ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಶಿರ್ವ: ದಿನಾಂಕ 19/05/2021 ರಂದು ಶಿರ್ವಾ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ ಶ್ರೀಶೈಲ್‌.ಡಿ.ಎಂ. ಇವರು ಸಿಬ್ಬಂದಿಯವರೊಂದಿಗೆ ಕೋವಿಡ್-19 ಕೋರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಹೊರಡಿಸಿರುವ ಆದೇಶವನ್ನು ಪರಿಷ್ಕರಿಸಿ ದಿನಾಂಕ 10/05/2021 ಬೆಳಿಗ್ಗೆ 06:00 ಗಂಟೆಯಿಂದ ದಿನಾಂಕ 24/05/2021 ರ ಬೆಳಿಗ್ಗೆ 06:00 ಗಂಟೆಯವರೆಗೆ ಲಾಕ್‌ಡೌನ್‌ಘೋಷಿಸಿದ್ದು, ಈ ಬಗ್ಗೆ ಪೊಲೀಸ್‌ಇಲಾಖೆಗೆ  ಆದೇಶ ಹೊರಡಿಸಿದ್ದು, ಈ ಬಗ್ಗೆ ವಾಹನ ತಪಾಸಣೆ ನಡೆಸುವಂತೆ ಮೇಲಾಧಿಕಾರಿಯವರ ಆದೇಶದಂತೆ ದಿನಾಂಕ 19.05.2021 ರಂದು 11:30 ಗಂಟೆಗೆ ಶಿರ್ವಾ ಗ್ರಾಮದ ಶಿರ್ವಾ ಪೇಟೆಯಲ್ಲಿರುವ ಚೆಕ್ ಪೋಸ್ಟ್ ನಲ್ಲಿ ಸಿಬ್ಬಂದಿಯವರೊಂದಿಗೆ  ಸಾರ್ವಜನಿಕ ರಸ್ತೆಯಲ್ಲಿ ವಾಹನ ತಪಾಸಣೆಯಲ್ಲಿರುತ್ತಾ  ಅಗತ್ಯ ವಸ್ತುಗಳ ಖರೀದಿ ಬಗ್ಗೆ ಸರಕಾರ ನಿಗದಿಪಡಿಸಿದ ಸಮಯ ಅವಕಾಶದ ಬಳಿಕವೂ ಅನಗತ್ಯವಾಗಿ  ವಾಹನಗಳಲ್ಲಿ ಸಂಚರಿಸುತ್ತಿರುವವರ ವಾಹನಗಳನ್ನು ತಪಾಸಣೆಗಾಗಿ ನಿಲ್ಲಿಸಿ ಪರಿಶೀಲಿಸಿದಲ್ಲಿ   ನೊಂದಣಿ ಸಂಖ್ಯೆ ಕೆಎ 20 EW 8772 ನೇ ಕೆಂಪು ಬಣ್ಣದ ಪ್ಯಾಶಿನೋ ದ್ವಿಚಕ್ರ ವಾಹನ ಸವಾರ ಸಾದಿಕ್‌2(33) ತಂದೆ: ಅಬ್ದುಲ್‌ರೆಹಮಾನ್‌, ವಾಸ: ಶಿರ್ವ ಮಸೀದಿ ಬಳಿ, ಶಿರ್ವ ಅಂಚೆ ಮತ್ತು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ.  ಎಂದು ತಿಳಿಸಿದ್ದು, ಎಂದು ತಿಳಿಸಿದ್ದು, ಸದ್ರಿಯವರ ಓಡಾಟದ ಕಾರಣವನ್ನು ವಿಚಾರಿಸಲಾಗಿ ಯಾವುದೇ ತುರ್ತು ಕಾರಣವಿಲ್ಲದೇ ಅನಗತ್ಯವಾಗಿ ಸಂಚರಿಸುತ್ತಿರುವುದು ಕಂಡು ಬಂದಿರುತ್ತದೆ. ಸದ್ರಿ ಆರೋಪಿಯು ಘನ ಕರ್ನಾಟಕ ಸರಕಾರ ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ನಿಯಮ ಉಲ್ಲಂಘಿಸಿ ಅನಗತ್ಯವಾಗಿ ವಾಹನದಲ್ಲಿ ಸಂಚರಿಸುತ್ತಿರುವುದರಿಂದ ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 30/2021 ಕಲಂ 269  ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿರುತ್ತದೆ.
  • ಮಣಿಪಾಲ: ದಿನಾಂಕ: 19/05/2021 ರಂದು ಕರೋನಾ ವೈರಸ್ ಕಾಯಿಲೆ ಸೊಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅನಾವಶ್ಯಕವಾಗಿ  ಸಂಚರಿಸುವವರ ವಿರುದ್ದ  ಕ್ರಮ ಕೈಗೊಳ್ಳುವ ಬಗ್ಗೆ   ಠಾಣಾ ಪಿ.ಎಸ್.ಐ ರಾಜಶೇಖರ್ ವಂದಲಿ ಹಾಗೂ ಸಿಬ್ಬಂದಿಯವರು ಮಣಿಪಾಲ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಹಾದು ಹೋಗಿರುವ ರಾ, ಹೆ 169(A) ರಸ್ತೆ ಬಳಿಯಲ್ಲಿ ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ 8:45 ಗಂಟೆಯಿಂದ 9:15 ಗಂಟೆಯ ಮಧ್ಯಾವಧಿಯಲ್ಲಿ ಆಪಾದಿತ ಶ್ರೀಕಾಂತ್, ತಂದೆ: ಸದಾನಂದ ಶೆಟ್ಟಿಗಾರ್, ವಿಳಾಸ:ಎಲ್.ವಿ ದೇವಸ್ಥಾನ ಹತ್ತಿರ, ಸಂತೆಕಟ್ಟೆ, ಉಡುಪಿ,ಎಂಬಾತನು KA 20 ED 3738 ನೇ ಮೊಟಾರ್ ಸೈಕಲ್   ಮತ್ತು  ವೀರೆಂದ್ರ,,ತಂದೆ: ರಾಜರಾಮ್ , ವಿಳಾಸ: ಬನ್ನಂಜೆ ಉಡುಪಿ ಎಂಬಾತನು KA 19 EE 9559 ನೇ ಮೊಟಾರ್ ಸೈಕಲ್ ‌ನಲ್ಲಿ ಅನಾವಶ್ಯಕವಾಗಿ ಸಂಚರಿಸುತ್ತಿದ್ದು ,ಸದರಿ ಆರೋಪಿತರು ಕೋವಿಡ್ ಸೊಂಕು 2ನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಇದ್ದು ಉಡುಪಿಯ ಮಾನ್ಯ ಜಿಲ್ಲಾಧಿಕಾರಿಗಳು ಅನಗತ್ಯ ಸಂಚಾರ ನಿರ್ಭಂಧಿಸಿ ಆದೇಶವನ್ನು ಹೊರಡಿಸಿರುವ ವಿಚಾರವನ್ನು ತಿಳಿದಿದ್ದರೂ ಕೂಡಾ ಯಾವುದೇ ಸಕಾರಣವಿಲ್ಲದೇ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೊಂಕನ್ನು ಹರಡುವ ಸಂಭವವಿರುವ ಬಗ್ಗೆ  ನಿರ್ಲಕ್ಷ್ಯ ವಹಿಸಿ  ತಿರುಗಾಡುತ್ತಿದ್ದರಿಂದ  ಸದರಿ ಆರೋಪಿಗಳನ್ನು  ಹಾಗೂ ಆರೋಪಿಗಳು ಸವಾರಿ ಮಾಡುತ್ತಿದ್ದ  ಮೊಟಾರ್ ಸೈಕಲ್ ಗಳನ್ನು ವಶಕ್ಕೆ ಪಡೆಯಲಾಗಿದ್ದು ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 70/2021 ಕಲಂ 269  ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿರುತ್ತದೆ.
  • ಮಲ್ಪೆ: ದಿನಾಂಕ:19-05-2021 ರಂದು ರಾತ್ರಿ 02:00  ಗಂಟೆಗೆ ರತ್ನಾಕರ ಸಹಾಯಕ ಪೊಲೀಸ್  ಉಪ ನಿರೀಕ್ಷಕರು, ಮಲ್ಪೆ ಪೊಲೀಸ್ ಠಾಣೆ ಇವರು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ  ಮಲ್ಪೆ ಜಂಕ್ಷನ್  ಬಳಿ   ರಸ್ತೆಯಲ್ಲಿ ರೌಂಡ್ಸ್ ಸಮಯ  HR 26-BD-0153  ನೇ ಕಾರಿನಲ್ಲಿ  ಸವಾರನು ಇತರ 3 ಜನರನ್ನು ಕುಳ್ಳಿರಿಸಿಕೊಂಡು ಕಾರನ್ನು ಮಲ್ಪೆ ಬೀಚ್  ಕಡೆಗೆ  ಚಲಾಯಿಸುತ್ತಿದ್ದು  ಕರೋನಾ ಮಾರಾಣಾಂತಿಕ ಕಾಯಿಲೆಯು  ಹರಡದಂತೆ ಮುಂಜಾಗೃತಾ ಕ್ರಮವಾಗಿ ಮಾನ್ಯ ಜಿಲ್ಲಾಧಿಕಾರಿಗಳು ಉಡುಪಿ ಜಿಲ್ಲೆಯವರು ಜಿಲ್ಲೆಯಾದ್ಯಂತ ಕಲಂ 144(3) ಸಿಆರ್‌ಪಿಸಿ ಯಂತೆ ನಿಷೆದಾಜ್ಙೆ ಹೊರಡಿಸಿದ್ದು ಈ ಬಗ್ಗೆ ಆರೋಪಿತರು ಕೊರೊನಾ ಮಾರಣಾಂತಿಕ ಕಾಯಿಲೆ ಹರಡದಂತೆ ಮುಂಜಾಗೃತ ಕ್ರಮವಾಗಿ ಮುಖಕ್ಕೆ ಯಾವುದೇ ಮಾಸ್ಕ್ ಧರಿಸದೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಸ್ವೆಚ್ಚಾಚಾರದಿಂದ ತಿರುಗಾಡಿಕೊಂಡು ಮುಂಜಾಗೃತ ಕ್ರಮಕೈಗೊಳ್ಳದೆ ಬೇಜವಾಬ್ದಾರಿಯುತವಾಗಿ   ಕಾರನ್ನು ಚಲಾಯಿಸುತ್ತಿದ್ದು ಕಾರಿನಲ್ಲಿ ಇದ್ದ  ಚಾಲಕನ ಹೆಸರು ವಿಳಾಸ ಕೇಳಲಾಗಿ ಕುಶಾಲ  ವೀರ್ ,ಪ್ರಾಯ: 22 ವರ್ಷ, ತಂದೆ: ವೀರ್ ಸಿಂಗ್ , ವಾಸ:  13-87 ಸೆಕ್ಟರ್ -15  ಪಾರ್ಟ್ -2   ಗುರ್ ಗಾರ್ವನ್  ಹರಿಯಾಣ, ಹಾಲಿವಾಸ: ರೂಮ್ ನಂ 307, ಗ್ರೀನ್ ವುಡ್ಸ್ ಅಪಾರ್ಟ್ ಮೆಂಟ್ ಮಣಿಪಾಲ ,  ಕಾರಿನಲ್ಲಿ ಇದ್ದ ಇತರ ವ್ಯಕ್ತಿಗಳ ಹೆಸರು ವಿಳಾಸ ವಿಚಾರಿಸಲಾಗಿ 1)  ಶುಭಮ್ ಕುಮಾರ್ ,ಪ್ರಾಯ: 22 ವರ್ಷ,  ತಂದೆ: ಎಪಿ ಸಿಂಗ್, ವಾಸ: 176  ಹೆವೋ ಅಪಾರ್ಟ್ ಮೆಂಟ್   ಗುರ್ ಗಾರ್ವನ್  ಹರಿಯಾಣ  ,ಹಾಲಿವಾಸ: ರೂಮ್ ನಂ 307, ಪ್ರೀಮಿಯಮ್  ಗ್ರೀನ್ ವುಡ್ಸ್ ಅಪಾರ್ಟ್ ಮೆಂಟ್ ಮಣಿಪಾಲ, 2)  ರೋಹಿಕಾ ಶರ್ಮಾ, ಪ್ರಾಯ: 22 ವರ್ಷ, ತಂದೆ : ರಾಜಿತ್ ಶರ್ಮಾ, ವಾಸ:ನವದೆಹಲಿ, ಹಾಲಿವಾಸ ರೂಮ್ ನಂ 102  ಕೀರ್ತಿ  ಅಪಾರ್ಟ್ ಮೆಂಟ್ , ಮಧ್ವನಗರ, ಮಣಿಪಾಲ , 3) ಶಾಂತನು , ಪ್ರಾಯ: 24 ವರ್ಷ, ತಂದೆ: ಶಾರದಾನಂದ ಜಾ ವಾಸ: ಹಾಲಿವಾಸ: ಮಣಿಪಾಲ ಅಟಾಲಿಯಾ ರೂಮ್ ನಂ 404,ಪೆರಂಪಳ್ಳಿ ರೋಡ್, ಮಣಿಪಾಲ  ಎಂದು ತಿಳಿಸಿರುತ್ತಾರೆ, ಸದ್ರಿಯವರೊಂದಿಗೆ  ಅವರುಗಳು  ಚಲಾಯಿಸಿಕೊಂಡು HR 26-BD-0153  ನೇ ಕಾರಿನ್ನು  ವಶಕ್ಕೆ  ಪಡೆದಿದ್ದು, ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 52/2021 ಕಲಂ 269 ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿರುತ್ತದೆ.
  • ಹಿರಿಯಡ್ಕ: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021ರಿಂದ24/05/2021 ರ ವರೆಗೆ ಕೋವಿಡ್  ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ  ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು,  ಈ ಬಗ್ಗೆ ಈರಣ್ಣ ಶಿರಗುಂಪಿ ಪಿಎಸ್‌ಐ ಹಿರಿಯಡಕ ಪೊಲೀಸ್ ಠಾಣೆ ಇವರು ದಿನಾಂಕ 19/05/2021 ರಂದು ಬೆಳಿಗ್ಗೆ 8:00  ಸಿಬ್ಬಂದಿಯವರೊಂದಿಗೆ ರೌಂಡ್ಸ ಕರ್ತವ್ಯದಲ್ಲಿರುವಾಗ ಹಿರಿಯಡಕ ಪೇಟೆಯಲ್ಲಿ  ರಾಘವೇಂದ್ರ ಬೇಕರಿ ಎಂಬ ಹೆಸರಿನ ಅಂಗಡಿಯನ್ನು ತೆರೆದುಕೊಂಡು ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿದ್ದು . ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯಲ್ಲಿ ವಿಚಾರಿಸಲಾಗಿ ತಾನೆ ಅಂಗಡಿಯ ಮಾಲಕನಾಗಿರುವುದಾಗಿ ತಿಳಿಸಿರುತ್ತಾನೆ. ಆತನ ಹೆಸರು ಕೇಳಲಾಗಿ ರವೀಂದ್ರ ಪ್ರಭು (45)  ತಂದೆ: ರಾಮ ಪ್ರಭು ವಾಸ: ಮಾತೃಶ್ರೀ ಪುತ್ತಿಗೆ ಬೊಮ್ಮರಬೆಟ್ಟು ಗ್ರಾಮ ಉಡುಪಿ ತಾಲೂಕು  ಎಂದು ತಿಳಿಸಿದ್ದು   ಕೋವಿಡ್ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿನಗಳ ಬಗ್ಗೆ ತಿಳುವಳಿಕೆ  ಇದ್ದರು ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೊಂಕನ್ನ ಹರಡುವ ಸಂಭವ ಇದೆ ಎಂದು ತಿಳಿದೂ ಕೂಡ ನಿರ್ಲಕ್ಷತನದಿಂದ ಕೋವಿಡ್ ನಿಯಮ ಉಲ್ಲಂಘಿಸಿ ತನ್ನ ಬೇಕರಿ ಅಂಗಡಿಯನ್ನು ತೆರೆದುಕೊಂಡಿದ್ದು ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 32/2021 ಕಲಂ 269  ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿರುತ್ತದೆ.
  • ಹಿರಿಯಡ್ಕ: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021ರಿಂದ 24/05/2021 ರ ವರೆಗೆ ಕೋವಿಡ್  ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ  ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು,  ಈ ಬಗ್ಗೆ ಈ ಬಗ್ಗೆ ಈರಣ್ಣ ಶಿರಗುಂಪಿ ಪಿಎಸ್‌ಐ ಹಿರಿಯಡಕ ಪೊಲೀಸ್ ಠಾಣೆ ಇವರು ದಿನಾಂಕ 19/05/2021 ರಂದು ಬೆಳಿಗ್ಗೆ  9:00 ಗಂಟೆಗೆ ಸಿಬ್ಬಂದಿಯವರೊಂದಿಗೆ ರೌಂಡ್ಸ ಕರ್ತವ್ಯದಲ್ಲಿರುವಾಗ ಹಿರಿಯಡ್ಕ ಪೇಟೆಯ ವೀರಭದ್ರ ದೇವಸ್ಥಾನದ ಸ್ವಾಗತ ಗೋಪುರದ ಬಳಿ ಅಯ್ಯಂಗಾರ್  ಬೇಕರಿ  ಎಂಬ ಹೆಸರಿನ ಬೇಕರಿಯನ್ನು  ತೆರೆದುಕೊಂಡು ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿದ್ದು . ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯನ್ನು ವಿಚಾರಿಸಲಾಗಿ ತಾನು ಅಂಗಡಿಯ ಕೆಲಸದವನಾಗಿದ್ದು ತನ್ನ ಹೆಸರು ಕುಮಾರ್  (38) ತಂದೆ: ರಾಜು ವಾಸ: ಎಮ್ ಎನ್ ಎಸ್ ಬಿಲ್ಡಿಂಗ್ ಗಾಂದಿ ಮೈದಾನ ಬಳಿ ಹಿರಿಯಡ್ಕ ಬೊಮ್ಮರಬೆಟ್ಟು ಗ್ರಾಮ ಉಡುಪಿ ತಾಲೂಕು ಎಂದು ತಿಳಿಸಿದ್ದು ಮಾಲಿಕ ಊರಿಗೆ ಹೋಗಿರುವುದಾಗಿ ತಿಳಿಸಿರುತ್ತಾನೆ. ಕೋವಿಡ್ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿನಗಳ ಬಗ್ಗೆ ತಿಳುವಳಿಕೆ  ಇದ್ದರು ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೊಂಕನ್ನ ಹರಡುವ ಸಂಭವ ಇದೆ ಎಂದು ತಿಳಿದೂ ಕೂಡ ನಿರ್ಲಕ್ಷತನದಿಂದ ಕೋವಿಡ್ ನಿಯಮ ಉಲ್ಲಂಘಿಸಿ ತನ್ನ ಬೇಕರಿ ಅಂಗಡಿಯನ್ನು ತೆರೆದುಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 33/2021 ಕಲಂ 269 ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿರುತ್ತದೆ.
  • ಹಿರಿಯಡ್ಕ : ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021ರಿಂದ 24/05/2021 ರ ವರೆಗೆ ಕೋವಿಡ್  ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ  ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು,  ಈ ಬಗ್ಗೆ ಈರಣ್ಣ ಶಿರಗುಂಪಿ ಪಿಎಸ್‌ಐ ಹಿರಿಯಡಕ ಪೊಲೀಸ್ ಠಾಣೆ ಇವರು  ದಿನಾಂಕ 19/05/2021 ರಂದು ಬೆಳಿಗ್ಗೆ 9:45 ಗಂಟೆಗೆ   ಸಿಬ್ಬಂದಿಯವರೊಂದಿಗೆ ರೌಂಡ್ಸ ಕರ್ತವ್ಯದಲ್ಲಿರುವಾಗ ಹಿರಿಯಡ್ಕ ಪೇಟೆಯಲ್ಲಿ ಬಾಲಾಜಿ  ಬೇಕರಿ  ಎಂಬ ಹೆಸರಿನ ಬೇಕರಿಯನ್ನು  ತೆರೆದುಕೊಂಡು ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿದ್ದು . ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯನ್ನು ವಿಚಾರಿಸಲಾಗಿ ತನ್ನ ಹೆಸರು ರಾಜೇಂದ್ರ ಕಿಣಿ (55)  ತಂದೆ: ಪಾಂಡು ರಂಗ ಕಿಣಿ ವಾಸ: ಮಂಜರ ಬೆಟ್ಟು , ಪೆರ್ಡೂರು ಪೆರ್ಡೂರು ಗ್ರಾಮ ಉಡುಪಿ ತಾಲೂಕು ಎಂದು ತಿಳಿಸಿದ್ದು ಕೋವಿಡ್ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿನಗಳ ಬಗ್ಗೆ ತಿಳುವಳಿಕೆ  ಇದ್ದರು ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೊಂಕನ್ನ ಹರಡುವ ಸಂಭವ ಇದೆ ಎಂದು ತಿಳಿದೂ ಕೂಡ ನಿರ್ಲಕ್ಷತನದಿಂದ ಕೋವಿಡ್ ನಿಯಮ ಉಲ್ಲಂಘಿಸಿ ತನ್ನ ಬೇಕರಿ ಅಂಗಡಿಯನ್ನು ತೆರೆದುಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 34/2021 ಕಲಂ 269 ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿರುತ್ತದೆ.
  • ಶಂಕರನಾರಾಯಣ: ಆರೋಪಿತ 1. ಕೆಎ.20  ಇಎಮ್. .7837, 2. ಕೆಎ.20  ಇಪಿ.2137, ಹಾಗೂ  ನೊಂದಣಿ   ಸಂಖ್ಯೆ  ಇಲ್ಲದ  ಜಾವ   ಕಂಪೆನಿಯ   ಮೋಟಾರ್  ಸೈಕಲ್    ಸವಾರರು  ದಿನಾಂಕ  19.05.2021 ರಂದು  11;00   ಘಂಟೆಗೆ  ಕುಂದಾಪುರ ತಾಲೂಕಿನ  ಸಿದ್ದಾಪುರ  ಗ್ರಾಮದ  ಸಿದ್ದಾಪುರ  ಟಿವಿಎಸ್‌ ಷೋ ರೂಂ  ಎದುರುಗಡೆ  ಕುಂದಾಪುರ- ಶಿವಮೊಗ್ಗ ರಾಜ್ಯ ರಸ್ತೆಯಲ್ಲಿ  ಆರೋಪಿಗಳು  ಸೇರಿ ಕೋವಿಡ್ -19 ಸೋಂಕು ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ  ಕಾರಣದಿಂದ ಕರೋನಾ ಸೊಂಕನ್ನು ತಡೆಗಟ್ಟಲು ಉಡುಪಿ ಜಿಲ್ಲೆಯಾದ್ಯಂತ ಉಡುಪಿ ಜಿಲ್ಲಾಡಳಿತ ನಿಷೇದಾಜ್ಜೆಯನ್ನು ಜಾರಿಗೊಳಿಸಿದ್ದು, ಉಡುಪಿ ಜಿಲ್ಲಾಡಳಿತದ ಹಾಗೂ ಘನ  ಸರಕಾರದ ಆದೇಶವನ್ನು ಉಲ್ಲಂಘಿಸಿ  ಯಾವುದೇ ಮುನ್ನೆಚ್ಚರಿಕೆ   ಕ್ರಮ ಕೈಗೊಳ್ಳದೆ, ಸಾಮಾಜಿಕ ಅಂತರ ಪಾಲಿಸದೇ ಸಾರ್ವಜನಿಕ ರಸ್ತೆಯಲ್ಲಿ ಮೋಟಾರ್ ಸೈಕಲ್  ನಿಲ್ಲಿಸಿಕೊಂಡು  ಗುಂಪು ಗೂಡಿ ಕೊಂಡು ನಿಂತುಕೊಂಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 56/2021  ಕಲಂ: 269,  ಜೊತೆಗೆ  34 ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿರುತ್ತದೆ.
  • ಕೊಲ್ಲೂರು: ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ: 10/05/2021 ರಿಂದ ದಿನಾಂಕ 24/05/2021 ರ ವರೆಗೆ  ಕೋವಿಡ್‌-19 ಕರೋನಾ ವೈರಸ್‌ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್‌ಕರ್ಪ್ಯೂ ವಿಧಿಸಿದ್ದು ಕರ್ಪ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು ದಿನಾಂಕ: 19/05/2021 ರಂದು ನಾಸೀರ್ ಹುಸೈನ್ , ಪಿಎಸ್‌ಐ ಕೊಲ್ಲೂರು ಪೊಲೀಸ್ ಠಾಣೆ ಇವರು ಸಿಬ್ಬಂದಿಗಳೊಂದಿಗೆ ವಂಡ್ಸೆ  ಗ್ರಾಮದ ವಂಡ್ಸೆ ಕೆಳಪೇಟೆಯಲ್ಲಿ ವಾಹನ ತಪಾಸಣೆ ಕರ್ತವ್ಯದಲ್ಲಿರುವಾಗ ಬೆಳಗ್ಗೆ ಸುಮಾರು 10:00 ಗಂಟೆಯಿಂದ 12:00 ಗಂಟೆಯ ತನಕ ವಾಹನ ತಪಾಸಣೆ ಮಾಡಿ ಕೊಂಡಿರುವಾಗ ಈ ಕೆಳಕಂಡ ದ್ವಿಚಕ್ರ ವಾಹನಗಳನ್ನು ಅದರ ಸವಾರರು ಚಲಾಯಿಸಿಕೊಂಡು ಬರುತ್ತಿದ್ದನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ  ದ್ವಿಚಕ್ರ ವಾಹನಗಳನ್ನು ಅದರ ವಾಹನ ಸವಾರರು ಚಲಾಯಿಸಿಕೊಂಡು ಸಕಾರಣವಿಲ್ಲದೆ ಅನಗತ್ಯವಾಗಿ  ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು  ಬಂದಿರುವುದು  ಕಂಡು ಬಂದಿರುತ್ತದೆ. ಸದ್ರಿ ದ್ವಿಚಕ್ರ  ವಾಹನಗಳ  ಸವಾರರ ವಿವರ  ಹಾಗೂ  ನೊಂದಣಿ  ಸಂಖ್ಯೆ  ಈ ರೀತಿ  ಇರುತ್ತದೆ.  1] KA 20 EN 3189 ನೇ ಮೋಟಾರು ಸೈಕಲ್‌ಸವಾರ  ರಾಘವೇಂದ್ರ ಶೆಟ್ಟಿ ಪ್ರಾಯ 39 ವರ್ಷ ತಂದೆ: ಚಂದ್ರಶೇಖರ ಶೆಟ್ಟಿ  ವಾಸ: ಅಬ್ಬಿ  ವಂಡ್ಸೆ  ಗ್ರಾಮ  ಕುಂದಾಪುರ  ತಾಲೂಕು, 2] KA 20 R 3936 ನೇ ಹಿರೋ ಹೊಂಡಾ ಕಂಪನಿಯ ಮೋಟಾರು ಸೈಕಲ್‌ಅದರ ಸವಾರ ಜಯಕರಪ್ರಾಯ 39 ವರ್ಷ ತಂದೆ: ಅಣ್ಣು  ಪೂಜಾರಿ  ವಾಸ: ಯಕ್ಷೇಶ್ವರಿ ಅನ್ನಪೂರ್ಣ ದೇವಸ್ಥಾನ ಬಳಿ  ವಂಡ್ಸೆ ಗ್ರಾಮ ಕುಂದಾಪುರ ತಾಲೂಕು  ಸದ್ರಿ ಮೇಲ್ಕಂಡ ದ್ವಿಚಕ್ರ ವಾಹನ  ಸವಾರರು ಕೋವಿಡ್‌-19 ಮಹಾಮಾರಿ ಕೊರೋನಾ ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟುವ  ನಿಟ್ಟಿನಲ್ಲಿ  ಕರ್ನಾಟಕ ರಾಜ್ಯ ಸರಕಾರವು ಹೊರಡಿಸಿದ ಮಾರ್ಗ ಸೂಚಿಗಳು ಹಾಗೂ ಮಾನ್ಯ ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳು ಕರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವವಿದೆಯೆಂದು  ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ  ಸಾರ್ವಜನಿಕ ಸ್ಥಳದಲ್ಲಿ  ಸಂಚರಿಸಿಕೊಂಡು  ನಿರ್ಲಕ್ಷತನದಿಂದ  ಸರಕಾರ  ಹಾಗೂ ಜಿಲ್ಲಾಡಳಿತದ  ಮಾರ್ಗ ಸೂಚಿಯಲ್ಲಿನ  ನಿಯಮಗಳನ್ನು  ಉಲ್ಲಂಘಿಸಿ  ಜೀವಕ್ಕೆ  ಅಪಾಯಕಾರವಾದಂಥ  ರೋಗವು  ಹರಡುವಂತೆ  ಮಾಡುವ  ನಿರ್ಲಕ್ಷತನ  ತೋರಿರುವುದರಿಂದ  ಸದ್ರಿ ವಾಹನಗಳನ್ನು  ಸ್ವಾಧೀನಪಡಿಸಿ ಕೊಂಡಿದ್ದು ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 17/2021 ಕಲಂ 269  ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿರುತ್ತದೆ.
  • ಮಲ್ಪೆ: ದಿನಾಂಕ:19-05-2021 ರಂದು ಬೆಳಿಗ್ಗೆ 11:00  ಗಂಟೆಗೆ ಸಕ್ತಿವೇಲು ಈ  ಪೊಲೀಸ್  ಉಪ ನಿರೀಕ್ಷಕರು, ಮಲ್ಪೆ ಪೊಲೀಸ್ ಠಾಣೆ ಇವರು  ಮಲ್ಪೆ ಠಾಣಾ ಸರಹದ್ದಿನ ಮಲ್ಪೆ  ಬಲರಾಮ ಸರ್ಕಲ್  ಬಳಿ  ರಸ್ತೆಯಲ್ಲಿ ರೌಂಡ್ಸ್ ಸಮಯ   KA 41 E 5956 ನೇ ಸ್ಕೂಟರ್   ನಲ್ಲಿ ಸವಾರನು ಹಿಂಬದಿಯಲ್ಲಿ ಸಹಸವಾರರನ್ನು ಕುಳ್ಳಿರಿಸಿಕೊಂಡು ,ಹಾಗೂ KA -20-EW 1801 Hond Activa ಸ್ಕೂಟರ್ ಸವಾರನು ಸ್ಕೂಟರನ್ನು ಚಲಾಯಿಸಿಕೊಂಡು ಮಲ್ಪೆ ಜಂಕ್ಷನ್ ಕಡೆಯಿಂದ  ಮಲ್ಪೆ ಬೀಚ್ ಕಡೆಗೆ  ಬರುತ್ತಿದ್ದರು. . ಮಾನ್ಯ ಜಿಲ್ಲಾಧಿಕಾರಿಗಳು ಉಡುಪಿ ಜಿಲ್ಲೆಯವರು ಜಿಲ್ಲೆಯಾದ್ಯಂತ ಕಲಂ 144(3) ಸಿಆರ್‌ಪಿಸಿ ಯಂತೆ ನಿಷೆದಾಜ್ಙೆ ಹೊರಡಿಸಿದ್ದು ಈ ಬಗ್ಗೆ ಆರೋಪಿತರು ಕೊರೊನಾ ಕಾಯಿಲೆ ಹರಡದಂತೆ ಮುಂಜಾಗೃತ ಕ್ರಮವಾಗಿ ಮುಖಕ್ಕೆ ಯಾವುದೇ ಮಾಸ್ಕ್ ಧರಿಸದೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಸ್ವೆಚ್ಚಾಚಾರದಿಂದ ತಿರುಗಾಡಿಕೊಂಡು ಮುಂಜಾಗೃತ ಕ್ರಮಕೈಗೊಳ್ಳದೆ ಬೇಜವಾಬ್ದಾರಿಯುತವಾಗಿ   ಸ್ಕೂಟರ್   ಸವಾರಿ  ಮಾಡಿಕೊಂಡಿದ್ದ ಶ್ರೀನಿವಾಸ   ಸಹಸವಾರ  ಭಾಸ್ಕರ ಹಾಗೂ  ಇನ್ನೊಂದು ಸ್ಕೂಟರ್ ಸವಾರ ಪ್ರಥಮ್ ಕುಮಾರ್   ಇವರುಗಳಿಂದ ಕೊವಿಡ್ 19  ಸೋಂಕು ಸಾರ್ವಜನಿಕರಿಗೆ ಹರಡುವ ಸಂಭವವಿರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಸರಕಾರದ ಸ್ಪಷ್ಟ ಆದೇಶವಿದ್ದರೂ ಸಹಾ ಆದೇಶವನ್ನು ಪಾಲಿಸದೆ ಕಾನೂನು ಉಲ್ಲಂಘಿಸಿರುವುದರಿಂದ 3 ಜನ ಆರೋಪಿತರನ್ನು ಹಾಗೂ  ಅವರು ತಿರುಗಾಡಲು ಉಪಯೋಗಿಸಿದ 2 ಸ್ಕೂಟರ್ ನ್ನು  ಸ್ವಾಧೀನಪಡಿಸಿಕೊಂಡಿದ್ದು  ಈ ಬಗ್ಗೆ ಮಲ್ಪೆ  ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 53/2021 ಕಲಂ 269  ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿರುತ್ತದೆ.
  • ಅಮಾಸೆಬೈಲು: ದಿನಾಂಕ 19/05/2021 ಸುಧಾಕರ, ಸಹಾಯಕ ಪೊಲೀಸ್ ಉಪನಿರೀಕ್ಷಕರು ಅಮಾಸೆಬೈಲು ಪೊಲೀಸು ಠಾಣೆ ಇವರು ಸಿಬ್ಬಂದಿಗಳೊಂದಿಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದು ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 10-05-2021  ರಿಂದ 24-05-2021  ರವರೆಗೆ ಕೋವಿಡ್ – 19  ಸಾಂಕ್ರಾಮಿಕ  ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಆದೇಶ ಹೊರಡಿಸಿದ್ದು ಅನಗತ್ಯ ವಾಹನಗಳ ಓಡಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು  ಮದ್ಯಾಹ್ನ 14:30 ಗಂಟೆಗೆ ಹೊಸಂಗಡಿ ಗ್ರಾಮದ ಕೆರೆಕಟ್ಟೆ ಚರ್ಚ್ ಬಳಿ ಆಪಾದಿತನು ಸಂಜಯ ನಾಯ್ಕ ಪ್ರಾಯ: 32 ವರ್ಷ ತಂದೆ ಪಾಂಡು  ವಾಸ: ಮುತ್ತಿನಕಟ್ಟೆ ಹೊಸಂಗಡಿ ಗ್ರಾಮ ಕುಂದಾಪುರ ತಾಲೂಕು KA 15 Y 7172 TVS Wego Scooty ದ್ವಿಚಕ್ರ ವಾಹನವನ್ನು  ಚಲಾಯಿಸಿಕೊಂಡು ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ಬಂದಿರುವುದು ಕಂಡು ಬಂದಿರುತ್ತದೆ. ಸದ್ರಿ  ಮೇಲ್ಕಂಡ ದ್ವಿಚಕ್ರ ವಾಹನ ಸವಾರ  ಕೋವಿಡ್ – 2019  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು  ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು  ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ  ಸ್ಥಳದಲ್ಲಿ  ಸಂಚರಿಸಿಕೊಂಡು ನಿರ್ಲಕ್ಷತನದಿಂದ ಕೋವಿಡ್ ನಿಯಮವನ್ನು ಉಲ್ಲಂಘಿಸಿ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕರವಾದಂಥ ರೋಗವು ಹರಡುವಂತೆ ಮಾಡಿ ನಿರ್ಲಕ್ಷತನ ತೋರಿರುವುದರಿಂದ ಸದ್ರಿ ವಾಹನವನ್ನು  ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 23/2021 ಕಲಂ 269  ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-05-2021 05:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080