ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 17/01/2023 ರಂದು ಪಿರ್ಯಾದಿದಾರರಾದ ಮಹೇಂದ್ರ ಕುಮಾರ್  (44), ತಂದೆ: ದಿವಂಗತ ಪದ್ಮನಾಭ , ವಾಸ: ಕಳುವಿನ ಬೆಟ್ಟು ನೀಲಾವರ ಗ್ರಾಮ, ಬ್ರಹ್ಮಾವರ ತಾಲೂಕು ಇವರು ಕೆಲಸದ ನಿಮಿತ್ತ ಉಡುಪಿಗೆ ಹೋಗಿ ವಾಪಾಸ್ಸು ಕಾರಿನಲ್ಲಿ ರಾತ್ರಿ 10:30 ಗಂಟೆಗೆ ನೀಲಾವರಕ್ಕೆ ಬರಲು ರಾಷ್ಟ್ರೀಯ ಹೆದ್ದಾರಿ 66 ಉಡುಪಿ ಬ್ರಹ್ಮಾವರ  ರಸ್ತೆಯಲ್ಲಿ ಬರುತ್ತಿರುವಾಗ ಉಪ್ಪೂರು ಗ್ರಾಮದ ಸಂತೆಕಟ್ಟೆ  ಕಲ್ಯಾಣಪುರ  ಸೇತುವೆಯ ಬಳಿ ಪಿರ್ಯಾದಿದಾರರ ಎದುರಿನಿಂದ  2 ಮೋಟಾರ ಸೈಕಲ್‌ನಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದವರು  ಅದರಲ್ಲಿ ಓರ್ವ ಮೋಟಾರ ಸೈಕಲ್‌ ಸವಾರನು ಆತನ ಮೋಟಾರ ಸೈಕಲ್‌ಯನ್ನು ಏಕಾಎಕಿ  ಎಡಗಡೆಯಿಂದ ಬಲಗಡೆಗೆ ಚಲಾಯಿಸಿಕೋಂಡು ಹೋಗುತ್ತಿದ್ದು ಆಗ ಅದರ ಬಲಬದಿಯಿಂದಿ ಇನ್ನೋರ್ವ ಮೋಟಾರ ಸೈಕಲ್‌ ಸವಾರ ತೀರ ಬಲಾಬದಿಗೆ ಬಂದು ಮೋಟಾರ ಸೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 2 ಮೋಟಾರ ಸೈಕಲ್‌ ಸವಾರರು ಮೋಟಾರ ಸೈಕಲ್‌ ಸಮೇತ ರಸ್ತೆಗೆ ಬಿದ್ದಿರುತ್ತಾರೆ.  ಕೂಡಲೇ ಪಿರ್ಯಾದಿದಾರರು  ಹಾಗೂ ಸಾರ್ವಜನಿಕರು ಸ್ಥಳಕ್ಕೆ  ಹೋಗಿ ನೋಡಿದಾಗ ಪಿರ್ಯಾದಿದಾರರ ಪರಿಚಯದ ಕೇಶವ ಅಚಾರ್ಯ ಆಗಿದ್ದು ಈ ಅಪಘಾತದಿಂದ ಅವರ ತಲೆಗೆ ಕುತ್ತಿಗೆಗೆ ಮತ್ತು ಕೈಗೆ  ತೀವ್ರ ತರಹದ ಗಾಯವಾಗಿರುತ್ತದೆ. ಅವರ ಮೋಟಾರ ಸೈಕಲ್‌ KA-20-ED-2802 ಹೀರೂ ಮೋಟಾರ ಸೈಕಲ್‌ ಆಗಿರುತ್ತದೆ. ಅವರಿಗೆ ಅಪಘಾತವೆಸಗಿದ ದ್ವಿಚಕ್ರ ವಾಹನ ನಂಬರ್‌ KA-20-EZ-2729 ಆಗಿದ್ದು ಅದರ ಚಾಲಕನ ಹೆಸರು ಕೃಷ್ಣ ಪೂಜಾರಿಯಾಗಿದ್ದು  ಈ ವಾಹನದಲ್ಲಿ ಸಹಾಸವಾರಿಣಿಯಾಗಿ ಲಕ್ಷ್ಮೀಯವರು  ಸಹಾ ಇದ್ದು ಅವರಿಗೆ  ಸಹಾ ಅಲ್ಲಲ್ಲಿ ತರಚಿದ ಗಾಯವಾಗಿರುತ್ತದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 08/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕೋಟ: ಪಿರ್ಯಾದಿದಾರರಾದ ಭಾರತಿ ಶೆಟ್ಟಿ (61), ಗಂಡ: ನಾರಾಯಣ ಶೆಟ್ಟಿ, ವಾಸ: ಸರ್ಕಾರಿ ಪಬ್ಲಿಕ್ ಸ್ಕೂಲ್ ಬಿದ್ಕಲಕಟ್ಟೆ ಹತ್ತಿರ ಮೊಳಹಳ್ಳಿ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 17/01/2023 ರಂದು 19:00 ಗಂಟೆಗೆ ದಿನಸಿ ಸಾಮಾನು ತರಲು ಮನೆಯಿಂದ ಹೊರಟು ಮೊಳಹಳ್ಳಿ ಕೊ-ಆಪರೇಟಿವ್ ಸೊಸೈಟಿಯ ಎದುರು ರಸ್ತೆ ದಾಟುತ್ತಿದ್ದಾಗ  ಒರ್ವ KA-47-U-2100 Super splender ಬೈಕ್ ಸವಾರ ಬಿದ್ಕಲಕಟ್ಟೆ-ಕೊಟೇಶ್ವರ ರಸ್ತೆಯಲ್ಲಿ ಬಿದ್ಕಲಕಟ್ಟೆ ಕಡೆಯಿಂದ ತನ್ನ ಮುಂದೆ ಸಾಗುತ್ತಿದ್ದ ಕಾರನ್ನು ಒವರ್ ಟೆಕ್ ಮಾಡುವ ಉದ್ದೇಶದಿಂದ ತನ್ನ ಬೈಕ ಅನ್ನು ಅತಿ ವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ  ಬೈಕ್ ಸವಾರ ಬೈಕ್ ಜೊತೆಗೆ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಎಡ ಕಾಲಿಗೆ ಹಾಗೂ ಮುಖಕ್ಕೆ ತೀವೃ ಗಾಯ ಹಾಗೂ ಬೈಕ್ ಸವಾರನಿಗೆ ಕಾಲಿಗೆ ಹಾಗೂ ಮುಖಕ್ಕೆ ತರಚಿದ ಗಾಯಗಳಾಗಿರುತ್ತದೆ. ಬೈಕ್ ಸವಾರನ ಹೆಸರು ಅಕ್ಷಯ್ ಎಂಬುದಾಗಿರುತ್ತದೆ.  ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 07/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ದಿನಾಂಕ 16/01/2023 ರಂದು ಪಿರ್ಯಾದಿದಾರರಾದ ಗಂಗಾಧರ ಕೋಟ್ಯಾನ್‌ (52),ವಾಸ: ಸಂಧ್ಯಾ  ನಿಲಯ ಗರಡಿಮಜಲು ,ತೆಂಕನಿಡಿಯೂರು ಗ್ರಾಮ ಇವರ ಹೆಂಡತಿಯ ತಮ್ಮ ಉದಯ(37) ಪಿರ್ಯಾದಿದಾರರ ಮನೆಗೆ ಬಂದಿದ್ದು , ಮಧ್ಯಾಹ್ನ 2:30 ಗಂಟೆಗೆ ಅಂಗಡಿಗೆ  ಹೋಗಿ ವಾಪಸ್ಸು ಹಂಪನಕಟ್ಟೆ  ಬೈಲಕೆರೆ  ರಸ್ತೆಯ ಬೈಲಕೆರೆ ಅಂಗನವಾಡಿ ಹತ್ತಿರ  ಮನೆಗೆ  ನಡೆದುಕೊಂಡು ಬರುತ್ತಿರುವಾಗ  ಹಿಂದಿನಿಂದ  KA-20-EP-7667 ನೇ ಸ್ಕೂಟರ್ ಸವಾರನು  ತನ್ನ ಸ್ಕೂಟರನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ  ರಸ್ತೆಯ ತೀರ ಎಡಬದಿಗೆ ಚಲಾಯಿಸಿಕೊಂಡು ಬಂದು ನಡೆದುಕೊಂಡು ಬರುತ್ತಿದ್ದ ಪಿರ್ಯಾದಿದಾರರ ಉದಯ ರವರಿಗೆ  ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ  ಎಡಕಾಲಿನ ಕೋಲು ಕಾಲು ಮೂಳೆ ಮುರಿತವಾಗಿರುತ್ತದೆ. ಉದಯ ರವರನ್ನು ಸ್ಕೂಟರ್ ಸವಾರ ಹಾಗೂ  ಅಲ್ಲೆ  ನಡೆದುಕೊಂಡು ಹೋಗುತ್ತಿದ್ದ ನಾಗೇಶ  ಹಾಗೂ  ಸಚಿನ್ ಉಪಚರಿಸಿ ಉಡುಪಿ ಸಿಟಿ ಆಸ್ಪತ್ರೆಗೆ  ದಾಖಲಿಸಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 07/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಜುಬೈರ್ ಸಿನಾನ್ (21), ತಂದೆ: ನಜೀರ್ ಹುಸೇನ್, ವಾಸ: 19-89-62, ಸಿನಾನ್ ಹೌಸ್, ಕೆ.ಎಸ್.ರಾವ್ ನಗರ, ಕಾರ್ನಾಡು, ಮುಲ್ಕಿ, ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ಉಡುಪಿ ಜಿಲ್ಲೆ ಇವರು ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿಯ ಕಾರ್ಕಳ ರಸ್ತೆಯಲ್ಲಿ ನಾಜ್ ಡ್ರೆಸ್ ಆರ್ಟ್‌ಹೆಸರಿನ ಬಟ್ಟೆ ಅಂಗಡಿ ನಡೆಸಿಕೊಂಡಿದ್ದು, ಎಂದಿನಂತೆ ದಿನಾಂಕ 17/01/2023 ರಂದು ರಾತ್ರಿ 21:15 ಗಂಟೆಯ ವೇಳೆಗೆ ಅಂಗಡಿಯ ಶೆಟರಿಗೆ ಬೀಗ ಹಾಕಿ ಹೋಗಿದ್ದು, ನಂತರ ಯಾರೋ ಕಳ್ಳರು ದಿನಾಂಕ 18/01/2023 ರ ರಾತ್ರಿ 01:00 ಗಂಟೆಯಿಂದ 02:00 ಗಂಟೆಯ ಮಧ್ಯಾವಧಿಯಲ್ಲಿ ನಾಜ್ ಡ್ರೆಸ್ ಆರ್ಟ್‌ಹೆಸರಿನ ಬಟ್ಟೆ ಅಂಗಡಿಗೆ ಹಾಕಿದ್ದ ಶೆಟರ್‌‌ನ ಬೀಗವನ್ನು ಮುರಿದು ಬಾಗಿಲನ್ನು ತೆರೆದು ಒಳ ಪ್ರವೇಶಿಸಿ, ಅಂಗಡಿಯ ಕ್ಯಾಷ್ ಡ್ರಾವರ್‌ನಲ್ಲಿದ್ದ ರೂಪಾಯಿ 7,000/-, ದೇವರ ಹರಕೆಯ ಕಾಣಿಕೆಯ ಎರಡು ಡಬ್ಬಿಯಲ್ಲಿದ್ದ ರೂಪಾಯಿ 4,000/- ನಗದು 6,700/- ರೂಪಾಯಿ ಮೌಲ್ಯದ ಶರ್ಟ್‌ಗಳು-10  ಹಾಗೂ 13,000/- ರೂಪಾಯಿ ಮೌಲ್ಯದ ಜೀನ್ಸ್ ಪ್ಯಾಂಟ್‌‌ಗಳು-14 ನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ.  ಕಳುವಾದ ಎಲ್ಲಾ ವಸ್ತುಗಳ ಒಟ್ಟು ಮೌಲ್ಯ 30,700/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 05/2023, ಕಲಂ:  457,  380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಸಂಕೇತ್ (31), ತಂದೆ: ಸದಾನಂದ ಬಂಗೇರಾ,  ವಾಸ: ಸದಾಶ್ರೀ ನಿಲಯ, ಸೂಲ್ಕೇರಿ, ಮೋಗ್ರು ಗ್ರಾಮ, ಶಿರ್ಲಾಲು ಅಂಚೆ, ಬೆಳ್ತಂಗಡಿ ತಾಲೂಕು. ದ.ಕ ಜಿಲ್ಲೆ ಇವರ ಹೆಂಡತಿ ಉಷಾ ಎಂಬುವವರನ್ನು ಹೆರಿಗೆಯ ಬಗ್ಗೆ ದಿನಾಂಕ 15/01/2023 ರಂದು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ದಿನಾಂಕ 16/01/2023 ರಂದು ಹೆರಿಗೆ ಆಗಿದ್ದು, ಹೆರಿಗೆ ನಂತರ ವಾರ್ಡ್ ನಲ್ಲಿ ದಾಖಾಲಾಗಿರುತ್ತಾರೆ. ದಿನಾಂಕ  17/01/2023 ರಂದು ಮದ್ಯಾಹ್ನ 2:30 ಕ್ಕೆ ಪಿರ್ಯಾದಿದಾರರ ಹೆಂಡತಿ ವಾರ್ಡ್ ನೊಳಗಿರುವ ಬಾತ್ ರೂಮ್ ಗೆ ಸ್ನಾನಕ್ಕೆಂದು ಹೋಗಿದ್ದು ಸ್ನಾನ ಮಾಡುವ ಸಮಯ ತನ್ನ 32 ಇಂಚು ಉದ್ದದ 1 ಚಿನ್ನದ ತಾಳಿ ಹೊಂದಿರುವ 32 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ತೆಗೆದು ಬಾತ್ ರೂಮ್ ನಲ್ಲಿ ಸಿಕ್ಕಿಸಿ ಇಟ್ಟಿದ್ದು ಸ್ನಾನ ಮಾಡುವ ಸಮಯ ಅವರಿಗೆ ತಲೆ ತಿರುಗಿದಂತಾಗಿ ಅವರನ್ನು ಅವರ ತಾಯಿ ಮೋಹಿನಿ ಎಂಬುವವರು ಬೆಡ್ಡಿನಲ್ಲಿ ಕರೆದುಕೊಂಡು ಬಂದು ಮಲಗಿಸಿದ್ದು ಒಂದು ಗಂಟೆಯ ನಂತರ ಕರಿಮಣಿಸರ ಕಾಣಿಸದೇ ಇದ್ದು ಬಾತ್ ರೂಮಿನಲ್ಲಿ ಹೋಗಿ ನೋಡಿದಾಗ ಕರಿಮಣಿಸರವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳುವಾದ ಕರಿಮಣಿ ಸರದ  ಮೌಲ್ಯ 1,30,000/- ರೂಪಾಯಿ ಆಗಿರುತ್ತದೆ.  ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 07/2023 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.



     

ಇತ್ತೀಚಿನ ನವೀಕರಣ​ : 19-01-2023 09:48 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080