ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಭಾಸ್ಕರ ಪಡುಬಿದ್ರಿ, (48) ತಂದೆ: ದಿ. ಈಶ್ವರ ಮುಖಾರಿ, ವಾಸ: ಆರ್.ಆರ್. ಕಾಲೋನಿ, ಪಡುಬಿದ್ರಿ ಅಂಚೆ, ನಡ್ಸಾಲು ಗ್ರಾಮ, ಕಾಪು ಈವರ ಬಾವ ಅಶ್ವಥ್ (32) ಎಂಬುವರು ದಿನಾಂಕ 18/03/2022 ರಂದು ಸಂಜೆ 19:30 ಗಂಟೆಯ ಕಾಪು ತಾಲೂಕು ಬಡಾ ಎರ್ಮಾಳು ಗ್ರಾಮದ ಕಲ್ಯಾಣಿ ಬಾರ್‌ನ ಎದುರು ರಾಷ್ಟ್ರೀಯ ಹೆದ್ದಾರಿ-66 ರ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುವ ರಸ್ತೆಯ ಬದಿಯಲ್ಲಿ ನಿಂತಿರುವ ಸಮಯ MH-48-BJ-3403 ನೇ ನಂಬ್ರದ ಮೋಟಾರ್ ಸೈಕಲ್ ಸವಾರನು ತನ್ನ ಬಾಬ್ತು ಮೋಟಾರ್ ಸೈಕಲ್ಲನ್ನು ಉಡುಪಿ ಕಡೆಯಿಂದ-ಮಂಗಳೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಭಾಸ್ಕರ ಪಡುಬಿದ್ರಿ  ಇವರ ಬಾವ ಅಶ್ವಥ್ ರವರಿಗೆ ಡಿಕ್ಕಿ ಹೊಡೆದು, ಸ್ವಲ್ಪ ಮುಂದೆ ತನ್ನ ಮೋಟಾರ್‌‌ ಸೈಕಲ್ಲನ್ನು ನಿಲ್ಲಿಸಿ ನೋಡಿ, ನಂತರ ಅಲ್ಲಿಂದ ತನ್ನ ಮೋಟಾರ್‌ ‌ಸೈಕಲ್ಲನ್ನು ಚಲಾಯಿಸಿಕೊಂಡು ಹೋಗಿರುತ್ತಾನೆ. ಸದ್ರಿ ಅಪಘಾತದಿಂದ ಅಶ್ವಥ್ ರವರು ರಸ್ತೆಯ ಮೇಲೆ ಬಿದ್ದು ತಲೆಯ ಹಿಂಭಾಗಕ್ಕೆ ತೀವ್ರ ಸ್ವರೂಪದ ಗಾಯವುಂಟಾಗಿರುತ್ತದೆ. ನಂತರ ಗಾಯಾಳುವನ್ನು ಒಂದು ಅಂಬ್ಯೂಲೆನ್ಸ್‌‌‌‌ನಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 28/2022 ಕಲಂ 279,  338 ಐಪಿಸಿ. ಮತ್ತು 134 (ಎ) (ಬಿ) ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 18/03/2022 ರಂದು ಸಂಜೆ 5:00 ಗಂಟೆ ಸಮಯಕ್ಕೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ನಿಟ್ಟೆ ಕಾಲೇಜು ಮುಂಭಾಗದಲ್ಲಿ ಹಾದುಹೋಗಿರುವ ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿ ರಸ್ತೆಯಲ್ಲಿ KA-19-ER-6601 ನೇ ಮೊಟಾರ್ ಬೈಕಿನ ಸವಾರ ಶೇಖರರವರು ತನ್ನ ಅಕ್ಕ ಶ್ರೀಮತಿ ಗಿರಿಜಾರವರನ್ನು ಸಹಸವಾರಳನ್ನಾಗಿ ಕುಳ್ಳಿರಿಸಿಕೊಂಡು ಬೆಳ್ಮಣ್ ಕಡೆಯಿಂದ ಕಾರ್ಕಳ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಗೆ ಅಳವಡಿಸಿದ ಹಂಪ್ಸ್ ನ ಮೇಲೆ ಚಲಾಯಿಸಿದ ಪರಿಣಾಮ ಸಹಸವಾರೆ ಗಿರಿಜಾರವರು ಅಂಗಾತನೆ ಡಾಮಾರು ರಸ್ತೆಗೆ ಬಿದ್ದಿದ್ದು ಅವರ ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದು ಕಾರ್ಕಳ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಹೆಚ್ಚನ ಚಿಕಿತ್ಸೆ ಬಗ್ಗೆ ಮಂಗಳೂರು ಆಸ್ಪತ್ರೆಗೆ ಹೋಗಿರುವುದಾಗಿದೆ, ಎಂಬುದಾಗಿ ಪ್ರಜ್ವಲ್ (32) ತಂದೆ: ಕೆ ನಾಗರಾಜು ವಾಸ: ಸೀತಾ ನಿವಾಸ, ಕೆಮ್ಮಣ್ಣು ಅಂಚೆ ನಿಟ್ಟೆ ಗ್ರಾಮ ಕಾರ್ಕಳ ತಾಲೂಕು ಉಡುಪಿ ಇವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 34/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ಪಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಜೊನ್ ಬಾಪ್ಟಿಸ್ಟ್ ವಾಜ್, (78) ತಂದೆ ಜೊಸೆಫ್ ವಾಜ್,  ವಾಸ ವಾಜ್ ವಿಲ್ಲಾ, ರಾಮಸಮುದ್ರ ಬಳಿ  ಕಸಬಾ  ಗ್ರಾಮ, ಕಾರ್ಕಳ ಇವರ ಹೆಂಡತಿಯ ತಮ್ಮ ಫೆಡ್ರಿಕ್‌ ಡಿಸೋಜಾ (54) ಈತನು ಅವಿವಾಹಿತನಾಗಿದ್ದು, ಕಾರ್ಕಳ ತಾಲೂಕಿನ ಮುಂಡ್ಲಿ ದರ್ಖಾಸು ಮನೆ ಎಂಬಲ್ಲಿ ಒಬ್ಬನೆ ವಾಸವಾಗಿದ್ದು, ಕೂಲಿಕೆಲಸ ಮಾಡಿಕೊಂಡಿರುತ್ತಾನೆ. ಫೆಡ್ರಿಕ್‌ ಡಿಸೋಜಾನು ಮಾನಸಿಕ ಅಸ್ವಸ್ಥನಾಗಿದ್ದು, ಹಾಗೂ ವಿಪರೀತ ಕುಡಿತದ ಚಟವನ್ನು ಹೊಂದಿದ್ದು, ಕಾರ್ಕಳದ ಆಸು ಪಾಸಿನಲ್ಲಿ ಬಸ್‌ ನಿಲ್ದಾಣ ಹಾಗೂ ಅಂಗಡಿಯ ಬದಿಯಲ್ಲಿ ಮಲಗಿಕೊಳ್ಳುತ್ತಿದ್ದು, ಜೊನ್ ಬಾಪ್ಟಿಸ್ಟ್ ವಾಜ್ ರವರಿಗೆ ದಿನಾಂಕ 18/03/2022 ರಂದು ರಾತ್ರಿ ಪರಿಚಯಸ್ಥರೊಬ್ಬರು ಕರೆ ಮಾಡಿ ಫೆಡ್ರಿಕ್‌ ಡಿಸೋಜಾನು ಕಾರ್ಕಳ ಬಸ್‌ ನಿಲ್ದಾಣದಲ್ಲಿ ಮಲಗಿಕೊಂಡ ಸ್ಥಿತಿಯಲ್ಲಿದ್ದು ಕರೆದರೂ ಮಾತನಾಡುವುದಿಲ್ಲವಾಗಿ ತಿಳಿಸಿರುತ್ತಾರೆ. ಜೊನ್ ಬಾಪ್ಟಿಸ್ಟ್ ವಾಜ್ ರವರು ರಾತ್ರಿ 11:00 ಗಂಟೆಗೆ ಬಸ್‌ ನಿಲ್ದಾಣಕ್ಕೆ ಬಂದು ಫೆಡ್ರಿಕ್‌ ಡಿಸೋಜಾನನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ವೈದ್ಯರು ರಾತ್ರಿ 11:20 ಗಂಟೆಗೆ ಪರೀಕ್ಷಿಸಿ ಆತನು ಮೃತಪಟ್ಟಿರುವುದಾಗಿ ತಿಳಿಸಿದ್ದು,  ಫೆಡ್ರಿಕ್‌ ಡಿಸೋಜಾನು ಮಾನಸಿಕ ಅಸ್ವಸ್ಥನಾಗಿದ್ದು, ಹಾಗೂ ವಿಪರೀತ ಕುಡಿತದ ಚಟವನ್ನು ಹೊಂದಿದ್ದು ಇದೇ ಕಾರಣದಿಂದ ಯಾವುದೋ ಖಾಯಿಲೆಗೆ ತುತ್ತಾಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 11/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-03-2022 05:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080