ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೊಲ್ಲೂರು: ಪಿರ್ಯಾದಿದಾರರಾದ ಚೇತನ್ (26), ತಂದೆ: ರಾಮ ಖಾರ್ವಿ, ವಾಸ: ಮೂಕಾಡಿ ಮನೆ ಮಡಿಕಲ್ ಉಪ್ಪುಂದ ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 17/02/2021 ರಂದು ಮಧ್ಯಾಹ್ನ 3:15 ಗಂಟೆಗೆ ತನ್ನ ಸ್ನೇಹಿತ ಜನಾರ್ಧನ್  ಚಲಾಯಿಸುತ್ತಿದ್ದ KA-20-EA-8429 ನೇ ಮೋಟಾರು ಸೈಕಲ್ ನಲ್ಲಿ ಸಹ ಸವಾರರಾಗಿ ಕುಳಿತುಕೊಂಡು ಕೊಲ್ಲೂರಿಗೆ ಎಸಿ ರಿಪೇರಿ ಕೆಲಸದ ಬಗ್ಗೆ ವಂಡ್ಸೆ ಕಡೆಯಿಂದ ಕೊಲ್ಲೂರು ಕಡೆಗೆ ಜನಾರ್ಧನ ಮೋಟಾರು ಸೈಕಲ್ ನ್ನು ಅತೀ ವೇಗವಾಗಿ  ಅಜಾಗರೂಕತೆಯಿಂದ ಚಲಾಯಿಸಿ ಚಿತ್ತೂರು ಗ್ರಾಮದ ಆಲೂರು ಕ್ರಾಸ್ ಬಳಿ ಮಂಜಯ್ಯ ಶೆಟ್ಟಿ ಕಾಂಪ್ಲೆಕ್ಸ್ ಎದುರುಗಡೆ ರಾಜ್ಯ ಹೆದ್ದಾರಿಯಲ್ಲಿ ಕೊಲ್ಲೂರು ಕಡೆಯಿಂದ ವಂಡ್ಸೆ ಕಡೆಗೆ ಎದುರಿನಿಂದ ಬರುತ್ತಿದ್ದ ಓಮಿನಿ ವಾಹನವನ್ನು ನೋಡಿ ಹೆದರಿ ಬೈಕ್ ನ ವೇಗವನ್ನು ನಿಯಂತ್ರಿಸಲಾಗದೇ ತೀರಾ ಎಡ ಬದಿಗೆ ಚಲಾಯಿಸಿ ಬೈಕ್ ಜನಾರ್ಧನ ನ ಹತೋಟಿ ತಪ್ಪಿ ಚರಂಡಿಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲ ಕಾಲಿಗೆ ಚರಂಡಿ ಹತ್ತಿರ ಇದ್ದ ಮೋರಿ ಬಡಿದು ಬಲಕಾಲಿನ ಪಾದ ತುಂಡಾಗಿ ರಕ್ತಗಾಯವಾಗಿದ್ದು  ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದವರನ್ನು ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ  ಅಗತ್ಯವಿರುವುದಾಗಿ ಸೂಚಿಸಿದಂತೆ ಮಣಿಪಾಲ ಕೆ. ಎಂ. ಸಿ ಆಸ್ಪತ್ರೆಯಲ್ಲಿಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಆರೋಪಿಗೂ ಎರಡೂ ಕೈಗಳಿಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 07/2021 ಕಲಂ: 279 , 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 18/02/2021 ರಂದು ರಾತ್ರಿ  9:30 ಗಂಟೆಗೆ, ಕುಂದಾಪುರ  ತಾಲೂಕು ಕೊಟೇಶ್ವರ ಗ್ರಾಮದ, ಕೊಟೇಶ್ವರ- ಹಾಲಾಡಿ ರಸ್ತೆಯ, ಪ್ರೀತಮ್‌ ‌ಬಾರ್‌ ಬಳಿ ರಸ್ತೆಯಲ್ಲಿ ಆಪಾದಿತ ದಿನೇಶ್‌ ಎಂಬುವವರು KA-20-D-7017ನೇ  APM ಬಸ್‌ನ್ನು ಕೊಟೇಶ್ವರ ಕಡೆಯಿಂದ ಹಾಲಾಡಿ  ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ರಸ್ತೆಯ ಬಲಬದಿಗೆ  ಬಂದು ಪಿರ್ಯಾದಿದಾರರಾದ ಸಂದೀಪ್‌ (29), ತಂದೆ :  ಸುರೇಂದ್ರ ನಾಯ್ಕ,  ವಾಸ:  ಹೊನ್ನಾರಿ, ಮೂಡುಗಿಳಿಯಾರು,  ಗಿಳಿಯಾರು ಗ್ರಾಮ  ಬ್ರಹಾವರ ತಾಲೂಕು ಇವರ ಮುಂದುಗಡೆಯಲ್ಲಿ  ಕೋಣಿ-ಕಟ್ಗೇರಿ  ಕಡೆಯಿಂದ  ಕೊಟೇಶ್ವರ ಕಡೆಗೆ ಪ್ರವೀಣ್‌‌ ಎಂಬುವವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-20-EB-9759ನೇ  ಬೈಕಿಗೆ ಎದುರುಗಡೆಯಿಂದ ಡಿಕ್ಕಿ  ಹೊಡೆದ  ಪರಿಣಾಮ ಪ್ರವೀಣ್‌ ರವರ ತಲೆಗೆ  ಗಂಭೀರ  ರಕ್ತಗಾಯವಾಗಿ ಪ್ರಜ್ಞೆ  ಕಳೆದುಕೊಂಡವರನ್ನು ಚಿಕಿತ್ಸೆ  ಬಗ್ಗೆ ಕೊಟೇಶ್ವರ ಎನ್‌. ಆರ್‌ಆಚಾರ್ಯ  ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಪ್ರವೀಣ್‌ ರವರು ಮೃತಪಟ್ಟಿದ್ದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 30/2021 ಕಲಂ: 279, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.      

ಇತರ ಪ್ರಕರಣ

 • ಶಂಕರನಾರಾಯಣ: ಪಿರ್ಯಾದಿದಾರರಾದ ಸುಕೇಶ್‌ ಶೆಟ್ಟಿಗಾರ್‌ (35), ತಂದೆ: ಶಂಕರ ಶೆಟ್ಟಿಗಾರ್‌, ವಾಸ. ಕಲ್ಲು ಬಚ್ಚಲು ಶಂಕರನಾರಾಯಣ ಗ್ರಾಮ ಕುಂದಾಪುರ ಇವರು  ದಿನಾಂಕ 18/02/2021 ರಂದು 15:30 ಗಂಟೆಗೆ ಕುಂದಾಪುರ ತಾಲೂಕು ಶಂಕರನಾರಾಯಣ ಗ್ರಾಮದ ತೋಟದ ಐತಾಳ್‌ರವರ ಮನೆ ಎದುರು ಸೌಡ – ಶಂಕರನಾರಾಯಣ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಆರೋಪಿತರಾದ 1 ಸದಾಶಿವ ಶೆಟ್ಟಿ , 2.ಗುರುದತ್ತ ಶೆಟ್‌, 3.ಶಶಾಂಕ ನಾಯ್ಕ, 4. ಮದು ದೇವಾಡಿಗ,  5. ರಾಘವೇಂದ್ರ ಬಳೆಗಾರ್‌, 6.ರಾಘವೇಂದ್ರ ಶೆಟ್ಟಿಗಾರ್‌, 7.ಸುರೇಂದ್ರ ಕುಲಾಲ್‌ ಇವರೆಲ್ಲೂರು ಸೇರಿ KA-20-MB-4744 ನೇ ನಂಬ್ರ ಕಾರಿನಲ್ಲಿ ಬಂದು ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆ ಹಾಗೂ ಪೈಪ್‌ನಿಂದ ಮತ್ತು ಕೈಗಳಿಂದ ಹೊಡೆದು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 18/2021  ಕಲಂ: 143,147, 148 504, 506, 324, 323 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿದಾರರಾದ ಲೋಯ್‌ ಮಚಾದೋ (36), ತಂದೆ: ಫೆಲಿಕ್ಸ್‌ಮಚಾದೋ, ವಾಸ: ಮನೆ ನಂಬ್ರ: 6-155, ಮಂಜಡ್ಕ ಮನೆ, ಮಿಯ್ಯಾರು ಗ್ರಾಮ, ಕಾರ್ಕಳ ತಾಲೂಕು ಇವರಿಗೆ 2014 ರಲ್ಲಿ ಆಪಾದಿತೆ ಸುನೀತಾ ಮೆಂಡೋನ್ಸ  ಪಿರ್ಯಾದಿದಾರರ ತಮ್ಮ ಜೋಯ್‌ಮಚಾದೋರವರ ಮುಖೇನ  ಪರಿಚಯವಾಗಿರುತ್ತದೆ. ಆಪಾದಿತೆಯ ಆರೋಗ್ಯ ಚೆನ್ನಾಗಿರದೇ ಇದ್ದುದ್ದನ್ನು ಕಂಡು ಪಿರ್ಯಾದಿದಾರರು ಮನುಷ್ಯತ್ವದಿಂದ ಆಪಾದಿತೆಯನ್ನು ಆಕೆಯ ಮಕ್ಕಳ ಸಮೇತ ಮನೆಗೆ ಕರೆದುಕೊಂಡು ಬಂದರು, ಆಪಾದಿತೆಯ ಪತಿ ವಿದೇಶದಲ್ಲಿದ್ದು ತದನಂತರದ ದಿನದಲ್ಲಿ ಆಪಾದಿತೆಯನ್ನು ಆಪಾದಿತೆಯ ಗಂಡ ವಿದೇಶಕ್ಕೆ ಕರದುಕೊಂಡು ಹೋಗಿದ್ದು ಸುಮಾರು ಎಂಟು ತಿಂಗಳುಗಳ ಕಾಲ ವಿದೇಶದಲ್ಲಿದ್ದು ಕೆಲಸ ಸರಿ ಇಲ್ಲವೆಂದು ಆಪಾದಿತೆಯ ಗಂಡ  ಊರಿಗೆ ಬಂದಿದ್ದು ಸ್ವಲ್ಪ ಸಮಯದ ಬಳಿಕ ಆಪಾದಿತೆಯು  ಕೂಡ ಊರಿಗೆ ಬಂದಿದ್ದಳು.  2016 ರಲ್ಲಿ ಪಿರ್ಯಾದಿಯ ತಮ್ಮನಿಗೆ  ಮದುವೆಯಾಗಿದ್ದು  ಆ ಸಮಯದಲ್ಲಿ ಪಿರ್ಯಾದಿದಾರರು ಮದುವೆಯ ಬಗ್ಗೆ ಊರಿಗೆ ಬಂದಿದ್ದು ಮದುವೆಯ ನಂತರ ಆಪಾದಿತೆಯು ಆಕೆಯ ಮನೆಗೆ ಭೋಜನಕ್ಕೆಂದು ಕರೆದಿದ್ದಳು. ಆ ಸಮಯದಲ್ಲಿ ಆಪಾದಿತೆಯು ಪಿರ್ಯಾದಿದಾರರ ಬಳಿ ತನ್ನ ಖಾಯಿಲೆ ವಾಸಿ ಆಗಿದೆ ಗುರುಗಳು 25,000/- ಹಣವನ್ನು ಪಡೆದು ಖಾಯಿಲೆ ವಾಸಿ ಮಾಡಿರುತ್ತಾರೆ. ಆಕೆಯು ಮುಂದುವರಿದು ನಿನ್ನ ಮನೆಯಲ್ಲಿ ನಾಗದೋಷ, ಹುಡುಗಿಯ ದೋಷ, ಯಾರೋ ಮಾಟ ಮಾಡಿದ್ದಾರೆ ಇನ್ನೀತರ ಸಮಸ್ಯೆಗಳಿವೆ ಗುರುಗಳ ಬಳಿ ಪ್ರಾರ್ಥನೆ ಮಾಡಲು ಹೇಳಿ ಸರಿಪಡಿಸುತ್ತೇನೆಂದು ಭರವಸೆ ಕೊಟ್ಟಳು. ಗುರುಗಳ ಬಗ್ಗೆ ಕೇಳಿದಾಗ ಅವರ ಸಂಪರ್ಕ ಮಾಡಲು ಆಗುವುದಿಲ್ಲ ಹಾಗೆ ಆದಲ್ಲಿ ನಿನಗೆ ಹೆಚ್ಚು ತೊಂದರೆ ಆಗುತ್ತದೆ ಪ್ರಾರ್ಥನೆ ಫಲಿಸುವುದಿಲ್ಲ ಎಂದು ತಿಳಿಸಿದಳು. ಆಪಾದಿತೆಯ ಮಾತನ್ನು ಪಿರ್ಯಾದಿದಾರರು ನಂಬಿದರು. ಗುರುಗಳಿಗೆ ಹಣವನ್ನು ಕೊಡಬೇಕು ಎಂದು ಆಪಾದಿತೆಯು ಪಿರ್ಯಾದಿದಾರರಿಂದ ಹಂತ ಹಂತವಾಗಿ ಹಣವನ್ನು ಪಡೆದುಕೊಂಡಳು. ತದನಂತರ ಪಿರ್ಯಾದಿದಾರರಿಗೆ ಮದುವೆ ಆಗುವ ವಿಷಯವನ್ನು ಆಪಾದಿತೆಯು  ಅರಿತು ನಿನಗೆ ಒಳ್ಳೆಯ ಜೀವನ ಸಂಗಾತಿ ಸಿಗಬೇಕಾದರೆ  ಗುರುಗಳಿಂದ ಪ್ರಾರ್ಥನೆ ಮಾಡಿಸಬೇಕು ತುಂಬಾ ಹಣ ಖರ್ಚು ಆಗುತ್ತದೆ ಹಣ ಕೊಡದಿದ್ದರೆ ನಿನ್ನ ಮದುವೆಯು ಖಂಡಿತ  ಆಗುವುದಿಲ್ಲ  ಎಂದು ಹೇಳಿ ಹಣವನ್ನು ಪಡೆದುಕೊಂಡಳು. ಪಿರ್ಯಾದಿದಾರರಿಗೆ 2015 ರಲ್ಲಿ ಮದುವೆಯಾಗಿದ್ದು  ಮದುವೆಯ ಮರುದಿನ ಆಪಾದಿತೆಯು ಪೋನ್‌ಮಾಡಿ ನಿನ್ನ ತಮ್ಮನ ಹೆಂಡತಿ ಮಾಟ ಮಂತ್ರ ಮಾಡಿ ಮದ್ದು ಹಾಕಿದ್ದಾರೆ ನಮ್ಮಿಬ್ಬರ ಜೀವ ಅಪಾಯದಲ್ಲಿದೆ, ನಿನ್ನ ಮನೆಯವರು ಸಾಯುತ್ತಾರೆ ನಿನ್ನ ಕುಟುಂಬ ಸರ್ವ ಸಾಶವಾಗುತ್ತದೆ. ಪ್ರಾರ್ಥನೆ ಮಾಡಲು ಗುರುಗಳಿಗೆ ಹಣ ಕೊಡಬೇಕು ಎಂದು ಹೇಳಿ ಹಣವನ್ನು ಪಡೆದಿರುತ್ತಾಳೆ.  ಹಣ ಕೊಡಲು ಪಿರ್ಯಾದಿದಾರರು ಅಸಕ್ತನಾದಾಗ ಕೆಲಸ ಕಳೆದುಕೊಂಡಾಗ ಆಪಾದಿತೆಯ ಬಳಿ ಇನ್ನು ಹಣ ಕೊಡಲು ಇಲ್ಲ ಎಂದು ತಿಳಿಸಿದಾಗ ನಿನಗೆ ನಿನ್ನ ಹೆಂಡತಿಯಿಂದಲೇ ಸಮಸ್ಯೆ ಉಲ್ಬಣಗೊಂಡದ್ದು ಅವಳನ್ನು ಕೊಂದು ಬಿಡು, ಹಣ ಮಾಡಿ ಕೊಡು ಎಂದು ಆಪಾದಿತೆಯು ತಿಳಿಸಿದಳು. ಪಿರ್ಯಾದಿದಾರರು ಬೇರೆ ದಾರಿ ಕಾಣದೇ ಮಾಂಗಲ್ಯ ಸರ ಸೇರಿ ಎಲ್ಲವನ್ನು ಮಾರಿ ಸುಮಾರು ಹತ್ತು ಲಕ್ಷ ಹಣವನ್ನು ಹಂತಹಂತವಾಗಿ ಕೊಟ್ಟಿರುತ್ತಾರೆ. ತದನಂತರ ಆಪಾದಿತೆಯು ಹಣದ ಬೇಡಿಕೆ ಇಟ್ಟಾಗ ಪಿರ್ಯಾದಿದಾರರು ಅವರ ಹೆಂಡತಿಯ ತಂದೆಯಿಂದ 80,000/-, ಸ್ನೇಹಿತರಾದ ರಾಕೇಶ್‌ ಮತ್ತು ವಿಕ್ಟರ್‌ ಇವರಿಂದ  ಒಟ್ಟು ಒಂದು ಲಕ್ಷ ಐದು ಸಾವಿರ,  ಅಣ್ಣ ಪೌಲ್‌ಮಚಾದೋ ಇವರಿಂದ 50,000/- , ಕೆಲಸದ ಸಂಗಾತಿಯವರಿಂದ ಒಂದು ಲಕ್ಷ ಹಣವನ್ನು ಪಡೆದು ಆಪಾದಿತೆಗೆ ನೀಡಿರುತ್ತಾರೆ. ಹೀಗೆ  ಒಟ್ಟು 30 ಲಕ್ಷದವರೆಗೆ ಹಣವನ್ನು ನೀಡಿರುತ್ತಾರೆ. ಆಪಾದಿತೆಯು ನಂಬಿಕೆ ದ್ರೋಹ ಮಾಡಿ ವಂಚಿಸಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 21/2021 ಕಲಂ: 406, 420, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 19-02-2021 10:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080