ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ನಿತೇಶ್ ಆಚಾರ್ಯ, (23) ತಂದೆ: ಗಣೇಶ್ ಆಚಾರ್ಯ, ವಾಸ: ಶ್ರೀ ದೇವಿ ಪ್ರಸಾದ, ಕುಲಾಲ್ ಭವನದ ಎದುರು, ತಡಂಬೈಲು, ಸುರತ್ಕಲ್, ಮಂಗಳೂರು ತಾಲೂಕು ಇವರ ತಂದೆ ಗಣೇಶ್ ಆಚಾರ್ಯ (54) ಎಂಬುವರು ದಿನಾಂಕ 17/02/2022 ರಂದು ಅವರ KA-19-HF-2433 ನೇ ನಂಬ್ರದ ಮೋಟಾರ್ ಸೈಕಲ್ಲಿ‌ನಲ್ಲಿ ಅವರ ಹೆಂಡತಿ ಹಾಗೂ ಪೂರ್ಣಿಮಾ(42) ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಮನೆಯಿಂದ ಹೊರಟು ಕಾಪು ತಾಲೂಕು ನಂದಿಕೂರು ಗ್ರಾಮದಲ್ಲಿನ ಸಂಬಂಧಿಕರ ಮದುವೆ ಕಾರ್ಯ್ರಕಮಕ್ಕೆಂದು ಬಂದು, ಕಾಯ್ರಕಮ ಮುಗಿಸಿ ವಾಪಾಸ್ಸು ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿ-01 ರಲ್ಲಿ ನಂದಿಕೂರು ಕಡೆಯಿಂದ ಪಡುಬಿದ್ರಿ ಕಡೆಗೆ ಬರುತ್ತಾ ಸಮಯ 15:15 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿ ಕಂಚಿನಡ್ಕದ ಡೈಲಿ ಸೂಪ ರ್ಮಾರ್ಕೆಟ್ ಎದುರು ಹೋಗುತ್ತಿರುವಾಗ KA-21-P-3499 ನೇ ನಂಬ್ರದ ಕಾರು ಚಾಲಕ ಗೋಡ್ವಿನ್ ಪ್ರವೀಣ್ ಡಿಸೋಜ ಎಂಬಾತನು ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಗಣೇಶ ಅಚಾರ್ಯರವರು ಹೋಗುತ್ತಿದ್ದ ಮೋಟಾರ್‌ಸೈಕಲ್ಲಿನ ಬಲಬದಿ ತೀರಾ ಹತ್ತಿರದಿಂದ ಓವರ್‌‌ಟೇಕ್ ಮಾಡುವಾಗ ಕಾರು ಮೋಟಾರ್ ಸೈಕಲ್ಲಿನ ಬಲಬದಿಯ ಹ್ಯಾಂಡಲ್‌‌ಗೆ ತಾಗಿ ಡಿಕ್ಕಿ ಹೊಡೆದ ಪರಿಣಾಮ ಗಣೇಶ್ ಆಚಾರ್ಯ ಹಾಗೂಅವರ ಪತ್ನಿ ಮೋಟಾರ್  ಸೈಕಲ್‌‌ ಸಮೇತ ರಸ್ತೆಗೆ ಬಿದ್ದಿರುತ್ತಾರೆ. ಸದ್ರಿ ಅಪಘಾತದಿಂದ ಗಣೇಶ್ ಆಚಾರ್ಯ ರವರ ಬಲಕೈ ಮೂಳೆಮುರಿತ, ಕೈಕಾಲುಗಳಿಗೆ ತರಚಿದ ಗಾಯವಾಗಿದ್ದು, ಅವರ ಪತ್ನಿ ಪೂರ್ಣಿಮಾ ರವರ ತಲೆಗೆ  ತೀವ್ರ ಸ್ವರೂಪದ ಗಾಯ ಮತ್ತು ಕೈಕಾಲುಗಳಿಗೆ ತರಚಿದ ಗಾಯವಾಗಿರುತ್ತದೆ. ನಂತರ ಗಾಯಾಳುಗಳಿಗೆ ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆಯ ಬಗ್ಗೆ ದಾಖಲಿಸಿರುವುದಾಗಿದೆ. ಪಿರ್ಯಾದಿದಾರರು ಗಾಯಾಳುಗಳ ಆರೈಕೆಯಲ್ಲಿದ್ದುದರಿಂದ ದೂರು ನೀಡಲು ವಿಳಂಬವಾಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 17/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಾಣೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಮ್ಯಾಥ್ಯೂ ಕಸ್ತಲಿನೋ (62) ತಂದೆ: ಫ್ರಾನ್ಸಿಸ್‌ಕಸ್ತಲಿನೋ ವಾಸ: ಸುಭಾಸನಗರ ಅಂಚೆ, ಕುರ್ಕಾಲು ಗ್ರಾಮ, ಕಾಪು ತಾಲೂಕು ಇವರು ಇನ್ನಂಜೆ ಗ್ರಾಮದ ಶಂಕರಪುರದ ವಿಶ್ವಾಸದ ಮನೆ ಎಂಬ ಮಾನಸಿಕ ಅಸ್ವಸ್ಥರ ಪುನರ್ವಸತಿ ಆಶ್ರಮದ ಟ್ರಸ್ಟಿಯಾಗಿದ್ದು, ದಿನಾಂಕ 17/02/2022 ರಂದು ಆಶ್ರಮದಲ್ಲಿರುವ 7 ಜನರನ್ನು ವೈದ್ಯಕೀಯ ತಪಾಸಣೆಗಾಗಿ ಮೂಡನಿಡಂಬೂರು ಗ್ರಾಮದ ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದು, ಅವರಲ್ಲಿ ಪಂಕಜ್‌ (24) ಎಂಬಾತನಿಗೆ ಹೆಚ್ಚಿನ ಚಿಕಿತ್ಸೆ ಬೇಕಾಗಿರುವುದರಿಂದ ವೈದ್ಯರು ಆತನನ್ನು ಒಳರೋಗಿಯಾಗಿ ದಾಖಲು ಮಾಡಿಕೊಂಡಿದ್ದು, ಅವರ ಆರೈಕೆಯಲ್ಲಿ ಆಶ್ರಮದ ಸದಸ್ಯರಾದ ಶೇಖರ್‌ರವರು ಇದ್ದಿದ್ದು, ದಿನಾಂಕ 18/02/2022 ರಂದು ಬೆಳಗಿನ ಜಾವ 03:00 ಗಂಟೆಗೆ ಜಿಲ್ಲಾಸ್ಪತ್ರೆಯ ಗಂಡಸರ ವಾರ್ಡ್ ನಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ಪಂಕಜ್‌ರವರು ಯಾರಿಗೂ ಮಾಹಿತಿ ನೀಡದೇ ಕಾಣೆಯಾಗಿರುವುದಾಗಿದೆ.  ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 30/2022 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಕೊಲೆ ಯತ್ನ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ಸುದರ್ಶನ್ (27) ತಂದೆ:ಸುರೇಶ್ ವಾಸ:6-144 ಬಿ, ಮಂಚಿಕುಮೇರಿ, ಮಂಚಿ ಕೋಡಿ ಪೋಸ್ಟ್, ಶಿವಳ್ಳಿ, ಮಣಿಪಾಲ, ಇವರು ದಿನಾಂಕ 18/02/2022 ರಂದು ಸಂಜೆ ತಮ್ಮ ಬಾಡಿಗೆ ಮನೆಯಿಂದ ಗ್ರೌಂಡ್ ಕಡೆಗೆ ಬರುವಾಗ ಇಬ್ಬರು ವ್ಯಕ್ತಿಗಳು ಕೈಯಲ್ಲಿ ದೊಡ್ಡ ಟ್ರಾಲಿ ಬ್ಯಾಗನ್ನು ಹಿಡಿದುಕೊಂಡು ರಮಾನಾಥ್ ರೈ ರವರ ಮನೆಯ ಕಡೆಗೆ ಹೋಗುತ್ತಿದ್ದರು ಇವರು ಮೊಬೈಲ್‌‌ನಲ್ಲಿ ಮಾತನಾಡಿಕೊಂಡು ಗ್ರೌಂಡ್ ಬಳಿ ಬಂದು 10 ನಿಮಿಷಗಳ ಬಳಿಕ ಸಮಯ ಸುಮಾರು ಸಂಜೆ 7:30 ಗಂಟೆ ಸಮಯಕ್ಕೆ ವಾಪಾಸ್ ಮನೆಯ ಕಡೆಗೆ ರಮಾನಾಥ್ ಮನೆಯ ಸಮೀಪ  ಬಂದಾಗ ರಮಾನಾಥ್ ರೈ ರವರು ಆಟೋದಲ್ಲಿ ಅವರ ಮನೆಯ ಬಳಿ ಬಂದು ಮುಂದಿನ ಬಾಗಿಲನ್ನು ಬಡಿದರೂ ಅವರ ಹೆಂಡತಿ  ಬಾಗಿಲು ತೆಗೆಯಲಿಲ್ಲ, ಒಳಗೆ ಏನೋ ಸಣ್ಣದಾದ ಗಲಾಟೆಯಾದ ಶಬ್ದ ಕೇಳಿಬರುತ್ತಿತ್ತು. ಆಗ ರಮಾನಾಥ್ ರೈ ರವರು ಜೋರಾಗಿ ಕಿರುಚುತ್ತಾ  ನಮ್ಮನ್ನೆಲ್ಲಾ ಕರೆದಂತೆ ನಾನು ನನ್ನ ತಮ್ಮ ಮಿಥುನ್ ಗ್ರೌಂಡ್‌ನಲ್ಲಿದ್ದ ಮಹಮ್ಮದ್ ಇಸ್ಮಾಯಿಲ್, ಸದಾನಂದ್‌, ಹರೀಶ್‌, ಮೇಘಳಾ ಹಾಗೂ  ಇತರರು ಅಲ್ಲಿಗೆ ಬಂದು ರಮಾನಾಥ್ ರೈ ರವರಲ್ಲಿ ಏನೆಂದು  ಕೇಳಿದಾಗ ನನ್ನ ಹೆಂಡತಿ ಬಾಗಿಲು ತೆರೆಯುತ್ತಿಲ್ಲ ಒಳಗೆ ಏನೋ ಶಬ್ದ ಕೇಳಿಸುತ್ತಿದೆ, ಬಾಗಿಲಿಗೆ ಚಿಲಕ ಹಾಕಿದ್ದಾಳೆ ಎಂದು  ಕೂಗುತ್ತಿದ್ದರು. ನಾವೆಲ್ಲರೂ ಅವರ ಮನೆಯ ಮುಂದಿನ ಬಾಗಿಲನ್ನು ತಟ್ಟಿದಾಗ ಮುಂದಿನ ಬಾಗಿಲನ್ನು ಒಳಗಿನಿಂದ ತೆರೆದು ಇಬ್ಬರು ವ್ಯಕ್ತಿಗಳು ನಮ್ಮನ್ನೆಲ್ಲಾ ದೂಡಿಕೊಂಡು ಹೊರಗೆ ಬಂದರು ಸುದರ್ಶನ್, ಶ್ರೀಧರ್‌ಭಕ್ತ, ರಮಾನಾಥ್ ರೈ ಮತ್ತು ನನ್ನ ತಮ್ಮ ಮನೆಯ ಒಳಗೆ ಹೋಗಿ ಹಾಲ್‌‌‌ನಲ್ಲಿ ನೋಡಲಾಗಿ ಸುಮತಿಯನ್ನು ಬಿಳಿ ಪ್ಲಾಸ್ಟಿಕ್ ಚೀಲದಲ್ಲಿ ತುರುಕಿ ಅದನ್ನು ದೊಡ್ಡ ಟ್ರಾಲಿ ಬ್ಯಾಗ್ ಒಳಗೆ  ಹಾಕಲಾಗಿತ್ತು. ಸುಮತಿಯವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಅರೆಪ್ರಜ್ಞಾವಸ್ಥೆಯಲ್ಲಿದ್ದರು ನಾವೆಲ್ಲರೂ ಸೇರಿ ಟ್ರಾಲಿ ಬ್ಯಾಗ್‌‌ನಿಂದ ಹೊರಕ್ಕೆ ತೆಗದು ಪ್ಲಾಸ್ಟಿಕ್ ಚೀಲದಿಂದ ಅವರನ್ನು ಬಿಡಿಸಿ ಮನೆಯಿಂದ ಹೊರಗೆ ತೆಗೆದುಕೊಂಡು ಬಂದು ರಮಾನಾಥ್ ರೈ ರವರ ಆಟೋದಲ್ಲಿ ಮಲಗಿಸಿದೆವು. ಮನೆಯ ಒಳಗಿನಿಂದ ಓಡಿ ಬಂದ ಇಬ್ಬರನ್ನು ಮನೆಯ ಹೊರಗಿದ್ದ ಇತರೆ ಸಾರ್ವಜನಿಕರು ಹಿಡಿದುಕೊಂಡಿದ್ದರು ಆ ಪೈಕಿ ಒಬ್ಬನು  ಸುಮತಿ ರವರ ಅಕ್ಕನ ಮಗ ಮಂಗಳೂರಿನ ಮಿಥುನ್‌ ಮತ್ತೊಬ್ಬ ಆತನ ಸ್ನೇಹಿತ ನಾಗೇಶ್ ಎಂದು  ತಿಳಿಯಿತು ಸುಮತಿರವರ ಸಂಬಂಧಿ ಮಿಥುನ್ ಹಾಗೂ ಆತನ ಸ್ನೇಹಿತ ನಾಗೇಶ್ ಯಾವುದೋ ಹಳೆಯ ದ್ವೇಷದಿಂದ ಸುಮತಿರವರನ್ನು ಕೊಲೆ ಮಾಡಿ ಸಾಗಾಟ ಮಾಡುವ ಉದ್ದೇಶದಿಂದಲೇ ಉಸಿರುಗಟ್ಟಿಸಿ ಚೀಲದಲ್ಲಿ ತುಂಬಿ ಟ್ರಾಲಿಯಲ್ಲಿ ಹಾಕಿ ಈ ಕೃತ್ಯವನ್ನು ಎಸಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 27/2022, ಕಲಂ; 307 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾಧ ಶ್ರೀಮತಿ ಪುಷ್ಪಲತಾ (21) ಗಂಡ:  ವಿಜಯ ಕುಮಾರ್ ಆಚಾರ್ಯ ವಾಸ: ಕುಂಬ್ಳೆ ದರ್ಕಾಸು ಮನೆ ಕುಕ್ಕೆಹಳ್ಳಿ ಗ್ರಾಮ ಉಡುಪಿ ತಾಲೂಕು ಇವರು ದಿನಾಂಕ 18/02/2022 ರಂದು ಮನೆಯಲ್ಲಿರುವಾಗ ಸಮಯ ಸುಮಾರು ಮದ್ಯಾಹ್ನ 15:00 ಗಂಟೆಗೆ ಇವರ ಗುರುತು ಪರಿಚಯವಿರುವ ಪ್ರವೀಣ ಎಂಬುವರು  ಮನೆಯ ಅಂಗಳಕ್ಕೆ ಬಂದು ಮನೆಯೊಳಗಿದ್ದ ಶ್ರೀಮತಿ ಪುಷ್ಪಲತಾ ಇವರನ್ನು ಕರೆದು ಅವಾಚ್ಯವಾಗಿ ನಿಂದಿಸಿ ಮನೆಯ ಅಂಗಳದಲ್ಲಿದ್ದ ಕಡಪ ಕಲ್ಲಿನ ತುಂಡಿನಿಂದ ಶ್ರೀಮತಿ ಪುಷ್ಪಲತಾ  ರವರ ತಲೆಗೆ ಎಡ ಕೈ ಬೆರಳಿಗೆ ಮತ್ತು ಎಡ ಕಾಲಿನ ಪಾದದ ಬಳಿ ಕಲ್ಲಿನಿಂದ ಹೊಡೆದು ರಕ್ತ ಗಾಯಗೊಳಿಸಿದ್ದು ಅಲ್ಲದೇ ನಿನ್ನನ್ನು ಮುಂದಕ್ಕೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 06/2022 ಕಲಂ :447,324,354,504,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-02-2022 10:05 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080