ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಬ್ರಹ್ಮಾವರ: ಮಾನ್ಯ 1ನೇ ಎಸಿಜೆ & ಜೆಎಮ್‌ಎಫ್‌ಸಿ ನ್ಯಾಯಾಲಯದ ಖಾಸಗಿ ಪ್ರಕರಣದಂತೆ ಪಿರ್ಯಾದಿದಾರರಾದ ಸತೀಶ (37), ತಂದೆ: ನರಸಿಂಹ, ಹಾಗೂ ರೇಶ್ಮಾ (33), ಗಂಡ: ಸತೀಶವಾಸ: ಮನೆ.ನಂ 5/110, ಭಟ್ರಬೆಟ್ಟು, ಹಂದಾಡಿ ಗ್ರಾಮ, ಬ್ರಹ್ಮಾವರ ತಾಲೂಕು. ಎಂಬವರು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವುದಾಗಿದೆ. ಸತೀಶ ರವರು ಹಾಗೂ ಅವರ ಹೆಂಡತಿ ಸ್ವಂತ ಮನೆ ಕಟ್ಟುವ ಉದ್ದೇಶದಿಂದ ಸೂಕ್ತ ನಿವೇಶನ ಹುಡುಕುತ್ತಿರುವ ಸಮಯ ಆರೋಪಿ ಜಯಂತ (43). ತಂದೆ: ದಿ. ನರಸಿಂಹ, ವಾಸ: ಕಲ್‌ಬೆಟ್ಟು, ಹಂದಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಎಂಬವರು ಸತೀಸ ರವರನ್ನು ಸಂಪರ್ಕಿಸಿ ಹಂದಾಡಿ ಗ್ರಾಮದಲ್ಲಿರುವ ಸರ್ವೆ ನಂ. 34/5 ಕ್ಕೆ ಸಂಬಂಧಿಸಿದ ನಿವೇಶನವನ್ನು ಮಾರಾಟ ಮಾಡುವುದಾಗಿ ಪ್ರಸ್ತಾವ ನೀಡಿದ್ದು, ಅದಕ್ಕೆ ಸತೀಶ ರದರು ಹಾಗೂ ಅವರ ಹೆಂಡತಿ ಒಪ್ಪಿ ಸದ್ರಿ ನಿವೇಶನಕ್ಕೆ ಒಟ್ಟು ರೂಪಾಯಿ 7,20,000/-  ರೂಪಾಯಿಗಳಿಗೆ ಎರಡೂ ಕಡೆಯವರೂ  ದಿನಾಂಕ 13/06/2017 ರಂದು ಕರಾರು ಪತ್ರ ಮಾಡಿಕೊಂಡು, ಸತೀಶ ರವರು ಮುಂಗಡ ಹಣವನ್ನಾಗಿ ರೂಪಾಯಿ 3,00,000/- ವನ್ನು ನೀಡಿ,  ನಂತರ ದಿನಾಂಕ 02/08/2017 ರಂದು ರೂಪಾಯಿ 1,20,000/-ಹಣವನ್ನು ಆರೋಪಿಗೆ ನೀಡಿರುತ್ತಾರೆ. ಸದ್ರಿ ಕರಾರು ಪತ್ರದ ಪ್ರಕಾರ ಅರೋಪಿಯು ದಿನಾಂಕ 13/08/2017 ರ ಮುಂಚೆ ಸತೀಶ ರವರಿಗೆ ಸದ್ರಿ ನಿವೇಶನವನ್ನು ನೊಂದಣಿ ಮಾಡಿಕೊಡಬೇಕಾಗಿದ್ದು, ಆ ಸಮಯ ಬಾಕಿ ಹಣವನ್ನು ಸತೀಶ್‌ ರವರು ನೀಡಬೇಕಾಗಿರುತ್ತದೆ. ಆದರೆ ಆರೋಪಿಯು ಅವರೇ ಒಪ್ಪಿ ಮಾಡಿಸಿದ ಕರಾರು ಪತ್ರದ ಪಾಲನೆಯನ್ನು ಉಲ್ಲಂಘಿಸಿ ಸತೀಶ್‌ ರವರಿಗೆ ಸದ್ರಿ ನಿವೇಶನವನ್ನು ನೊಂದಣಿ ಮಾಡಿ ಕೊಡದೇ ಉದ್ಧೇಶಪೂರ್ವಕವಾಗಿ ದಿನವನ್ನು ಮುಂದೂಡುತ್ತಾ ತಪ್ಪಿಸಿಕೊಂಡಿರುತ್ತಾರೆ. ಆರೋಪಿಯು ಸತೀಶ್‌ ರವರ ಹೆಸರಿಗೆ ನಿವೇಶನವನ್ನು ನೊಂದಣಿ ಮಾಡಿಸದೇ ಇರುವುದರಿಂದ ಸತೀಶ್‌ ರವರಿಂದ ಪಡೆದ ಒಟ್ಟು ರೂಪಾಯಿ. 4,20,000/- ವಾಪಾಸ್ಸು ನೀಡುವುದಾಗಿ ಒಪ್ಪಿ ದಿನಾಂಕ 18/08/2018 ರಂದು ರೂಪಾಯಿ 1,50,000/- ಹಣವನ್ನು ಹಿಂತಿರುಗಿಸಿರುತ್ತಾರೆ. ಬಾಕಿ ಉಳಿದ 2,70,000/ ಹಣವನ್ನು 30 ದಿನದ ಒಳಗೆ ಹಿಂತಿರುಗಿಸುವುದಾಗಿ ಸಮಯ ಕೇಳಿಯೂ ಕೂಡ 30 ದಿನದ ಒಳಗೆ ಹಣವನ್ನು ನೀಡದೇ ಇದ್ದು, ಪ್ರತಿ ಸಲ ಆರೋಪಿಯ ಹತ್ತಿರ ಬಾಕಿ ಹಣವನ್ನು ಕೇಳಿದಾಗ  ಹಣವನ್ನು ನೀಡದೇ ಸತೀಶ್ ರವರಿಗೆ ವಿಶ್ವಾಸ ದ್ರೋಹವನ್ನು ಮಾಡಿರುತ್ತಾನೆ. ಹೀಗಿರುತ್ತಾ ಸತೀಶ್‌ ವರರು ಆರೋಪಿಗೆ ತಿಳಿಯದಂತೆ  ಸದ್ರಿ ನಿವೇಶನದ ಮೂಲ ದಾಖಲಾತಿಗಳನ್ನು ಪರಿಶೀಲಿಸಲು ಹೋದಾಗ ಆರೋಪಿಯು ಈಗಾಗಲೇ ಸದ್ರಿ ನಿವೇಶನವನ್ನು  ದಿನಾಂಕ 01/06/2018 ರಂದು ದಿನೇಶ್ ಕೋಠಾರಿ ಎಂಬವರಿಗೆ ರೂಪಾಯಿ 12,75,000/- ಗಳಿಗೆ  ಬ್ರಹ್ಮಾವರ ಉಪನೊಂದಣಿ ಕಛೇರಿಯಲ್ಲಿ ಕ್ರಯಪತ್ರ ಮಾಡಿಸಿರುವುದು ತಿಳಿದು ಬಂದಿರುತ್ತದೆ. ಆರೋಪಿಯು ವಂಚನೆಮಾಡಿ ಸತೀಶ್ ರವರು ಹಾಗೂ ಅವರ ಹೆಂಡತಿಗೆ ಸದ್ರಿ ನಿವೇಶನವನ್ನು ಮಾರಾಟ ಮಾಡುವುದಾಗಿ ನಂಬಿಸಿ ಕರಾರುಪತ್ರ ಮಾಡಿಸಿ ಹಣವನ್ನು ಪಡೆದು ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 56/2021 ಕಲಂ: 406, 417, 418, 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಮಾನ್ಯ 1ನೇ ಎಸಿಜೆ & ಜೆಎಮ್‌ಎಫ್‌ಸಿ ನ್ಯಾಯಾಲಯದ ಖಾಸಗಿ ಪ್ರಕರಣದಂತೆ ಪಿರ್ಯಾದಿದಾರರಾದ ಅಮಿತ್‌ ಶೆಟ್ಟಿ (28) ತಂದೆ: ದಿ. ಭಾಸ್ಕರ ಶೆಟ್ಟಿ, ವಾಸ: ಗಣೇಶ ನಿಲಯ, ನೂಜಿನ ಬೈಲ್‌, ಕನ್ನಾರ್, ಚೇರ್ಕಾಡಿ ಗ್ರಾಮ, ಬ್ರಹ್ಮಾವರ ಇವರು ಕೃಷಿ, ಹೈನುಗಾರಿಕೆ ಮತ್ತು ಕೋಳಿ ಸಾಕಣಿಕೆ ಉದ್ಯೋಗ ಮಾಡಿಕೊಂಡಿರುತ್ತಾರೆ. ಹೀಗಿರುತ್ತಾ ಬೆಳಗಾವಿಯಲ್ಲಿ ಎಚ್‌.ಜಿ.ಕೆ ಒರ್ಗ್ಯನಿಕ್ ಪ್ರೈ.ಲಿ ಎಂಬ ಸಂಸ್ಥೆ ನಡೆಸಿಕೊಂಡಿರುವ ಅಮಿತ್‌ ಶೆಟ್ಟಿ ರವರ ಪರಿಚಯ ಇರುವ ಆರೋಪಿಯಾದ ಹರೀಶ್ ದಾರಪ್ಪ ಕೊಟೂರ್, (30) ತಂದೆ: ದಾರಪ್ಪ ಕೊಟೂರ್, ವಾಸ: ಎಚ್‌.ಜಿ.ಕೆ ಒರ್ಗ್ಯನಿಕ್ ಪ್ರೈ.ಲಿ. ಆಂಜನೇಯ ನಗರ, ಕೆ.ಎಮ್.ಎಫ್. ಮಿಲ್ಕ್ ಡೈರಿಯ ಹತ್ತಿರ, ಮಾಂತೇಶ್ ನಗರ, ಬೆಳಗಾವಿ ಎಂಬವರು 2020 ನೇ ಇಸವಿಯಲ್ಲಿ ಅಮಿತ್‌ ಶೆಟ್ಟಿ ರವರ ಮನೆಗೆ ಬಂದು ತಾನು ಕೋಳಿ ವ್ಯವಹಾರದ ಸಂಸ್ಥೆಯನ್ನು ಬೆಳಗಾವಿಯಲ್ಲಿ ನಡೆಸಿಕೊಂಡಿದ್ದು, ಬೇಕಾದವರಿಗೆ ಕೋಳಿ ಪೂರೈಕೆ ಮಾಡುತ್ತಿದ್ದು, ಕೋಳಿ ಪಡೆದುಕೊಂಡವರು ಅದನ್ನು ಸಾಕಿ ಅದರ ಮೊಟ್ಟೆಗಳನ್ನು ತಮ್ಮ ಸಂಸ್ಥೆಗೆ ಪೂರೈಕೆ ಮಾಡಿದರೆ ಯೋಗ್ಯ ಬೆಲೆ ಕೊಡುವುದಾಗಿಯೂ, 10 ತಿಂಗಳು ಕಳೆದ ನಂತರ ಸದ್ರಿ ಕೋಳಿಗಳನ್ನು ವಾಪಾಸ್ಸು ಪಡೆಯುವುದಾಗಿಯೂ ತಿಳಿಸಿದ್ದು, ಸದ್ರಿ ವ್ಯವಹಾರ ಅಮಿತ್‌ ಶೆಟ್ಟಿ ರವರಿಗೆ ಇಷ್ಟವಾಗಿ ಆರೋಪಿಯೊಂದಿಗೆ ಪರಸ್ಪರ ಮಾತುಕತೆ ನಡೆಸಿ ಆರೋಪಿಯು ಅಮಿತ್‌ ಶೆಟ್ಟಿ ರವರಿಗೆ 810+90 ಕೋಳಿಗಳನ್ನು ಪೂರೈಕೆ ಮಾಡವುದಾಗಿಯೂ, ಒಂದು ಕೋಳಿಗೆ ರೂಪಾಯಿ 400 ರಂತೆ ಒಟ್ಟು ರೂಪಾಯಿ 3,24,000/- ಹಣವನ್ನು ಪಾವತಿಸುವಂತೆ ದಿನಾಂಕ 08/02/2020 ರಂದು ಕರಾರು ಪತ್ರ ಮಾಡಿಕೊಂಡಿರುವುದಾಗಿದೆ. ನಂತರ ಆರೋಪಿಯು ಅಮಿತ್‌ ಶೆಟ್ಟಿ ರವರಿಗೆ ಕೂಡಲೇ ಅರ್ಧದಷ್ಟು ಹಣವನ್ನು ಖಾತೆಗೆ ಹಾಕುವಂತೆ ಮತ್ತು ತಾನು ಬೆಳಗಾವಿಗೆ ಹೋದ ನಂತರ ಕೋಳಿಗಳನ್ನು ಪೂರೈಕೆ ಮಾಡುವುದಾಗಿಯೂ ಕೋಳಿಗಳನ್ನು ಪೂರೈಕೆ ಮಾಡಿದ ನಂತರ ಬಾಕಿ ಹಣವನ್ನು ಪಾವತಿಸುವಂತೆ  ತಿಳಿಸಿದ್ದು,  ಸದ್ರಿ ಒಪ್ಪಂದದ ಪ್ರಕಾರ ದಿನಾಂಕ 10/02/2020 ರಂದು ಆರೋಪಿಯ ಖಾತೆಗೆ ರೂಪಾಯಿ. 1,62,000/- ಹಣವನ್ನು ಅಮಿತ್‌ ಶೆಟ್ಟಿ ರವರು ಪಾವತಿ ಮಾಡಿದರೂ ಕೂಡ ಆರೋಪಿಯು ಅಮಿತ್‌ ಶೆಟ್ಟಿ ರವರಿಗೆ ಇದುವರೆಗೆ ಅಂದರೆ 8 ತಿಂಗಳಾದರೂ  ಕೋಳಿಗಳನ್ನು ಪೂರೈಕೆ ಮಾಡಿರುವುದಿಲ್ಲ.  ಅಲ್ಲದೇ ಈ ಬಗ್ಗೆ ಕೇಳಿದಾಗ ಆರೋಪಿಯು  ಅಮಿತ್‌ ಶೆಟ್ಟಿ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿರುತ್ತಾನೆ. ಆರೋಪಿಯು ಹಣ ಪಡೆದು, ಕೋಳಿ ಪೂರೈಕೆ ಮಾಡುವುದಾಗಿ ಹೇಳಿ, ನಂಬಿಕೆ ದ್ರೋಹ ಮಾಡಿ ಮೋಸ, ವಂಚನೆ ಮಾಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 57/2021 ಕಲಂ: 420, 406, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-04-2021 06:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080