ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ದಿನಕರ ಮೊಗವೀರ (48), ತಂದೆ: ಕುಷ್ಠ ಮೊಗವೀರ, ವಾಸ: ಸಣ್ಣ ಗೋಪಾಡಿ ಮನೆ, ಹಟ್ಟಿಕುದ್ರು ಬಸ್ಸೂರು ಗ್ರಾಮ, ಕುಂದಾಪುರ ತಾಲೂಕು ಇವರು ದಿನಾಂಕ 16/04/2023 ರಂದು ಸ್ಕೂಟರ್ ನಂ KA-20-EH-6958 ನೇದರಲ್ಲಿ ಸಹ ಸವಾರನ್ನಾಗಿ ಬಾವ ಸುರೇಶ್ (45) ಹಾಗೂ ಅವರ ಮಗ ಅದ್ವಿಕ್ (3) ನೊಂದಿಗೆ ಮಂದರ್ತಿ ದೇವಸ್ಥಾನಕ್ಕೆ ಹೋಗಿದ್ದು, ವಾಪಾಸು ಹೊರಟು 14:10 ಗಂಟೆಗೆ ಉಡುಪಿ-ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ರ ಚಿತ್ರಪಾಡಿ ಗ್ರಾಮದ ನಟರಾಜ್ ಬಾರ್ ನಿಂದ ಸ್ವಲ್ಪ ಮುಂದೆ ತಲುಪಿದಾಗ ಓರ್ವ ಬಿಳಿ ಬಣ್ಣದ ಕಾರು ಚಾಲಕನು ತನ್ನ  ಕಾರನ್ನು ಎದುರಿನಿಂದ ವಿರುದ್ದ ದಿಕ್ಕಿನಲ್ಲಿ ಅತೀವೇಗ, ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಹೊಡೆದಿದ್ದು,  ಮೂರು ಜನರು ಸ್ಕೂಟರಿನಿಂದ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಎಡಕೈ  ಮೊಣಗಂಟಿನ ಬಳಿ ಹಾಗೂ ಎಡಕಾಲಿನ ಬಲಬದಿಯ ಪಾದದ ಬಳಿ ತರಚಿದ ಗಾಯವಾಗಿದ್ದು, ಸುರೇಶ್ ನಿಗೆ ಎಡಕಾಲಿನ ಹೆಬ್ಬೆರಳು ಜಖಂಗೊಂಡು ತೀವೃ ತರಹದ ಗಾಯವಾಗಿದ್ದು, ಅವರ ಮಗನಾದ ಅದ್ವಿಕ್ ನಿಗೆ ಎಡಕಾಲಿನ ಎಡಬದಿಯ, ಎಡ ಕೈ ಹಾಗೂ ತಲೆಯ ಎಡಬದಿಯಲ್ಲಿ ತರಚಿದ ಗಾಯವಾಗಿರುತ್ತದೆ. ಅಪಘಾತಪಡಿಸಿದ ಕಾರಿನ  ಚಾಲಕನು ಕಾರನ್ನು ಅಪಘಾತದ ಸ್ಥಳದಲ್ಲಿ ನಿಲ್ಲಿಸದೇ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸದೇ ಸ್ಥಳದಿಂದ ಹೋಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 63/2023  ಕಲಂ: 279, 337, 338 ಐಪಿಸಿ ಮತ್ತು 134 (a) (b) IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಆಶ್ರಯ್ (25), ತಂದೆ  ನಮಿರಾಜ ಜೈನ್, ವಾಸ ಅಹಿಂಸಾ ನಿಲಯ, ಮದರಮ್ ಪಾಲ್,ರೆಂಜಾಳ ಅಂಚೆ ಮತ್ತುಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ  17/04/2023  ರಂದು ತನ್ನ  ಪರಿಚಯಸ್ಥರಾದ ಪ್ರಥಮ್  ಎಂಬುವವರು  ಸವಾರಿ  ಮಾಡುತ್ತಿದ್ದ KA-19-ET-9575 ನೋಂದಣಿ ಸಂಖ್ಯೆಯ ಯಮಹಾ  ಕಂಪೆನಿಯ FZ ಮೋಟಾರ್  ಸೈಕಲ್‌ನಲ್ಲಿ  ಸಹಸವಾರನಾಗಿ  ಕುಳಿತುಕೊಂಡು ರೆಂಜಾಳ  ಕಡೆಯಿಂದ ಜೋಡುಕಟ್ಟೆ  ಕಡೆಗೆ  ಬರುತ್ತಾ ಸಂಜೆ 18:00  ಗಂಟೆಗೆ ಮಿಯಾರು ಗ್ರಾಮದ ಬೋರ್ಕಟ್ಟೆ ಶಾಲೆಯ ಬಳಿ ತಲುಪಿದಾಗ ಎದುರಿನಿಂದ ಜೋಡುಕಟ್ಟೆ ಕಡೆಯಿಂದ  ರೆಂಜಾಳ ಕಡೆಗೆ  ಮಹೇಂದ್ರ ಬೊಲೆರೋ ಗೂಡ್ಸ್  ವಾಹನ  KA-19-AD-9225 ನ್ನು   ಅದರ ಚಾಲಕ   ದಿನೇಶ ಅತೀವೇಗ  ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು  ಬಂದು ರಸ್ತೆಯ ತೀರಾ ಬಲಬದಿಗೆ  ಚಲಾಯಿಸಿ  ಪ್ರಥಮ್ ಸವಾರಿ ಮಾಡುತ್ತಿದ್ದ  KA-19-ET-9575 ದ್ವಿಚಕ್ರ  ವಾಹನಕ್ಕೆ  ಡಿಕ್ಕಿ  ಹೊಡೆದ  ಪರಿಣಾಮ  ದ್ವಿಚಕ್ರ  ವಾಹನ ಸಮೇತ ಪಿರ್ಯಾದಿದಾರರು  ಮತ್ತು  ಸವಾರ  ಪ್ರಥಮ್ ರವರು ಡಾಮಾರು  ರಸ್ತೆಗೆ   ಬಿದ್ದು ಪಿರ್ಯಾದಿದಾರರ  ಬಲಕಾಲಿನ   ಮೊಣ ಗಂಟಿನ ಬಳಿ  ರಕ್ತಗಾಯವಾಗಿದ್ದು, ಸವಾರ ಪ್ರಥಮ್‌ ರವರ ಬಲಕಾಲಿನ ಮೂಳೆ  ಮುರಿತ ಹಾಗೂ ಎದೆಗೆ ಗುದ್ದಿದ ಒಳಜಖಂ ಉಂಟಾಗಿದ್ದು ಗಾಯಾಳುಗಳನ್ನು ಡಿಕ್ಕಿ ಹೊಡೆದ ವಾಹನ ಚಾಲಕ  ದಿನೇಶ  ಕಾರ್ಕಳದ  ನಿಟ್ಟೆ ಗಾಜ್ರಿಯಾ   ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 47/2023  ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತರ ಪ್ರಕರಣ

  • ಬೈಂದೂರು: ದಿನಾಂಕ 18/04/2023 ರಂದು ಮಹೇಶ್ ಕಂಬಿ, ಪೊಲೀಸ್ ಉಪ ನಿರೀಕ್ಷಕರು, ಬೈಂದೂರು ಪೊಲೀಸ್‌ ಠಾಣೆ ಇವರು ಮೂಕಾಂಬಿಕಾ ರೈಲ್ವೆ ನಿಲ್ದಾಣದ ಬಳಿ ಸಿಬ್ಬಂದಿಗಳೊಂದಿಗೆ ಚೆಕ್ ಪೊಸ್ಟ್ ಕರ್ತವ್ಯ ನಿರ್ವಹಿಸುತ್ತಿರುವ ಸಮಯ  20:00 ಗಂಟೆಗೆ ಮುಕಾಂಬಿಕಾ ರೈಲ್ವೆ ನಿಲ್ದಾಣಕ್ಕೆ ಗೋವಾ ಕಡೆಯಿಂದ ಕೇರಳಕ್ಕೆ ಹೋಗುವ ಒಂದು ರೈಲು  ಬಂದಿದ್ದು ಆ ರೈಲಿನಿಂದ ಓರ್ವ ವ್ಯಕ್ತಿಯು ಒಂದು ಕಪ್ಪು ಬಣ್ಣದ ಬ್ಯಾಗನ್ನು ಹಿಡಿದುಕೊಂಡು ಬರುತ್ತಿರುವುದನ್ನು ಗಮನಿಸಿ ಅನುಮಾಸ್ಪದವಾಗಿ ಕಂಡು ಬಂದಿದ್ದರಿಂದ ಆತನನ್ನು ಚೆಕ್ ಮಾಡಲು ಮುಂದಾದಾಗ ಆ ವ್ಯಕ್ತಿಯು   ಕೈನಲ್ಲಿರುವ ಕಪ್ಪು ಬಣ್ಣದ ಬ್ಯಾಗನ್ನು ಎಸೆದು ಓಡಿ ಹೋಗಿದ್ದು ಸುತ್ತ ಮುತ್ತ ಹುಡುಕಾಡಿದಲ್ಲಿ ಎಲ್ಲಿಯು ಪತ್ತೆಯಾಗಿರುವುದಿಲ್ಲ ನಂತರ  ಆ ಕಪ್ಪು ಬಣ್ಣದ ಬ್ಯಾಗನ್ನು ಬಿಚ್ಚಿ ನೋಡಲಾಗಿ ಅದರಲ್ಲಿ ಮದ್ಯ ತುಂಬಿದ ಕೇಲವು ಬಾಟಲಿಗಳಿದ್ದು ಅವುಗಳು ಗೋವಾ ರಾಜ್ಯದ ಮದ್ಯದ ಬಾಟಲಿಗಳಾಗಿದ್ದು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯದ ಬಾಟಲಿಯನ್ನು  ಇಟ್ಟುಕೊಂಡಿರುವುದು ದೃಢಪಟ್ಟಿದ್ದು,ಕಪ್ಪು ಬಣ್ಣದ ಬ್ಯಾಗನಲ್ಲಿದ್ದ ಮದ್ಯ ತುಂಬಿದ ಬಾಟಿಲಿಗಟಳನ್ನು ಪರಿಶೀಲಿಸಲಾಗಿ ARABELLA ಎಂದು ಬರೆದಿರುವ 750 ML VODKA ಬಾಟಲಿ-2 ಅವುಗಳ ಒಟ್ಟು ಮದ್ಯದ ಪ್ರಮಾಣ 1.500 ಲೀಟರ್ ಆಗಿರುತ್ತದೆ, KIZANSH BLACK 52 ಎಂದು ಬರೆದಿರುವ 750 ML ನ ವಿಸ್ಕಿ ಬಾಟಲಿ-2 ಅವುಗಳ ಒಟ್ಟು ಮದ್ಯದ ಪ್ರಮಾಣ 1.500 ಲೀಟರ್ ಆಗಿರುತ್ತದೆ, ROYAL GRAND ಎಂದು ಬರೆದಿರುವ 750 ML ನ ವಿಸ್ಕಿ ಬಾಟಲಿ-2 ಅವುಗಳ ಒಟ್ಟು ಮದ್ಯದ ಪ್ರಮಾಣ 1.500 ಲೀಟರ್ ಆಗಿರುತ್ತದೆ, KINGFISHER PREMIUM ಎಂದು ಬರೆದಿರುವ 330 ML ನ 2 ಬಿಯರ್ ಬಾಟಲಿ ಅವುಗಳ ಒಟ್ಟು ಮದ್ಯದ ಪ್ರಮಾಣ 0.660 ಲೀಟರ್ ಆಗಿರುತ್ತದೆ. ವಶ ಪಡಿಸಿಕೊಂಡ ಒಟ್ಟು ಮದ್ಯದ ಪ್ರಮಾಣ 5.160 ಲೀ ನಷ್ಟು ಆಗಿದ್ದು ಅವುಗಳ  ಮೌಲ್ಯ 1,778 /- ರೂಪಾಯಿ ಆಗಿರುತ್ತದೆ.  ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 61/2023 ಕಲಂ:32, 34 ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿಯಾ೯ದಿದಾರರಾದ ಅಬ್ದುಲ್‌ ರಜಾಕ್‌ (40) ಇವರು ಪ್ಲೈಯಿಂಗ್‌ ಸ್ಕ್ವಾಡ್—2‌, 121 ಕಾಪು ವಿಧಾನ ಸಭಾ ಕ್ಷೇತ್ರ  ಜಿಲ್ಲಾ ಚುನಾವಣಾ  ಅಧಿಕಾರಿಗಳಿಂದ ನೇಮಕಪಟ್ಟಂತೆ  ಮುಂಬರುವ  ರಾಜ್ಯ ವಿಧಾನಸಭಾ  ಸಾವ೯ತ್ರಿಕ ಚುನಾವಣಾ  ಸಂಬಂಧ  ಪ್ಲೈಯಿಂಗ್‌ ಸ್ಕ್ವಾಡ್—2,  ಟೀಮ್‌ನಲ್ಲಿ ಅಧಿಕಾರಿಯಾಗಿದ್ದು ದಿನಾಂಕ 18/04/2023 ರಂದು ಎ.ಹೆಚ್.ಸಿ  ರಾಜಶೇಖರ್‌, ಚಾಲಕರಾದ  ಚಂದ್ರಶೇಖರ್‌ ರವರೊಂದಿಗೆ   ಕಾಪುವಿನಲ್ಲಿ ಗಸ್ತು ಮಾಡುತ್ತಿರುವ ಸಮಯದಲ್ಲಿ  ‌ಮಧ್ಯಾಹ್ನ ಸಮಯ 12:30 ಗಂಟೆ ಸಮಯಕ್ಕೆ  ಮಾನ್ಯ ಉಡುಪಿ ಜಿಲ್ಲಾಧಿಕಾಗಳ ಕಛೇರಿ  ಚುನಾವಣಾ  ವಿಭಾಗದಿಂದ  ಬಂದ ಕರೆಯಂತೆ  ಸಿ-ವಿಜಿಲ್‌ ದೂರಿನಂತೆ  ಕಾಂಗ್ರೇಸ್‌ ಪಕ್ಷದ  ವತಿಯಿಂದ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಬಗ್ಗೆ ಆಯೋಜಿಸಿದ ರೃಾಲಿ ಬಳಿಕ ಕಾಪುವಿನಲ್ಲಿರುವ  ರಾಜೀವ ಸಭಾ ಭವನ  ಇಲ್ಲಿ  ಜಾಥದಲ್ಲಿ ಭಾಗವಹಿಸಿದ ಕಾಯ೯ಕತ೯ರಿಗೆ  ಚುನಾವಣಾಧಿಕಾರಿ 121- ಕಾಪು ವಿಧಾನ ಸಭಾ ಕ್ಷೇತ್ರ ಇವರಿಂದ ಅನುಮತಿಯನ್ನು ಪಡೆಯದೇ ಸುಮಾರು 1000 ಜನರಿಗೆ ಭೋಜನ  ಹಾಗೂ  ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿದ್ದು ಅದನ್ನು ಪಕ್ಷದ ಕಾಯ೯ಕತ೯ರಿಗೆ ವಿತರಿಸುತ್ತಿದ್ದು ಕಂಡು ಬಂದಿದ್ದು,  ಇಲ್ಲಿಂದ 38 ಹಾಳೆಯ ತಟ್ಟೆಗಳನ್ನು ಹಾಗೂ 300 ಎಂ. ಎಲ್‌ ನ 30 ನೀರಿನ ಬಾಟಲಿ ಇರುವ  ಒಂದು ಬಂಡಲ್‌,  300 ಎಂ. ಎಲ್‌ ನ 2 ನೀರಿನ ಬಾಟಲಿಗಳಿರುವ ಪ್ಲಾಸ್ಟಿಕ್‌ ತೊಟ್ಟೆ-1, ಹಾಗೂ  ನೀರಿನ ಬಾಟಲಿಗಳು ಖಾಲಿಯಾಗಿರುವ  ಎರಡು ತೊಟ್ಟೆಗಳನ್ನು ವಶಪಡಿಸಿಕೊಂಡಿರುವುದಾಗಿದೆ. ಜಾಥ ನಡೆಸಲು ಅನುಮತಿ ಪಡೆದುಕೊಂಡ ನವೀನ್‌ ಚಂದ್ರ ಸುವಣ೯ ಅಧ್ಯಕ್ಷರು  ಕಾಪು ಬ್ಲಾಕ್‌ ಕಾಂಗ್ರೇಸ್‌ ದಕ್ಷಿಣ  ಇವರ ಮೇಲೆ  ಚುನಾವಣಾ ನೀತಿ ಸಂಹಿತೆ  ಉಲ್ಲಂಘನೆ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ  ಜರುಗಿಸುವಂತೆ ನೀಡಿದ ದೂರಿನಂತೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 69/2023 ಕಲಂ: 171(ಇ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಸಂದೀಪ ಕುಮಾರ್ (32) ಇವರು ಹೋಟೇಲ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 04/04/2023 ರಂದು ಟೆಲಿಗ್ರಾಮ್ ಆ್ಯಪ್ ನಲ್ಲಿ ಟ್ರೇಡಿಂಗ್  ವ್ಯವಹಾರದ ಬಗ್ಗೆ AMBLIN Entertainment ಎಂಬ ಸಂಸ್ಥೆ ಎಂದು ನಂಬಿಸಿ http://www.amblinfilmrating.com ಲಿಂಕ್ ಕಳುಹಿಸಿ ಅದಕ್ಕೆ ಹಣವನ್ನು ಡಿಪಾಸಿಟ್ ಮಾಡುವಂತೆ ತಿಳಿಸಿ, ಆ ಸಮಯದಲ್ಲಿ ಹಣ ರಿಟರ್ನ್ ಬಂದಿದ್ದು, ಪಿರ್ಯಾದಿದಾರರು ಇದನ್ನು ನಂಬಿಕೊಂಡು ತನ್ನ ಕರ್ನಾಟಕ ಬ್ಯಾಂಕ್ , ರಾಜರಾಜೇಶ್ವರಿ ನಗರ ಶಾಖೆಯ ಎಸ್.ಬಿ ಖಾತೆ ಯಿಂದ ದಿನಾಂಕ 07/04/2023 ರಂದು ರೂಪಾಯಿ 62,102/-, ದಿನಾಂಕ 08/04/2023 ರಂದು ರೂಪಾಯಿ 80,533/-, ದಿನಾಂಕ 13/04/2023 ರಂದು ರೂಪಾಯಿ 2,64,706/-,  ಒಟ್ಟು ರೂಪಾಯಿ 4,20,341/- ಹಣವನ್ನು ಆರೋಪಿ ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿರುತ್ತಾರೆ. ಯಾರೋ ಅಪರಿಚಿತ ವ್ಯಕ್ತಿಗಳು ಟೆಲಿಗ್ರಾಮ್ ಆ್ಯಪ್ ನಲ್ಲಿ ಟ್ರೇಂಡಿಂಗ್ ವ್ಯವಹಾರ ಎಂದು ನಂಬಿಸಿ  ಒಟ್ಟು ರೂಪಾಯಿ 4,20,341 /- ಹಣವನ್ನು ಆನ್ ಲೈನ್ ಮುಖೇನ ಪಡೆದು ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 68/2023  ಕಲಂ: 66(C)  66(D)   ಐ.ಟಿ. ಆಕ್ಟ್.     ರಂತೆ ಪ್ರಕರಣ ದಾಖಲಾಗಿರುತ್ತದೆ.  
  • ಪಡುಬಿದ್ರಿ: ಪಿರ್ಯಾದಿದಾರರಾದ ಲಕ್ಷ್ಮೀನಾರಾಯಣ (69), ತಂದೆ:ದಿ. ಮುದ್ದು, ವಾಸ: “ನಮೋ ಶ್ರೀನಿವಾಸ” ಪೂಂದಾಡ್ ದರ್ಖಾಸ್, ತೆಂಕ ಗ್ರಾಮ ಕಾಪು  ತಾಲೂಕು, ಉಡುಪಿ ಜಿಲ್ಲೆ ಇವರು BSNL ನಿವೃತ್ತ ಉದ್ಯೋಗಿಯಾಗಿದ್ದು, ಕಾರ್ಕಳ ತಾಲೂಕು ಇನ್ನಾ ಗ್ರಾಮದ ಗುರುಮೇರು ಬಳಿ ಇರುವ ಮೈಕ್ರೋ ಸ್ಟೇಷನ್ ಎಕ್ಸ್‌‌ಚೇಂಜ್‌‌‌ನಲ್ಲಿ 24 ವರ್ಷಗಳ ಕಾಲ ಲೈನ್ ಮ್ಯಾನ್ ಆಗಿ ಸೇವೆ ಸಲ್ಲಿಸಿರುತ್ತಾರೆ. ಪಿರ್ಯಾದಿದಾರರು  ದಿನಾಂಕ 17/04/2023 ರಂದು ಬೆಳಿಗ್ಗೆ 11:00 ಗಂಟೆಯ ವೇಳೆಗೆ ಇನ್ನಾ ಗ್ರಾಮದಲ್ಲಿರುವ ಅವರ ತಂದೆಯ ತಂಗಿಯ ಮಕ್ಕಳ ಮನೆಗೆ ಹೋಗಿ ಚಾ ಕುಡಿದು, ನಂತರ ಪಿರ್ಯಾದಿದಾರರಿಗೆ ಹಣದ ಅವಶ್ಯಕತೆಯಿದ್ದ ಕಾರಣ ಇನ್ನಾ ಗ್ರಾಮದಲ್ಲಿರುವ ಮುಂಡ್ಕೂರು ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಹೋಗಿ, ಪಿರ್ಯಾದಿದಾರರ ಮಗಳು ಮೋಹಿತ ರವರ ಬಂಗಾರದ ಸರವನ್ನು ಅಡವಿಟ್ಟು ರೂಪಾಯಿ 18,000/- ಹಣವನ್ನು ಸಾಲವಾಗಿ ಪಡೆದು, ಅದರಲ್ಲಿ  15,000/- ಹಣವನ್ನು ಒಳಗಿನ ಚಡ್ಡಿಯಲ್ಲಿ ಮತ್ತು ಉಳಿದ  3,000/- ಹಣವನ್ನು ಅವರ ಪರ್ಸ್‌ನಲ್ಲಿಟ್ಟು ಪ್ಯಾಂಟಿನ ಹಿಂಬದಿಯ ಕಿಸೆಯಲ್ಲಿ ಇಟ್ಟುಕೊಂಡು, ಅಲ್ಲಿಂದ ಹೊರಟು  11:30 ಗಂಟೆಯ ವೇಳೆಗೆ ಅವರು ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ BSNL ಮೈಕ್ರೋ ಸ್ಟೇಷನ್ ಬಳಿ ತಲುಪಿದಾಗ, ಮೈಕ್ರೋ ಸ್ಟೇಷನ್‌ ಗೇಟಿಗೆ ಬೀಗ ಹಾಕಿದ್ದ ಕಾರಣ ಪಕ್ಕದಲ್ಲಿ ಯಾರಾದರೂ ಇರಬಹುದೆಂದು ಆ ಕಡೆ ಈ ಕಡೆ ನೋಡುತ್ತಿರುವಾಗ ಮೈಕ್ರೋ ಸ್ಟೇಷನ್ ಪಕ್ಕದಲ್ಲಿರುವ ಗಿರಿಜನ ಕಾಲೋನಿಯ ನಿವಾಸಿಗಳಾದ ಶೈಲೇಶ್, ವಿಠಲ, ರಂಜಿತ್ ಹಾಗೂ ಇತರೆ ಇಬ್ಬರು ಯುವಕರು ಅಲ್ಲಿಗೆ ಬಂದಿದ್ದು, ಶೈಲೇಶ್ ಹಾಗೂ ವಿಠಲ ಎಂಬುವವರು ಪಿರ್ಯಾದಿದಾರರ  ಕೆನ್ನೆಗೆ ಕೈಯಿಂದ  ಹೊಡೆದಿದ್ದು, ರಂಜಿತ್ ಎಂಬುವವನು ಅಲ್ಲಿ ಬಿದ್ದಿದ್ದ ಮರದ ಸೊಂಟೆಯಿಂದ ಪಿರ್ಯಾದಿದಾರರ ಕಾಲಿಗೆ ಹೊಡೆದಿರುತ್ತಾನೆ.  ಮತ್ತಿಬ್ಬರಲ್ಲಿಒಬ್ಬ ಹೆಲ್ಮೆಟ್‌‌ನಿಂದ, ಇನ್ನೊಬ್ಬ ಬೆಲ್ಟ್‌ನಿಂದ ಪಿರ್ಯಾದಿದಾರರಿಗೆ ಹಲ್ಲೆ ಮಾಡಿ, ನಂತರ ಪಿರ್ಯಾದಿದಾರರನ್ನು ಅಲ್ಲಿಂದ ಸ್ವಲ್ಪ ದೂರದಲ್ಲಿದ್ದ ಮರದ ಬಳಿಗೆ ಎಳೆದುಕೊಂಡು ಹೋಗಿ, ಪಿರ್ಯಾದಿದಾರರನ್ನು ಮರಕ್ಕೆ ಹಗ್ಗದಿಂದ ಕಟ್ಟಿ ಹಾಕಿ ಕೈಯಿಂದ ಹಲ್ಲೆ ನಡೆಸಿ, ಪಿರ್ಯಾದಿದಾರರ ಬಳಿ ಇದ್ದ ಬೈಕ್‌‌ನ ಕೀ, ಮೊಬೈಲ್ ಮತ್ತು ಪರ್ಸನ್ನು ಕಿತ್ತುಕೊಂಡು, ಪರ್ಸ್ ನಲ್ಲಿದ್ದ ರೂಪಾಯಿ 3,000/- ಹಣವನ್ನು ತೆಗೆದು, ಪಿರ್ಯಾದಿದಾರರ ಮೊಬೈಲಿನಿಂದ ಅವರ ತಂದೆಯ ತಂಗಿಯ ಮಗಳು ಗೀತಾ ರವರಿಗೆ ರಂಜಿತ್‌ ‌ಎಂಬುವವನು ಕರೆ ಮಾಡಿ,  ನಿಮ್ಮ ಬಾವ ಲಕ್ಷ್ಮೀ ನಾರಾಯಣ ರವರನ್ನು ಟವರ್ ಬಳಿ ಇರುವ ಮರಕ್ಕೆ ಕಟ್ಟಿ ಹಾಕಿದ್ದು, ಬಂದು ಕರೆದುಕೊಂಡು ಹೋಗುವಂತೆ ತಿಳಿಸಿರುತ್ತಾನೆ. ನಂತರ ಗೀತಾ, ಪ್ರೇಮಾ ಹಾಗೂ ಅವರ ಮನೆಯ ಮಾಲಕರಾದ ಕಮಲಾ ರವರು ಅಲ್ಲಿಗೆ ಬಂದು ಪಿರ್ಯಾದಿದಾರರನ್ನು ಹಗ್ಗದಿಂದ ಬಿಡಿಸಿರುತ್ತಾರೆ. ನಂತರ ಆರೋಪಿತರು ಪಿರ್ಯಾದಿದಾರರಿಂದ ಕಿತ್ತುಕೊಂಡಿದ್ದ ಬೈಕ್‌‌ನ ಕೀ, ಮೊಬೈಲ್ ಮತ್ತು ಪರ್ಸನ್ನು ವಾಪಾಸ್ಸು ನೀಡಿ, ಮತ್ತೊಮ್ಮೆ ಇಲ್ಲಿಗೆ ಬಂದರೆ ಅದೇ ಮರಕ್ಕೆ ನೇತು ಹಾಕುವುದಾಗಿ ಬೆದರಿಕೆ ಹಾಕಿರುತ್ತಾರೆ.  ಹಲ್ಲೆಯಿಂದ ಗಾಯಗೊಂಡ ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 50/2023, ಕಲಂ: 341, 323, 324, 395, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 19-04-2023 09:55 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080