠಾಣಾ ಸಿಬ್ಬಂದಿಯವರೊಂದಿಗೆ ಹಾಗೂ ಇಬ್ಬರು ಪಂಚರೊಂದಿಗೆ  ಇಲಾಖಾ ವಾಹನದಲ್ಲಿ 15:45 ಗಂಟೆಗೆ ಠಾಣೆಯಿಂದ ಹೊರಟು 16:00 ಗಂಟೆಗೆ ಸದ್ರಿ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಕೋಳಿಗಳ ಕಾಲಿಗೆ ಬಾಳುಗಳನ್ನು ಕಟ್ಟಿ ಅದರ ಮೇಲೆ ಹಣವನ್ನು ಪಣವಾಗಿ ಇರಿಸಿ ಕೋಳಿ ಅಂಕ ಜೂಜಾಟ ನಡೆಸುತ್ತಿದ್ದುದು ಕಂಡು ಬಂದಿರುತ್ತದೆ. ನಂತರ 16:15 ಗಂಟೆಗೆ ಸದ್ರಿ ಸ್ಥಳಕ್ಕೆ ಸಿಬ್ಬಂದಿಯವರೊಂದಿಗೆ ಧಾಳಿ ನಡೆಸಿದಾಗ ಕೋಳಿ ಅಂಕ  ಜೂಜಾಟ  ಆಡುತ್ತಿದ್ದವರ ಪೈಕಿ ಇಬ್ಬರನ್ನು ವಶಕ್ಕೆ ಪಡೆದಿದ್ದು, ಉಳಿದ  6-7  ಜನರು  ಹಾಡಿಯಲ್ಲಿ ಓಡಿ ಪರಾರಿಯಾಗಿರುತ್ತಾರೆ. ವಶಕ್ಕೆ ಪಡೆದವರನ್ನು ವಿಚಾರಿಸಿ ಹೆಸರು ವಿಳಾಸ ಕೇಳಲಾಗಿ 1. ಜಯ ಆರ್‌. ಪೂಜಾರಿ, ಪ್ರಾಯ: 66 ವರ್ಷ, ತಂದೆ: ದಿ: ರಾಮ ಪೂಜಾರಿ, ವಾಸ: ಕಂಡಿಗ ಹೌಸ್‌, ಮೂಡುಬೆಳ್ಳೆ ಗ್ರಾಮ ಮತ್ತು ಅಂಚೆ, ಉಡುಪಿ ಜಿಲ್ಲೆ 2.  ಪ್ರಸಾದ್‌ ಕುತ್ಯಾರ್‌, ಪ್ರಾಯ: 38 ವರ್ಷ, ತಂದೆ:ಭದ್ರ   ವಾಸ: ಗುಲಾಬಿ ನಿವಾಸ, ಕುತ್ಯಾರ್‌ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಎಂಬುದಾಗಿ ತಿಳಿಸಿರುತ್ತಾರೆ. ಅಲ್ಲದೆ ಪರಾರಿಯಾದವರ ಬಗ್ಗೆ ವಿಚಾರಿಸಲಾಗಿ 1. ಸುಂದರ್‌ ಆತ್ರಾಡಿ, 2.ಸೂರ್ಯ ಎಡ್ಮೇರ್‌, 3. ಸುಧಾಕರ ಕಡಂಬು ಮೂಡು ಮಟ್ಟಾರು, 4. ವಿಲ್ಪ್ರೆಡ್‌ ವಿಲಿಯಂ ಗೋಮ್ಸ್‌ ಎಂಬುದಾಗಿ ತಿಳಿಸಿದ್ದು, ಮತ್ತು ಇಬ್ಬರ ಹೆಸರು ತಿಳಿದಿರುವುದಿಲ್ಲವಾಗಿ ತಿಳಿಸಿರುತ್ತಾರೆ.  ವಶಕ್ಕೆ ಪಡೆದ  ಆರೋಪಿತರನ್ನು 16:45 ಗಂಟೆಗೆ  ದಸ್ತಗಿರಿಗೊಳಿಸಿ, ಅವರ  ವಶದಲ್ಲಿದ್ದ  ಜೂಜಾಟಕ್ಕೆ  ಉಪಯೋಗಿಸಿದ್ದ ರೂ. 1200/-, ಹುಂಜ ಕೋಳಿಗಳು- 4,  ಕಾಲಿಗೆ ಕಟ್ಟಲು ಉಪಯೋಗಿಸುವ ಸಣ್ಣ ಕತ್ತಿ (ಬಾಳು) -2, ಹಾಗೂ ಸ್ಥಳದಲ್ಲಿದ್ದ ಮೋಟಾರ್‌ ಸೈಕಲ್‌ಗಳಾದ   1) KA20X 6813   2) KA20X 9068 3) KA20EA 4156 , 4) KA19EZ 6462 5) KA20EC 0675 6) KA20W 8349 ದ್ವಿಚಕ್ರ ವಾಹನಗಳಾದ 1) KA19EH 8053 , 2) KA20EP 2982, 3) KA20EH 6833 , 4) KA19HA 0020 ಹಾಗೂ KA05 AG 0199 ನೇ ರಿಡ್ಜ್‌ ಕಾರನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ.ಆರೋಪಿಗಳು ಕೋವಿದ್-19 (ಕೊರೋನಾ ವೈರಸ್) ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಲಾಕ್ ಡೌನ್ ಆದೇಶವಿದ್ದರೂ, ಯಾವುದೇ ಸಕಾರಣವಿಲ್ಲದೇ ಸಂಚರಿಸದಂತೆ ಸರಕಾರದ ಆದೇಶ ಇದ್ದರೂ ಸಹ ಸರಕಾರ  ಆದೇಶವನ್ನು ಪಾಲಿಸದೆ  ಮಾನವ  ಜೀವಕ್ಕೆ ಅಪಾಯಕಾರಿಯಾದ ರೋಗದ ಸೊಂಕು ಹರಡುವ ಸಾದ್ಯತೆ ಇದೆ ಎನ್ನುವ ವಿಷಯ ತಿಳಿದಿದ್ದರೂ ಕೂಡಾ ಅಕ್ರಮವಾಗಿ  ಕೋಳಿ ಅಂಕ ಜೂಜಾಟ ನಡೆಸುತ್ತಿರುವುದಾಗಿದೆ. ವಶಕ್ಕೆ ಪಡೆದ ಆರೋಪಿಗಳಿಗೆ ತಮ್ಮ ತಪ್ಪಿನ ಬಗ್ಗೆ ಅರಿವು ಮೂಡಿಸಿದ್ದು, ಸದ್ರಿ ಆಪಾದಿತರನ್ನು ಮತ್ತು ಸ್ವಾಧೀನಪಡಿಸಿದ ಸೊತ್ತುಗಳನ್ನು  ಠಾಣೆಗೆ ಕರೆ ತಂದಿದ್ದು, ಈ ಬಗ್ಗೆ  ಶಿರ್ವ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 29/2021 , ಕಲಂ 269  IPC & 87, 93 KP ACT ನಂತೆ ಪ್ರಕರಣ  ದಾಖಲಿಸಲಾಗಿರುತ್ತದೆ.
 • ಬ್ರಹ್ಮಾವರ: ಬ್ರಹ್ಮಾವರ ತಾಲೂಕು, ಹನೇಹಳ್ಳಿ  ಗ್ರಾಮದ, ಬಾಗಿಲ ಕೆರೆ ಎಂಬಲ್ಲಿ ಸ.ನಂ 87/14 ಎ ರಲ್ಲಿ ಪಿರ್ಯಾದಿ ಜಯಲಕ್ಷ್ಮೀ ಇವರ ತಂದೆ ಸದಾಶಿವ ಶೆಟ್ಟಿಯವರಿಗೆ ಸೇರಿದ 0.39 ಸೆಂಟ್ಸ್ ಜಾಗ ಇದ್ದು, ಸದ್ರಿ ಜಾಗದ ವಿಚಾರದಲ್ಲಿ ಸದಾಶಿವ ಶೆಟ್ಟಿ ರವರಿಗೂ ಹಾಗೂ ವನಜ ಪೂಜಾರ್ತಿ ರವರ ಮಕ್ಕಳಾದ  1ನೇ ದೇಜು ಪೂಜಾರಿ, 2ನೇ ಉದಯ ಪೂಜಾರಿ , 3ನೇ ರಾಘವೇಂದ್ರ ಪೂಜಾರಿಯವರಿಗೂ ತಕರಾರು ಇರುತ್ತದೆ. ಸದ್ರಿ ತಕರಾರು ಬಗ್ಗೆ ನ್ಯಾಯಾಲದಲ್ಲಿ ವಿಚಾರಣೆ ಆಗಿ ಪಿರ್ಯಾದಿದಾರರ ತಂದೆಯ ಪರವಾಗಿ ತೀರ್ಪು ಆಗಿರುತ್ತದೆ.  ನಂತ್ರ ಪಿರ್ಯಾದಿದಾರರ ತಂದೆ ಸದ್ರಿ ಜಾಗವನ್ನು ಅಳತೆ ಮಾಡಿಸಿ ಪಾಗಾರ ಮತ್ತು ತಂತಿ ಬೇಲಿ ಹಾಕಿರುತ್ತಾರೆ. ದಿನಾಂಕ: 15.05.2021 ರಂದು ಬೆಳಿಗ್ಗೆ 11:00 ಗಂಟೆಗೆ ಪಿರ್ಯಾದಿದಾರರು ಸದ್ರಿ ಜಾಗಕ್ಕೆ ಹೋಗಿ ನೋಡಿದಾಗ ಸದ್ರಿ ಜಾಗದಲ್ಲಿರುವ  ಪಾಗಾರದ 4 ಅಡಿಗಳಷ್ಟು ಬಿದ್ದಿರುವುದನ್ನು ನೋಡಿದ್ದು. ಸದ್ರಿ ಜಾಗವು  ನ್ಯಾಯಾಲಯದಲ್ಲಿ ಪಿರ್ಯಾದಿದಾರರ ತಂದೆ ಪರ ತೀರ್ಪು ಬಂದಿರುವುದರಿಂದ, ವನಜ ಪೂಜಾರ್ತಿ ಮಕ್ಕಳಿಗೆ ದ್ವೇಷ ಇದ್ದು ಇದೇ ದ್ವೇಷದಿದಿಂದ  ದೇಜು ಪೂಜಾರಿ, ಉದಯ ಪೂಜಾರಿ ಮತ್ತು ರಾಘವೇಂದ್ರ ಪೂಜಾರಿಯವರು ಸೇರಿ ದಿನಾಂಕ: 11.05.2021 ರಂದು ತೆಂಗಿನಮರ ಕಡಿಯುವ ನೆಪದಲ್ಲಿ ಪಾಗಾರವನ್ನು ಕೆಡವಿದ್ದಾರೆ ಎಂಬುದಾಗಿ ಬಲವಾದ ಸಂದೇಹ ಇರುವುದಾಗಿಯೂ, ಅಲ್ಲದೇ ಪಾಗಾರವನ್ನುಕೆಡವಿ ಸೂಮಾರು ರೂ. 10,000/- ನಷ್ಟವುಂಟು ಮಾಡಿರುತ್ತಾರೆ. ಈ ಬಗ್ಗೆ  ಬ್ರಹ್ಮಾವರ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 81/2021 ಕಲಂ 427 ಜೊತೆಗೆ 34 ಐಪಿಸಿ ಯಂತೆಪ್ರಕರಣ  ದಾಖಲಿಸಲಾಗಿರುತ್ತದೆ.
 • ಕಾರ್ಕಳ: ಮಧು ಬಿ ಇ, ಪೊಲೀಸ್‌  ಉಪನಿರೀಕ್ಷಕರು ಇವರು ದಿನಾಂಕ 18.05.2021 ರಂದು 16.00  ಗಂಟೆಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ಕಾರೋಲ್‌ ಗುಡ್ಡೆ ಎಂಬಲ್ಲಿ ಮೈಕಲ್‌ ಕೊರೆಯ ಎಂಬವರು ತನ್ನ ಸ್ವಂತ ಲಾಭಕ್ಕೋಸ್ಕರ ಯಾವುದೇ ಪರವಾನಿಗೆ ಹೊಂದದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬುವುದಾಗಿ ಬಂದ ಖಚಿತ ಮಾಹಿತಿಯನ್ನು ಸ್ವೀಕರಿಸಿ   ಠಾಣಾ ಸಿಬ್ಬಂದಿಯವರ   ಜೊತೆಯಲ್ಲಿ ಮಿಯ್ಯಾರು ಗ್ರಾಮದ ಕಾರೋಲ್‌ ಗುಡ್ಡೆ ಎಂಬಲ್ಲಿಗೆ ಗಂಟೆಗೆ 16:30 ಗಂಟೆಗೆ ತಲುಪಿ ಕಾರೋಲ್‌ ಗುಡ್ಡೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ  ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದ ಮೈಕಲ್‌ ಕೊರೆಯ  ಪ್ರಾಯ 58 ವರ್ಷ,ತಂದೆ: ವಿನ್ಸೆಂಟ್‌ ಕೊರೆಯ,ವಾಸ:ಬರ್ಕೆ ಹೌಸ್‌, ಕಾರೋಲ್‌ಗುಡ್ಡೆ, ಮಿಯ್ಯಾರು ಗ್ರಾಮ ಮತ್ತು ಅಂಚೆ, ಕಾರ್ಕಳ ತಾಲೂಕು ಎಂಬಾತನನ್ನು  ವಶಕ್ಕೆ ಪಡೆದು ಆತನ ವಶದಲ್ಲಿದ್ದ  180 ಎಮ್‌ ಎಲ್‌ ನ  ಒಟ್ಟು 17 ಮದ್ಯ ತುಂಬಿದ  ಸ್ಯಾಚೆಟ್‌ಗಳನ್ನು ಹಾಗೂ ಮದ್ಯ  ಮಾರಾಟ  ಮಾಡಿ ಸಂಗ್ರಹವಾದ ನಗದು 3,200/- ರೂಪಾಯಿ ಮತ್ತು ಪ್ಲಾಸ್ಟಿಕ್‌ ಕೈ ಚೀಲವನ್ನು ವಶಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ  ಕಾರ್ಕಳ ನಗರ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 61/2021,  ಕಲಂ 32,34, ಕರ್ನಾಟಕ ಅಬಕಾರಿ ಕಾಯ್ದೆ ಯಂತೆಪ್ರಕರಣ  ದಾಖಲಿಸಲಾಗಿರುತ್ತದೆ.
 • ಕಾರ್ಕಳ  : ದಿನಾಂಕ 18/05/2021 ರಂದು 14:00 ಗಂಟೆಗೆ ತೇಜಸ್ವಿ ಟಿ ಐ ಪಿ.ಎಸ್.ಐ ಕಾರ್ಕಳ  ಗ್ರಾಮಾಂತರ ಪೊಲೀಸ್ ಠಾಣೆ  ಇವರು ಠಾಣೆಯಲ್ಲಿರುವಾಗ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಕಾಲೇಜಿನ ಪರಿಸರದಲ್ಲಿ ಕೆಎ19-ಎಮ್.ಹೆಚ್-3864 ನೇ ನಂಬ್ರದ ಬಿಳಿ ಬಣ್ಣದ ಕಾರಿನಲ್ಲಿ ಗಾಂಜಾ ಸೇದುತ್ತಾ ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ಹಾಗೂ ಪಂಚರು ಮತ್ತು ಪತ್ರಾಂಕಿತ ಅಧಿಕಾರಿಯೊಂದಿಗೆ ಬಾತ್ಮೀದಾರರು ತಿಳಿಸಿದ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ನಿಟ್ಟೆ ಎಮ್,ಬಿ,ಎ ಕಾಲೇಜಿನ ಬಳಿ 14:45 ಗಂಟೆಗೆ ಕಾರ್ಕಳ ತಾಲೂಕು ಗ್ರಾಮದ ಎಂ,ಬಿ ಎ ಕಾಲೇಜಿನ ಬಳಿ ಹೋಗಿ ಮಾಹಿತಿಯನ್ನು ಖಚಿತಪಡಿಸಿಕೊಂಡು ದಾಳಿ ನಡೆಸಿ ಕರ್ನಾಟಕ ಸರಕಾರವು ಕೋವಿಡ್-19 ಸೋಂಕು ತಡೆ ಬಗ್ಗೆ ಕರ್ಪ್ಯೂ ವಿಧಿಸಿದ್ದರೂ ಅಕ್ರಮವಾಗಿ ಕೂಟವನ್ನು ಸೇರಿಕೊಂಡು ಗಾಂಜಾ ಇಟ್ಟುಕೊಂಡು ಸೇವನೆ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿತ 1.ರಾಯ್ ಸನ್ ಪ್ರಾಯ: 23 ವರ್ಷ ತಂದೆ:ರೊನಾಲ್ಡ್ ಡಿಸೋಜಾ ವಾಸ: ಕೆಮ್ಮಣ್ಣು ಹೌಸ್,ನಿಟ್ಟೆ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು 2.ಸಂದೇಶ್ ಶೆಣೈ ಪ್ರಾಯ: 20 ವರ್ಷ ತಂದೆ: ಸತೀಶ್ ಶೆಣೈ ವಾಸ: ಕಜೆ ಹೌಸ್, ಮಿಯ್ಯಾರು ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು,3. ವಿಘ್ನೇಶ್ವ  ಪೈ ಪ್ರಾಯ: 20 ವರ್ಷ ತಂದೆ: ಪ್ರಕಾಶ್ ಪೈ ವಾಸ: ಪ್ರಭು ನಿವಾಸ, ಅತ್ತೂರು ಚರ್ಚ ರಸ್ತೆ, ಕಾಬೆಟ್ಟು ಕಾರ್ಕಳ ತಾಲೂಕು 4.ವಿಶಾಲ್ ಹೆಗ್ಡೆ ಪ್ರಾಯ:20 ವರ್ಷ ತಂದೆ: ಗೋಕುದಾಸ ಹೆಗ್ಡೆ ವಾಸ: ವಂಡರ್ಸ ಕಾಂಪ್ಲೆಕ್ಸ್ ಮಾರ್ಕೆಟ್ ರಸ್ತೆ, ಕಾರ್ಕಳ ಕಸಬಾ ಕಾರ್ಕಳ ತಾಲೂಕು ಇವರುಗಳನ್ನು ವಶಕ್ಕೆ ಪಡೆದುಕೊಂಡು 15 ಗ್ರಾಮ್ ಮಾದಕವಸ್ತು ಗಾಂಜಾ, 06 ಮೊಬೈಲ್, 03 OCB Slim- ಸ್ಲಿಪ್, ಕೆ,ಎ19-ಎಮ್,ಹೆಚ್,-3864 ನೇ ನಂಬ್ರದ ಕಾರು ಹಾಗೂ ಗಾಂಜಾ ಮಾರಾಟದಿಂದ ಬಂದ 2000/- ರೂ ಹಣವನ್ನು ಪಂಚರ ಸಮಕ್ಷಮ ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ  ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 57-2021 ಕಲಂ 8(ಸಿ),20(ಎ), 27(ಎ)  NARCOTIC DRUGS AND PSYCHOTROPIC SUBSTANCES ACT, 1985 ಮತ್ತು 269 ಐಪಿಸಿ ಯಂತೆಪ್ರಕರಣ  ದಾಖಲಿಸಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ:  ಬ್ರಹ್ಮಾವರ ತಾಲೂಕು, ಚೇರ್ಕಾಡಿ ಗ್ರಾಮದ, ಮೂಡೂರು ಎಂಬಲ್ಲಿರುವ ಸಂತೋಷ ನಿಲಯ ಎಂಬ ಮನೆಯಲ್ಲಿ ಸಂತೋಷ್ (ಪ್ರಾಯ: 25 ವರ್ಷ) ಎಂಬವನು ದಿನಾಂಕ: 18.05.2021 ರಂದು ಮಧ್ಯಾಹ್ನ 4:00 ಗಂಟೆಗೆ ಮನೆಯಿಂದ ಅರೆಕಲ್ಲು ಕಡೆಗೆ ಹೋದವನು ಸಂಜೆ 6:00 ಗಂಟೆಯಾದರೂ ಮನೆಗೆ ಬಾರದಿದ್ದಾಗ ಅರೆಕಲ್ಲು ಕಡೆಗೆ ಸಂಜೆ 6:15 ಗಂಟೆಗೆ ಹೋಗಿ ನೋಡಿದಾಗ ಸಂತೋಷನು ಅರೆಕಲ್ಲು ಮೇಲೆ ಪ್ರತಿಕ್ರಿಯೆ ಇಲ್ಲದೇ, ಪ್ರಜ್ಞಾಹೀನ ಸ್ಥಿತಿಯಲ್ಲಿ ಅಂಗಾತನೇ ಮಲಗಿದ್ದು, ಕೂಡಲೇ ಸಂತೋಷನನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಪ್ರಣವ್ ಆಸ್ಪತ್ರೆಗೆ ಸಂಜೆ 7:40 ಗಂಟೆಗೆ ಕರೆತಂದಾಗ ಪರೀಕ್ಷಿಸಿದ ವೈಧ್ಯರು ಸಂತೋಷನು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆ ಯುಡಿಆರ್ 28/2021 ಕಲಂ 174 ಸಿಆರ್‌ಪಿಸಿ  ರಂತೆ ಪ್ರಕರಣ  ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 19-05-2021 09:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080