ಅಭಿಪ್ರಾಯ / ಸಲಹೆಗಳು

ಅಪಘಾತಪ್ರಕರಣ

  • ಬ್ರಹ್ಮಾವರ: ದಿನಾಂಕ 15.02.2023 ರಂದು ಫಿರ್ಯಾದಿದಾರರಾದ ದಿನೇಶ್‌ ರವರು ಅವರ ಬಾಬ್ತು ಮೋಟಾರ್‌ ಸೈಕಲ್‌ ನಂಬ್ರ  KA.20.EX.3764 ನೇದರಲ್ಲಿ ತಂದೆ ಶೇಷ ರವರನ್ನು ಸಹ ಸವಾರನ್ನಾಗಿ ಕೂರಿಸಿಕೊಂಡು ರಾಹೆ 66 ರಲ್ಲಿ ಬ್ರಹ್ಮಾರದ ಶ್ಯಾಮಿಲಿ ಶನಾಯ ಹಾಲ್‌ ಕಡೆಗೆ ತನ್ನ ಮೋಟಾರ್‌ ಸೈಕಲ್ಲನ್ನು ಹಾಲ್‌ನ ಕಡೆಗೆ ಎಡಕ್ಕೆ ತಿರುಗಿಸುತ್ತಿರುವಾಗ ಅವರ ಬಲ ಭಾಗದಲ್ಲಿ ಆರೋಪಿ ನವೀನ ಆಲ್ಪೋನ್ಸ್‌ ರೋಡ್ರಿಗಸ್‌ ಎಂಬವರು ಅವರು ಚಲಾಯಿಸುತ್ತಿದ್ದ KA‌.20.MA.9073 ನೇ ಕಾರನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಒಮ್ಮೆಲೆ ಎಡಕ್ಕೆ ಚಲಾಯಿಸಿ ಫಿರ್ಯಾದಿದಾರ ಮೋಟಾರ್‌ ಸೈಕಲ್ಲಿಗೆ ಢಿಕ್ಕಿ ಹೊಡೆದಿದ್ದು ಪರಿಣಾಮ ಇಬ್ಬರೂ ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದಿರುವುದಾಗಿದೆ. ಈ ಅಪಘಾತದ ಪರಿಣಾಮ ಪಿರ್ಯಾದಿದಾರಿಗೆ ಎಡಕೈ ಮೊಣಗಂಟಿಗೆ ತರಚಿದ ಗಾಯವಾಗಿದ್ದು ಹಾಗೂ ಹಿಂಬದಿ ಸವಾರ ಶೇಷ ರವರಿಗೆ ಎಡಕಾಲಿನ ಸೊಂಟದಿಂದ ಪಾದದ ವರೆಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 27/2023 : ಕಲಂ 279,  337  ಐಪಿಸಿ ರಂತೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.
  •  ಕಾಪು: ಪಿಯಾ೯ದಿ ಸುಶೀಲ ಶೆಟ್ಟಿ ದಾರರ ಗಂಡ ಸುಧಾಕರ್‌ ಶೆಟ್ಟಿ(65) ರವರು  ದಿನಾಂಕ:16/02/2023 ರಂದು ಮನೆಯಿಂದ  ಪಾಂಗಾಳದ ಹೆಗ್ಡೆ ಬಾರ್ ಹಿಂದಿರುವ ಬೀಡದಂಗಡಿಗೆ ರಾ.ಹೆ 66 ರ ಮಂಗಳೂರು ಉಡುಪಿ ರಸ್ತೆಯನ್ನು ದಾಟಿ ಬಳಿಕ ರಾ.ಹೆ 66 ಉಡುಪಿ –ಮಂಗಳೂರು ರಸ್ತೆಯನ್ನು ದಾಟಿ,  ರಸ್ತೆಯ ಪೂರ್ವ ಬದಿಯ ಮಣ್ಣು ರಸ್ತೆಯಲ್ಲಿ ನೆಡೆದುಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಬೆಳಗ್ಗೆ 10:45 ಗಂಟೆಗೆ  ಇಮ್ಮಿ ನಸ೯ರಿ ಬಳಿ ತಲುಪುತ್ತಿದ್ದಂತೆ ಸುರೇಶ್‌ ರವರು ತನ್ನ ಬಾಬ್ತು ಕೆ.ಎ 03-ಎ.ಹೆಚ್-0568‌ ಮಾರುತಿ ಸ್ವಿಪ್ಟ್‌  ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸುಧಾಕರ ಶೆಟ್ಟಿ ಯವರಿಗೆ ಡಿಕ್ಕಿ ಹೊಡೆದಿದ್ದು,  ಪರಿಣಾಮ ಸುಧಾಕರ ಶೆಟ್ಟಿ ಯವರರು ರಸ್ತೆಗೆ ಬಿದ್ದು,   ಹಣೇಗೆ ರಕ್ತಗಾಯವಾಗಿದ್ದು  ಸೊಂಟಕ್ಕೆ ಗುದ್ದಿದ ನೋವಾಗಿರುತ್ತದೆ  ಹಾಗೂ ಎಡಕಾಲಿನ ಗಂಟಿನ ಕೆಳಗೆ ಅಲ್ಲಲ್ಲಿ ತರಚಿದ ಗಾಯವಾಗಿರುತ್ತದೆ. ಅವರನ್ನು ಚಿಕಿತ್ಸೆಯ ಬಗ್ಗೆ  108 ಅಂಬುಲೆನ್ಸ್‌‌ ನಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ  ಅಲ್ಲಿನ ವೈದ್ಯರು ಪರೀಕ್ಷಿಸಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 29/2023 ಕಲಂ 279, 338 ಐಪಿಸಿ ರಂತೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.

 ಹಲ್ಲೆ ಪ್ರಕರಣ

  • ಕಾರ್ಕಳ: ಪಿರ್ಯಾದಿ ಮ್ಯಾಕ್ಸಿಮ್‌ ಡಿ ಸಿಲ್ವಾ ಇವರು ದಿನಾಂಕ: 18.02.2023 ರಂದು ಸಂಜೆ ಕೆಲಸ ಮುಗಿಸಿ ತನ್ನ ಕಾರು ನಂಬ್ರ KA20MA4238 ನೇದರಲ್ಲಿ ಮನೆಗೆ ಹೊರಟು ಸಮಯ ಸುಮಾರು ಸಂಜೆ 7:20 ಗಂಟೆಗೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ನ್ಯೂ ಕುರ್ಗಾಂಜೆ ಹೌಸ್‌ ಎಂಬಲ್ಲಿ ಪಿರ್ಯಾದಿದಾರರ ಮನೆಗೆ ಹೋಗುವ ರಸ್ತೆಯ ಗೇಟ್‌ ನ ಬಳಿ ತಲುಪಿದಾಗ  ಅಪಾದಿತ ಅಂತೋನಿ ಎಲಿಯಾಸ್‌ ಡಿಸಿಲ್ವಾ ರವರು KA19ML7641 ನೇ ಕಾರನ್ನು ಪಿರ್ಯಾದಿದಾರರ ಮನೆಗೆ ಹೋಗುವ ರಸ್ತೆಯ ಎದುರಿನಲ್ಲಿರುವ ಡಾಂಬಾರು ರಸ್ತೆಯಲ್ಲಿ ಇಟ್ಟಿದ್ದು ಪಿರ್ಯಾದಿದಾರರು ಮನೆಗೆ ಹೋಗಲು ಗೇಟನ್ನು ತೆಗೆಯಲು ಹೋದಾಗ ಅಪಾದಿತನು ಕಾರಿನಿಂದ ಇಳಿದು ಬಂದು ಪಿರ್ಯಾದಿದಾರರನ್ನು ಅಡ್ಡಕಟ್ಟಿ ನೀನು ಯಾರ ಜಾಗದಲ್ಲಿ ಹೋಗುತ್ತೀಯಾ, ಒಳಗೆ ಹೋದರೆ ನಿನ್ನ ಕೈಕಾಲು ಮುರಿದು ಹಾಕುತ್ತೇನೆ ಎಂದು ಅವಾಚ್ಯ ಶಬ್ಧಗಳಿಂದ ಬೈದು, ಮುಖಕ್ಕೆ ಹಾಗೂ ಮೂಗಿಗೆ ಗುದ್ದಿ, ಹೊಟ್ಟೆಗೆ ಕಾಲಿನಿಂದ ಒದ್ದು, ಅಪಾದಿತನು ಸ್ಥಳದಲ್ಲಿದ್ದ ಕಲ್ಲನ್ನು ಎತ್ತಿಕೊಂಡು ಹೊಡೆಯಲು ಬಂದಾಗ ಪಿರ್ಯಾದಿದಾರರು ತಡೆದಿರುತ್ತಾರೆ. ಪಿರ್ಯಾದಿದಾರರು ದಾರಿಯು ನ್ಯಾಯಾಲಯದಲ್ಲಿ ವ್ಯಾಜ್ಯದಲ್ಲಿದೆ ಎಂದಾಗ ಅಪಾದಿತನು ನ್ಯಾಯಾಲಯದ ಕೇಸು ತಕರಾರು ಮುಗಿಯಲು 10-15 ವರ್ಷಗಳು ಹೋಗಬಹುದು ಆದರೆ ನಿನ್ನನ್ನು ಹಾಗೂ ನಿನ್ನ ಕುಂಟುಂಬದವರನ್ನು ಮುಗಿಸಲು ನನಗೆ ಒಂದೇ ಗಂಟೆ ಸಾಕು, ನಿನ್ನನ್ನು ಹಾಗೂ ನಿನ್ನ ಹೆಂಡತಿ ಮಕ್ಕಳನ್ನು ಮುಗಿಸದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಅಪಾದಿತನು ಆತನ ಕೆಲಸದವರನ್ನು ಕರೆದು ಚಾಕು ತೆಗೆದುಕೊಂಡು ಬರುವಂತೆ ಹೇಳಿದಾಗ ಪಿರ್ಯಾದಿದಾರರು ಹೆದರಿಕೊಂಡು ಕಾರನ್ನು ಚಲಾಯಿಸಿಕೊಂಡು ಮನೆಗೆ ಹೋಗಿದ್ದು, ಅಪಾದಿತನು ನಡೆಸಿದ ಕೃತ್ಯದಿಂದ  ಮೂಗಿನ ಬಳಿ ರಕ್ತಗಾಯ, ಸೊಂಟಕ್ಕೆ ಗುದ್ದಿದ ನೋವುಂಟಾದ ಪಿರ್ಯಾದಿದಾರರನ್ನು ಅವರ ಮಗ ಚಿಕಿತ್ಸೆ ಬಗ್ಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 20/2023  ಕಲಂ 323,324,341,504,506 ಐಪಿಸಿ ರಂತೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.

ಅಸ್ವಾಭಾವಿಕಮರಣಪ್ರಕರಣ

  • ಕೋಟ: ಪಿರ್ಯಾದಿ ಸುಬ್ರಾಯ ದೇವಾಡಿಗ ಇವರ ತಂಗಿ ಶ್ರೀಮತಿ ಗುಣವತಿ ಪ್ರಾಯ 39 ವರ್ಷ ಎಂಬವರಿಗೆ ದಿನಾಂಕ 23-12-2023 ರಂದು ಉಡುಪಿಯ ಬಿ.ಆರ್. ಶೆಟ್ಟಿ ಆಸ್ಪತ್ರೆಯಲ್ಲಿ ಹೆರಿಗೆ ಆಗಿ ಗಂಡು ಮಗುವಿನ ಜನನ ಆಗಿದ್ದು, ಸದ್ರಿಯವರು 21 ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಬಂದಿದ್ದು, ಗುಣವತಿಯವರಿಗೆ ಸುಮಾರು ಒಂದು ವಾರದ ಹಿಂದೆ ವಾಂತಿ ಮತ್ತು ಬೇಧಿ ಕಾಣಿಸಿಕೊಂಡಿದ್ದು, ಈ ಬಗ್ಗೆ ಸ್ಥಳಿಯ ವ್ಯೆದ್ಯರಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಯಲ್ಲಿದ್ದವರಿಗೆ ಈ ದಿನ ದಿನಾಂಕ 18-02-2023 ರಂದು ಬೆಳಿಗ್ಗೆ 09-00 ಗಂಟೆಗೆ ಮಗುವಿಗೆ ಹಾಲು ಕುಡಿಸುತ್ತಿರುವಾಗ ನಿತ್ರಾಣಗೊಂಡು ಕುಸಿದುಬಿದ್ದಿದ್ದು, ಅವರನ್ನು ಕೂಡಲೇ ಒಂದು ಕಾರಿನಲ್ಲಿ ಚಿಕಿತ್ಸೆಯ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಿನಾಂಕ 18/02/2023 ರಂದು 10-10 ಗಂಟೆ ಸಮಯಕ್ಕೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವ್ಯೆದ್ಯರು ಆಸ್ಪತ್ರೆಗೆ ಕರೆದುಕೊಂಡು ಬರುವಾಗಲೇ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ  ಬಗ್ಗೆ ಕೋಟ ಠಾಣೆ ಯುಡಿಆರ್‌  06/2023, ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾಪು: ಪಿರ್ಯಾದಿ ಸುರೇಂದ್ರ  ಇವರ ಅಣ್ಣ ಚಂದ್ರ (48) ದಿನಾಂಕ: 21.12.2022 ರಂದು ರಾತ್ರಿ 08.00 ಗಂಟೆಗೆ ಪೇಟೆಗೆ ಹೋಗಿ ಬರುವದಾಗಿ ಮನೆಯಲ್ಲಿ ತಿಳಿಸಿ ಹೋಗಿದ್ದು, ದಿನಾಂಕ: 22.12.2022 ರಂದು ರಾತ್ರಿ 8.30 ಗಂಟೆಯಾದರೂ ಮನೆಗೆ ಬಾರದೇ ಇದ್ದು ಈ ಬಗ್ಗೆ  ಕಾಪು ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದ್ದು. ದಿನಾಂಕ: 18.02.2023 ರಂದು ಮಧ್ಯಾಹ್ನ 02.30 ಗಂಟೆಗೆ ಪಿರ್ಯಾದಿದಾರರು ಮನೆಯಲ್ಲಿರುವಾಗ ಪಿರ್ಯಾದಿದಾರರ ಪರಿಚಯದವರಾದ ಶರಣ್ ಎಂಬುವವರು ಪಿರ್ಯಾದಿದಾರರಿಗೆ ದೂರವಾಣಿ ಕರೆ ಮಾಡಿ ಮಲ್ಲಾರು ಗ್ರಾಮದ ಕೊಂಬಗುಡ್ಡೆಯಲ್ಲಿರುವ ಕೊಡ್ಪಲ್‌ ಕಟ್ಟೆ ಹೊಳೆಯ ಬದಿಯಲ್ಲಿ ಕಾಣೆಯಾದ ನಿನ್ನ ಅಣ್ಣ ಚಂದ್ರನಂತೆ ಕಾಣುವ  ಮೃತ ದೇಹವಿದೆ ಕೂಡಲೆ ಬಂದು ಮೃತ ದೇಹವನ್ನು ನೋಡಿ ಎಂದು ತಿಳಿಸಿದ್ದು, ಪಿರ್ಯಾದಿದಾರರು ತನ್ನ ಅಣ್ಣಂದಿರು ಹಾಗೂ ಸ್ನೇಹಿತರೊಂದಿಗೆ  ಕೂಡಲೇ ಹೊಳೆಯ ಬದಿಗೆ ಹೋಗಿ ನೋಡಲಾಗಿ ಮೃತ ದೇಹವು ಕೊಳೆತ ಸ್ಥಿತಿಯಲ್ಲಿದ್ದು ಮೃತ ದೇಹದ ಮೈಮೇಲಿನ ಬಟ್ಟೆಗಳನ್ನು ನೋಡಿ ಪಿರ್ಯಾದಿದಾರರು ಮೃತ ದೇಹವನ್ನು ಗುರುತಿಸಿರುತ್ತಾರೆ. ಮೃತ ಪಿರ್ಯಾದಿದಾರರ ಅಣ್ಣ ಚಂದ್ರ ಹೊಳೆಯನ್ನು ದಾಟುವಾಗ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟಿರುವುದಾಗಿದೆ.   ಈ  ಬಗ್ಗೆ ಕಾಪು ಠಾಣೆ ಯುಡಿಆರ್‌  04/2023, ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

 

ಇತ್ತೀಚಿನ ನವೀಕರಣ​ : 19-02-2023 10:30 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080