ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಉಡುಪಿ: ದಿನಾಂಕ 18/03/2021 ರಂದು ಸಂಜೆ 06:15 ಗಂಟೆಗೆ ಪುತ್ತೂರು ಗ್ರಾಮದ ಗಣೇಶ್ ಮಾರ್ಬಲ್ ಅಂಗಡಿಯ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬಸ್ಸು ನಿಲ್ದಾಣದಲ್ಲಿ ಬಸ್ಸು ಕಾಯುತ್ತಿರುವಾಗ ಅಂಬಾಗಿಲು ಕಡೆಯಿಂದ ಕರಾವಳಿ ಜಂಕ್ಷನ್ ಕಡೆಗೆ KA-19-EB-7491 ನೇ ಮೋಟಾರ್ ಸೈಕಲ್ ಸವಾರ ರವಿಚಂದ್ರನ್ ತನ್ನ ಮೋಟಾರು ಸೈಕಲನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ಬದಿಯಲ್ಲಿ ಬಸ್ಸು ಕಾಯಲು ನಿಂತಿದ್ದ ಪಿರ್ಯಾದಿದಾರರಾದ ಹರೀಶ್ ದೇವಾಡಿಗ (49), ತಂದೆ: ಕೋಟಿ ದೇವಾಡಿಗ, ವಾಸ ಪದ್ಮಶ್ರೀ ನಿಲಯ, ಕಂಗಣಬೆಟ್ಟು, ಕೊಡವೂರು ಅಂಚೆ ಮತ್ತು ಗ್ರಾಮ  ಉಡುಪಿ ತಾಲೂಕು ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು ಅವರ ಎಡಕಾಲಿಗೆ ಮೂಳೆ ಮುರಿತವುಂಟಾಗಿದ್ದು, ಎಡ ಬದಿಯ ಬೆನ್ನಿಗೆ ಗುದ್ದಿದ ಗಾಯವಾಗಿದ್ದು ತಲೆಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣ

 • ಕಾರ್ಕಳ : ದಿನಾಂಕ 18/03/21 ರಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿದಾರರಾದ ಸುರೇಂದ್ರ ಅಮೀನ್ (55), ತಂದೆ: ದಿ. ಗಿರಿಯ ಪೂಜಾರಿ, ವಾಸ: ಅಡ್ಕುಂಜ ಹೌಸ್, ಕುಂಟಾಡಿ ಅಂಚೆ, ಕಲ್ಯಾ ಗ್ರಾಮ, ಕಾರ್ಕಳ ತಾಲೂಕು ಇವರ ತೋಟದಲ್ಲಿ ಪಿರ್ಯಾದಿದಾರರ ಮಗ ವಿಶಾಕ್ ಪೂಜಾರಿ (30) ರವರು ಯಾವುದೋ ಕಾರಣದಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು  ಬೆಳೆ ರಕ್ಷಣೆಗಾಗಿ ಹೊಂದಿದ್ದ ಕೋವಿಯಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 09/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಕಳವು ಪ್ರಕರಣ

 • ಕೋಟ: ಪಿರ್ಯಾದಿದಾರರಾದ ಶ್ರೀಮತಿ ಮಂಜಿ (65), ತಂದೆ:ದಿ ತಿಮ್ಮ, ವಾಸ: ವೃದ್ದಾಶ್ರಮದ ಬಳಿ ಗುಳ್ಳಾಡಿ ಬೇಳೂರು ಗ್ರಾಮ ಕುಂದಾಪುರ ತಾಲೂಕು ಇವರು ಕುಂದಾಪುರ ತಾಲೂಕು ಬೇಳೂರು ಗ್ರಾಮದ ಗುಳ್ಳಾಡಿ ವೃದ್ದಾಶ್ರಮದ ಬಳಿ ತನ್ನ ಮನೆಯಲ್ಲಿ ಒಬ್ಬರೇ  ವಾಸ ಮಾಡಿಕೊಂಡಿದ್ದು ಜೀವನ ನಿರ್ವಹಣೆಗಾಗಿ ಜರ್ಸೀ ಕ್ರಾಸ್ ಜಾತಿಯ 5 ವರ್ಷ ಪ್ರಾಯದ ಬಿಳಿ ಬಣ್ಣದ ದನವನ್ನು ಸಾಕಿಕೊಂಡಿದ್ದು  ಪ್ರತಿದಿನ 8 ಲೀಟರ್ ಹಾಲು ಕೊಡುತಿತ್ತು, ಪಿರ್ಯಾದಿದಾರರ ಮನೆಯ ಹಿಂದೆ ದನದ ಹಟ್ಟಿಯನ್ನು ಮಾಡಿಕೊಂಡು ಅದರಲ್ಲಿ  ದನವನ್ನು ಕಟ್ಟುತ್ತಿದ್ದರು ಎಂದಿನಂತೆ ದಿನಾಂಕ 17/03/2021 ರಂದು ಬೆಳಿಗ್ಗೆ ಹೊರಗೆ ಮೇಯಲು ಕಟ್ಟಿದ  ದನವನ್ನು ರಾತ್ರಿ 8:00 ಗಂಟೆಗೆ ವಾಪಾಸ್ಸು ಹಟ್ಟಿಯಲ್ಲಿ ಕಟ್ಟಿ ಹುಲ್ಲು ಮತ್ತು ನೀರು ಹಾಕಿ ಪಿರ್ಯಾದಿದಾರರು ಊಟ ಮಾಡಿ ಮಲಗಿದ್ದರು. ದಿನಾಂಕ 18/03/2021 ರಂದು ಬೆಳಿಗ್ಗೆ 05:30 ಗಂಟೆಗೆ ಹಾಲು ಕರೆಯಲು ಹಟ್ಟಿಗೆ ಹೋದಾಗ ದನ  ಇರಲಿಲ್ಲ ದನ ಕಟ್ಟಿದ ಬಳ್ಳಿಯನ್ನು ಕತ್ತಿಯಿಂದ ಕತ್ತರಿಸಿದ ರೀತಿಯಲ್ಲಿ ತುಂಡಾಗಿದ್ದು ಮನೆಯ ಸುತ್ತಮುತ್ತ ಹುಡಕಾಡಿದರೂ ಪತ್ತೆಯಾಗಿರುವುದಿಲ್ಲ ದನದ ಬೆಲೆ  20 ಸಾವಿರ ಮೌಲ್ಯವಾಗಿದ್ದು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಪಿರ್ಯಾದಿದಾರರ ಹಟ್ಟಿಗೆ ಬಂದು ಬಳ್ಳಿಯನ್ನು ತುಂಡು ಮಾಡಿ ದನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 48/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತರ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ಶ್ರೀಮತಿ ಮಜೈನಾ (23), ಗಂಡ: ಮಹಮ್ಮದ್ ಗೌಸ್, ವಾಸ: ಜನತಾ ಕಾಲೋನಿ, ಕಂಡ್ಲೂರು ಗ್ರಾಮ ಕುಂದಾಪುರ ತಾಲೂಕು ಇವರುದಿನಾಂಕ 21/04/2018 ರಂದು 1ನೇ ಆರೋಪಿತ ಮಹಮ್ಮದ್ ಗೌಸ್ ಎಂಬುವವರನ್ನು ಮದುವೆಯಾಗಿದ್ದು, ಮದುವೆಯ ಸಮಯ 2 ನೇ ಆರೋಪಿತ ಸುಲ್ತಾನ್ (60),  ತಂದೆ; ಮೀರಾ ಸಾಹೇಬ್ ಇವರು ಪಿರ್ಯಾದಿದಾರರ ಮಾವನಿಂದ ವರದಕ್ಷಿಣೆಯ ರೂಪದಲ್ಲಿ ಒತ್ತಾಯ ಮಾಡಿ 3 ಲಕ್ಷ ಹಣ ಹಾಗೂ 25 ಪವನ್‌ ಚಿನ್ನವನ್ನು ಪಡೆದುಕೊಂಡಿರುತ್ತಾನೆ. ಮದುವೆಯ ನಂತರ ಆರೋಪಿತರೆಲ್ಲರೂ  2 ತಿಂಗಳವರೆಗೆ ಪಿರ್ಯಾದಿದಾರರನ್ನು ಒಳ್ಳೆಯ ರೀತಿಯಲ್ಲಿ ನೋಡಿಕೊಂಡಿದ್ದು, ನಂತರ 2 ನೇ ಆರೋಪಿಯು ಪಿರ್ಯಾದಿದಾರರಿಗೆ ವಿನಾ ಕಾರಣ ಬೈಯುತ್ತಿರುತ್ತಾರೆ ಮಾತ್ರವಲ್ಲದೇ ಮನೆಯ ಕೆಲಸದಲ್ಲಿ ಪಿರ್ಯಾದಿದಾರರಿಗೆ ಯಾರೂ ಸಹಕಾರ ನೀಡುತ್ತಿರಲಿಲ್ಲ. ಅಲ್ಲದೇ ಆರೋಪಿತರೆಲ್ಲರೂ ಪಿರ್ಯಾದಿದಾರರಿಗೆ ವಿನಾ ಕಾರಣ ಬೈದು, ಅವಮಾನ ಮಾಡಿ, ಮಾನಸಿಕ ಹಿಂಸೆಯನ್ನು ನೀಡಿರುತ್ತಾರೆ. ಮದುವೆ ಸಮಯ ತುಂಬಾ ಚಿನ್ನ ಮತ್ತು ವರದಕ್ಷಿಣೆಯನ್ನು ಹಣದ ರೂಪದಲ್ಲಿ ನೀಡಲಿಲ್ಲವೆಂದು ಹಂಗಿಸಿ ಮಾತನಾಡುತ್ತಿದ್ದರು. ಆರೋಪಿ 3) ಫರ್ಜಾನ್ (35),  ಗಂಡ; ಸುಲ್ತಾನ್ ಇವರು ಪಿರ್ಯಾದಿದಾರರೊಂದಿಗೆ ಜಗಳ ಮಾಡುವಾಗ ಆರೋಪಿತರೆಲ್ಲರೂ ಆರೋಪಿ 3ನೇಯವರಿಗೆ ಪ್ರೋತ್ಸಾಹ ನೀಡುತ್ತಿದ್ದರು.  ಅಲ್ಲದೆ ಆರೋಪಿ 3ನೇಯವರು  ಪಿರ್ಯಾದಿದಾರರನ್ನು ವೈವಾಹಿಕ ಮನೆಯಿಂದ ಹೊರಗೆ ಹಾಕಲು ಪ್ರಯತ್ನಿಸುತ್ತಿದ್ದು . 2018 ನೇ ಇಸವಿಯ ಸಪ್ಟಂಬರ್  ತಿಂಗಳ ಎರಡನೇಯ ವಾರದಲ್ಲಿ 3 ನೇ ಆರೋಪಿಯು ಉದ್ದೇಶಪೂರ್ವಕವಾಗಿ ಗಲಾಟೆ ಮಾಡಿ ಅವಮಾನಿಸಿ, ಅಲ್ಲದೆ ಆರೋಪಿತರೆಲ್ಲರೂ ಬೈದು 1 ಲಕ್ಷ ರೂಪಾಯಿ ಹಣವನ್ನು ತಾರದೇ ಮನೆಗೆ ಬರಬಾರದಾಗಿ ಬೆದರಿಕೆ ಹಾಕಿ, ಗರ್ಭೀಣಿಯಾಗಿದ್ದ ಪಿರ್ಯಾದಿದಾರರನ್ನು ಮನೆಯಿಂದ ಹೊರೆಗೆ ಹಾಕಿರುತ್ತಾರೆ. ಆರೋಪಿ 1 ನೇಯವರು  ಪಿರ್ಯಾದಿದಾರರು ಪೋನ್  ಮಾಡಿದಾಗ ಯೋಗಕ್ಷೇಮ ವಿಚಾರಿಸದೇ ಹಣ ತಾರದೇ ಮನೆಗೆ ಬಂದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುತ್ತಾರೆ. ಈ ವಿಚಾರವಾಗಿ ಪಿರ್ಯಾದಿದಾರರು ಇಸ್ಲಾಮಿಕ್ ಕೋರ್ಟ್ ನಲ್ಲಿ ದೂರು ನೀಡಿದ್ದು  ಕೋರ್ಟಿನ ತೀರ್ಪಿನಂತೆ  ಪಿರ್ಯಾದಿದಾರರನ್ನು ಆರೋಪಿತರ ಮನೆಗೆ ಕರೆದುಕೊಂಡು ಹೋಗಿದ್ದು, ನಂತರ ಪಿರ್ಯಾದಿದಾರರು ಆರೋಪಿತರ ಮನೆಯಲ್ಲಿ ವಾಸವಾಗಿದ್ದು ಆ ಸಮಯ ಆರೋಪಿ 1ನೇಯವರು ಉಳಿದ ಆರೋಪಿತರ ಪ್ರಚೋದನೆ ಮೇರೆಗೆ ಪಿರ್ಯಾದಿದಾರರಿಗೆ ಹೊಡೆಯುತ್ತಿದ್ದು. ಪಿರ್ಯಾದಿದಾರರು 9 ತಿಂಗಳ ಗರ್ಭಿಣಿಯಾದ ನಂತರ ತಾಯಿ ಮನಗೆ ಬಂದಿದ್ದು. ನಂತರ ಪಿರ್ಯಾದಿದಾರರು ದಿನಾಂಕ 25/06/2019 ರಂದು ಮಗುವಿಗೆ ಜನ್ಮ ನೀಡಿದ್ದು 2 ದಿನಗಳ ನಂತರ ಆರೋಪಿತರೆಲ್ಲರು ಬಂದು ಹೋಗಿರುತ್ತಾರೆ. ಆರೋಪಿ 1ನೇಯವರ ತಂದೆ ತಾಯಿ ಮೃತಪಟ್ಟಾಗ ಪಿರ್ಯಾದಿದಾರರು ಆರೋಪಿತರ ಮನೆಗ ಹೋಗಿದ್ದು ಆರೋಪಿ 3ನೇಯವರು ಪಿರ್ಯಾದಿದಾರರ ಮಗುವನ್ನು ಕೊಲ್ಲಲ್ಲು ಪ್ರಯತ್ನಿಸಿರುತ್ತಾರೆ.  ಆರೋಪಿ 1ನೇ ಯವರು ಪಿರ್ಯಾದಿದಾರರ ಚಿನ್ನವನ್ನು ಬಲತ್ಕಾರವಾಗಿ ತೆಗೆದುಕೊಂಡು ಹೋಗಿ ಆರೋಪಿ 3ನೇಯವರಿಗೆ ನೀಡಿರುತ್ತಾರೆ.  ನಂತರ ಆರೋಪಿ 1 ನೇಯವರು ಪಿರ್ಯಾದಿದಾರರ ತಾಯಿಗೆ ಪೋನ್ ಮಾಡಿ ಪಿರ್ಯಾದಿದಾರರನ್ನು ಮನೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ಪಿರ್ಯಾದಿದಾರರು ತಾಯಿ ಮನೆಗೆ ಬಂದಿರುತ್ತಾರೆ. ಆರೋಪಿ 1ಮತ್ತು 3ನೇಯವರು ಉಳಿದ ಆರೋಪಿತರಾದ 4) ಶಬ್ಬೀರ್ (65), 5) ಆಫ್ರೀನ್ (30), ಗಂಡ; ಶಬ್ಬೀರ್, 6) ವಾಹೀದಾ (45), ಗಂಡ; ರಿಜ್ವಾನ್, 7) ರಿಜ್ವಾನ್ (60),  ತಂದೆ; ಮೀರಾ ಸಾಹೇಬ್, 8) ಕೌಸರ್ (45),  ತಂದೆ; ಮೀರಾ ಸಾಹೇಬ್, 9) ಮಮತ್ತಾಜ್ (70), 10) ಸಾರ್ಪರಾಜ್ (45), 11) ಹಾಪೀಜಾ (40) ಎಲ್ಲರೂ ವಾಸ: ಅಮೀರಾ ಮಂಜಿಲ್, ಬುಕಾರಿ ಕಾಲೋನಿ, ಶಿರೂರು ಗ್ರಾಮ, ಬೈಂದೂರು ತಾಲೂಕು ಇವರ ಕುಮ್ಮಕ್ಕಿನಿಂದ ಪಿರ್ಯಾದಿದಾರರನ್ನು ಮನೆಯಿಂದ  ಹೊರಗೆ ಹಾಕಿ ಕಿರುಕುಳ ನೀಡಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 61/2021 ಕಲಂ: 498(ಎ), 323, 327,  504, 506, ಜೊತೆಗೆ  149 ಐಪಿಸಿ 3, 4, 6  ವರದಕ್ಷಿಣೆ ನಿಷೇಧ  ಕಾಯಿದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿದಾರರಾದ ರಾಜೇಶ ಲೋಬೋ (45), ತಂದೆ: ಫೆಡ್ರಿಕ್‌ ಲೋಬೋ, ವಾಸ: ಲೋಬೋ ವಿಲ್ಲಾ, ಪರ್ಪಲೆ, ಕುಂಟಲ್ಪಾಡಿ, ಸಾಣೂರು ಗ್ರಾಮ, ಕಾರ್ಕಳ ತಾಲೂಕು ಇವರು ಕಾರ್ಕಳ ತಾಲೂಕಿನ ಕಾರ್ಕಳ ಕಸಬ ಗ್ರಾಮದ ಕಾಬೆಟ್ಟುನಲ್ಲಿರುವ ರಿಯಾನ್‌ ಸ್ಟೀಲ್‌ ಪರ್ನಿಚರ್‌ ಎಂಬ ಹೆಸರಿನ ಪ್ಯಾಕ್ಟರಿ ನಡೆಸಿಕೊಂಡಿರುತ್ತಾರೆ. ಝಬಿ ಎಂಬಾತನು ಪಿರ್ಯಾದಿದಾರರ ಪ್ಯಾಕ್ಟರಿಯಲ್ಲಿ ಈ ಹಿಂದೆ ಕೆಲಸ ಮಾಡಿಕೊಂಡಿದ್ದವನು 8000/- ಮೌಲ್ಯದ ಸ್ಟೀಲ್‌ ಕಪಾಟನ್ನು ಪಡೆದುಕೊಂಡು ಹೋಗಿದ್ದು ಈ ಹಣವನ್ನು ವಾಪಾಸು ನೀಡಿರುವುದಿಲ್ಲ. ಝುಬಿ ಈತನು ಮೂಡುಬೆಳ್ಳೆಯ ನಾಲ್ಕು ಬೀದಿಯಲ್ಲಿರುವ ಅಮ್ಜಾದ್‌ ಎಂಬುವವರ ಪ್ಯಾಕ್ಟರಿಯಲ್ಲಿ  ಕೆಲಸ ಮಾಡುತ್ತಿದ್ದ ವಿಚಾರ ತಿಳಿದು ಪಿರ್ಯಾದಿದಾರರು ಅಮ್ಜಾದ್‌ ಬಳಿ ಝುಬಿಯವರ ಬಗ್ಗೆ ದಿನಾಂಕ 16/03/2021 ರಂದು ವಿಚಾರಿಸಿದಾಗ ಅಮ್ಜಾದ್‌ ಪಿರ್ಯಾದಿದಾರರ ಮೇಲೆ ಸಿಟ್ಟುಗೊಂಡು  ಪಿರ್ಯಾದಿದಾರರ ಬಳಿಗೆ ಬರುವುದಾಗಿ ತಿಳಿಸಿ ದಿನಾಂಕ 16/03/2021 ರಂದು ರಾತ್ರಿ 10:00 ಗಂಟೆಗೆ ಪಿರ್ಯಾದಿದಾರರ ಪ್ಯಾಕ್ಟರಿಗೆ ಅಕ್ರಮ ಪ್ರವೇಶ ಮಾಡಿ, ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದದಿಂದ ಬೈದಿರುವುದಲ್ಲದೇ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 34/2021  ಕಲಂ: 447, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 19-03-2021 09:31 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080