ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ರಂಜಿತ್ ದೇವಾಡಿಗ (32) ತಂದೆ: ಶಂಕರದೇವಾಡಿಗ, ವಾಸ: ಅದಮಾರು ಮೂಡುಮನೆ, ಎರ್ಮಾಳು ತೆಂಕ ಗ್ರಾಮ, ಕಾಪು ಇವರು ಉಡುಪಿಯಲ್ಲಿ ರಿಲಾಯನ್ಸ್‌ ಡಿಜಿಟಲ್‌ ಕಂಪೆನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್‌ ಆಗಿ ಕೆಲಸ ಮಾಡುತ್ತಿದ್ದು, ದಿನಾಂಕ 18/04/2022 ರಂದು ಬೆಳಿಗ್ಗೆ. ಸುಮಾರು 10:00 ಗಂಟೆಗೆ ಅದಮಾರಿನ ಮನೆಯಯಿಂದ ತನ್ನ KA-20 EV-6564 ನೇ ಟಿ.ವಿ.ಎಸ್. ಸ್ಕೂಟರ್ ನಲ್ಲಿ ಹೊರಟು ಪಡುಬಿದ್ರಿಗೆ ಬಂದು ಪಡುಬಿದ್ರಿಯಲ್ಲಿ ಕೆಲಸ ಮುಗಿದ ನಂತರ ಮಂಗಳೂರು-ಉಡುಪಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ .66 ರಲ್ಲಿ ಹೋಗುತ್ತಿರುವಾಗ ಮಧ್ಯಾಹ್ನ ಸುಮಾರು 12:00 ಗಂಟೆ ಸಮಯಕ್ಕೆ ಕಾಪು ತಾಲೂಕು ತೆಂಕ ಎರ್ಮಾಳು ಗ್ರಾಮದ ಮಸೀದಿ ಬಳಿ ಎದುರಿನಿಂದ ಮಂಗಳೂರು-ಉಡುಪಿ ಏಕಮುಖ ಸಂಚಾರ ರಸ್ತೆಯ ವಿರುದ್ಧ ದಿಕ್ಕಿನಲ್ಲಿ KA-19 D-3548 ನೇ ಬೊಲೆರೋ ಪಿಕ್ ಅಫ್ ವಾಹನವನ್ನು ಅದರ ಚಾಲಕನು ಅತಿವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಂಜಿತ್‌ ದೇವಾಡಿಗ ರವರ ಸ್ಕೂಟಿಯ ಎಡಬದಿಗೆ ಡಿಕ್ಕಿ ಹೊಡೆದು ಸ್ವಲ್ಪ ಮುಂದಕ್ಕೆ ಹೋಗಿ ನಿಲ್ಲಿಸಿ ನಂತರ ಅಲ್ಲಿಂದ ನಿಲ್ಲಿಸದೇ ಹೋಗಿದ್ದು, ಡಿಕ್ಕಿ ಹೊಡೆದ ಪರಿಣಾಮ ಪರಿಣಾಮ ಇವರು ಸ್ಕ್ಯೂಟಿ ಸಮೇತ ರಸ್ತೆಗೆ ಬಿದ್ದು, ರಂಜಿತ್‌ ದೇವಾಡಿಗ ಇವರ ಬಲಕಾಲಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ  ಇವರು ಪಡುಬಿದ್ರಿ ಸಿದ್ದಿವಿನಾಯಕ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ಹೋಗುವಂತೆ ವೈದ್ಯರು ತಿಳಿಸಿರುತ್ತಾರೆ. ಈ ಅಫಘಾತಕ್ಕೆ KA-19 D-3548 ನೇ ಬಲೆರೋ ಪಿಕಪ್ ವಾಹನದ ಚಾಲಕನ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 44/2022 ಕಲಂ: 279, 338 ಐಪಿಸಿ Rule 218, R/W 177 IMV Act U/S 134 (ಎ) (ಬಿ), 187 ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಹೆಬ್ರಿ: ಪಿರ್ಯಾದಿದಾರರಾಧ ಸುಜಾತ (34) ಗಂಡ: ಮಧು ವಾಸ: ಹಿರೇಬೈಲು ಕೋರೆ ಸೈಟ್ , ಇಡುಕಿಣಿ ಗ್ರಾಮ ಮೂಡಿಗೆರೆ ತಾಲ್ಲೂಕು,ಚಿಕ್ಕಮಗಳೂರು ಇವರ ಮಗಳು ಕುಸುಮಾ (19) ಇವಳು ಸುಮಾರು 1 ತಿಂಗಳಿಂದ ಬ್ರಹ್ಮಾವರ ತಾಲ್ಲೂಕು ಕಳ್ತೂರು ಗ್ರಾಮದ ಸಂತೆಕಟ್ಟೆ ಎಂಬಲ್ಲಿರುವ ಮೋಹನ್ ಕಾಮತ್ ಎಂಬುವರ ಮನೆಯಲ್ಲಿ ಹೋಂ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದು, ಅವಳು ಚಿಕ್ಕ ಮಗಳೂರು ಜಿಲ್ಲೆಯ ರಾಹುಲ್ ಎಂಬುವರನ್ನು ಅತಿಯಾಗಿ ಪ್ರೀತಿ ಮಾಡುತ್ತಿದ್ದು,  ಆತನು ಆಕೆಯ ಪೋನ್ ಕರೆಯನ್ನು ಸ್ವೀಕರಿಸದ ಕಾರಣ ಹಾಗೂ ಇನ್ನು ಮುಂದಕ್ಕೆ ಆತನು ತನಗೆ ಸಿಕ್ಕುವುದಿಲ್ಲವೆಂದು ಬೇಸರಗೊಂಡು ದಿನಾಂಕ 11/04/2022 ರಂದು ಬೆಳಿಗ್ಗೆ 11:00 ಗಂಟೆಗೆ ಕಳ್ತೂರು ಸಂತೆಕಟ್ಟೆಯ ಮೋಹನ ಕಾಮತ್ ರವರ ಮನೆಯಲ್ಲಿರುವಾಗ ಇಲಿ ಪಾಷಾಣ ಎಂಬ ವಿಷ ಪದಾರ್ಥವನ್ನು ಹಾಲಿನಲ್ಲಿ ಬೆರೆಸಿ ಕುಡಿದಿದ್ದು. ಮನೆಯವರಿಗೆ ಪುಡ್ ಪೊಯಿಸನ್ಸ್ ಅಗಿರುತ್ತದೆಂದು ತಿಳಿಸಿ ಅಸ್ಪಸ್ಥಗೊಂಡವಳನ್ನು ಚಿಕಿತ್ಸೆ ಬಗ್ಗೆ ದಿನಾಂಕ 13/04/2022 ರಂದು ಉಡುಪಿ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವಾಗ ದಿನಾಂಕ 17/04/2022 ರಂದು 11:40 ಗಂಟೆಗೆ ಮೃತಪಟ್ಟಿರುವುದಾಗಿದೆ. ಕುಸುಮ ಇವಳು ಪ್ರೇಮ ವೈಫಲ್ಯದಿಂದ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿಯೂ ಮೃತಳ ಮರಣದಲ್ಲಿ ಯಾವುದೇ ಸಂದೇಹವಿರುವುದಿಲ್ಲವಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 17/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಮಲ್ಪೆ: ಪಿರ್ಯಾದಿದಾರರಾಧ Dr. ಪುಷ್ಪ ಕೆ (39) ಗಂಡ: ಶ್ರೀನಿವಾಸ್ ಎಂ ವಾಸ:ಸಹಾಯಕ ಪ್ರಾಧ್ಯಾಪಕರು ಜಿ ಕೆ ವಿ ಕೆ ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಇವರು  ದಿನಾಂಕ 14/04/2022 ರಂದು ಅಂತಿಮ ವರ್ಷದ  ಬಿಎಸ್ಸಿ ಓದುತ್ತಿರುವ 65 ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಸೇರಿ  ಪ್ರವಾಸಕ್ಕೆ ಬಂದಿದ್ದು. ನಾಗೇನಹಳ್ಳಿ, ಊಟಿ, ಮೈಸೂರು  ಕಡೆ ಪ್ರವಾಸ ಮುಗಿಸಿ ದಿನಾಂಕ 18/04/2021 ರಂದು  ಮಂಗಳೂರು ಮೂಲಕ  ಬ್ರಹ್ಮಾವರ ಕೃಷಿ ಕೇಂದ್ರಕ್ಕೆ ಬೇಟಿ ನೀಡಿ ನಂತರ 12:00 ಗಂಟೆಗೆ ಮಲ್ಪೆ ಬೀಚ್ ಗೆ ಬಂದಿದ್ದು. ವಿದ್ಯಾರ್ಥಿಗಳ ಕೋರಿಕೆ ಯ ಮೇರೆಗೆ ಸೈಂಟ್ ಮೇರಿಸ್ ಐಲ್ಯಾಂಡ್ ಗೆ 12:30 ಗಂಟೆಗೆ  ಹೋಗಿರುತ್ತೇವೆ .ಸೈಂಟ್ ಮೇರಿಸ್ ದ್ವೀಪದಲ್ಲಿ ವಿಧ್ಯಾರ್ಧಿಗಳಾದ ಸತೀಶ್ ಎಂ ನಂದಿಹಳ್ಳಿ, ಸತೀಶ್ ಎಸ್ ಕಲ್ಯಾಣಸೆಟ್ಟಿ, ಸಿದ್ದೇಶ ಜಿ ಹೆಚ್ , ಶರತ್ ಎಚ್ ರವರುಗಳು ಬಂಡೆಯ ಮೇಲೆ ನಿಂತು ಪೋಟೋ ತೆಗೆಯುವಾಗ ಕಾಲುಜಾರಿ ನೀರಿನ ರಭಸಕ್ಕೆ  ಸಿಲುಕಿ ಸತೀಶ್ ಎಂ ನಂದಿಹಳ್ಳಿ, ಸತೀಶ್ ಎಸ್ ಕಲ್ಯಾಣ ಶೆಟ್ಟಿ ಸಮುದ್ರದ ನೀರಿಗೆ ಬಿದ್ದಿರುತ್ತಾರೆ. ಅಲ್ಲೆ ಇದ್ದ ಲೈಪ್ ಗಾರ್ಡ್ ನವರು ಸತೀಶ್ ಎಂ ನಂದಿಹಳ್ಳಿಯನ್ನು ನೀರಿನಿಂದ ಮೇಲಕ್ಕೇತ್ತಿ ಅಸ್ವಸ್ಥಗೊಂಡವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾನೆ.  ಸತೀಶ ಎಸ್ ಕಲ್ಯಾಣ ಶೆಟ್ಟಿ ನೀರಿನಲ್ಲಿ ಮುಳುಗಿದ್ದು ಲೈಪ್ ಗಾರ್ಡ್ ಮತ್ತು ಸ್ಥಳೀಯ ಮೀನುಗಾರರ ಸಹಾಯದಿಂದ ಹುಡುಕಾಡುತ್ತಿರುವಾಗ ಸಮಯ ಸುಮಾರು 17:30 ಗಂಟೆಗೆ ಸತೀಶ್ ಎಸ್ ಕಲ್ಯಾಣ ರವರ  ಮೃತ ದೇಹ ದೊರಕಿರುತ್ತದೆ,  ಸತೀಶ ಎಂ ನಂದಿಹಳ್ಳಿ ಮತ್ತು ಸತೀಶ್ ಎಸ್ ಕಲ್ಯಾಣ ಶೆಟ್ಟಿ ರವರು ಸೈಂಟ್ ಮೇರಿಸ್ ದ್ವೀಪದಲ್ಲಿ  ಬಂಡೆಯ ಮೇಲೆ ನಿಂತು ಪೋಟೋ ತೆಗೆಯುವಾಗ ಕಾಲು ಜಾರಿ  ಸಮುದ್ರದ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದೇ ವಿನ: ಅವರ ಸಾವಿನಲ್ಲಿ ಬೇರಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 26/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕುಂದಾಪುರ: ಪಿರ್ಯಾದಿದಾರರಾಧ ಸಂತೋಷ್ ಖಾರ್ವಿ, (41) ತಂದೆ: ಸಂಜೀವ ಖಾರ್ವಿ, ವಾಸ: ಹರೀಶ್ ನಿಲಯ, ಡಾಕುಹಿತ್ಲು, ಗಂಗೊಳ್ಳಿ ಗ್ರಾಮ, ಕುಂದಾಪುರ ಇವರ ತಂದೆ: ಸಂಜೀವ ಖಾರ್ವಿ (65) ರವರು ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು ಎದೆ ನೋವು ಹಾಗೂ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದುದಾಗಿದೆ. ಹೀಗಿರುತ್ತಾ ಸಂಜೀವ ಖಾರ್ವಿಯವರು ಅವರಿಗಿರುವ ಅನಾರೋಗ್ಯ ಸಮಸ್ಯೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು 17/04/2022 ರಂದು 16:00 ಮನೆಯಿಂದ ಹೋದವ್ರು ವಾಪಾಸು ಬಾರದೇ ಇದ್ದು ದಿನಾಂಕ 18/04/2022 ರಂದು ಸಂತೋಷ್ ಖಾರ್ವಿ ಇವರ ಪರಿಚಯದ ಸಂದೀಪ್ ಖಾರ್ವಿಯವರು ಕನ್ನಡಕುದ್ರು ಹೊಳೆಯಲ್ಲಿ ಚಿಪ್ಪು ತೆಗೆಯಲು ಹೋಗಿದ್ದು, ಹೊಳೆಯ ಮಧ್ಯ ಭಾಗದಲ್ಲಿರುವ ಕಾಂಡ್ಲಾ ಮರಕ್ಕೆ  ಸಂಜೀವ ಖಾರ್ವಿಯವರು ನೇಣು ಹಾಕಿಕೊಂಡಿರುವುದನ್ನು ನೋಡಿ ಸಂತೋಷ್ ಖಾರ್ವಿ ರವರಿಗೆ ಕರೆ ಮಾಡಿ ತಿಳಿಸಿದ್ದು ಸಂತೋಷ್ ಖಾರ್ವಿ ಇವರು ಸ್ಥಳಕ್ಕೆ ಬೇಟಿ ನೀಡಿ ನೋಡಲಾಗಿ ಸಂಜೀವ ಖಾರ್ವಿಯವರು ಅದಾಗಲೇ ಮೃತಪಟ್ಟಿರುವುದಾಗಿದೆ. ಸಂಜೀವ ಖಾರ್ವಿಯವರು ಅವರಿಗಿರುವ ಅನಾರೋಗ್ಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ದಿನಾಂಕ 17/04/2022 ರಂದು 16:00 ರಿಂದ ದಿನಾಂಕ 18/04/2022 ರಂದು 08:00 ಗಂಟೆಯ ಮಧ್ಯಾವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಮೃತರ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 14/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಡಾ/ ರಾಜೇಶ್ ಶೆಟ್ಟಿ, (47) ತಂದೆ: ಚಂದ್ರಶೇಖರ ಶೆಟ್ಟಿ, ಮಿತ್ರ ಕ್ಲಿನಿಕ್, ಎಂ.ವಿ ರಸ್ತೆ, ಕೋಟೇಶ್ವರ, ಕುಂದಾಪುರ ಇವರು ಬಿ.ಎ.ಎಂ.ಎಸ್. ಪಧವೀಧರರಾಗಿದ್ದು ಆಯುಷ್ ಬೋರ್ಡ್ ನವರಿಂದ ವೈದ್ಯಕೀಯ ವೃತ್ತಿ ಮಾಡಲು ಅಧಿಕಾರ ಹೊಂದಿದ್ದು ಕೋಟೇಶ್ವರದ ಮಿತ್ರ ಕ್ಲಿನಿಕ್ ನಲ್ಲಿ  ವೈದ್ಯಕೀಯ ಸೇವೆ ಮಾಡುತ್ತಿರುವುದಾಗಿದೆ. ದಿನಾಂಕ 18/04/2022 ರಂದು 11:30 ಗಂಟೆಗೆ ಇವರು ಮಿತ್ರ ಕ್ಲಿನಿಕ್ ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವಾಗ ) ಕಿರಣ ಪೂಜಾರಿ 2) ಓರ್ವ ಅಪರಿಚಿತ ವ್ಯಕ್ತಿ ಇವರು ಕ್ಲಿನಿಕ್ ಹೊರಗಡೆಯಲ್ಲಿ ನಿಂತಿದ್ದ ರೋಗಿಗಳೊಂದಿಗೆ ಈತನು ನಕಲಿ ಡಾಕ್ಟರ್ ನೀವು ಚಿಕಿತ್ಸೆ ಪಡೆದುಕೊಳ್ಳಬೇಡಿ ಎಂದು ಹೇಳಿದ್ದು, ಆಪಾದಿತನಲ್ಲಿ ಇವರು ವಿಷಯ ಏನೆಂದು ವಿಚಾರಿಸಿದಾಗ ಆಪಾದಿತರುಗಳು ಕ್ಲಿನಿಕ್ ಒಳಗಡೆ ಅಕ್ರಮ ಪ್ರವೇಶ ಮಾಡಿ ಡಾ/ ರಾಜೇಶ್ ಶೆಟ್ಟಿ ರವರಿಗೆ, ರೋಗಿಗಳಿಗೆ ಹಾಗೂ ಕ್ಲಿನಿಕ್ ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ದೀಪಾ ಎಂಬುವವರಿಗೂ ಸಹ ಬೆದರಿಕೆ ಹಾಕಿ, ಸೆಟಲ್ಮೆಂಟ್ ಮಾಡಿಕೊಳ್ಳದಿದ್ದರೆ ಗತಿ ನೆಟ್ಟಗಾಗುವುದಿಲ್ಲವಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 44/2022 ಕಲಂ: 447, 504, 506, RW 34  IPC, And U/S 4 KARNATAKA PROHIBITION OF VIOLENCE AGAINST MEDICARE SERVICE PERSONNEL AND DAMAGE TO PROPERTY IN MEDICARE SERVICE INSTITUTIONS ACT , 2009 ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-04-2022 09:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080