ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 18/04/2022  ರಂದು ಬೆಳಿಗ್ಗೆ  ಸುಮಾರು 8:15 ಗಂಟೆಗೆ, ಕುಂದಾಪುರ ತಾಲೂಕಿನ, ಕಾವ್ರಾಡಿ ಗ್ರಾಮದ ಕಂಡ್ಲೂರು ನೇತಾಜಿ ಸರಕಾರಿ ಶಾಲೆಯ ಸರಕಾರಿ ಹಿ. ಪ್ರಾ. ಶಾಲೆಯ ಬಳಿ ರಾಜ್ಯ ರಸ್ತೆಯಲ್ಲಿ, ಆಪಾದಿತ ಗೋರಕ್‌ ‌ಚೌಹಣ್‌ ಎಂಬವರು KA-20 MB-7980 ನೇ ಕ್ರೇನ್‌‌ನ್ನು  ಕುಂದಾಪುರ ಕಡೆಯಿಂದ ಸಿದ್ದಾಪುರ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು, ಅದೇ ದಿಕ್ಕಿನಲ್ಲಿ ಪಿರ್ಯಾದಿದಾರರಾದ ಗೋಪಾಲ (55) ತಂದೆ ದಿ.ಮುಡುರ ವಾಸ: ಜನತಾ ಕಾಲನಿ, ಕಾಶಿಕೆರೆ ಕಂಡ್ಲೂರು, ಕಾವ್ರಾಡಿ ಗ್ರಾಮ ಕುಂದಾಪುರ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸೈಕಲ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಗೋಪಾಲ ಇವರ ಬಲಕೈಯ ಹೆಬ್ಬೆರಳಿಗೆ ಜಜ್ಜಿದ ಸೀಳಿ ಹೋದ  ರಕ್ತಗಾಯ ಹಾಗೂ ಎರಡೂ ಕಾಲುಗಳಿಗೆ ಒಳನೋವಾದ ಹಾಗೂ ತರಚಿದ ಗಾಯವಾಗಿ ಕುಂದಾಪುರ  ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 52/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 16/04/2022 ರಂದು 22:30 ಗಂಟೆಗೆ ಪಿರ್ಯಾದಿದಾರರಾದ ರಾಜೇಂದ್ರ ಕೊಡಗಿ ತಂದೆ:ದಿ|| ಎ ಸಿ ಕೊಡಗಿ ವಾಸ:4-234-ಎ1 6 ನೇ ಕ್ರಾಸ್ ಹೈಯಗ್ರೀವ್ ನಗರ ಇಂದ್ರಾಳಿ  ಶಿವಳ್ಳಿಗ್ರಾಮ ಉಡುಪಿ ಇವರು ತನ್ನ KA-20 Z-4168 Honda Amage ಕಾರಿನಲ್ಲಿ ಹಯಗ್ರೀವ ನಗರ 1 ನೇ ಮೈನ್ ರಸ್ತೆಯಲ್ಲಿ ಉಡುಪಿ – ಮಣಿಪಾಲ ಹೈವೇ ಕಡೆಗೆ ಬರುತ್ತಿರುವಾಗ ಹೆರಿಟೇಜ್ ಅಪಾರ್ಟ್ ಮೆಂಟ್ ಬಳಿಯ ಕ್ರಾಸ್ ರೋಡ್ ನಲ್ಲಿ ಹೆಡ್‌ ಲೈಟ್‌ ಇಲ್ಲದೇ KA-19 P-9159 Toyoto Innova  ಕಾರನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾಜೇಂದ್ರ ಕೊಡಗಿ ರವರು ಚಲಾಯಿಸಿಕೊಂಡಿದ್ದ ಕಾರಿನ ಎಡ ಬದಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ಕಾರುಗಳು ಜಖಂಗೊಂಡಿರುತ್ತದೆ. ಈ ಅಫಘಾತಕ್ಕೆ KA-19 P-9159 Toyoto Innova ಕಾರಿನ ಚಾಲಕನ ಅತೀವೇಗ ಹಾಗು ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ ಅಲ್ಲದೇ ಆಪಾದಿತನು ವಾಹನ ಚಲಾಯಿಸಲು ಚಾಲನಾ ಪರವಾನಿಗೆ ಹೊಂದಿರುವುದಿಲ್ಲವಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 53/2022 ಕಲಂ: 279, 337  IPC. 3 R/w 181 and 105 R/w 177 IMV Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ಸುಜಾತ ಎಸ್ ಬಂಗೇರ, ಗಂಡ: ಶರತ್ ಬಂಗೇರ, ವಾಸ: ಪೊಲ್ಯ ಉಚ್ಚಿಲ ಬಡಾ ಗ್ರಾಮ ಇವರ ತಾಯಿಯಾದ ಲಲಿತಾ ಕುಂದರ್ ರವರು ದಿನಾಂಕ 18/04/2022 ರಂದು ಸುಮಾರು 14:45 ಗಂಟೆಯ ಸಮಯಕ್ಕೆ ಮೂಳೂರು ನಾರಾಯಣ ಗುರು ಮಂದಿರದ ಹತ್ತಿರ ಮಂಗಳೂರು –ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರನ್ನು ದಾಟಲು ಮಂಗಳೂರು ಉಡುಪಿ ಪೂರ್ವ ಬದಿಯ ಅಂಚಿನಲ್ಲಿ ನಿಂತಿರುವಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ KA-20 MD-5356 ನೇ ಕಾರು ಚಾಲಕ ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಬಲ ಬದಿಗೆ ಬಂದು ಸುಜಾತ ಎಸ್ ಬಂಗೇರ ಇವರ ತಾಯಿಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಸುಜಾತ ಎಸ್ ಬಂಗೇರ ಇವರು ರಸ್ತೆಗೆ ಬಿದ್ದಿದ್ದು ಅವರ ಬಲಕಾಲಿಗೆ ತೀವ್ರ ಪೆಟ್ಟಾಗಿದ್ದು ಅವರನ್ನು ಕಾರು ಚಾಲಕ ಕೂಡಲೇ ಅದೇ ಕಾರಿನಲ್ಲಿ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದು ನಂತರ ಅಲ್ಲಿಂದ ಚಿಕಿತ್ಸೆಯ ಬಗ್ಗೆ ಉಡುಪಿಯ ಸರಕಾರಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಅಪಘಾತಕ್ಕೆ KA-20 MD-5356 ನೇ ಕಾರು ಚಾಲಕನಾದ ಮಂಜುನಾಥನ  ಅತೀ ವೇಗ ಹಾಗೂ ಅಜಾಗರೂ ಕತೆಯ ಚಾಲನೆಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಕಾಫು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 38/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಗಣೇಶ (36) ತಂದೆ: ಮಂಜುನಾಥ ಕೊಠಾರಿ ವಾಸ: ಪಂಚಮಿ ನಿಲಯ ಹುಲ್ಕಲ್ ಕೆರೆ ಮೊಳಹಳ್ಳಿ ಗ್ರಾಮ ಕುಂದಾಪುರ ಇವರು ದಿನಾಂಕ 18/04/2022 ರಂದು ತನ್ನ ಆಟೋ ರಿಕ್ಷಾ KA-20 D-9470 ನೇದರಲ್ಲಿ ಮರತ್ತೂರು ಕಡೆಗೆ ಬಾಡಿಗೆಗೆ ಹೋಗಿ  ವಾಪಾಸ್ಸು ಮರತ್ತೂರಿನಿಂದ ಮೊಳಹಳ್ಳಿ  ಕಡೆಗೆ ಬರುತ್ತಾ 15:00 ಗಂಟೆಗೆ ಮರತ್ತೂರು ನೀರು ಟ್ಯಾಂಕ್ ಬಳಿ ಗಣೇಶ ರವರು ರಿಕ್ಷಾವನ್ನು ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಮೊಳಹಳ್ಳಿ ಕಡೆಯಿಂದ ಮರತ್ತೂರು ಕಡೆಗೆ KA-40 M-9129 ಬೊಲೆರೋ ವಾಹನ ಚಾಲಕ ಮುರಳೀಧರ ಸೂಡ ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಂತರ ಬಲ ಬದಿಯ ಮಣ್ಣು ರಸ್ತೆಯಲ್ಲಿ  ಚಲಾಯಿಸಿ  ರಿಕ್ಷಾದ ಎಡಬದಿಯ ಗಣೇಶ ರವರ ಎಡ ಬದಿ ತೊಡೆಗೆ ತಾಗಿಸಿಕೊಂಡು ರಿಕ್ಷಾದ ಎಡ ಬದಿ ಬಾಡಿಗೆ ಢಿಕ್ಕಿ ಹೊಡೆದು ಮುಂದೆ ಚರಂಡಿಗೆ ಹೋಗಿ ನಿಲ್ಲಿಸಿದನು. ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ತಿರುಗಿ ಗಣೇಶ ರವರು ರಸ್ತೆಗೆ ಹೋಗಿ ಬಿದ್ದರು ಇವರ ಎಡ ತೊಡೆ ಬಲ ತೋಳಿಗೆ ಗುದ್ದಿದ ಒಳ ಜಖಂ ಹಾಗೂ ಎರಡೂ ಮೊಣಗಂಟಿಗೆ ಕುತ್ತಿಗೆಗೆ ಎರಡೂ ಕೈ ಮೊಣ ಗಂಟಿಗೆ ತರಚಿದ ಗಾಯವಾಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 54/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾಧ ವಿನಯ (37), ತಂದೆ: ದಿ. ರಾಮ ಮರಕಾಲ, ವಾಸ: ರಾಜೀವ ನಗರ, ಕೊಳಂಬೆ, 52 ನೇ ಹೇರೂರು ಗ್ರಾಮ, ಬ್ರಹ್ಮಾವರ ಇವರ 3ನೇ ಅಣ್ಣನಾದ ರಾಜಶೇಖರ (45) ರವರು ಮಾನಸಿಕ ಅಸ್ವಸ್ಥರಾಗಿದ್ದು, ಈ ಬಗ್ಗೆ  ಸುಮಾರು 7 ವರ್ಷದಿಂದ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ದಿನಾಂಕ 18/04/2022 ರಂದು ಸಂಜೆ 6:00 ಗಂಟೆಯಿಂದ ದಿನಾಂಕ 19/04/2022 ರಂದು ಬೆಳಿಗ್ಗೆ 08:45 ಗಂಟೆಯ ಮಧ್ಯಾವದಿಯಲ್ಲಿ ರಾಜಶೇಖರ ರವರು ಚಾಂತಾರು ಗ್ರಾಮದ ಹಾಲ್‌ ಡೈರಿ ಹತ್ತಿರ ಇರುವ ರೈಲ್ವೇ ಟ್ರ್ಯಾಕ್‌ನ್ನು ದಾಟುತ್ತಿರುವಾಗ ಯಾವುದೋ ಒಂದು ರೈಲು ಡಿಕ್ಕಿ ಹೊಡೆದಿದ್ದು, ಅದರ ತೀವೃತೆಯಿಂದ ರಾಜಶೇಖರ ರವರು ಮೃತಪಟ್ಟಿರುವುದಾಗಿದೆ. ರಾಜಶೇಖರ ರವರು ಮಾನಸಿಕ ಅಸ್ವಸ್ಥದಿಂದಲೇ ರೈಲು ಬರುವುದನ್ನು ಗಮನಿಸದೆ ರೈಲ್ವೇ ದಾಟಲು ಹೋಗಿ ಈ ಘಟನೆ ನಡೆದಿರುತ್ತದೆ. ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 19/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಣಿಪಾಲ: ದಿನಾಂಕ 18/04/2022 ರಂದು 22.00 ಗಂಟೆಗೆ ಮಣಿಪಾಲದಲ್ಲಿನ ಡಿಷಸ್‌ ಹೊಟೇಲಿಗೆ ಬಂದು ಬಿರಿಯಾನಿ ಆರ್ಡರ್ ಮಾಡಿದ್ದ ಆರೋಪಿತ ನಂದನ್ ಪಡುಕೆರೆ ಇತನು ಪಿರ್ಯಾದಿದಾರರಾದ ಹೆಚ್ ಎಂ ತಾಹೀರ್ (48) ತಂದೆ: ಅಬ್ದುಲ್  ರಝಾಕ್ ವಾಸ: ವಿ ಪಿ ನಗರ 1ನೇ ಕ್ರಾಸ್ ಮಣೊಪಾಲ ಪೆವಿಲಿಯನ್ ಪ್ಲಾಟ್ ನಂ: 206 ಮಣಿಪಾಲ ಶಿವಳ್ಳಿ ಗ್ರಾಮ ಉಡುಪಿ ಇವರಲ್ಲಿ ಬಿರಿಯಾನಿ ಏಕೆ ತಡ? ಎಂದು ಜೊರು ಮಾತನಾಡಿರುತ್ತಾನೆ, ಅವನನ್ನು ಎಂ ತಾಹೀರ್ ಇವರು ಹೋಗಿ ಸಮಾಧಾನ ಮಾಡಿ ಆತನ ಹೆಸರು ಕೇಳಿದಾಗ ಆತನು “ನಾನು ಮಲ್ಪೆ ನಂದನ್ ಪಡುಕೆರೆ” ಎಂದು ತಿಳಿಸಿರುತ್ತಾನೆ. ಎಂ ತಾಹೀರ್ ರವರು ಸ್ವಲ್ಪ ಸಮಾಧಾನದಲ್ಲಿ ಇರಿ ಎಂದು ಸಮಾಧಾನ ಪಡಿಸಿದಾಗ ಆತನು ಇವರನ್ನು ಉದ್ದೇಶಿಸಿ “ಬಿರಿಯಾನಿ ಏಕೆ ಲೇಟು? ಎಂದು ಅವ್ಯಾಚ್ಚ ಶಬ್ದಗಳಿಂದ ಬೈದು ನಿಮ್ಮನ್ನು ಮುಗಿಸಿಬಿಡುತ್ತೇನೆ” ಎಂದು ಬೆದರಿಕೆ ಹಾಕಿ ಹೊರಗಡೆ ಹೋಗಿ ಸ್ಯಾನಿಟೇಜರ್ ಸ್ಟ್ಯಾಂಡ್ ತೆಗೆದು ಪಿರ್ಯಾದಿದಾರರ ಎಡಕೈಗೆ ಹೊಡೆದಿರುತ್ತಾನೆ, ಜಗಳ ಬಿಡಿಸಲು ಬಂದ ಹೊಟೇಲ್ ಕೆಲಸಗಾರ ನಿಝಾಮುದ್ದೀನ್ ಗೂ ಹೊಡೆದಿರುತ್ತಾನೆ, ಈ ಘಟನೆಯಿಂದ ಎಂ ತಾಹೀರ್ ಇವರ ಕೈಗೆ ರಕ್ತ ಗಾಯವಾಗಿ ಕೆ ಎಂ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 54/2022 ಕಲಂ: 324, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-04-2022 06:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080