ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಕೋಟ: ಪಿರ್ಯಾದಿ ಗೀತಾ ಇವರ ಎದುರು ಮನೆಯ ದೂರದ ಸಂಬಂಧಿ ಆನಂದ ಎಂಬವರ ಮಗ ವಿಜೇಂದ್ರ ಎಂಬಾತನು ಗಾರೆ  ಕೆಲಸ  ಮಾಡಿಕೊಂಡಿದ್ದು,  ಅವನು ಆಗಾಗ ಪಿರ್ಯಾದಿದಾರರ ಮನೆಗೆ ಬಂದು ಹೋಗುತ್ತಿದ್ದನು ದಿನಾಂಕ 12/03/2023 ರಂದು ಪಿರ್ಯಾದಿದಾರರ ಮನೆಯವರು   ಊಟ  ಮಾಡುವಾಗ  ಅನ್ನದಲ್ಲಿ ಹಾಗೂ ಸಾಂಬಾರಿನಲ್ಲಿ ಗಾಜಿನ ಚೂರುಗಳು ಕಂಡು ಬಂದವು.  ಅದರಂತೆ ಅಕ್ಕಿ ಹಾಗೂ ಇತರ ಪದಾರ್ಥ ಗಳನ್ನು ಪರಿಶೀಲಿಸಿದಾಗ ಅದರಲ್ಲಿ ಯಾವುದೇ  ಗಾಜಿನ  ಚೂರುಗಳು  ಕಂಡು  ಬಾರದೆ  ಇದ್ದುದರಿಂದ  ಅನ್ನ  ಹಾಗೂ  ಸಾಂಬಾರಿಗೆ  ಗಾಜಿನ  ಚೂರುಗಳು  ಹೇಗೆ  ಬಂದವು  ಎಂದು ಆಲೋಚನೆ ಮಾಡಿರುತ್ತಿರುವಾಗ ಮಾರ್ಚ 15 ಮತ್ತು 18 ರಂದು ರಾತ್ರಿ ಊಟ ಮಾಡುವಾಗ ಪುನಃ ಅನ್ನದಲ್ಲಿ ಗ್ಲಾಸ್‌‌ನ ಚೂರುಗಳು ಸಿಕ್ಕಿದವು. ಪಿರ್ಯಾದಿದಾರರ ಮನೆಯವರಿಗೆ ಊಟದಲ್ಲಿ  ಗ್ಲಾಸ್‌‌‌ನ ಚೂರುಗಳು ಸಿಕ್ಕಿದ ದಿನಗಳಲ್ಲಿ ಎದುರು ಮನೆಯ ವಿಜೇಂದ್ರ ನು  ಮನೆಗೆ ಬಂದು ಹೋಗಿದ್ದನು.  ಅಲ್ಲದೆ  ಅವನು  ಬಂದಾಗಲೆಲ್ಲಾ  ನೀರು  ಕುಡಿಯಲು ಅವನೊಬ್ಬನೇ  ಮನೆಯೊಳಗೆ  ಹೋಗಿ  ನೀರು  ಕುಡಿದು ಬರುತ್ತಿದ್ದನು.  ಆದ  ಕಾರಣ  ಅವನ  ಮೇಲೆ   ಸಂಶಯ ಬಂದಿತ್ತು.   ವಿಜಯೆಂದ್ರನು  ಅನ್ನಕ್ಕೆ ಗ್ಲಾಸ್‌‌‌‌ನ ಚೂರುಗಳನ್ನು ಹಾಕುವುದನ್ನು  ಸಾಕ್ಷಿ  ಸಮೇತ  ಹಿಡಿಯಬೇಕೆಂದು ಅಡಿಗೆ ಮನೆಯಲ್ಲಿ  ಮೊಬೈಲ್ ನಲ್ಲಿ ಕ್ಯಾಮರಾ ವನ್ನು ಆನ್‌‌‌‌‌‌ ಮಾಡಿ ಇಟ್ಟಿದ್ದರು  ದಿನಾಂಕ 17/04/2023 ರಂದು ವಿಜೇಂದ್ರನು ಸಂಜೆ ಸುಮಾರು 7.00 ಗಂಟೆಗೆ ಮನೆಗೆ ಬಂದಿದ್ದು, ಬಂದಿದ್ದವನು ಮನೆಯಲ್ಲಿ ಪಿರ್ಯಾದಿದಾರರ  ಜೊತೆಯಲ್ಲಿ ಮಾತನಾಡಿಕೊಂಡಿದ್ದವನು ಪಿರ್ಯಾದಿದಾರರು   ಮನೆಯ  ಕೋಣೆಯ ಒಳಗೆ  ಹೋದಾಗ ಅವನು ನೀರು ಕುಡಿಯುವ ನೆಪದಲ್ಲಿ  ಸೀದಾ ಅಡುಗೆ ಮನೆಗೆ ಹೋಗಿದ್ದು   ಅವನು  ಅವನ ಮನೆಗೆ  ಹೋದ  ಬಳಿಕ  ಮೊಬೈಲ್‌‌‌‌‌‌‌ನ  ವಿಡಿಯೋ  ತೆಗೆದು  ನೋಡಿದಾಗ  ವಿಜೇಂದ್ರ ನು ಸಾಂಬಾರಿಗೆ ಗಾಜಿನ ಚೂರುಗಳನ್ನು ಹಾಕಿರುವ  ದೃಶ್ಯ  ಕಂಡುಬಂದಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 64/2023  ಕಲಂ: 307 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ: 18.04.2023 ರಂದು 18.00 ಗಂಟೆಗೆ  ದೇವರಾಜ್‌ ಟಿ.ವಿ, ಪೊಲೀಸ್‌ ನಿರೀಕ್ಷಕರು, ಮಣಿಪಾಲ ಪೊಲೀಸ್‌ ಠಾಣೆ ಇವರಿಗೆ ಬಂದ ಖಚಿತ ವರ್ತಮಾನ ದಂತೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಎಂ ಜಿ ಆರ್ಕೇಡ್ ಬಿಲ್ಡಿಂಗ್ ನ ಶ್ರೀಶ ಪ್ಯಾರಿಡೈಸ್ ಅಂಗಡಿಯಲ್ಲಿ ಅಕ್ರಮವಾಗಿ ನಿಷೇದಿತ ಇ - ಸಿಗರೇಟ್‌  ಮಾರಾಟ ಮಾರುತ್ತಿರುವ ವ್ಯಕ್ತಿಗಳನ್ನು ದಾಳಿ ನಡೆಸಲು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ 18:40 ಗಂಟೆಗೆ ದಾಳಿ ನಡೆಸಿ ಆಪಾದಿತ ಅಬ್ದುಲ್‌ ಖಾದರ್‌ ಅನ್ಸಾರ್‌, ಪ್ರಾಯ:27ವರ್ಷ, ತಂದೆ: ಮೊಹಮ್ಮದ್‌, ವಾಸ: ಪುರುಶೋಂಗಡಿ ಹೌಸ್‌,‌ ವಾರ್ಕಾಡಿ ಗ್ರಾಮ ಮತ್ತು ಪೋಸ್ಟ್‌ ಮಂಜೇಶ್ವರ ತಾಲೂಕು ಕಾಸರಗೋಡು ಕೇರಳ ರಾಜ್ಯ ಆತನ ನಡೆಸುತ್ತಿದ್ದ ಅಂಗಡಿಯಲ್ಲಿದ್ದ ಅಕ್ರಮವಾಗಿರಿಸಿದ್ದ ನಿಷೇದಿತ 1) MOND ಎಂದು ಬರೆದಿರುವ 8 ಪ್ಯಾಕೆಟ್‌ ಇದ್ದು ಅದರ ಒಳಗೆ 80 ಸೀಗರೇಟ ಇರುತ್ತವೆ ಇದರ ಅಂದಾಜು 1600/- ಆಗಿರುತ್ತದೆ 2) ESSE ಎಂದು ಬರೆದಿರುವ  6 ಪ್ಯಾಕೆಟ್‌ ಇದ್ದು ಅದರಲ್ಲಿ ಸುಮಾರು 65 ಸಿಗರೇಟ್ ಇರುತ್ತವೆ ಅಂದಾಜು ಮೌಲ್ಯ ರೂ.  1,300/- ಆಗಿರುತ್ತದೆ. 3) Super GRAND ಎಂದು ಬರೆದಿರುವ 1 ಪ್ಯಾಕೆಟ್‌  ಇದ್ದು ಅದರ ಒಳಗೆ 16 ಸಿಗರೇಟ್ ಇರುತ್ತವೆ ಅಂದಾಜು ಮೌಲ್ಯ. ರೂ. 320/- ಆಗಿರುತ್ತದೆ. 4) PINE ಎಂದು ಬರೆದಿರುವ 1 ಪ್ಯಾಕೇಟ್‌ ಇದ್ದು ಅದರ ಒಳಗೆ 14 ಸಿಗರೇಟ್ ಇರುತ್ತವೆ ಅಂದಾಜು ಮೌಲ್ಯ. ರೂ. 280/- ಆಗಿರುತ್ತದೆ. 5) NAPOLI  ಎಂದು ಬರೆದಿರುವ 1 ಪ್ಯಾಕೇಟ್‌  ಅದರ ಒಳಗೆ 14 ಸಿಗರೇಟ್ ಇರುತ್ತವೆ ಅಂದಾಜು ಮೌಲ್ಯ. ರೂ. 300/- ಆಗಿರುತ್ತದೆ 6) IGET ಎಂದು ಬರೆದಿರುವ ಇ - ಸಿಗರೇಟ್‌ - 02 ಇದ್ದು ಅಂದಾಜು ಮೌಲ್ಯ 4,800/- 7) Youto THANOS 5000 PUFFS ಎಂದು ಬರೆದಿರುವ ಇ - ಸಿಗರೇಟ್‌ -04 ಅಂದಾಜು ಮೌಲ್ಯ ರೂ 10,400/- ಆಗಿರುತ್ತದೆ 8) ELFBAR TE6000 ಎಂದು ಬರೆದಿರುವ ಇ - ಸಿಗರೇಟ್‌ - 01 ಇದರ ಅಂದಾಜು ಮೌಲ್ಯ ರೂ 2,800/- ಆಗಿರುತ್ತದೆ ಇವುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ, ಸ್ವಾಧೀನಪಡಿಸಿಕೊಂಡ ಸಿಗರೇಟ್‌ ಮತ್ತು ಇ - ಸಿಗರೇಟ್‌ಗಳ ಒಟ್ಟು ಅಂದಾಜು ಮೌಲ್ಯ ರೂ. 21,800/- ಆಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 100/2023 ಕಲಂ: 7(iv) 7, 8 Prohibition of Electronic Cigarettes Act 2019 ರಂತೆ   ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಪಿರ್ಯಾದಿ ಅಕ್ಷಯ್‌ ಕುಮಾರ್‌ ಇವರ ತಂದೆ ಸುರೇಂದ್ರ ಪ್ರಾಯ 55 ವರ್ಷ ಎಂಬವರು ವಿಪರೀತ ಮದ್ಯಪಾನ ಮಾಡುವ ಚಟವನ್ನು ಹೊಂದಿದ್ದು, ಬಿಪಿ ಹಾಗೂ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದು, ಇದೇ ಚಿಂತೆಯಿಂದ ಅಥವಾ ಇನ್ನಾವುದೋ ಸಮಸ್ಯೆಯಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 19/04/2023 ರಂದು ಬೆಳಿಗ್ಗೆ 10:00 ಗಂಟೆಯಿಂದ 13:00 ಗಂಟೆ ನಡುವಿನ ಸಮಯದಲ್ಲಿ ಉಡುಪಿ ತಾಲೂಕು ಪುತ್ತೂರು ಗ್ರಾಮದ ಹನುಮಂತನಗರದಲ್ಲಿರುವ ತಮ್ಮ ವಾಸ್ತವ್ಯದ ಮನೆಯಲ್ಲಿ  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 17/2023  ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-04-2023 06:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080