ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 19/02/2021 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಗೌರೀಶ್ (19), ತಂದೆ: ಗೋಪಾಲ ಪೂಜಾರಿ, ವಾಸ: ಮಂಜುನಾಥ ನಿಲಯ, ಮೇಕೊಡು, ಹೇರೂರು ಗ್ರಾಮ, ಬೈಂದೂರು ತಾಲೂಕು ಇವರು ಬ್ರಹ್ಮಾವರ ತಾಲೂಕು 52ನೇ ಹೇರೂರು ಗ್ರಾಮದ ಎಸ್‌ಎಮ್‌ಎಸ್ ಬಸ್ಸು ನಿಲ್ದಾಣದಲ್ಲಿ ನಿಂತುಕೊಂಡಿದ್ದಾಗ ಅವರ ಸಹಪಾಠಿ ಚಿರಾಗ್ ಶೆಟ್ಟಿ (20) ರವರು ಉಡುಪಿ ಕಡೆಯಿಂದ ಬಸ್ಸಿನಲ್ಲಿ ಬಂದು ರಾಷ್ಟ್ರೀಯ ಹೆದ್ದಾರಿಯ ಪಶ್ಚಿಮ ಬದಿಯ ಬಸ್ಸು ನಿಲ್ದಾಣದಲ್ಲಿ ಇಳಿದು, ಪೂರ್ವ ಬದಿಯ ಅಂದರೆ ಪಿರ್ಯಾದಿದಾರರು ನಿಂತು ಕೊಂಡಿದ್ದ ಬಸ್ಸು ನಿಲ್ದಾಣದ ಕಡೆಗೆ ಬರಲು ರಾಷ್ಟ್ರಿಯ ಹೆದ್ದಾರಿ ಮಧ್ಯೆ ಇರುವ ಡಿವೈಡರ್‌ನಲ್ಲಿ ಬಂದು, ಬಳಿಕ ಅಲ್ಲಿಂದ ಕುಂದಾಪುರ-ಉಡುಪಿ ರಾಷ್ಟ್ರಿಯ ಹೆದ್ದಾರಿಯನ್ನು ದಾಟಲು ರಸ್ತೆಯನ್ನು ದಾಟುತ್ತಿರುವಾಗ ಬೆಳಿಗ್ಗೆ 08:55 ಗಂಟೆಗೆ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ 1ನೇ ಆರೋಪಿ ಸಿಲ್ವೆಸ್ಟರ್ ಡಿ’ಅಲ್ಮೇಡಾ  ರವರು ತನ್ನ KA-04-MH-7447 ನೇ ನಂಬ್ರದ ಇನ್ನೋವಾ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿರುವ ಚಿರಾಗ್‌ ಶೆಟ್ಟಿ ಯವರಿಗೆ ಡಿಕ್ಕಿ ಹೊಡೆದ  ಪರಿಣಾಮ ಚಿರಾಗ್‌ ಶೆಟ್ಟಿ ಮೇಲಕ್ಕೆ ಎಸೆಯಲ್ಪಟ್ಟು  ಕಾರಿನ ಬಲಭಾಗದಲ್ಲಿ ರಸ್ತೆಯ ಮೇಲೆ ಬಿದ್ದಾಗ ಅದೇ ವೇಳೆಗೆ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ 2ನೇ ಆರೋಪಿ  ಕೃಷ್ಣಫಡ್ ರವರು ತನ್ನ  MH-12-NX-8729 ನೇ ನಂಬ್ರದ ಗ್ಯಾಸ್ ಟ್ಯಾಂಕರ್‌ನ್ನು ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದಿರುವುದರಿಂದ ಟ್ಯಾಂಕರ್‌ನ ಎಡಬದಿಯ ಮುಂದಿನ ಟಯರ್‌ನ ಅಡಿಗೆ  ಚರಣ್‌ ಶೆಟ್ಟಿಯವರ ಕಾಲುಗಳು ಸಿಕ್ಕಿ ಹಾಕಿಕೊಂಡಿರುತ್ತದೆ. ಈ ಅಪಘಾತದಿಂದ ಚರಣ್‌ಶೆಟ್ಟಿ ಎರಡೂ ಕಾಲುಗಳ ಪಾದಕ್ಕೆ ತೀವ್ರ ಜಖಂ ಆಗಿ ರಕ್ತಗಾಯ ಹಾಗೂ ಮೈ, ಕೈಗೆ ಗುದ್ದಿದ ಒಳ ನೋವು ಆಗಿರುತ್ತದೆ. ಗಾಯಗೊಂಡ ಚಿರಾಗ್‌ ಶೆಟ್ಟಿಯವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 24/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾದ ಸಂದೀಪ್ ಪ್ರಭು (18), ತಂದೆ: ದಿ. ಸತೀಶ್, ವಾಸ: ಗುಂಡ್ಯಡ್ಕ ಮನೆ, ಪೆರ್ಡೂರು ಗ್ರಾಮ, ಉಡುಪಿ ತಾಲೂಕು ಇವರ ಮನೆಯ ಪಕ್ಕದಲ್ಲಿ ಅವರ ಅಜ್ಜಿ ಆನಂದಿ ಬಾಯಿ ಹಾಗೂ ದೊಡ್ಡಪ್ಪ ಸುಬ್ಬಣ್ಣ ಪ್ರಭು(60) ರವರು ವಾಸ ಮಾಡಿಕೊಂಡಿರುತ್ತಾರೆ. ಸುಬ್ಬಣ್ಣ ಪ್ರಭುರವರ ಹೆಂಡತಿ ಕಾಯಿಲೆಯಿಂದ ಮೃತಪಟ್ಟಿದ್ದು, ಒಬ್ಬನೇ ಮಗ ರಾಜೇಶ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ಸುಬ್ಬಣ್ಣ ಪ್ರಭುರವರಿಗೆ ಹಿಂದಿನಿಂದಲೂ ಕುಡಿತದ ಚಟವಿರುತ್ತದೆ. 4 ತಿಂಗಳ ಹಿಂದೆ ಅವರ ತಮ್ಮ ಸತೀಶ ಪ್ರಭುರವರು ಬಾವಿಗೆ ಬಿದ್ದು ಮೃತಪಟ್ಟಿರುತ್ತಾರೆ. ಈ ಎಲ್ಲಾ ಕಾರಣಗಳಿಂದ ಮಾನಸಿಕವಾಗಿ ನೊಂದುಕೊಂಡು ವಿಪರೀತ ಮದ್ಯಪಾನ ಮಾಡುತ್ತಿದ್ದರು. ಅವರು ಒಂಟಿತನದಿಂದ ಮಾನಸಿಕವಾಗಿ ಮನನೊಂದು ದಿನಾಂಕ 17/02/2021 ರಂದು ಬೆಳಿಗ್ಗೆ 11:00 ಗಂಟೆಯಿಂದ ದಿನಾಂಕ 19/02/2021 ರಂದು ಬೆಳಿಗ್ಗೆ 9:30 ಗಂಟೆಯ ಮದ್ಯಾವಧಿಯಲ್ಲಿ ತನ್ನ ಮನೆಯ ಎದುರಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 06/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಮಣಿಪಾಲ: ದಿನಾಂಕ 18/02/2021  ರಂದು ಪಿರ್ಯಾದಿದಾರರಾದ ಪಿ .ಮನೀಶ್ (18), ತಂದೆ: ಪಿ .ರವಿ. ಪ್ರಸಾದ್, ವಾಸ: ಫ್ಲಾಟ್ ನಂಬರ್ 202, ಕೃಷ್ಣ ಮನಿದೀಪ ಅಪಾರ್ಟ್ ಮೆಂಟ್ ಕನ್ನರು ವಿಜಯವಾಡ ಆಂಧ್ರ ಪ್ರದೇಶ ರಾಜ್ಯ ಇವರನ್ನು ಮಣಿಪಾಲದ MIT  ಕಾಲೇಜಿಗೆ  ದಾಖಲಿಸಲು ಬಂದಿದ್ದ  ಪಿರ್ಯಾದಿದಾರರ ತಂದೆ ಪಿ. ರವಿ ಪ್ರಸಾದ್ (52) ರವರು ಅನಾರೋಗ್ಯಕ್ಕೆ ಒಳಗಾದವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಮ್ . ಸಿ. ಆಸ್ಪತ್ರೆಗೆ  ದಾಖಲಿಸಿದ್ದು, ರಾತ್ರಿ 19:20 ಗಂಟೆಗೆ  ಕೆ.ಎಮ್.ಸಿ  ಆಸ್ಪತ್ರೆಯ ವೈದ್ಯಾಧಿಕಾರಿಯವರು ಹ್ರದಯಾಘಾತದಿಂದ  ಮೃತಪಟ್ಟಿರುತ್ತಾರೆ ಎಂಬುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 07/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 19-02-2021 05:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ