ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಹೆಚ್.ಎ ಗಜೇಂದ್ರ ಪೂಜಾರಿ, (47)  ತಾಯಿ: ಪುಟ್ಟು ಹೆಂಗ್ಸು, ವಾಸ: ದೊಡ್ಡಜೆಡ್ಡು, ಕೋಣಿಗ್ರಾಮ, ಕುಂದಾಪುರ ಇವರ ಅಜ್ಜಿ ಲಿಂಗು ಹೆಂಗ್ಸಿನ ಮಕ್ಕಳಾದ,  ಪುಟ್ಟು ಹೆಂಗ್ಸು ಹಾಗೂ ಅವರ ಸಹೋದರಿಯರಾದ ಮುತ್ತು ಹೆಂಗ್ಸು ಮತ್ತು ಈರು ಯಾನೆ ವೀರಮ್ಮ ಹೆಂಗ್ಸು ರವರು ಜಂಟಿಯಾಗಿ ಕೋಟೇಶ್ವರ ಗ್ರಾಮದ ಸರ್ವೇ ನಂ 13-18P3 ಯಲ್ಲಿ 0.16 ಎಕ್ರೆ  ಜಾಗ ಹೊಂದಿದ್ದು ದಿನಾಂಕ 05/05/2008 ರಂದು ಹೆಚ್.ಎ ಗಜೇಂದ್ರ ಪೂಜಾರಿ ರವರ ತಾಯಿ ಮೃತರಾಗಿದ್ದು, ನಂತರ ವೀರಮ್ಮ ಹೆಂಗ್ಸು ಮೃತರಾಗಿರುತ್ತಾರೆ. ಹೀಗಿರುತ್ತಾ ಆರೋಪಿತನಾದ ಕೋಡಿ ನಾಗೇಶ್ ಕಾಮತ್ ರವರೊಂದಿಗೆ ಮುತ್ತು ಹೆಂಗ್ಸುರವರ ಮಗ ಕೂಸುಪೂಜಾರಿ ಎಂಬುವವರು ಸೇರಿಕೊಂಡು ದಿನಾಂಕ 17/05/2019 ರಂದು ಹೆಚ್.ಎ ಗಜೇಂದ್ರ ಪೂಜಾರಿ ರವರ ತಾಯಿ ಪುಟ್ಟು ಹೆಂಗ್ಸು ಹಾಗೂ ಈರು ಯಾನೆ ವೀರಮ್ಮ ಹೆಂಗ್ಸು ರವರು 3 ನೇ ಆಪಾದಿತರಾದ ಆನಂದ ಬಂಡಾರಿ ನೋಟರಿ ವಕೀಲರು ಕುಂದಾಪುರ ಇವರ ಸಮಕ್ಷಮ ಹಾಜರಾಗಿದ್ದಾರೆಂದು ಪೋರ್ಜರಿ  ಸಹಿ ಮಾಡಿ ನಕಲಿ  ಪವರ್ ಆಫ್ ಅಟಾರ್ನಿ ಮಾಡಿಸಿದ್ದು ಸದ್ರಿ ದಸ್ತಾವೇಜುಗಳಿಗೆ ಎನ್.ಎಂ. ಘಣಿ, ಬಸ್ರೂರು, ಅಸ್ಫಾಕ್ ಕೋಡಿ, 6) ಶ್ವೇತಾ ಸಾಸ್ತಾನ ಆರೋಪಿತರು ಗುರುತು ಬಲ್ಲವರಾಗಿ ಸಹಿ ಮಾಡಿರುತ್ತಾರೆ. ಸದ್ರಿ ಪವರ್ ಆಫ್ ಅಟಾರ್ನಿ  ಮೂಲಕ ದಿನಾಂಕ 18/01/2020 ರಂದು ಆಪಾದಿತ ಶ್ರೀಮತಿ ಮತ್ತು ಹೆಂಗ್ಸು  ಇವರು ರಿಲೀಜ್ ಡೀಡ್ ದಸ್ತಾವೇಜು ಮಾಡಿಕೊಂಡಿದ್ದು  ನಂತರ ಖಾತಾ ಬದಲಾವಣೆ ಸಮಯ ಸದ್ರಿ ಆಸ್ತಿಯ ಜಂಟಿ ಹಕ್ಕುದಾರರಾದ ಪುಟ್ಟು ಹೆಂಗ್ಸುಹಾಗೂ ಈರು ಯಾನೆ ವೀರಮ್ಮ ಹೆಂಗ್ಸು ರವರು ಈ ಮೊದಲೇ ತೀರಿಕೊಂಡಿರುವುದಾಗಿ ಗ್ರಾಮ ಕರಣಿಕರಿಗೆ ತಿಳಿದುಬಂದಿರುವುದರಿಂದ ಖಾತಾ ಬದಲಾವಣೆಗಾಗಿ ತಡೆಹಿಡಿದು ತಹಶೀಲ್ದಾರ್ ರವರಿಗೆ ವರದಿ ಕಳುಹಿಸಿರುತ್ತಾರೆ. ಸದ್ರಿ ಸ್ಥಿರಾಸ್ಥಿಗೆ ಸಂಬಂಧಪಟ್ಟಂತೆ ಪುಟ್ಟು ಹೆಂಗ್ಸುರವರ ಪರವಾಗಿ ಹೆಚ್.ಎ ಗಜೇಂದ್ರ ಪೂಜಾರಿ ಇವರಿಗೆ  ನೋಟೀಸು ಬಂದಾಗ ಆಪಾದಿತರು ಪೋರ್ಜರಿಯಾಗಿ  ದಾಖಲೆ ಸೃಷ್ಠಿಸಿರುವುದು ತಿಳಿದುಬಂದಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 32/2022 ಕಲಂ: 465, 468, 471, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 19-03-2022 09:58 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080